ವೈರಸ್ ಭೀತಿ: ಮಹೀಂದ್ರಾ ಆನ್‌ಲೈನ್ ಕಾರು ಮಾರಾಟಕ್ಕೆ ಭರ್ಜರಿ ರೆಸ್ಪಾನ್ಸ್
ಕರೋನಾ ವೈರಸ್ ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಆಟೋ ಉದ್ಯಮದಲ್ಲಿ ಸುರಕ್ಷಿತ ವ್ಯಾಪಾರ-ವಹಿವಾಟು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಇದರಿಂದ ಬಹುತೇಕ ಆಟೋ ಕಂಪನಿಗಳು ಆನ್‌ಲೈನ್ ವಹಿವಾಟಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಗ್ರಾಹಕರು ಕೂಡಾ ವೈರಸ್ ಭಯದಿಂದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಲಾಕ್‌ಡೌನ್ ವಿನಾಯ್ತಿ ನಂತರ ವಾಹನ ಮಾರಾಟದಲ್ಲಿ ಹಲವು ಹೊಸ ಬದಲಾಣೆಗಳನ್ನು ಪರಿಚಯಿಸಿರುವ ಆಟೋ ಕಂಪನಿಗಳು ಸುರಕ್ಷಿತ ವ್ಯಾಪಾರ-ವಹಿವಾಟು ನಡೆಸುತ್ತಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲೂ ಹೊಸ ಕಾರುಗಳ ಮಾರಾಟ ಪ್ರಮಾಣದಲ್ಲಿ ತುಸು ಚೇತರಿಕೆ ಕಂಡುಬರುತ್ತಿದೆ. ಕಾರು ಮಾರಾಟದಲ್ಲಿ ಮೂರನೇ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿರುವ ಮಹೀಂದ್ರಾ ಕೂಡಾ ಇದೀಗ ಓನ್-ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಅಳವಡಿಸಿಕೊಳ್ಳುವ ಮೂಲಕ ಗ್ರಾಹಕರ ಆಕರ್ಷಣೆ ಕಾರಣವಾಗಿದ್ದು, ಹೊಸ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕವೇ ಸಾವಿರ ಹೊಸ ಕಾರುಗಳನ್ನು ಮಾರಾಟ ಮಾಡುತ್ತಿದೆ.

ಮಹೀಂದ್ರಾ ಓನ್-ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗೆ ಇದುವರೆಗೆ ಸುಮಾರು 1.60 ಗ್ರಾಹಕರು ಭೇಟಿ ನೀಡುವ ಮೂಲಕ ಹೊಸ ಕಾರು ಮಾರಾಟ ವ್ಯವಸ್ಥೆ ಕುರಿತಾಗಿ ಹಲವಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿದ್ದು, ಸುಮಾರು 2 ಸಾವಿರಕ್ಕೂ ಕಾರುಗಳ ಮಾರಾಟ ಪ್ರಕ್ರಿಯೆಯನ್ನು ಇಲ್ಲಿಂದಲೇ ವ್ಯವಹರಿಸಲಾಗಿದೆ.

ವೈರಸ್ ಭೀತಿಯಿಂದಾಗಿ ಸುರಕ್ಷಿತ ವಾಹನ ಖರೀದಿಗೆ ಒತ್ತು ನೀಡುತ್ತಿರುವ ಉತ್ತಮ ಬೆಳವಣಿಯಾಗಿದ್ದು, ಜೊತೆಗೆ ಹೊಸ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ಹೊಸ ವಾಹನಗಳ ಖರೀದಿ ಪ್ರಕ್ರಿಯೆಯು ಅತಿ ಸುಲಭವಾಗಿರುವುದರಿಂದಲೂ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ.
MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಇನ್ನು ಮಹಾಮಾರಿ ಕರೋನಾ ವೈರಸ್ ಮಟ್ಟಹಾಕಲು ಶ್ರಮಿಸುತ್ತಿರುವ ಕರೋನಾ ವಾರಿಯರ್ಸ್‌ಗೆ ಮಹೀಂದ್ರಾ ಕಂಪನಿಯು ಹೊಸ ಆಫರ್‌ವೊಂದನ್ನು ಘೋಷಿಸಿದ್ದು, ಕಾರು ಖರೀದಿ ಯೋಜನೆಯಲ್ಲಿರುವ ಕರೋನಾ ವಾರಿಯರ್ಸ್ ಹಲವಾರು ಸುಲಭ ಹಣಕಾಸು ಸೌಲಭ್ಯ ಮತ್ತು ಡಿಸ್ಕೌಂಟ್ ಆಫರ್‌ಗಳನ್ನು ನೀಡುತ್ತಿದೆ.

ವೈರಸ್ ಮಟ್ಟಹಾಕಲು ಈಗಾಗಗಲೇ ಹಲವಾರು ಯೋಜನೆಗಳಿಗೆ ಹಣಕಾಸು ಸಹಾಯ ಮಾಡಿರುವ ಮಹೀಂದ್ರಾ ಕಂಪನಿಯು ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳಿಗೆ ವೈದ್ಯಕೀಯ ಉಪಕರಣಗಳ ಸಹಾಯ ಹಸ್ತ ಚಾಚಿದ್ದು, ಇದೀಗ ಕಾರು ಖರೀದಿ ಯೋಜನೆಯಲ್ಲಿರುವ ಫ್ರಂಟ್ ಲೈನ್ ವಾರಿಯರ್ಸ್‌ಗೂ ಹಲವು ಆಫರ್‌ಗಳನ್ನು ನೀಡುತ್ತಿದೆ. ಸೀಮಿತ ಅವಧಿಗಾಗಿ ವಿವಿಧ ಆಫರ್ ಲಭ್ಯವಿದ್ದು, ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್ ಗರಿಷ್ಠ ಲಾಭ ಪಡೆದುಕೊಳ್ಳಬಹುದು.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಕೋವಿಡ್-19ರ ವಿರುದ್ದದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೊಲೀಸರು ಮಾತ್ರವಲ್ಲದೇ ರೈಲ್ವೆ ಮತ್ತು ವಿಮಾನಯಾನ ಸಿಬ್ಬಂದಿಯ ಜೊತೆಗೆ ಪತ್ರಕರ್ತರಿಗೂ ಮಹೀಂದ್ರಾ ಹೊಸ ಆಫರ್ ಅನ್ವಯವಾಗುವಂತೆ ಘೋಷಣೆ ಮಾಡಲಾಗಿದೆ.

ಆಯ್ದ ಕಾರು ಮಾದರಿಗಳ ಖರೀದಿ ಮೇಲೆ ಕರೋನಾ ವಾರಿಯರ್ಸ್ ರೂ.66,500 ಲಾಭ ಪಡೆದುಕೊಳ್ಳಬಹುದಾಗಿದ್ದು, ಕಾರು ಖರೀದಿಯನ್ನು ಸುಲಭವಾಗಿಸಲು ವಿವಿಧ ಮಾದರಿಯ ಸರಳ ಇಎಂಐ ಮರುಪಾವತಿಯ ಆಯ್ಕೆಗಳನ್ನು ನೀಡಲಾಗುತ್ತಿದೆ.
MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಹಾಗೆಯೇ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಧೀರ್ಘಾವಧಿಯ ಸಾಲ ಸೌಲಭ್ಯದ ಜೊತೆಗೆ ಕಾರು ಖರೀದಿಸಿದ ಮೊದಲ ಮೂರು ತಿಂಗಳು ಅತಿ ಕಡಿಮೆ ಇಎಂಐ ಪಾವತಿ ಆಯ್ಕೆ ನೀಡಲಾಗುತ್ತಿದ್ದು, ಸಾಮಾನ್ಯ ಗ್ರಾಹಕರಿಗೂ ಅನ್ವಯವಾಗುವಂತೆ 'ಬೈ ನೌವ್ ಪೇ 2021' ಆಫರ್ ಸಹ ಪ್ರಮುಖವಾಗಿದೆ.


Click it and Unblock the Notifications








