ಆಮದಾಗಲಿವೆ ಜಿಮ್ನಿ ಎಸ್‍ಯುವಿಯ ಸಿಕೆಟಿ ಕಿಟ್‌ಗಳು

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡ ಸುಜುಕಿ ಜಿಮ್ನಿ ಮಿನಿ-ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಎಸ್‍‍ಯುವಿಗಳಲ್ಲಿ ಮಾರುತಿ ಸುಜುಕಿ ಜಿಮ್ನಿ ಒಂದಾಗಿದೆ.

ಆಮದಾಗಲಿವೆ ಜಿಮ್ನಿ ಎಸ್‍ಯುವಿಯ ಸಿಕೆಟಿ ಕಿಟ್‌ಗಳು

ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯ ಅನೇಕ ಸಿಕೆಡಿ ಕಿಟ್‌ಗಳನ್ನು ಭಾರತಕ್ಕೆ ಆಮದು ಮಾಡಿಕೊಂಡಿದ್ದಾರೆ. ಆದರೆ ಈ ಕಿಟ್‌ಗಳ ಸಾಗಣೆಗೆ ಕಸ್ಟಮ್ಸ್ ಕ್ಲಿಯರೆನ್ಸ್ ಗಾಗಿ ಕಾಯುತ್ತಿದೆ ಎಂಬ ವದಂತಿಗಳಿವೆ ಎಂದು ವರದಿ ಪ್ರಕಟವಾಗಿದೆ. ಇನ್ನು ವರದಿಯ ಪ್ರಕಾರ ಮಾರುತಿ ಸುಜುಕಿ ಕಂಪನಿಯು ಜಿಮ್ನಿ ಎಸ್‍ಯುವಿಯ 4,000-5,000 ಯುನಿಟ್‌ಗಳನ್ನು ಉತ್ಪಾದಿಸಲು ಮುಂದಾಗಿದ್ದು, ಹೆಚ್ಚಿನವುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ.

ಆಮದಾಗಲಿವೆ ಜಿಮ್ನಿ ಎಸ್‍ಯುವಿಯ ಸಿಕೆಟಿ ಕಿಟ್‌ಗಳು

ಇನ್ನು ಭಾರತದಲ್ಲಿ 5-ಡೋರಿನ ಜಿಮ್ನಿ ಎಸ್‍ಯುವಿಯನ್ನು ಬಿಡುಗಡೆಗೊಳಿಸಬಹುದು. ಈ 5-ಡೋರಿನ ಜಿಮ್ನಿ ಎಸ್‍ಯುವಿಯನ್ನು ಮಾರುತಿಯ ನೆಕ್ಸಾ ಡೀಲರ್ ಗಳ ಮೂಲಕ ಮಾರಾಟ ಮಾಡಲಾಗುತ್ತದೆ.

MOST READ: ಜನಪ್ರಿಯ ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಆಮದಾಗಲಿವೆ ಜಿಮ್ನಿ ಎಸ್‍ಯುವಿಯ ಸಿಕೆಟಿ ಕಿಟ್‌ಗಳು

3-ಡೋರಿನ ಜಿಮ್ನಿ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದಿಲ್ಲವೆಂದು ಕಂಪನಿಯು ಈ ಹಿಂದೆ ಸ್ಪಷ್ಟ ಪಡಿಸಿದೆ. ಭಾರತದ ಆಫ್-ರೋಡ್ ಪ್ರಿಯರು ಬಹುಕಾತರದಿಂದ ಸುಜುಕಿ ಜಿಮ್ನಿ ಎಸ್‍ಯುವಿಯನ್ನು ಕಾಯುತ್ತಿದ್ದಾರೆ. .

ಆಮದಾಗಲಿವೆ ಜಿಮ್ನಿ ಎಸ್‍ಯುವಿಯ ಸಿಕೆಟಿ ಕಿಟ್‌ಗಳು

ಈ ಮಿನಿ ಎಸ್‍ಯುವಿಯನ್ನು 2018ರಲ್ಲಿ ಜಾಗತಿಕವಾಗಿ ಅನಾವರಣಗೊಂಡಿತು. ಜಿಮ್ನಿ ಮಿನಿ ಎಸ್‍ಯುವಿಯು ಜಾಗತಿಕವಾಗಿ ಅನಾವರಣಗೊಂಡು 1.5 ವರ್ಷಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಆಮದಾಗಲಿವೆ ಜಿಮ್ನಿ ಎಸ್‍ಯುವಿಯ ಸಿಕೆಟಿ ಕಿಟ್‌ಗಳು

ಈ ಜಿಮ್ನಿ ಎಸ್‍‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಕಂಪನಿ ನಿರ್ಧರಿಸಿರಲಿಲ್ಲ. ಆದರೆ ಆಟೋ ಎಕ್ಸ್ ಪೋದಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆನ್ನು ಲಭಿಸಿರುವುದರಿಂದ ಭಾರತದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಹೊಸ ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ.

ಆಮದಾಗಲಿವೆ ಜಿಮ್ನಿ ಎಸ್‍ಯುವಿಯ ಸಿಕೆಟಿ ಕಿಟ್‌ಗಳು

ಈ ಮಿನಿ ಎಸ್‍ಯುವಿಯಲ್ಲಿ 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ. ಇದು ಕಠಿಣ ಭೂಪ್ರದೇಶಗಳಲ್ಲಿ ಸುಗಮವಾಗಿ ಸಾಗಲು ನೆರವಾಗುತ್ತದೆ. ಈ ಮಿನಿ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಆಮದಾಗಲಿವೆ ಜಿಮ್ನಿ ಎಸ್‍ಯುವಿಯ ಸಿಕೆಟಿ ಕಿಟ್‌ಗಳು

ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಅಥವಾ 4 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಮಿನಿ ಎಸ್‍‍ಯುವಿಯನ್ನು ಡೀಸೆಲ್ ಅಥವಾ ಹೈಬ್ರಿಡ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸುವುದಿಲ್ಲ. ಭಾರತದಲ್ಲಿ ಬಿಡುಗಡೆಯಾದರೆ ಈ ಜಿಮ್ನಿ ಎಸ್‍‍ಯುವಿ 33 ವರ್ಷಗಳ ಕಾಲ ದೇಶದಲ್ಲಿ ಮಾರಾಟವಾಗಿದ್ದ ಜನಪ್ರಿಯ ಜಿಪ್ಸಿ ಎಸ್‍‍ಯುವಿಯ ಉತ್ತರಾಧಿಕಾರಿಯಾಗಲಿದೆ.

ಆಮದಾಗಲಿವೆ ಜಿಮ್ನಿ ಎಸ್‍ಯುವಿಯ ಸಿಕೆಟಿ ಕಿಟ್‌ಗಳು

ಮಾರುತಿ ಸುಜುಕಿ ಕಂಪನಿಯು 5-ಡೋರಿನ ಜಿಮ್ನಿ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಜನಪ್ರಿಯ ಮಾರುತಿ ಸುಜುಕಿ ಜಿಮ್ನಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಹೀಂದ್ರಾ ಥಾರ್ ಎಸ್‍ಯುವಿಗೆ ನೇರವಾಗಿ ಪೈಪೋಟಿ ನೀಡುತ್ತದೆ.

Article Published On: Tuesday, July 28, 2020, 20:22 [IST]
English summary
Maruti Imports CKD Kits Of Jimny Into India. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+