ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್

ಮಾರುತಿ ಸುಜುಕಿ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಡೀಸೆಲ್ ಎಂಜಿನ್ ಮಾರಾಟವನ್ನು ಸ್ಥಗಿತಗೊಳಿಸಿದ್ದು, ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿದ ಪರಿಣಾಮ ಎಸ್-ಕ್ರಾಸ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಎಂಜಿನ್ ಅನ್ನು ಜೋಡಣೆ ಮಾಡಿ ಬಿಡುಗಡೆಗೊಳಿಸಲಾಗಿದೆ.

ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್ ಬಿಡುಗಡೆ

ವಿಟಾರಾ ಬ್ರೆಝಾ ನಂತರ ಎಸ್-ಕ್ರಾಸ್ ಕಾರು ಮಾದರಿಯಲ್ಲೂ ಪೆಟ್ರೋಲ್ ಎಂಜಿನ್ ಮಾದರಿಯನ್ನು ಬಿಡುಗಡೆ ಮಾಡಿರುವ ಮಾರುತಿ ಸುಜುಕಿಯು ಬಿಎಸ್-6 ಎಮಿಷನ್ ನಿಯಮ ಅನುಸಾರವಾಗಿ ಹೊಸ ಎಂಜಿನ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಎಸ್-ಕ್ರಾಸ್ ಪೆಟ್ರೋಲ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.39 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.12.39 ಲಕ್ಷ ಬೆಲೆ ಹೊಂದಿರಲಿದೆ.

ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್ ಬಿಡುಗಡೆ

ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು ಪ್ರಮುಖ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಮಾದರಿಯಾಗಿ ಸಿಗ್ಮಾ ಮತ್ತು ಹೈ ಎಂಡ್ ಮಾದರಿಯಾಗಿ ಅಲ್ಫಾ ಆಟೋಮ್ಯಾಟಿಕ್ ಆವೃತ್ತಿಯು ಮಾರಾಟಗೊಳ್ಳಲಿದೆ.

ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್ ಬಿಡುಗಡೆ

ಹೊಸ ಎಸ್-ಕ್ರಾಸ್ ವೆರಿಯೆಂಟ್ ಮತ್ತು ಬೆಲೆ(ದೆಹಲಿ ಎಕ್ಸ್‌ಶೋರೂಂ ಪ್ರಕಾರ)

ಎಸ್-ಕ್ರಾಸ್ 1.5ಲೀಟರ್ ಪೆಟ್ರೋಲ್ ವೆರಿಯೆಂಟ್‌ಗಳು ಎಕ್ಸ್‌ಶೋರೂಂ ದರ
ಸಿಗ್ಮಾ ಮ್ಯಾನುವಲ್ ರೂ. 8.39 ಲಕ್ಷ
ಡೆಲ್ಟಾ ಮ್ಯಾನುವಲ್ ರೂ. 9.60 ಲಕ್ಷ
ಜೆಟಾ ಮ್ಯಾನುವಲ್ ರೂ. 9.95 ಲಕ್ಷ
ಅಲ್ಫಾ ಮ್ಯಾನುವಲ್ ರೂ. 11.15 ಲಕ್ಷ
ಡೆಲ್ಟಾ ಆಟೋಮ್ಯಾಟಿಕ್ ರೂ. 10.83 ಲಕ್ಷ
ಜೆಟಾ ಆಟೋಮ್ಯಾಟಿಕ್ ರೂ. 11.18 ಲಕ್ಷ
ಅಲ್ಫಾ ಆಟೋಮ್ಯಾಟಿಕ್ ರೂ. 12.39 ಲಕ್ಷ
ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್ ಬಿಡುಗಡೆ

ಎಸ್-ಕ್ರಾಸ್ ಎಂಜಿನ್ ವೈಶಿಷ್ಟ್ಯತೆ

ಬಿಎಸ್-6 ಎಂಜಿನ್ ಹೊಂದಿರುವ ಎಸ್-ಕ್ರಾಸ್ ಪೆಟ್ರೋಲ್ ಮಾದರಿಯು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಣೆಯ 1.5-ಲೀಟರ್ ಕೆ15ಬಿ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಂಡಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್ ಬಿಡುಗಡೆ

ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಎರಡು ಆವೃತ್ತಿಯಲ್ಲೂ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಜೋಡಣೆ ಮಾಡಲಾಗಿದ್ದು, ಹೊಸ ಎಂಜಿನ್ ಮಾದರಿಯು 105-ಬಿಎಚ್‌ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್ ಬಿಡುಗಡೆ

ಈ ಮೂಲಕ ಎಂಜಿನ್ ಮಾದರಿಯು ಮೈಲೇಜ್ ವಿಚಾರದಲ್ಲೂ ಗ್ರಾಹಕರನ್ನು ಸೆಳೆಯಲಿದ್ದು, ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ ಪೆಟ್ರೋಲ್ ಗರಿಷ್ಠ 18.55ಕಿ.ಮೀ ಮತ್ತು ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್‌ಗೆ 18.43 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್ ಬಿಡುಗಡೆ

ಎಸ್-ಕ್ರಾಸ್ ಕಾರಿನಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 1.3-ಲೀಟರ್ ಡೀಸೆಲ್ ಮಾದರಿಯು ಪ್ರತಿ ಲೀಟರ್‌ಗೆ 25.01 ಕಿ.ಮೀ ಮೈಲಜ್ ಹೊಂದಿತ್ತು. ಆದರೆ ಬಿಎಸ್-6 ವೈಶಿಷ್ಟ್ಯತೆಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲದ ಹಿನ್ನಲೆಯಲ್ಲಿ ಪೆಟ್ರೋಲ್ ಮಾದರಿಗಳ ಮೇಲೆ ಹೆಚ್ಚು ಗಮನಹರಿಸಲಾಗಿದೆ.

ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್ ಬಿಡುಗಡೆ

ಒಂದು ವೇಳೆ ಈ ಹಿಂದಿನ 1.3-ಲೀಟರ್ ಡೀಸೆಲ್ ಮಾದರಿಯನ್ನು ಹೊಸ ಎಮಿಷನ್ ನಿಯಮಗಳಿಗೆ ಉನ್ನತೀಕರಿಸಿದ್ದರೂ ಹೊಸ ಕಾರುಗಳ ಬೆಲೆಯು ಸಾಕಷ್ಟು ದುಬಾರಿಯಾಗುವ ಸಾಧ್ಯತೆಯಿತ್ತು. ಈ ಹಿನ್ನಲೆಯಲ್ಲಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಪೂರ್ತಿಯಾಗಿ ಸ್ಥಗಿತಗೊಳಿಸಿರುವ ಮಾರುತಿ ಸುಜುಕಿಯು ಕೇವಲ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರು ಮಾದರಿಯನ್ನು ಮಾತ್ರವೇ ಮಾರಾಟ ಮಾಡುತ್ತಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ವರ್ಷನ್ ಬಿಡುಗಡೆ

ಕೆಲವು ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿ ಕಂಪನಿಯು ಮುಂಬರುವ ದಿನಗಳಲ್ಲಿ ಕೆಲವೇ ಕೆಲವು ಕಾರು ಮಾದರಿಗಳಿಗಾಗಿ ಮಾತ್ರವೇ ಹೊಸದಾಗಿ ಅಭಿವೃದ್ದಿಗೊಳಿಸಲಾದ ಡೀಸೆಲ್ ಎಂಜಿನ್ ಆಯ್ಕೆ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಹೈ ಎಂಡ್ ಮಾದರಿಗಳಾದ ಎಸ್-ಕ್ರಾಸ್, ಎರ್ಟಿಗಾ, ಎಕ್ಸ್ 6, ಸಿಯಾಜ್ ಕಾರುಗಳಿಗೆ ಮಾತ್ರವೇ ಡೀಸೆಲ್ ಎಂಜಿನ್ ಆಯ್ಕೆ ನೀಡಬಹುದು ಎನ್ನಲಾಗಿದೆ.

Article Published On: Wednesday, August 5, 2020, 14:16 [IST]
English summary
Maruti S-Cross Petrol Launched. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+