Just In
- 5 hrs ago ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- 6 hrs ago Bajaj: ಮುಂಬರಲಿರುವ ಬಜಾಜ್ ಪಲ್ಸರ್ NS 400 ನಿರೀಕ್ಷಿತ ಬೆಲೆ, ವಿಶೇಷತೆಗಳು!
- 7 hrs ago Tata Punch: ಟಾಟಾ ಪಂಚ್ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 8 hrs ago 150KM ರೇಂಜ್, ಸುರಕ್ಷತೆಯ ಮೆಟಲ್ ಬಾಡಿಯ ಮಹಿಂದ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ: ಹೆಚ್ಚು ಲಾಭ
Don't Miss!
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಟೋ ಎಕ್ಸ್ಪೋ 2020: ಅನಾವರಣವಾಯ್ತು ಮಹೀಂದ್ರಾ ಇಎಕ್ಸ್ಯುವಿ 300
ಮಹೀಂದ್ರಾ ಕಂಪನಿಯು ತನ್ನ ಹೊಸ ಇಎಕ್ಸ್ಯುವಿ 300 ಆವೃತ್ತಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಸಾಮಾನ್ಯ ಮಹೀಂದ್ರಾ ಎಕ್ಸ್ಯುವಿ 300ಗೆ ಹೋಲಿಸದರೆ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆಗಳನ್ನು ಹೊಂದಿದೆ.
ಮಹೀಂದ್ರಾ ಇಎಕ್ಸ್ಯುವಿ 300 ಬಿಡುಗಡೆಯಾದ ಬಳಿಕೆ ಟಾಟಾ ನೆಕ್ಸಾನ್ಗೆ ನೇರ ಪೈಪೋಟಿಯನ್ನು ನೀಡುತ್ತದೆ. ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್ಯುವಿಯು 30.2 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ನೊಂದಿಗೆ ಬ್ರ್ಯಾಂಡ್ನ ಜಿಪ್ಟ್ರಾನ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್ಯುವಿಯು 127 ಬಿಹೆಚ್ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾಂಪ್ಯಾಕ್ಟ್ ಎಸ್ಯುವಿಯು 10 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.
ಮಹೀಂದ್ರಾ ಇಎಕ್ಸ್ಯುವಿ 300 ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ವ್ಯಾಪ್ತಿಯನ್ನು ಚಲಿಸುತ್ತದೆ. ಮಹೀಂದ್ರಾ ಇಎಕ್ಸ್ಯುವಿ 300 ಕಾಂಪ್ಯಾಕ್ಟ್ ಎಸ್ಯುವಿಯು ಒಂದು ಬಾರಿ ಪೂರ್ಣ ಪ್ರಮಾಣದ ಜಾರ್ಜ್ ಮಾಡಿದರೆ 300 ಕಿ.ಮೀ ಚಲಿಸುತ್ತದೆ.
ಮಹೀಂದ್ರಾ ಎಕ್ಸ್ಯುವಿ 300 ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಕಾಂಪ್ಯಾಕ್ಟ್ ಎಸ್ಯುವಿಗಳಲ್ಲಿ ಒಂದಾಗಿದೆ. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ. ಅದರಂತೆ ಮಹೀಂದ್ರಾ ಕಂಪನಿಯು ತನ್ನ ಜನಪ್ರಿಯ ಎಕ್ಸ್ಯುವಿ 300 ಮಾದರಿಯನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.
ಕಳೆದ ವರ್ಷ ಮಹೀಂದ್ರಾ ಕಂಪನಿಯು ಎಕ್ಸ್ಯುವಿ 300 ಅನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಬಿಡುಗಡೆಗೊಳಿಸಲಿದೆ ಎಂದು ವರದಿಯಾಗಿತ್ತು. ಇಎಕ್ಸ್ಯುವಿ 300 ಕಾಂಪ್ಯಾಕ್ಟ್ ಎಸ್ಯುವಿಯು ಟಿವೊಲಿ ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ. ಹೊಸ ಇಎಕ್ಸ್ಯುವಿ 300 ಬಳಿ ಬಣ್ಣದದಿಂದ ಕೊಡಿದೆ. ಈ ಇಎಕ್ಸ್ಯುವಿ 300 ವಿಶಿಷ್ಟವಾದ ಹೆಡ್ಲ್ಯಾಂಪ್ ಮತ್ತು ಮುಂಭಾಗದಲ್ಲಿ ಗ್ರಿಲ್ ಅನ್ನು ಅಳವಡಿಸಲಾಗಿದೆ.
ಮುಂಭಾಗದ ಹೆಡ್ಲ್ಯಾಂಪ್ಗಳ ಮೇಲೆ ನೀಲಿ ಎಕ್ಸೆಟ್ ಗಳು ಸುತ್ತುವರೆದಿದೆ. ಮುಂಭಾಗದಲ್ಲಿ ಲಿಪ್ ಸ್ಪಾಯ್ಲರ್ಗಳನ್ನು ಅಳವಡಿಸಲಾಗಿದೆ. ಹಿಂಭಾಗವು ಸಮಾನ್ಯ ಎಸ್ಯುವಿ ಮಾದರಿಯಂತಿದೆ. ಆದರೆ ಎಲ್ಇಡಿ ಟೇಲ್ ಲ್ಯಾಂಪ್ ವಿಭಿನ್ನವಾಗಿದೆ.
ಇಕೆಯುವಿ 100ನಂತೆ ಈ ಎಸ್ಯುವಿಯು ನೀಲಿ ಎಕ್ಸೆಟ್ ಗಳನ್ನು ಹೊಂದಿದೆ. ಇನ್ನೂ ಹೈ-ಮೌಂಟೆಡ್ ಸ್ಟಾಪ್ ಲ್ಯಾಂಪ್, ಲಿಪ್ ಸ್ಪಾಯ್ಲರ್ ಮತ್ತು ಟೇಲ್ ಲ್ಯಾಂಪ್ಗೆ ಬ್ಲ್ಯಾಕ್ ಬಣ್ಣದ ಅಂಶಗಳು ಆಕರ್ಷಕವಾಗಿದೆ. ಇನ್ನೂ ಡ್ಯಾಶ್ ಬೋರ್ಡ್ನಲ್ಲಿ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ ಮತ್ತು ಎಸಿ ವೆಂಟ್ಸ್ ಗಳಿವೆ.
2020ರ ಆಟೋ ಎಕ್ಸ್ ಪೋದಲ್ಲಿ ಇಎಕ್ಸ್ಯುವಿ 300 ಅಲ್ಲದೇ ಕೆಯುವಿ 100 ಮತ್ತು ಫನ್ಸ್ಟರ್ ಕಾರುಗಳನ್ನು ಅನಾವರಣಗೊಳಿಸಿದೆ. ಹೊಸ ಮಹೀಂದ್ರಾ ಇಎಕ್ಸ್ಯುವಿ 300 ಕಾಂಪ್ಯಾಕ್ಟ್ ಎಸ್ಯುವಿಯ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.