ಮಾರುತಿ ಎರ್ಟಿಗಾ ಮಾದರಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಹ್ಯುಂಡೈ ಎಂಪಿವಿ

ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಹೊಸ ಎಂಪಿವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಎಂಪಿವಿ ವಿಭಾಗದಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಮಾರುತಿ ಸುಜುಕಿ ಎರ್ಟಿಗಾ ಮಾದರಿಗೆ ಟಕ್ಕರ್ ನೀಡಲು ಹೊಸ ಎಂಪಿವಿ ಬಿಡುಗಡೆಗೊಳಿಸಲು ಹ್ಯುಂಡೈ ಮುಂದಾಗಿದೆ.

ಮಾರುತಿ ಎರ್ಟಿಗಾ ಮಾದರಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಹ್ಯುಂಡೈ ಎಂಪಿವಿ

ಹೊಸ ಕಾಂಪ್ಯಾಕ್ಟ್ ಎಂಪಿವಿಯನ್ನು ಹ್ಯುಂಡೈ ಸ್ಟಾರ್ರಿಯಾ ಎಂಬ ಹೆಸರನ್ನು ನೀಡಬಹುದು ಎಂದು ವರದಿಯಾಗಿದೆ. ಫಿಲಿಪೈನ್ಸ್‌ನಲ್ಲಿ "ಸ್ಟಾರಿಯಾ ಪ್ರೀಮಿಯಂ" ಮತ್ತು "ಸ್ಟಾರಿಯಾ" ಹೆಸರುಗಳನ್ನು ಟ್ರೇಡ್‌ಮಾರ್ಕ್ ಮಾಡಿದೆ. ಟ್ರೇಡ್‌ಮಾರ್ಕ್ ಪ್ರಕಾರ, ಸ್ಟಾರಿಯಾ ಎಂಬ ಹೆಸರಿನಡಿಯಲ್ಲಿ ವ್ಯಾನ್‌ಗಳು, ವ್ಯಾಗನ್‌ಗಳು, ಎಲೆಕ್ಟ್ರಿಕ್ ವಾಹನಗಳು ಮತ್ತು ಹೈಬ್ರಿಡ್ ವಾಹನಗಳು ಬರುತ್ತದೆ.

ಮಾರುತಿ ಎರ್ಟಿಗಾ ಮಾದರಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಹ್ಯುಂಡೈ ಎಂಪಿವಿ

ಹೊಸ ಹ್ಯುಂಡೈ ಕಾಂಪ್ಯಾಕ್ಟ್ ಎಂಪಿವಿ ಬೆಲೆಯು ಎರ್ಟಿಗಾ ಮಾದರಿಗಿಂತ ತುಸು ದುಬಾರಿಯಾಗಿರಬಹುದೆಂದು ನಿರೀಕ್ಷಿಸುತ್ತೇವೆ. ಹ್ಯುಂಡೈ ಕಂಪನಿಯಿ ಹೊಸ ಕಾಂಫ್ಯಾಕ್ಟ್ ಎಂಪಿವಿಯನ್ನು ವೆನ್ಯೂ ಮಾದರಿಯ ಪ್ಲಾಟ್‌ಫಾರ್ಮ್ ಅನ್ನು ಬಳಸಬಹುದು.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಮಾರುತಿ ಎರ್ಟಿಗಾ ಮಾದರಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಹ್ಯುಂಡೈ ಎಂಪಿವಿ

ಅದರೆ ಹೊಸ 7 ಸೀಟರ್ ಕ್ರೆಟಾ ಮಾದರಿಯ ಪ್ಲಾಟ್‌ಫಾರ್ಮ್ ಹೆಚ್ಚು ಸೂಕ್ತವಾಗಿ ಎಂದು ಹೇಳಬಹುದು. 7 ಸೀಟರ್ ಕ್ರೆಟಾದಲ್ಲಿ ವಿವಿಧ ಎಂಜಿನ್ ಆಯ್ಕೆಗಳನ್ನು ಪಡೆದುಕೊಳ್ಳಲಿದೆ. ಈಗಾಗಲೇ ಹೊಸ 7 ಸೀಟರ್ ಕ್ರೆಟಾದ ಸ್ಪಾಟ್ ಟೆಸ್ಟ್ ಅನ್ನು ದಕ್ಷಿಣ ಕೊರಿಯಾದಲ್ಲಿ ಪ್ರಾರಂಭಿಸಿದೆ.

ಮಾರುತಿ ಎರ್ಟಿಗಾ ಮಾದರಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಹ್ಯುಂಡೈ ಎಂಪಿವಿ

ಈ ಹೊಸ 7 ಸೀಟರ್ ಕ್ರೆಟಾ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆಯನ್ನು ಹೊಂದಿರಲಿದೆ. ಇದರಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 145 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮಾರುತಿ ಎರ್ಟಿಗಾ ಮಾದರಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಹ್ಯುಂಡೈ ಎಂಪಿವಿ

ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಎಂಜಿನ್ ಗಳೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಮಾರುತಿ ಎರ್ಟಿಗಾ ಮಾದರಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಹ್ಯುಂಡೈ ಎಂಪಿವಿ

ಹೊಸ ಕಾಂಪ್ಯಾಕ್ಟ್ ಎಂಪಿವಿ ಹ್ಯುಂಡೈ ಕಂಪನಿಯ ಇಂಡೋನೇಷ್ಯಾದ ಕಾರ್ಖಾನೆಯಲ್ಲೂ ಉತ್ಪಾದನೆಯಾಗಲಿದೆ. ಇದನ್ನು ಫಿಲಿಪೈನ್ಸ್ ಸೇರಿದಂತೆ ಆಯ್ದ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುವುದು. ಕುತೂಹಲಕಾರಿ ಅಂಶವೆಂದರೆ, ಮಲೇಷ್ಯಾ, ಲಾವೋಸ್ ಮತ್ತು ಕಾಂಬೋಡಿಯಾದಂತಹ ದೇಶಗಳಲ್ಲಿಯೂ ಸ್ಟಾರ್ಯಾ ಎಂಬ ಹೆಸರನ್ನು ಹ್ಯುಂಡೈ ಕಂಪನಿಯು ನೋಂದಾಯಿಸಲಾಗಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಮಾರುತಿ ಎರ್ಟಿಗಾ ಮಾದರಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಹ್ಯುಂಡೈ ಎಂಪಿವಿ

ಕೊರಿಯಾದ ವಾಹನ ತಯಾರಕ ಹೊಸ 7 ಸೀಟರ್ ಕ್ರೆಟಾ ಮಾದರಿಯನ್ನು ಹ್ಯುಂಡೈ ಅಲ್ಕಾಜರ್ ಎಂಬ ಹೆಸರಿನಲ್ಲಿ ಕರೆಯಬಹುದು ಎಂಬ ವದಂತಿಗಳಿವೆ. ಇನ್ನು ಹ್ಯುಂಡೈ ಕಂಪನಿಯು ಭಾರತೀಯ ಮಾರುಕಟ್ಟೆಗಾಗಿ ಹೊಸ ಮೈಕ್ರೊ ಎಸ್‌ಯುವಿಯನ್ನು ಕೂಡ ಭಾರತೀಯ ಮಾರುಕಟ್ಟೆಗೆ ಸಿದ್ಧಪಡಿಸುತ್ತಿದೆ.

ಮಾರುತಿ ಎರ್ಟಿಗಾ ಮಾದರಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಹ್ಯುಂಡೈ ಎಂಪಿವಿ

ಈ ಹೊಸ ಹ್ಯುಂಡೈ ಮೈಕ್ರೊ ಎಸ್‌ಯುವಿಯು ಸ್ಯಾಂಟ್ರೊ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇನ್ನು ಹೊಸ ಹ್ಯುಂಡೈ ಮೈಕ್ರೊ ಎಸ್‌ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟಾಟಾ ಹೆಚ್‌ಬಿಎಕ್ಸ್ ಮತ್ತು ಮಾರುತಿ ಸುಜುಕಿ ಇಗ್ನಿಸ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Hyundai Compact MPV (Ertiga Rival) Could Be Called The Staria. Read In Kannada.
Story first published: Friday, December 11, 2020, 14:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X