Just In
- 26 min ago
ಬಿಡುಗಡೆಯಾಗಲಿದೆ 27 ಕಿ.ಮೀಗಿಂತ ಹೆಚ್ಚು ಮೈಲೇಜ್ ನೀಡುವ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿ
- 45 min ago
ರಾಂಗ್ ಸೈಡ್'ನಲ್ಲಿ ವಾಹನ ಚಾಲನೆ ಮಾಡುವವರ ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸಲು ಮುಂದಾದ ಪೊಲೀಸ್ ಇಲಾಖೆ
- 1 hr ago
ಭಾರತದಲ್ಲಿ ವರ್ಷಕ್ಕೊಂದು ಹೊಚ್ಚ ಹೊಸ ಕಾರು ಮಾದರಿಯನ್ನು ಬಿಡುಗಡೆ ಮಾಡಲಿದೆ ಸಿಟ್ರನ್
- 3 hrs ago
ಅನಾವರಣವಾಯ್ತು 2021ರ ಕೆಟಿಎಂ 890 ಡ್ಯೂಕ್ ಬೈಕ್
Don't Miss!
- News
'ಕೌನ್ ಬನೇಗಾ...' ವಿಡಿಯೋ ಹಂಚಿಕೊಂಡು ಖುಷಿಪಟ್ಟ ಗೀತಾ ಗೋಪಿನಾಥ್
- Finance
ಬಜೆಟ್ 2021: ವಿವಿಧ ಮಲ್ಟಿಪ್ಲೆಕ್ಸ್ ಪ್ರತಿನಿಧಿಗಳಿಂದ ನಿರ್ಮಲಾ ಸೀತಾರಾಮನ್ ಗೆ ಮನವಿ
- Movies
ಥ್ರಿಲ್ಲಿಂಗ್ ಸುದ್ದಿ ನೀಡಿದ ಕತ್ರಿನಾ ಕೈಫ್-ವಿಜಯ್ ಸೇತುಪತಿ ಚಿತ್ರ!
- Lifestyle
ನಿಮ್ಮ ಚರ್ಮದ ಆರೈಕೆಗೆ ಬೆಲ್ಲ ಆಗಲಿದೆ ಒಂದೊಳ್ಳೆ ಪಾಟ್ನರ್..
- Sports
ಬಿಎಂಡಬ್ಲ್ಯೂ ನೂತನ ಕಾರು ಖರೀದಿಸಿದ ವೇಗಿ ಮೊಹಮ್ಮದ್ ಸಿರಾಜ್
- Education
KIOCL Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಲರ್‌ಫುಲ್ ಆಗಿ ಮಾರುತಿ ಓಮ್ನಿ ಎಲೆಕ್ಟ್ರಿಕ್ ಮಾದರಿಯ ಕಾಲ್ಪನಿಕ ಚಿತ್ರ ವಿನ್ಯಾಸಗೊಳಿಸಿದ ವಿದ್ಯಾರ್ಥಿ
ಮಾರುತಿ ಸುಜುಕಿ ಓಮ್ನಿ 35 ವರ್ಷಗಳ ಕಾಲ ಭಾರತೀಯ ಮಾರುಕಟ್ಟೆಯಲ್ಲಿ ಮಿಂಚಿ ಮರೆಯಾದ ಮಾದರಿಯಾಗಿದೆ. ಹೊಸ ವಾಹನ ಸುರಕ್ಷತಾ ನಿಯಮ ಜಾರಿಯಾಗುವ ವೇಳೆ ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಓಮ್ನಿ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಿತು.

ಈ ವರ್ಷದ ಫೆಬ್ರವರಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ, ಅನೇಕ ತಯಾರಕರು ತಮ್ಮ ಹಳೆಯ ತಲೆಮಾರಿನ ಮಾದರಿಗಳ ಕಾನ್ಸೆಪ್ಟ್ ಗಳನ್ನು ಭವಿಷ್ಯದ ಎಲೆಕ್ಟ್ರಿಕ್ ಕಾರುಗಳಾಗಿ ಪ್ರದರ್ಶಿಸಿದರು. 1990ರ ದಶಕದಲ್ಲಿ ಜನಪ್ರಿಯ ಎಸ್‍ಯುವಿಯಾಗಿದ್ದ ಟಾಟಾ ಸಿಯೆರಾವನ್ನು ಆಧರಿಸಿದ ಸಿಯೆರಾ ಇವಿ ರೂಪದಲ್ಲಿ ಪ್ರದರ್ಶಿಸಿದ್ದರು. ಐಕಾನಿಕ್ ಸಿಯೆರಾ ಎಸ್‍ಯುವಿಯ ಇವಿ ಮಾದರಿಯ ಕಾನ್ಸೆಪ್ಟ್ ಸಾಕಷ್ಟು ಸಂಚಲವನ್ನು ಮೂಡಿಸಿತ್ತು.

ಸಮಾಜಿಕ ಜಾಲತಾಣಗಳಲ್ಲಿ ಹೊಸ ಮಾರುತಿ ಓಮ್ನಿ ಇವಿ ಮಾದರಿಯ ಚಿತ್ರಗಳು ಸಾಕಷ್ಟು ಸಂಚಲವನ್ನು ಮೂಡಿಸಿದೆ. ಅಸಲಿಗೆ ಆಟೋಮೊಬೈಲ್ ಡಿಸೈನ್ ವಿದ್ಯಾರ್ಥಿ, ಶಶಾಂಕ್ ಶೇಖರ್ ಅವರು ತಮ್ಮ ಕಾಲ್ಪನಿಕ ಮಾರುತಿ ಓಮ್ನಿ ಇವಿ ಮಾದರಿಯ ವಿನ್ಯಾಸವನ್ನು ಗೊಳಿಸಿರುವುದಾಗಿದೆ. ಈ ಚಿತ್ರದಲ್ಲಿ ಮಾರುತಿ ಓಮ್ನಿ ವ್ಯಾನ್ ಕಲರ್ ಫುಲ್ ಆಗಿ ಆಕರ್ಷಕವಾಗಿದೆ.
MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಭಾರತೀಯ ರಸ್ತೆಗಳಲ್ಲಿ ಇಂದಿಗೂ ನಾವು ಮಾರುತಿ ಸುಜುಕಿ ಓಮ್ನಿಗಳನ್ನು ಕಾಣಬಹುದಾಗಿದೆ. ಅದರಲ್ಲಿಯು ಮಲೆನಾಡು ಭಾಗದಲ್ಲಿ ಓಮ್ನಿ ವ್ಯಾನ್ ಗಳು ಹೆಚ್ಚಾಗಿ ಕಾಣಸಿಗುತ್ತದೆ. ಇದನ್ನು ತಮ್ಮ ತೋಟದ ಕೆಲಸಗಳಿಗಾಗಿ ಹೆಚ್ಚಾಗಿ ಬಳಸಲಾಗುತ್ತದೆ. ಈ ಓಮ್ನಿಯಲ್ಲಿ ತಮ್ಮ ಕೆಲಸಗಾರರನ್ನು ಕರೆದ್ಯೊಯಲು ಮತ್ತು ಹಲವು ಲಗೇಜ್ ಗಳನ್ನು ಸಾಗಿಸಲು ಹೆಚ್ಚಾಗಿ ಬಳಸುತ್ತಿದ್ದರು.

ಇನ್ನು ಹಳೆಯ ಚಲನಚಿತ್ರಗಳಲ್ಲಿ ಅಪಹರಣ ಸೀನ್ ಗಳಲ್ಲಿ ಹೆಚ್ಚಾಗಿ ಓಮ್ನಿ ಮಾದರಿಯನ್ನು ಉಪಯೋಗಿಸುತ್ತಿದ್ದರು. ಓಮ್ನಿ ವ್ಯಾನ್ ನಿರ್ವಹಣಾ ವೆಚ್ಚವು ಕೂಡ ಕಡಿಮೆಯಾಗಿದೆ. ಅಲ್ಲದೇ ಗ್ರಾಹಕರ ನಂಬಿಕೆಯ ವಾಹನವಾಗಿತ್ತು. ಆದರೆ ಸುರಕ್ಷಾತ ನಿಯಮಗಳಿಗೆ ಅನುಗುಣವಾಗಿ ಇಲ್ಲದ ಕಾರಣ ಮಾರುತಿ ಸುಜುಕಿ ಕಂಪನಿಯು ಓಮ್ನಿ ವ್ಯಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಿದರು.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಆಟೋಮೊಬೈಲ್ ಡಿಸೈನ್ ವಿದ್ಯಾರ್ಥಿ, ಶಶಾಂಕ್ ಶೇಖರ್ ಅವರು ವಿನ್ಯಾಸಗೊಳಿಸಿದ ಚಿತ್ರದಲ್ಲಿರುವ ಓಮ್ನಿ ಮಾದರಿಯು ಬಾಕ್ಸೀ ವಿನ್ಯಾಸದಿಂಡ ಕೂಡಿದೆ. ಚಿತ್ರದಲ್ಲಿರುವ ಓಮ್ನಿ ಮುಂಭಾಗದಲ್ಲಿ ಸಿ-ಆಕಾರದ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ. ಇದು ತುಂಬಾ ಪ್ರೀಮಿಯಂ ಮತ್ತು ಫ್ಯೂಚರಿಸ್ಟಿಕ್ ಆಗಿ ಕಾಣುವಂತೆ ಇದೆ. ಬಾನೆಟ್ ಮತ್ತು ಮುಂಭಾಗದ ಬಂಪರ್ ಆಕರ್ಷಕವಾಗಿದ್ದು, ಲೋ ಪ್ರೊಫೈಲ್ ಲುಕ್ ಅನ್ನು ನೀಡುತ್ತದೆ.

ಇನ್ನು ಈ ಓಮ್ನಿ ಎಲ್ಇಡಿ ಫಾಗ್ ಲ್ಯಾಂಪ್ ಗಳನ್ನು ಹೊಂದಿವೆ. ವ್ಹೀಲ್ ಕಮಾನುಗಳು, ದಪ್ಪನಾದ ವೀಂಗ್ ಮೀರರ್ ಮತ್ತು ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿದೆ. ಬ್ಲ್ಯಾಕ್ ಅಂಡರ್ ಬಾಡಿ ಕ್ಲಾಡಿಂಗ್ಸ್ ಮತ್ತು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಇದಕ್ಕೆ ಹೆಚ್ಚು ಒರಟಾದ ನೋಟವನ್ನು ನೀಡುತ್ತದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇನ್ನು ಸಾಮಾನ್ಯ ಓಮ್ನಿ ವ್ಯಾನ್ ಇರುವಂತಹ ಡೋರಿನ ವಿನ್ಯಾಸವಿದೆ. ಬಿ-ಪಿಲ್ಲರ್‌ನಲ್ಲಿ ಸೈಡ್ ಟರ್ನ್ ಇಂಡಿಕೇಟರ್ ಅನ್ನು ಹೊಂದಿದೆ. ಓಮ್ನಿ ಇವಿ ಹಿಂಭಾಗವು ಪರಿಚಿತ ಕಾಂಬಿನೇಶನ್ ಲ್ಯಾಂಪ್‌ಗಳನ್ನು ಪಡೆಯುತ್ತದೆ. ಎಲ್‌ಇಡಿ ಲೈಟ್ ಗೈಡ್‌ಗಳೊಂದಿಗೆ ಮತ್ತು ಅದರ ಟೈಲ್‌ಗೇಟ್‌ನಲ್ಲಿ ಪೂರ್ಣ ಅಗಲದ ಎಲ್‌ಇಡಿಯಾಗಿದೆ.

ಸೈಡ್ ಪ್ರೊಫೈಲ್‌ನಿಂದ, ಓಮ್ನಿ ವಿಶಾಲವಾಗಿ ಕಾಣುತ್ತದೆ. ಇದು ಹಿಂಭಾಗದ ವೈಪರ್‌ಗಳು, ಡಿಫೋಗರ್‌ಗಳು ಮತ್ತು ಫಾಗ್ ಲ್ಯಾಂಪ್ ಗಳಂತಹ ಹೆಚ್ಚುವರಿ ಫೀಚರ್ ಚಿತ್ರದಲ್ಲಿ ನೀಡಿದೆ. ಇನ್ನು ಚಿತ್ರದಲ್ಲಿರುವ ಓಮ್ನಿ ಎಲೆಕ್ಟ್ರಿಕ್ ಮಾದರಿ ಡ್ಯುಯಲ್ ಟೋನ್ ಬಣ್ಣವನ್ನು ಹೊಂದಿದೆ.