ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ ಎರ್ಟಿಗಾ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಜನಪ್ರಿಯ ಎರ್ಟಿಗಾ ಎಂಪಿವಿಯ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಮಾರುತಿ ಸುಜುಕಿ ಎರ್ಟಿಗಾ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಂಪಿವಿಯಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ ಎರ್ಟಿಗಾ

ಕಳೆದ 8 ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಕಂಪನಿಯು 5.5 ಲಕ್ಷ ಎರ್ಟಿಗಾ ಎಂಪಿವಿಗಳನ್ನು ಮಾರಾಟ ಮಾಡಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಮಾರುತಿ ಸುಜುಕಿ ಎರ್ಟಿಗಾ ಪ್ರಸ್ತುತ ದೇಶದಲ್ಲಿ ಹೆಚ್ಚು ಮಾರಾಟವಾದ ಎಂಪಿವಿಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಎರಡು ವರ್ಷಗಳಿಂದ ಎಂಪಿವಿ ವಿಭಾಗದಲ್ಲಿ ತನ್ನ ಪಾರುಪತ್ಯವನ್ನು ಸಾಧಿಸುತ್ತಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ ಎರ್ಟಿಗಾ

ಮಾರುತಿ ಎರ್ಟಿಗಾ ಎಂಪಿವಿ ಪ್ರಸ್ತುತ ತನ್ನ ಎರಡನೇ ತಲೆಮಾರಿನ ಆವೃತ್ತಿಯಲ್ಲಿದೆ. ಎಂಪಿವಿಯ ನ್ಯೂ ಜನರೇಷನ್ ಮಾದರಿಯನ್ನು 2018ರ ನವೆಂಬರ್ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು. ಈ ಸಂದರ್ಭದಲ್ಲಿ ಹೊರಭಾಗ ಮತ್ತು ಒಳಭಾಗದಲ್ಲಿ ಹಲವಾರು ನವೀಕರಣಗಳನ್ನು ನಡೆಸಿ ಬಿಡುಗಡೆಗೊಳಿಸಿದ್ದರು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ ಎರ್ಟಿಗಾ

ಎರಡನೇ ತಲೆಮಾರಿನ ಎರ್ಟಿಗಾ ದೊಡ್ಡ ಆಯಾಮಗಳು, ಹೊಸ ಫೀಚರ್ ಗಳು ಮತ್ತು ಹೆಚ್ಚು ಪವರ್ ಫುಲ್ ಪೆಟ್ರೋಲ್ ಎಂಜಿನ್ ನೊಂದಿಗೆ ಬಿಡುಗಡೆಗೊಳಿಸಿತ್ತು. 2019ರಲ್ಲಿ ಮಾರುತಿ ಸುಜುಕಿ ಎಂಪಿವಿಯ ಇನ್ನೂ ಹೆಚ್ಚಿನ ಪ್ರೀಮಿಯಂ ಆರು ಸೀಟುಗಳ ಆವೃತ್ತಿಯನ್ನು ಎಕ್ಸ್‌ಎಲ್ 6 ಎಂದು ಪರಿಚಯಿಸಿತು.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ ಎರ್ಟಿಗಾ

ಈ ಪ್ರೀಮಿಯಂ ಆವೃತ್ತಿಯು ಬ್ರ್ಯಾಂಡ್ನ ನೆಕ್ಸಾ ಡೀಲರುಗಳ ಮೂಲಕ ಪ್ರತ್ಯೇಕವಾಗಿ ಲಭ್ಯವಿದೆ. ಇನ್ನು ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಅನ್ನು ಭಾರತದಲ್ಲಿ ಮೊದಲ ಬಾರಿಗೆ 2012ರಲ್ಲಿ ಬಿಡುಗಡೆಗೊಳಿಸಿತ್ತು. ಎಂಪಿವಿಯ ಮೊದಲ ತಲೆಮಾರಿನ ಪುನರಾವರ್ತನೆಯನ್ನು ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ರೂಪಾಂತರದೊಂದಿಗೆ ನೀಡಲಾಯಿತು.

MOST READ: ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ ಎರ್ಟಿಗಾ

ಡೀಸೆಲ್ ಎಂಜಿನ್ ಅನ್ನು ಬಿಎಸ್- 6 ಮಾಲಿನ್ಯ ನಿಯಮ ಜಾರಿಯಾಗಿರುವುದರಿಂದ ಸ್ಥಗಿತಗೊಳಿಸಿತ್ತು. ಇನ್ನು ಮಾರುತಿ ಸುಜುಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಎರ್ಟಿಗಾ ಎಂಪಿವಿಯನ್ನು ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ ಎರ್ಟಿಗಾ

ಸದ್ಯ ಮಾರುತಿ ಎರ್ಟಿಗಾ ಎಂಪಿವಿಯಲ್ಲಿ 1.5-ಲೀಟರ್ ಕೆ-ಸೀರೀಸ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 104 ಬಿಹೆಚ್‌ಪಿ ಪವರ್ ಮತ್ತು 138 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಮ್ಯಾನುವಲ್ ಅಥವಾ ನಾಲ್ಕು-ಸ್ಪೀಡ್ ಟಾರ್ಕ್-ಕರ್ನಾವಟರ್ ಅನ್ನು ಜೋಡಿಸಲಾಗಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ ಎರ್ಟಿಗಾ

ಇನ್ನು ಎರ್ಟಿಗಾ ಎಂಪಿವಿಯ ಸಿಎನ್‌ಜಿ ಆವೃತ್ತಿಯು 91 ಬಿಹೆಚ್‌ಪಿ ಪವರ್ ಮತ್ತು 122 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ ಎರ್ಟಿಗಾ

ಮಾರುತಿ ಸುಜುಕಿ ಎರ್ಟಿಗಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಂಪಿವಿಯಾಗಿದೆ. ಈ ಜನಪ್ರಿಯ ಮಾರುತಿ ಸುಜುಕಿ ಎರ್ಟಿಗಾ ಭಾರತೀಯ ಮಾರುಕಟ್ಟೆಯಲ್ಲಿ ಇನ್ನೊವಾ ಕ್ರಿಸ್ಟಾ, ಮಹೀಂದ್ರಾ ಮರಾಜೋ, ರೆನಾಲ್ಟ್ ಟ್ರೈಬರ್ ಎಂಪಿವಿಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Tuesday, November 17, 2020, 19:44 [IST]
English summary
Maruti Suzuki Ertiga MPV Achieves New Sales Milestone. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+