ಲ್ಯಾಂಬೊರ್ಗಿನಿ ಸ್ಪೋರ್ಟ್ಸ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಇಕೊ ಕಾರು

ಪ್ರತಿಯೊಬ್ಬ ಸ್ಪೋರ್ಟ್ಸ್ ಕಾರ್ ಪ್ರಿಯರ ಕನಸು ಜೀವನದಲ್ಲಿ ಒಮ್ಮೆಯಾದರೂ ತಮ್ಮ ನೆಚ್ಚಿನ ಸ್ಪೋರ್ಟ್ಸ್ ಕಾರ್ ಅನ್ನು ಖರೀದಿಸುವುದು. ಹೊಸ ಸ್ಪೋರ್ಟ್ಸ್ ಕಾರುಗಳನ್ನು ಖರೀದಿಸುವುದು ಸಾಮಾನ್ಯ ಜನರಿಗೆ ಕನಸಿನ ಮಾತು. ಭಾರತದಲ್ಲಿ ಕಾರುಗಳನ್ನು ಮಾಢಿಫೈ ಮಾಡುವ ಹಲವಾರು ಕಂಪನಿಗಳಿವೆ.

ಲ್ಯಾಂಬೊರ್ಗಿನಿ ಸ್ಪೋರ್ಟ್ಸ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಇಕೊ ಕಾರು

ಈ ಕಂಪನಿಗಳು ಜನರಿಗೆ ದುಬಾರಿ ಸ್ಪೋರ್ಟ್ಸ್ ಕಾರುಗಳ ಬದಲು ಕಡಿಮೆ ಬೆಲೆಯ ಪರ್ಯಾಯ ಕಾರುಗಳನ್ನು ಮಾಡಿಫೈಗೊಳಿಸಿ ನೀಡುತ್ತವೆ. ಡಿಸಿ ಡಿಸೈನ್ ಕಂಪನಿಯು ವಿವಿಧ ಕಾರುಗಳನ್ನು ಸ್ಪೋರ್ಟ್ಸ್ ಹಾಗೂ ಐಷಾರಾಮಿ ಕಾರುಗಳ ರೀತಿಯಲ್ಲಿ ಮಾಡಿಫೈ ಮಾಡುತ್ತದೆ. ಯುವಕನೊಬ್ಬ ಮಾರುತಿ ಇಕೊ ಕಾರ್ ಅನ್ನು ಲ್ಯಾಂಬೊರ್ಗಿನಿ ಸ್ಪೋರ್ಟ್ಸ್ ಕಾರಿನಂತೆ ಮಾಡಿಫೈಗೊಳಿಸಿದ್ದಾನೆ.ಮಾಡಿಫೈಗೊಂಡ ಕಾರನ್ನು ನೋಡಿದರೆ ಮಾರುತಿ ಇಕೊ ಕಾರಿನಂತೆ ಕಾಣುವುದಿಲ್ಲ.

ಲ್ಯಾಂಬೊರ್ಗಿನಿ ಸ್ಪೋರ್ಟ್ಸ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಇಕೊ ಕಾರು

ಮಾರುತಿ ಇಕೊ ಬಜೆಟ್ ಎಂಪಿವಿ ಕಾರ್ ಆಗಿದ್ದು, ಒಂದು ದಶಕಕ್ಕೂ ಹೆಚ್ಚು ಕಾಲದಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಬಾಲ್ಯದಿಂದಲೂ ಕಾರುಗಳ ವಿನ್ಯಾಸದಲ್ಲಿ ಆಸಕ್ತಿ ಹೊಂದಿದ್ದ ಕೌಶಲ್ ಎಂಬುವವರು ಈ ಕಾರ್ ಅನ್ನು ಮಾಡಿಫೈಗೊಳಿಸಿದಾರೆ. ಸಾಮಾನ್ಯ ನಾಗರಿಕರು ಸಹ ಕಡಿಮೆ ಬೆಲೆಯ ಸ್ಪೋರ್ಟ್ಸ್ ಕಾರು ಖರೀದಿಸುವಂತಾಗಲಿ ಎಂಬ ಕಾರಣದಿಂದಾಗಿ ಕೌಶಲ್ ಭಾರತಕ್ಕೆ ಬಂದರು ಎಂದು ಅವರ ತಂದೆ ಹೇಳುತ್ತಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲ್ಯಾಂಬೊರ್ಗಿನಿ ಸ್ಪೋರ್ಟ್ಸ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಇಕೊ ಕಾರು

ಕೌಶಲ್ ಈ ಕಾರನ್ನು ನಿರ್ಮಿಸಲು 2 ವರ್ಷಗಳನ್ನು ತೆಗೆದುಕೊಂಡಿದ್ದಾರೆ. ಈ ಕಾರಿನ ಹಿಂಭಾಗದಲ್ಲಿ ಮಾರುತಿ ಇಕೊ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಕಪ್ಪು ಗ್ಲಾಸಿನಿಂದ ತಯಾರಿಸಲಾದ ಕ್ಯಾಬಿನ್‌ನೊಳಗೆ ಇರಿಸಲಾಗಿದೆ. ಕಾರು ಎತ್ತರದ ಡೋರ್‌ಗಳೊಂದಿಗೆ ಹಿಂಭಾಗದಲ್ಲಿ ಸ್ಪಾಯ್ಲರ್ ಅನ್ನು ಹೊಂದಿದೆ.

ಲ್ಯಾಂಬೊರ್ಗಿನಿ ಸ್ಪೋರ್ಟ್ಸ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಇಕೊ ಕಾರು

ಈ ಕಾರನ್ನು ಮಿಷನ್‌ಗಳನ್ನು ಬಳಸದೇ ಸಂಪೂರ್ಣವಾಗಿ ಕೈಯಿಂದಲೇ ತಯಾರಿಸಲಾಗಿದೆ. ಕಾರನ್ನು ಸಂಪೂರ್ಣವಾಗಿ ಮೆಟಲ್ ಶೀಟ್‌ಗಳಿಂದ ನಿರ್ಮಿಸಲಾಗಿದೆ. ಈ ಮೊದಲು ಈ ಕಾರ್ ಅನ್ನು ಕಾರ್ಬನ್ ಫೈಬರ್‌ನಿಂದ ವಿನ್ಯಾಸಗೊಳಿಸಲಾಗಿತ್ತು. ಕಾರಿಗೆ ಪರಿಪೂರ್ಣತೆ ನೀಡುವ ಕಾರಣಕ್ಕೆ ಸ್ಟೀಲ್‌ನಿಂದ ಪುನರ್‌ನಿರ್ಮಿಸಲಾಗಿದೆ ಎಂದು ಕೌಶಲ್ ಹೇಳಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈ ಕಾರನ್ನು ನಿರ್ಮಿಸಲು 10-12 ಲಕ್ಷ ರೂಪಾಯಿ ವೆಚ್ಚವಾಗಿದೆ. ಈ ಕಾರು ಮುಂಭಾಗದಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ ಹಾಗೂ ಹಿಂಭಾಗದಲ್ಲಿ ಎಲ್‌ಇಡಿ ಟೇಲ್‌ಲೈಟ್‌ಗಳನ್ನು ಹೊಂದಿದೆ. ಕಾರಿನ ಬೂಟ್ ಸ್ಟೈಲಿಶ್ ಆದ ನೆಟ್ ಕವರ್ ಅನ್ನು ಹೊಂದಿದ್ದು, ಕಾರಿನ ಸ್ಪೋರ್ಟಿ ಲುಕ್ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಲ್ಯಾಂಬೊರ್ಗಿನಿ ಸ್ಪೋರ್ಟ್ಸ್ ಕಾರಿನಂತೆ ಮಾಡಿಫೈಗೊಂಡ ಮಾರುತಿ ಇಕೊ ಕಾರು

ಭಾರತೀಯ ಮೋಟಾರು ವಾಹನ ಕಾಯ್ದೆಯ ಪ್ರಕಾರ ಮಾಡಿಫೈ ಮಾಡಲಾದ ಕಾರುಗಳನ್ನು ಬಳಸುವುದು ಕಾನೂನುಬಾಹಿರ. ನಿಯಮಗಳ ಪ್ರಕಾರ ಮಾಡಿಫೈಗೊಂಡ ಕಾರುಗಳು ರಸ್ತೆಗಿಳಿಯ ಬೇಕಾದರೆ ಎಆರ್‌ಎ‌ಐ ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ.

More from DriveSpark

Article Published On: Tuesday, June 2, 2020, 18:05 [IST]
English summary
Maruti Eeco transformed into supercar inspired by Lamborghini. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+