ಬಿಡುಗಡೆಗೂ ಮುನ್ನ ಬಿಎಸ್-6 ವೈಶಿಷ್ಟ್ಯತೆಯ ಎಕ್ಸ್‌‌ಯುವಿ500 ಎಂಜಿನ್ ಮಾಹಿತಿ ಬಹಿರಂಗ

ಮಹೀಂದ್ರಾ ಕಂಪನಿಯು ಈಗಾಗಲೇ ಹಲವು ಕಾರು ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಮಾರಾಟಕ್ಕೆ ಚಾಲನೆ ನೀಡಿದ್ದು, ಶೀಘ್ರದದಲ್ಲೇ ಇನ್ನುಳಿದ ಕಾರು ಮಾದರಿಗಳನ್ನು ಸಹ ಹೊಸ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸಲು ಸಿದ್ದತೆ ನಡೆಸಿದೆ.

ಬಿಡುಗಡೆಗೂ ಮುನ್ನ ಬಿಎಸ್-6 ವೈಶಿಷ್ಟ್ಯತೆಯ ಎಕ್ಸ್‌‌ಯುವಿ500 ಎಂಜಿನ್ ಮಾಹಿತಿ ಬಹಿರಂಗ

ದೇಶಾದ್ಯಂತ ಈಗಾಗಲೇ ಬಿಎಸ್-6 ಎಮಿಷನ್ ಕಡ್ಡಾಯವಾಗಿ ಜಾರಿಗೆ ಬಂದಿದ್ದು, ಮಹೀಂದ್ರಾ ಕಂಪನಿಯು ಈಗಾಗಲೇ ತನ್ನ ಪ್ರಮುಖ ಕಾರು ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದೆ. ಆದರೆ ಇನ್ನುಳಿದ ಕಾರು ಮಾದರಿಗಳನ್ನು ಹೊಸ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸುವ ಸಂದರ್ಭದಲ್ಲಿ ಕರೋನಾ ವೈರಸ್‌ನಿಂದಾಗಿ ಲಾಕ್ ಡೌನ್ ವಿಧಿಸಿರುವುದು ಹೊಸ ಕಾರುಗಳ ಬಿಡುಗಡೆಯು ವಿಳಂಬವಾಗಿದ್ದು, ಲಾಕ್ ಡೌನ್ ನಂತರ ಬಹುತೇಕ ಬಿಎಸ್-6 ಮಾದರಿಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ.

ಬಿಡುಗಡೆಗೂ ಮುನ್ನ ಬಿಎಸ್-6 ವೈಶಿಷ್ಟ್ಯತೆಯ ಎಕ್ಸ್‌‌ಯುವಿ500 ಎಂಜಿನ್ ಮಾಹಿತಿ ಬಹಿರಂಗ

ಬಿಡುಗಡೆಯ ನೀರಿಕ್ಷೆಯಲ್ಲಿರುವ ಮಹೀಂದ್ರಾ ನಿರ್ಮಾಣದ ಇನ್ನುಳಿದ ಬಿಎಸ್-6 ಕಾರುಗಳಲ್ಲಿ ಎಕ್ಸ್‌ಯುವಿ 500 ಪ್ರಮುಖ ಎಸ್‌ಯುವಿ ಮಾದರಿಯಾಗಿದ್ದು, 6ನೇ ತಲೆಮಾರಿನ ವೈಶಿಷ್ಟ್ಯತೆ ಹೊಂದಿರುವ ಹೊಸ ಕಾರು ಈ ಬಾರಿ ಹೊಸ ಡೀಸೆಲ್ ಎಂಜಿನ್ ಆಯ್ಕೆ ಪಡೆದಿದೆ.

ಬಿಡುಗಡೆಗೂ ಮುನ್ನ ಬಿಎಸ್-6 ವೈಶಿಷ್ಟ್ಯತೆಯ ಎಕ್ಸ್‌‌ಯುವಿ500 ಎಂಜಿನ್ ಮಾಹಿತಿ ಬಹಿರಂಗ

ಹೊಸ ಎಕ್ಸ್‌ಯುವಿ500 ಕಾರಿನಲ್ಲಿ ಹೊಸ ಎಮಿಷನ್‌ನೊಂದಿಗೆ ಉನ್ನತೀಕರಿಸಲಾದ 2.2-ಲೀಟರ್ ಇವಿಜಿಟಿ ಟರ್ಬೋಚಾರ್ಜರ್ ಎಂಹ್ವಾಕ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 153-ಬಿಎಚ್‌ಪಿ ಮತ್ತು 360-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಬಿಡುಗಡೆಗೂ ಮುನ್ನ ಬಿಎಸ್-6 ವೈಶಿಷ್ಟ್ಯತೆಯ ಎಕ್ಸ್‌‌ಯುವಿ500 ಎಂಜಿನ್ ಮಾಹಿತಿ ಬಹಿರಂಗ

ಹೊಸ ಎಂಜಿನ್‌ನಿಂದಾಗಿ ಪರ್ಫಾಮೆನ್ಸ್‌ನಲ್ಲಿ ಸುಧಾರಣೆಯಾಗಿರುವುದಲ್ಲದೆ ಇಂಧನ ದಕ್ಷತೆ ಕೂಡಾ ಹೆಚ್ಚಳವಾಗಿದ್ದು, ಮಾಲಿನ್ಯ ಹೊರಸೂಸುವಿಕೆ ಪ್ರಮಾಣದಲ್ಲೂ ಸಾಕಷ್ಟು ಸುಧಾರಣೆ ಕಂಡಿದೆ. ಇನ್ನುಳಿದಂತೆ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದು, ಪ್ರಯಾಣಿಕರ ಸುರಕ್ಷತೆ ಹೆಚ್ಚಿನ ಒತ್ತು ನೀಡಲಾಗಿದೆ. ಇದರ ಜೊತೆಗೆ ಕಾರಿನ ಬೆಲೆಯಲ್ಲೂ ತುಸು ಹೆಚ್ಚಳವಾಗಿರಲಿದ್ದು, ಹೊಸ ಕಾರು ಮೇ ಮೊದಲ ವಾರದಲ್ಲಿ ಗ್ರಾಹಕರ ಕೈಸೇರಲಿದೆ.

ಬಿಡುಗಡೆಗೂ ಮುನ್ನ ಬಿಎಸ್-6 ವೈಶಿಷ್ಟ್ಯತೆಯ ಎಕ್ಸ್‌‌ಯುವಿ500 ಎಂಜಿನ್ ಮಾಹಿತಿ ಬಹಿರಂಗ

ಹೊಸ ಕಾರಿನಲ್ಲಿ ಈ ಹಿಂದಿನಂತೆಯೇ ಡಬ್ಲ್ಯು5, ಡಬ್ಲ್ಯು7, ಡಬ್ಲ್ಯು7 ಎಟಿ, ಡಬ್ಲ್ಯು9, ಡಬ್ಲ್ಯು9 ಎಟಿ, ಡಬ್ಲ್ಯು11(0) ಮತ್ತು ಡಬ್ಲ್ಯು11(0) ಎಟಿ ವೆರಿಯೆಂಟ್‌ಗಳನ್ನು ಹೊಂದಿದ್ದು, ಅಧಿಕೃತ ಬೆಲೆ ಘೋಷಣೆ ಒಂದೇ ಬಾಕಿಯಿದೆ.

ಬಿಡುಗಡೆಗೂ ಮುನ್ನ ಬಿಎಸ್-6 ವೈಶಿಷ್ಟ್ಯತೆಯ ಎಕ್ಸ್‌‌ಯುವಿ500 ಎಂಜಿನ್ ಮಾಹಿತಿ ಬಹಿರಂಗ

ಇನ್ನು ಬಿಎಸ್-6 ಎಂಜಿನ್‌ನಿಂದಾಗಿ ಹೊಸ ಕಾರುಗಳ ಬೆಲೆಯಲ್ಲಿ ತುಸು ಏರಿಕೆಯಾಗಲಿದ್ದು, ಬಿಎಸ್-4 ಕಾರುಗಳ ಬೆಲೆಗಳಿಂತಲೂ ಬಿಎಸ್-6 ಕಾರುಗಳ ಬೆಲೆಯು ತಾಂತ್ರಿಕ ಸೌಲಭ್ಯಗಳ ಅಳವಡಿಕೆಯ ಆಧಾರದ ಪೆಟ್ರೋಲ್ ಕಾರುಗಳು ರೂ.15 ಸಾವಿರದಿಂದ ರೂ.50 ಸಾವಿರ ಮತ್ತು ಡೀಸೆಲ್ ಕಾರುಗಳು ರೂ.50 ಸಾವಿರದಿಂದ ರೂ.1 ಲಕ್ಷದ ತನಕ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

ಬಿಡುಗಡೆಗೂ ಮುನ್ನ ಬಿಎಸ್-6 ವೈಶಿಷ್ಟ್ಯತೆಯ ಎಕ್ಸ್‌‌ಯುವಿ500 ಎಂಜಿನ್ ಮಾಹಿತಿ ಬಹಿರಂಗ

ಜೊತೆಗೆ ಸುರಕ್ಷೆಗಾಗಿ ಹೊಸ ಕಾರಿನಲ್ಲಿ 6 ಏರ್‌ಬ್ಯಾಗ್‌, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಯ್ದ ವೆರಿಯೆಂಟ್‌ಗಳಲ್ಲಿ ಸನ್‌ರೂಫ್, ರೂಫ್ ರೈಲ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟಕ್ ಲೈಟ್, ಸಿಲ್ವರ್ ಸ್ಕೀಡ್ ಪ್ಲೇಟ್, ರಿಯರ್ ಎಸಿ ವೆಂಟ್ಸ್, ಲೆದರ್ ಸೀಟುಗಳು, 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟು ಮತ್ತು ಒಂದೇ ಸೂರಿನಡಿ ವಿವಿಧ ಮಾಹಿತಿಗಳನ್ನು ನೀಡಬಲ್ಲ ಟಚ್ ಸ್ಕ್ರಿನ್ ಇನ್ಪೋಟೈನ್‌ಟೆಂಟ್ ಸಿಸ್ಟಂ ಜೋಡಣೆ ಮಾಡಲಾಗಿದೆ.

ಬಿಡುಗಡೆಗೂ ಮುನ್ನ ಬಿಎಸ್-6 ವೈಶಿಷ್ಟ್ಯತೆಯ ಎಕ್ಸ್‌‌ಯುವಿ500 ಎಂಜಿನ್ ಮಾಹಿತಿ ಬಹಿರಂಗ

ಇದರೊಂದಿಗೆ ಕಾರು ಕಳ್ಳತನಗಳಿಗೆ ಬ್ರೇಕ್ ಹಾಕಲು ಜಿಯೋ ಫೆನ್ಸ್ ಅಲರ್ಟ್ ಸೇರಿದಂತೆ ಸೆಂಟರ್ ಲಾಕಿಂಗ್ ಸಿಸ್ಟಂ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಒಟ್ಟಿನಲ್ಲಿ ಪ್ರಯಾಣಿಕರ ಸುರಕ್ಷೆತೆಗಾಗಿ ಗರಿಷ್ಠ ಮಟ್ಟದಲ್ಲಿ ಸುರಕ್ಷಾ ಸೌಲಭ್ಯ ಗಳನ್ನು ಅಳವಡಿಸಿರುವುದೇ ಹೊಸ ಕಾರುಗಳ ಪ್ರಮುಖ ಆಕರ್ಷಣೆಯಾಗಲಿದೆ.

ಬಿಡುಗಡೆಗೂ ಮುನ್ನ ಬಿಎಸ್-6 ವೈಶಿಷ್ಟ್ಯತೆಯ ಎಕ್ಸ್‌‌ಯುವಿ500 ಎಂಜಿನ್ ಮಾಹಿತಿ ಬಹಿರಂಗ

ಅದಕ್ಕಿಂತಲೂ ಮುಖ್ಯವಾಗಿ ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300 ಮತ್ತು ಥಾರ್ ನ್ಯೂ ಜನರೇಷನ್ ಕಾರುಗಳಲ್ಲಿ ಬಿಎಸ್-6 ಎಂಜಿನ್ ಅಳವಡಿಸಿರುವುದು ಮಾಲಿನ್ಯ ತಡೆಯುವಲ್ಲಿ ಸಾಕಷ್ಟು ಸಹಕಾರಿಯಾಗಲಿದ್ದು, ಶೇ.25ರಷ್ಚು ಹೊಗೆ ಉಗುಳುವ ಪ್ರಮಾಣ ಕಡಿಮೆಯಾಗಿದ್ದಲ್ಲಿ ಶೇ. 10ರಷ್ಟು ಮೈಲೇಜ್ ಪ್ರಮಾಣದಲ್ಲೂ ಏರಿಕೆಯಾಗಲಿದೆ.

Article Published On: Wednesday, April 8, 2020, 12:00 [IST]
English summary
Mahindra XUV500 BS6 specs revealed details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+