ಅಗಸ್ಟ್ 5ಕ್ಕೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್

ಮಾರುತಿ ಸುಜುಕಿ ಬಹುನೀರಿಕ್ಷಿತ ಎಸ್-ಕ್ರಾಸ್ ಪೆಟ್ರೋಲ್ ಮಾದರಿಯನ್ನು ಬಿಡುಗಡೆಗೊಳಿಸಲು ಅಂತಿಮ ಹಂತದ ಸಿದ್ದತೆ ನಡೆಸಿದ್ದು, ಹೊಸ ಕಾರು ಮುಂದಿನ ತಿಂಗಳು ಅಗಸ್ಟ್ 5ಕ್ಕೆ ಅಧಿಕೃತವಾಗಿ ಮಾರುಕಟ್ಟೆಗೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ಅಗಸ್ಟ್ 5ಕ್ಕೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್

ಕರೋನಾ ವೈರಸ್ ಹಿನ್ನಲೆಯಲ್ಲಿ ಹೊಸ ಕಾರಿನ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಲೇ ಬರುತ್ತಿರುವ ಮಾರುತಿ ಸುಜುಕಿ ಕಂಪನಿಯು ಇದೀಗ ಅಂತಿಮವಾಗಿ ಅಗಸ್ಟ್ 5ಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ. ಬಿಎಸ್-6 ನಿಯಮದಿಂದಾಗಿ ಹೊಸ ಕಾರಿನಲ್ಲಿ ಈ ಬಾರಿ ಪೆಟ್ರೋಲ್ ಮಾದರಿಯನ್ನು ಮಾತ್ರವೇ ಪರಿಚಯಿಸಲಾಗುತ್ತಿದ್ದು, ಡೀಸೆಲ್ ಎಂಜಿನ್ ಬಿಡುಗಡೆಯು ಇನ್ನಷ್ಟು ತಡವಾಗುವ ಸಾಧ್ಯತೆಗಳಿವೆ.

ಅಗಸ್ಟ್ 5ಕ್ಕೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್

ಬಿಎಸ್-6 ನಿಯಮ ಜಾರಿ ಹಿನ್ನಲೆಯಲ್ಲಿ ಹೊಸ ಕಾರು ಮಾರಾಟದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸಿರುವ ಮಾರುತಿ ಸುಜುಕಿಯು ಈ ಹಿಂದಿನ ಡೀಸೆಲ್ ಎಂಜಿನ್ ಪ್ರೇರಿತ ವಿಟಾರಾ ಬ್ರೆಝಾ ಮತ್ತು ಎಸ್-ಕ್ರಾಸ್ ಕಾರಿನಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದೆ.

ಅಗಸ್ಟ್ 5ಕ್ಕೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್

ವಿಟಾರಾ ಬ್ರೆಝಾ ಕಾರು ಮಾದರಿಯು ಈಗಾಗಲೇ ಹೊಸ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಂಡಿದ್ದು, ಇದೀಗ ಎಸ್-ಕ್ರಾಸ್ ಮಾದರಿಯು ಸಹ ವಿಟಾರಾ ಬ್ರೆಝಾ ಮಾದರಿಯಲ್ಲೇ ಹೊಸ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಳ್ಳುತ್ತಿದೆ.

ಅಗಸ್ಟ್ 5ಕ್ಕೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್

ಹೊಸ ಎಸ್-ಕ್ರಾಸ್ ಕಾರಿನಲ್ಲಿ ವಿಟಾರಾ ಬ್ರೆಝಾದಲ್ಲಿ ಜೋಡಣೆ ಮಾಡಲಾಗಿರುವ 1.5-ಲೀಟರ್ ಪೆಟ್ರೋಲ್ ಮಾದರಿಯನ್ನೇ ಜೋಡಣೆ ಮಾಡಲಾಗುತ್ತಿದ್ದು, ಇದು ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 103-ಬಿಎಚ್‌ಪಿ ಮತ್ತು 138-ಎನ್‌ಎಂ ಟಾರ್ಕ್‌ನೊಂದಿಗೆ ಅತ್ಯುತ್ತಮ ಮೈಲೇಜ್ ಪಡೆದುಕೊಂಡಿದೆ.

ಅಗಸ್ಟ್ 5ಕ್ಕೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್

ಜೊತೆಗೆ ಹೊಸ ಕಾರು 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಎರಡು ಮಾದರಿಯಲ್ಲೂ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಜೋಡಣೆ ಮಾಡಬಹುದಾಗಿದೆ. ಇದು ಪರ್ಫಾಮೆನ್ಸ್ ಜೊತೆಗೆ ಮೈಲೇಜ್ ಪ್ರಮಾಣದಲ್ಲೂ ಉತ್ತಮ ರೇಟಿಂಗ್ಸ್ ಪಡೆದುಕೊಳ್ಳಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಅಗಸ್ಟ್ 5ಕ್ಕೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್

ಇನ್ನು ಬಿಎಸ್-6 ಜಾರಿಗೆ ಬಂದ ಹಿನ್ನಲೆಯಲ್ಲಿ ಮಾರುತಿ ಸುಜುಕಿಯು ಈ ಹಿಂದಿನ 1.3-ಲೀಟರ್ ಡೀಸೆಲ್ ಮಾದರಿಯನ್ನ ಸ್ಥಗಿತಗೊಳಿಸಿದ್ದು, ಡೀಸೆಲ್ ಆವೃತ್ತಿಗಳ ಮಾರಾಟವನ್ನು ಕೈಬಿಟ್ಟು ಕೇವಲ ಪೆಟ್ರೋಲ್ ಮತ್ತು ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ ಪೆಟ್ರೋಲ್ ಮಾದರಿಗಳನ್ನು ಮಾತ್ರವೇ ಮಾರಾಟ ಮಾಡುತ್ತಿದೆ.

ಅಗಸ್ಟ್ 5ಕ್ಕೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್

ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿರುವುದೇ ಡೀಸೆಲ್ ಎಂಜಿನ್ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಕಡಿಮೆ ಸಾಮರ್ಥ್ಯದ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿವೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಅಗಸ್ಟ್ 5ಕ್ಕೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್

ಮಾರುತಿ ಸುಜುಕಿಯು ಸದ್ಯಕ್ಕೆ 800ಸಿಸಿ, 1.0-ಲೀಟರ್, 1.2-ಲೀಟರ್ ಮತ್ತು 1.5-ಲೀಟರ್ ಪೆಟ್ರೋಲ್ ಕಾರು ಮಾದರಿಗಳನ್ನು ಮಾತ್ರವೇ ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳನ್ನು ಹೊರತುಪಡಿಸಿ ಸೆಡಾನ್, ಎಸ್‌ಯುವಿ ಮತ್ತು ಎಂಪಿವಿ ಕಾರು ಮಾದರಿಗಳಲ್ಲಿ ಮಾತ್ರವೇ ಹೊಸ ತಂತ್ರಜ್ಞಾನ ಪ್ರೇರಿತ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಿಡುಗಡೆಗೊಳಿಸಬಹುದಾದ ಸಾಧ್ಯತೆಗಳಿವೆ.

Most Read Articles

Kannada
English summary
Maruti S-Cross BS-6 Model Launch Date Revealed. Read in Kannada.
Story first published: Saturday, July 18, 2020, 20:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X