ಹೊಸ ಮಹೀಂದ್ರಾ ಟಿಯುವಿ 300 ಪ್ಲಸ್ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಮಹೀಂದ್ರಾ ಕಂಪನಿಯು ತನ್ನ ಟಿಯುವಿ 300 ಪ್ಲಸ್ ಎಸ್‍ಯುವಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರರಿಸುವಲ್ಲಿ ನಿರತವಾಗಿದೆ. ಮಹೀಂದ್ರಾ ಕಂಪನಿಯು ತನ್ನ ಹೊಸ ಟಿಯುವಿ300 ಎಸ್‍ಯುವಿಯನ್ನು ಭಾರತೀಯ ರಸ್ತೆಗಳಲ್ಲಿ ಈಗಾಗಲೇ ಸ್ಪಾಟ್ ಟೆಸ್ಟ್ ನಡೆಸಿದೆ.

ಹೊಸ ಮಹೀಂದ್ರಾ ಟಿಯುವಿ 300 ಪ್ಲಸ್ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಹೊಸ ಮಹೀಂದ್ರಾ ಟಿಯುವಿ 300 ಪ್ಲಸ್ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗವಾಗಿದೆ. ಈ ಪೇಟೆಂಟ್ ಚಿತ್ರದಲ್ಲಿ ಬಿಎಸ್-6 ಮಹೀಂದ್ರಾ ಟಿಯುವಿ 300 ಎಸ್‍ಯುವಿಯ ಕೆಲವು ಹೊಸ ಬದಲಾವಣೆಗಳು ಬಹಿರಂಗವಾಗಿದೆ. ಬಿಎಸ್-6 ಮಹೀಂದ್ರಾ ಟಿಯುವಿ 300 ಎಸ್‍ಯುವಿಯ ಪೇಟೆಂಟ್ ಚಿತ್ರವನ್ನು ಗಾಡಿವಾಡಿ ಬಹಿರಂಗಪಡಿಸಿದೆ. ಈ ಪೇಟೆಂಟ್ ಚಿತ್ರದಲ್ಲಿ ಬಿಎಸ್-6 ಮಹೀಂದ್ರಾ ಟಿಯುವಿ 300 ಪ್ಲಸ್ ಎಸ್‍ಯುವಿಯ ಮುಂಭಾಗದ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳಾಗಿದೆ.

ಹೊಸ ಮಹೀಂದ್ರಾ ಟಿಯುವಿ 300 ಪ್ಲಸ್ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಹೊಸ ಮಹೀಂದ್ರಾ ಟಿಯುವಿ 300 ಎಸ್‍ಯುವಿಯ ಮುಂಭಾಗ ಬೋಲ್ಡ್ ಗ್ರಿಲ್ ಮತ್ತು ಮಹೀಂದ್ರಾ ಲೋಗೋವನ್ನು ಮಧ್ಯದಲ್ಲಿ ಇರಿಸಲಾಗಿದೆ. ಹೊಸ ಮಹೀಂದ್ರಾ ಟಿಯುವಿ 300 ಎಸ್‍ಯುವಿಯಲ್ಲಿ ಲಂಬವಾದ ಸ್ಲ್ಯಾಟ್ ಗ್ರಿಲ್‌ನ ಕೆಳಗೆ ಹನಿಕ್ಯೂಬ್ ಮಾದರಿಯೊಂದಿಗೆ ಹೊಸ ವಿಶಾಲವಾದ ಏರ್-ಇನ್ ಟೆಕ್ ಅನ್ನು ಒಳಗೊಂಡಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಹೊಸ ಮಹೀಂದ್ರಾ ಟಿಯುವಿ 300 ಪ್ಲಸ್ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಇತರ ವಿನ್ಯಾಸ ಬದಲಾವಣೆಗಳಲ್ಲಿ ಹೊಸ ಹೆಡ್‌ಲ್ಯಾಂಪ್‌ಗಳು ಇಂಟಿಗ್ರೇಟೆಡ್ ಡಿಆರ್‌ಎಲ್‌ಗಳನ್ನು ಮೇಲ್ಭಾಗದಲ್ಲಿ ಇರಿಸಲಾಗಿದೆ. ಇನ್ನು ನವೀಕರಿಸಿದ ಬಂಪರ್ ಮತ್ತು ಫಾಗ್ ಲ್ಯಾಂಪ್ ಅನ್ನು ಒಳಗೊಂಡಿದೆ.

ಹೊಸ ಮಹೀಂದ್ರಾ ಟಿಯುವಿ 300 ಪ್ಲಸ್ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಇನ್ನು ಮಹೀಂದ್ರಾ ಟಿಯುವಿ 300 ಪ್ಲಸ್ ಎಸ್‍ಯುವಿಯ ಹಿಂಭಾಗದಲ್ಲಿ ಟೈಲ್-ಲ್ಯಾಂಪ್‌ಗಳು, ಬಂಪರ್‌ಗಳು ಮತ್ತು ಬೂಟ್ ಲಿಡ್ ನಲ್ಲಿ ಸಣ್ಣ ಮಟ್ಟದ ಬದಲಾವಣೆಗಳನ್ನು ನಡೆಸಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ಮಹೀಂದ್ರಾ ಟಿಯುವಿ 300 ಪ್ಲಸ್ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಬಿಎಸ್-6 ಮಹೀಂದ್ರಾ ಟಿಯುವಿ 300 ಎಸ್‍ಯುವಿಯ ಹೊಸ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಅಳವಡಿಸಬಹುದು. ಇನ್ನು ಮಹೀಂದ್ರಾ ಟಿಯುವಿ 300 ಎಸ್‍ಯುವಿ ಬಾಕ್ಸಿ ಸಿಲೂಯೆಟ್ ಹೊಸ ಮಾದರಿಯಲ್ಲಿ ಬದಲಾಗದೆ ಉಳಿದಿದೆ.

ಹೊಸ ಮಹೀಂದ್ರಾ ಟಿಯುವಿ 300 ಪ್ಲಸ್ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಹೊಸ ಟಿಯುವಿ300 ಎಸ್‍ಯುವಿಗಳ ಇಂಟಿರಿಯರ್ ನಲ್ಲಿ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿರುವ ಇನ್ಪೋಟೇನೆಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ. ಇದರೊಂದಿಗೆ ಈ ಎಸ್‍ಯುವಿಯಲ್ಲಿ ಕೆಲವು ನೂತನ ಪೀಚರ್ ಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಮಹೀಂದ್ರಾ ಟಿಯುವಿ 300 ಪ್ಲಸ್ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಇನ್ನು ಟಿಯುವಿ 300 ಪ್ಲಸ್ ಎಸ್‍ಯುವಿಯು ಕೂಡ ಹಿಂದಿನ ಮಾದರಿಯಂತೆ 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಈ ಎಂಜಿನ್ 138 ಬಿಹೆಚ್‌ಪಿ ಮತ್ತು 280 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಮಹೀಂದ್ರಾ ಟಿಯುವಿ 300 ಪ್ಲಸ್ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಹಿಂದಿನ ಬಿಎಸ್-4 ಟಿಯುವಿ 300 ಪ್ಲಸ್‌ ಎಸ್‍ಯುವಿಯ ಬೆಲೆಯು ರೂ.9.93 ಲಕ್ಷದಿಂದ ರೂ.11.42 ಲಕ್ಷಗಳಾಗಿದೆ. ಇನ್ನು ಹೊಸ ಟಿಯುವಿ 300 ಪ್ಲಸ್‌ ಎಸ್‍ಯುವಿಯ ಬೆಲೆಯು ತುಸು ದುಬಾರಿಯಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಹೊಸ ಮಹೀಂದ್ರಾ ಟಿಯುವಿ 300 ಪ್ಲಸ್ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಹೊಸ ಟಿಯುವಿ 300 ಪ್ಲಸ್‌ ಎಸ್‍ಯುವಿಯಯು ಅಭಿವೃದ್ದಿ ಹಂತದಲ್ಲಿ ಇದೆ ಎಂದು ನಿರೀಕ್ಷಿಸುತ್ತೇವೆ. ಬಿಎಸ್-6 ಮಹೀಂದ್ರಾ ಟಿಯುವಿ 300 ಎಸ್‍ಯುವಿಯ ಹೊರಭಾಗ ಮತ್ತು ಇಂಟಿರಿಯರ್ ನಲ್ಲಿ ಕೆಲವು ಬದಲಾವಣೆಗಳನ್ನು ಹೊಂದಿರಲಿದೆ.

ಹೊಸ ಮಹೀಂದ್ರಾ ಟಿಯುವಿ 300 ಪ್ಲಸ್ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಹೊಸ ತಲೆಮಾರಿನ ಮಹೀಂದ್ರಾ ಟಿಯುವಿ 300 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟಾಟಾ ಹ್ಯಾರಿಯರ್, ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Article Published On: Wednesday, September 16, 2020, 13:48 [IST]
English summary
New Mahindra TUV300 Plus Patent Images Leaked Ahead Of Launch. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+