ಪೆಟ್ರೋಲ್, ಡೀಸೆಲ್ ವಾಹನಗಳನ್ನು ನಿಷೇಧಿಸಲು ಮುಂದಾದ ದೇಶಗಳಿವು

2030ರಿಂದ ಇಂಗ್ಲೆಂಡ್ ನಲ್ಲಿ ಹೊಸ ಪೆಟ್ರೋಲ್, ಡೀಸೆಲ್ ವಾಹನಗಳ ಮಾರಾಟವನ್ನು ನಿಷೇಧಿಸಲಾಗುವುದು ಎಂದು ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ. ಹಿಂದೆ ಈ ನಿಷೇಧವನ್ನು 2035ರಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿತ್ತು.

ಪೆಟ್ರೋಲ್, ಡೀಸೆಲ್ ವಾಹನಗಳನ್ನು ನಿಷೇಧಿಸಲು ಮುಂದಾದ ದೇಶಗಳಿವು

ಆದರೆ ಈಗ ಐದು ವರ್ಷಗಳ ಮೊದಲೇ ಜಾರಿಗೊಳಿಸಲಾಗುತ್ತಿದೆ. ಪೆಟ್ರೋಲ್, ಡೀಸೆಲ್ ನಿಂದ ಚಲಿಸುವ ವಾಹನಗಳಿಂದ ಹೊರಸೂಸುವ ಹೊಗೆಯಿಂದ ಪರಿಸರವು ಹೆಚ್ಚು ಕಲುಷಿತಗೊಳ್ಳುತ್ತಿದೆ. ಈ ಕಾರಣಕ್ಕೆ ವಿಶ್ವದ ವಿವಿಧ ದೇಶಗಳು ಪೆಟ್ರೋಲ್, ಡೀಸೆಲ್ ವಾಹನಗಳ ಬಳಕೆಯನ್ನು ಕೊನೆಗೊಳಿಸಲು ಮುಂದಾಗಿವೆ. ಯಾವ ಯಾವ ದೇಶಗಳು ಪೆಟ್ರೋಲ್, ಡೀಸೆಲ್ ವಾಹನಗಳನ್ನು ನಿಷೇಧಿಸಲು ಮುಂದಾಗಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಪೆಟ್ರೋಲ್, ಡೀಸೆಲ್ ವಾಹನಗಳನ್ನು ನಿಷೇಧಿಸಲು ಮುಂದಾದ ದೇಶಗಳಿವು

ಅಮೆರಿಕಾ

ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯವು 2035ರಿಂದ ಹೊಸ ಪೆಟ್ರೋಲ್, ಡೀಸೆಲ್ ಕಾರುಗಳು ಹಾಗೂ ಡೀಸೆಲ್ ನಿಂದ ಚಲಿಸುವ ಟ್ರಕ್ ಗಳ ಮಾರಾಟವನ್ನು ನಿಷೇಧಿಸಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಕ್ಯಾಲಿಫೋರ್ನಿಯಾ ರಾಜ್ಯದ ಗವರ್ನರ್ ಕ್ಯಾವಿನ್ ನ್ಯೂಸ್ ಈ ಬಗ್ಗೆ ಘೋಷಣೆ ಮಾಡಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಪೆಟ್ರೋಲ್, ಡೀಸೆಲ್ ವಾಹನಗಳನ್ನು ನಿಷೇಧಿಸಲು ಮುಂದಾದ ದೇಶಗಳಿವು

ಕೆನಡಾ

ಕೆನಡಾದ ಪ್ರಾಂತ್ಯಗಳಲ್ಲಿ ಒಂದಾದ ಕ್ವಿಬೆಕ್ ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‌ನಲ್ಲಿ ಚಲಿಸುವ ಹೊಸ ಪ್ರಯಾಣಿಕ ಕಾರುಗಳ ಮಾರಾಟಕ್ಕೆ ನಿಷೇಧ ಹೇರಲಾಗುವುದು. ಕ್ಯಾಲಿಫೋರ್ನಿಯಾದಂತೆ ಈ ನಿಷೇಧವು 2035ರಿಂದ ಜಾರಿಗೆ ಬರಲಿದೆ. ಇತ್ತೀಚಿಗೆ ಕ್ವಿಬೆಕ್ ಆಡಳಿತವು ಈ ಬಗ್ಗೆ ಘೋಷಣೆ ಮಾಡಿದೆ.

ಪೆಟ್ರೋಲ್, ಡೀಸೆಲ್ ವಾಹನಗಳನ್ನು ನಿಷೇಧಿಸಲು ಮುಂದಾದ ದೇಶಗಳಿವು

ಜರ್ಮನಿ

ಹೆಚ್ಚು ಮಾಲಿನ್ಯವನ್ನು ಹೊರಸೂಸುವ ಹಳೆಯ ಡೀಸೆಲ್ ವಾಹನಗಳ ಮೇಲೆ ಜರ್ಮನ್ ನಗರಗಳು ನಿಷೇಧ ವಿಧಿಸುತ್ತಿವೆ. ಇದರ ಭಾಗವಾಗಿ ಅಲ್ಲಿ ಹಳೆಯ ಡೀಸೆಲ್ ವಾಹನಗಳನ್ನು ನಿಷೇಧಿಸಲಾಗುತ್ತಿದೆ. ಜರ್ಮನ್ ನಗರಗಳಲ್ಲಿ 2018ರಿಂದ ಈ ಕ್ರಮವನ್ನು ತೆಗೆದುಕೊಳ್ಳುತ್ತಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಪೆಟ್ರೋಲ್, ಡೀಸೆಲ್ ವಾಹನಗಳನ್ನು ನಿಷೇಧಿಸಲು ಮುಂದಾದ ದೇಶಗಳಿವು

ನಾರ್ವೆ

ವಿಶ್ವದ ಅತಿದೊಡ್ಡ ತೈಲ ಹಾಗೂ ಅನಿಲ ಅವಲಂಬಿತ ರಾಷ್ಟ್ರಗಳಲ್ಲಿ ಒಂದಾದ ನಾರ್ವೆ, ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳ ಮಾರಾಟವನ್ನು ನಿಷೇಧಿಸಿದ ವಿಶ್ವದ ಮೊದಲ ದೇಶವಾಗಲು ಬಯಸಿದೆ. ಇದಕ್ಕಾಗಿ 2025ರ ಗಡುವು ಹಾಕಿಕೊಂಡಿದೆ. ಸದ್ಯಕ್ಕೆ ನಾರ್ವೆಯಲ್ಲಿ ಮಾರಾಟವಾಗುವ ವಾಹನಗಳಲ್ಲಿ ಎಲೆಕ್ಟ್ರಿಕ್ ಕಾರುಗಳು 60%ನಷ್ಟು ಪಾಲನ್ನು ಹೊಂದಿವೆ.

ಪೆಟ್ರೋಲ್, ಡೀಸೆಲ್ ವಾಹನಗಳನ್ನು ನಿಷೇಧಿಸಲು ಮುಂದಾದ ದೇಶಗಳಿವು

ಚೀನಾ

ಪೆಟ್ರೋಲ್, ಡೀಸೆಲ್‌ ವಾಹನಗಳನ್ನು ಯಾವಾಗ ನಿಷೇಧಿಸಬೇಕು ಎಂಬ ಬಗ್ಗೆ ಚೀನಾ ದೇಶವು 2017ರಲ್ಲಿ ಸಂಶೋಧನೆಯನ್ನು ಆರಂಭಿಸಿತು. ಆದರೆ ಈ ನಿಷೇಧವು ಎಂದಿನಿಂದ ಜಾರಿಗೆ ಬರಲಿದೆ ಎಂಬ ಬಗ್ಗೆ ಚೀನಾ ಮಾಹಿತಿ ನೀಡಿಲ್ಲ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಪೆಟ್ರೋಲ್, ಡೀಸೆಲ್ ವಾಹನಗಳನ್ನು ನಿಷೇಧಿಸಲು ಮುಂದಾದ ದೇಶಗಳಿವು

ಇದರ ಜೊತೆಗೆ ಭಾರತ ಸೇರಿದಂತೆ ಹಲವು ದೇಶಗಳು ಪೆಟ್ರೋಲ್, ಡೀಸೆಲ್ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಆಸಕ್ತಿ ತೋರುತ್ತಿವೆ. ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾದರೆ ಕಚ್ಚಾ ತೈಲ ಆಮದು ಪ್ರಮಾಣವು ಕಡಿಮೆಯಾಗಿ ಭಾರತದಂತಹ ದೇಶಗಳಿಗೆ ಹೆಚ್ಚು ಅನುಕೂಲವಾಗಲಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Many countries set to ban petrol diesel vehicles. Read in Kannada.
Story first published: Thursday, November 19, 2020, 18:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X