ದೀಪಾವಳಿ ಸಂಭ್ರಮ: ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ಆಫರ್
ಕರೋನಾ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಆಟೋ ಉದ್ಯಮವು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಚೇತರಿಸಿಕೊಳ್ಳುತ್ತಿದ್ದು, ಹಲವಾರು ಆಟೋ ಕಂಪನಿಗಳ ಹೊಸ ವಾಹನಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ.

2020ರ ಸೆಪ್ಟೆಂಬರ್ ಅವಧಿಯಲ್ಲಿನ ವಿವಿಧ ಕಂಪನಿಗಳ ಕಾರು ಮಾರಾಟದಲ್ಲಿ ಶೇ.31 ರಷ್ಟು ಬೆಳವಣಿಗೆಯು ಕಂಡುಬಂದಿದ್ದು, ಒಟ್ಟು 2,92,894 ಯನಿಟ್ ಕಾರುಗಳು ಮಾರಾಟಗೊಂಡಿವೆ. ಸಂಕಷ್ಟದಲ್ಲೂ ಕಾರು ಮಾರಾಟವು ಚೇತರಿಸಿಕೊಂಡಿರುವುದು ಆಟೋ ಕಂಪನಿಗಳಲ್ಲಿ ಮತ್ತಷ್ಟು ಬಲತುಂಬಿದ್ದು, ದೀಪಾವಳಿ ಸಂಭ್ರಮಾಚರಣೆಗೆ ಹೊತ್ತಿಗೆ ಮತ್ತಷ್ಟು ಹೊಸ ವಾಹನಗಳನ್ನು ಮಾರಾಟಗೊಳಿಸುವ ನೀರಿಕ್ಷೆಯಲ್ಲಿವೆ.

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಆಫರ್ ನೀಡುತ್ತಿರುವುದಲ್ಲದೆ ಸರಳ ಸಾಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಮಹೀಂದ್ರಾಕೂಡಾ ವಿವಿಧ ಕಾರು ಮಾದರಿಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್‌ಗಳನ್ನು ಘೋಷಣೆ ಮಾಡಿದೆ.

ಮಹೀಂದ್ರಾ ಕಾರುಗಳ ಖರೀದಿಯ ಮೇಲೆ ಗರಿಷ್ಠ ರೂ.3 ಲಕ್ಷದಷ್ಟು ಆಫರ್ ಲಭ್ಯವಿರಲಿದ್ದು, ಹೊಸ ಆಫರ್‌ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಆಫರ್, ಲೊಯಾಲಿಟಿ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಆಕ್ಸೆಸರಿಸ್‌ಗಳ ಮೇಲೆ ಆಫರ್ ಪಡೆದುಕೊಳ್ಳಬಹುದು.

ಕೆಯುವಿ100 ನೆಕ್ಸ್ಟ್
ಮಹೀಂದ್ರಾ ಎಂಟ್ರಿ ಲೆವಲ್ ಮೈಕ್ರೋ ಎಸ್‌ಯುವಿ ಕಾರು ಮಾದರಿಯಾದ ಕೆಯುವಿ100 ನೆಕ್ಸ್ಟ್ ಕಾರು ಮಾದರಿಯ ಮೇಲೆ ರೂ.62 ಸಾವಿರದಷ್ಟು ಆಫರ್ ನೀಡುತ್ತಿದ್ದು, ಹೊಸ ಆಫರ್‌ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಒಳಗೊಂಡಿದೆ.

ಎಕ್ಸ್‌ಯುವಿ300
ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಎಕ್ಸ್‌ಯುವಿ300 ಕಾರು ಖರೀದಿಯ ಮೇಲೆ ಒಟ್ಟು ರೂ. 40 ಸಾವಿರದಷ್ಟು ಡಿಸ್ಕೌಂಟ್ ಲಭ್ಯವಿದ್ದು, ಹೊಸ ಆಫರ್‌ನಲ್ಲಿ ಎಕ್ಸ್‌ಚೆಂಜ್ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಒಳಗೊಂಡಿದೆ.

ಇದಲ್ಲದೆ ಕಳೆದ ತಿಂಗಳ ಹಿಂದಷ್ಟೇ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ ಕಾರಿನ ಬೆಲೆಯಲ್ಲಿ ಇಳಿಕೆ ಸಹ ಮಾಡಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ.1 ಸಾವಿರದಿಂದ ರೂ.87 ಸಾವಿರ ತನಕ ಬೆಲೆ ಇಳಿಕೆ ಮಾಡಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಗ್ರಾಹಕರ ಆಕರ್ಷಣೆಗಾಗಿ ಬೆಲೆ ಇಳಿಕೆಯ ನಿರ್ಧಾರ ಪ್ರಕಟಿಸಿದೆ.

ಬೊಲೆರೊ ಎಸ್‌ಯುವಿ
ಮಹೀಂದ್ರಾ ಜನಪ್ರಿಯ ಬೊಲೆರೊ ಕಾರು ಖರೀದಿ ಮೇಲೆ ರೂ. 20,550 ಡಿಸ್ಕೌಂಟ್ ಲಭ್ಯವಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್ ಆಫರ್, ಕಾರ್ಪೊರೆಟ್ ಬೊನಸ್ ಮತ್ತು ಕ್ಯಾಶ್ ಡಿಸ್ಕೌಂಟ್ ಸಹ ಲಭ್ಯವಿರಲಿವೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಸ್ಕಾರ್ಪಿಯೋ
ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ ಕಾರು ಖರೀದಿಯ ಮೇಲೆ ರೂ.60 ಸಾವಿರ ತನಕ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳು ಎಕ್ಸ್‌ಚೆಂಜ್ ಬೋನಸ್, ಕ್ಯಾಶ್ ಡಿಸ್ಕೌಂಟ್ ಮತ್ತು ಎಸ್5 ವೆರಿಯೆಂಟ್ ಮೇಲೆ ಹೆಚ್ಚುವರಿಯಾಗಿ ರೂ.10 ಸಾವಿರ ಕ್ಯಾಶ್ ಡಿಸ್ಕೌಂಟ್ ಲಭ್ಯವಿದೆ.

ಎಕ್ಸ್‌ಯುವಿ500
ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ500 ಕಾರು ಖರೀದಿಯ ಮೇಲೆ ರೂ.60 ಸಾವಿರ ಡಿಸ್ಕೌಂಟ್ ನೀಡುತ್ತಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಡಿಸ್ಕೌಂಟ್ ಲಭ್ಯವಿದೆ. ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಕ್ಯಾಶ್ ಬ್ಯಾಕ್ ಆಫರ್ ನೀಡಲಾಗುತ್ತಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಅಲ್ಟುರಾಸ್ ಜಿ4
ಮಹೀಂದ್ರಾ ಕಂಪನಿ ತನ್ನ ಹೈ ಎಂಡ್ ಎಸ್‌ಯುವಿ ಕಾರು ಮಾದರಿಯಾದ ಅಲ್ಟುರಾಸ್ ಜಿ4 ಕಾರು ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಹೊಸ ಕಾರು ಖರೀದಿಸುವ ಗ್ರಾಹಕರಿಗೆ ರೂ. 3.06 ಲಕ್ಷದಷ್ಟು ಆಫರ್ ನೀಡುತ್ತಿದೆ. ಹೊಸ ಆಫರ್‌ನಲ್ಲಿ ರೂ.2.20 ಲಕ್ಷ ಕ್ಯಾಶ್ ಡಿಸ್ಕೌಂಟ್, ರೂ.50 ಸಾವಿರ ಎಕ್ಸ್‌ಚೆಂಜ್ ಆಫರ್, ರೂ.16 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ರೂ. 20 ಸಾವಿರದಷ್ಟು ಉಚಿತ ಆಕ್ಸೆಸರಿಸ್ ಲಭ್ಯವಿದ್ದು, ಹೊಸ ಆಫರ್‌ಗಳು ಈ ತಿಂಗಳಾಂತ್ಯಕ್ಕೆ ಮುಕ್ತಾಯಗೊಳ್ಳಲಿವೆ.


Click it and Unblock the Notifications








