ಮಾರಾಟದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಆಲ್ಟೊ

ಮಾರುತಿ ಸುಜುಕಿ ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ಕಾರುಗಳನ್ನು ಮಾರಾಟ ಮಾಡಿ ಜನಪ್ರಿಯತೆಯನ್ನುಗಳಿಸಿದೆ. ಇತ್ತೀಚೆಗೆ ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಆಲ್ಟೊ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಆಲ್ಟೊ

ಮಾರುತಿ ಸುಜುಕಿಯ ಆಲ್ಟೊ ಕಾರು 4 ಮಿಲಿಯನ್ ಅಂದರೆ 40 ಲಕ್ಷ ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ. ಕಂಪನಿಯು ಭಾರತದ 70% ಗ್ರಾಹಕರಿಗೆ ಆಲ್ಟೊ ಮೊದಲ ಕಾರು ಆಗಿರುತ್ತದೆ ಎಂದು ಹೇಳಿದೆ. ಕಳೆದ 16 ವರ್ಷಗಳಿಂದ ಆಲ್ಟೊ ಕಾರು ಕಂಪನಿಯ ಹೆಚ್ಚು ಮಾರಾಟವಾದ ಕಾರ್ ಆಗಿ ಉಳಿದಿದೆ. ಆಲ್ಟೊ ಕಾರು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಮಾರುಕಟ್ಟೆಯನ್ನು ಆಳುತ್ತಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಆಲ್ಟೊ

ಮಾರುತಿ ಸುಜುಕಿ ಆಲ್ಟೊ ಕಾರ್ ಅನ್ನು ಮೊದಲ ಬಾರಿಗೆ 2000ನೇ ಇಸವಿಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. ಬಿಡುಗಡೆಯಾದ ಕೇವಲ 8 ವರ್ಷಗಳಲ್ಲಿ ಈ ಕಾರು ಹತ್ತು ಲಕ್ಷ ಯುನಿಟ್ ಗಳ ಮಾರಾಟವನ್ನು ದಾಖಲಿಸಿತು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಆಲ್ಟೊ

2012ರಲ್ಲಿ ಇಪ್ಪತ್ತು ಲಕ್ಷ ಯುನಿಟ್ ಮಾರಾಟದ ಗಡಿ ದಾಟಿದ ಈ ಕಾರು 2016ರಲ್ಲಿ 30 ಲಕ್ಷ ಯುನಿಟ್ ಮಾರಾಟದ ಗಡಿ ದಾಟಿತು. ಮಾರುತಿ ಆಲ್ಟೊ ಬಿಎಸ್ 6 ಎಂಜಿನ್ ನೊಂದಿಗೆ ಬಿಡುಗಡೆಯಾದ ಮೊದಲ ಎಂಟ್ರಿ ಲೆವೆಲ್ ಕಾರ್ ಆಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಆಲ್ಟೊ

ಮಾರುತಿ ಆಲ್ಟೊ ಕಾರ್ ಅನ್ನು 2019ರಲ್ಲಿ ಬಿಎಸ್ 6 ಎಂಜಿನ್ ನೊಂದಿಗೆ ಬಿಡುಗಡೆಗೊಳಿಸಲಾಯಿತು. ಬಿಎಸ್ 6 ಎಂಜಿನ್ ನಲ್ಲಿ ಬಿಡುಗಡೆಯಾದ ನಂತರ ಈ ಕಾರಿನ ಮಾರಾಟವು ಮತ್ತಷ್ಟು ಹೆಚ್ಚಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಆಲ್ಟೊ

2019ರಲ್ಲಿ ಮಾರುತಿ ಸುಜುಕಿ ಕಂಪನಿಯು 1.50 ಲಕ್ಷ ಯುನಿಟ್ ಆಲ್ಟೊ ಕಾರುಗಳನ್ನು ಮಾರಾಟ ಮಾಡಿದೆ. ಆಲ್ಟೊ, ಕಾರು ಖರೀದಿಸಬೇಕೆನ್ನುವ ಲಕ್ಷಾಂತರ ಭಾರತೀಯರ ಕನಸನ್ನು ಈಡೇರಿಸುತ್ತಿದೆ ಎಂದು ಕಂಪನಿ ಮಾರುತಿ ಸುಜುಕಿ ಕಂಪನಿ ಹೇಳಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಆಲ್ಟೊ

ಆಲ್ಟೊ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.3 ಲಕ್ಷಗಳಾಗಿದ್ದರೆ, ಗರಿಷ್ಠ ಬೆಲೆ ರೂ.4.37 ಲಕ್ಷಗಳಾಗಿದೆ. ಆಲ್ಟೊ ಕಾರ್ ಅನ್ನು ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಗಳೊಂದಿಗೆ ಸ್ಟ್ಯಾಂಡರ್ಡ್, ಎಲ್‌ಎಕ್ಸ್‌ಐ ಹಾಗೂ ವಿಎಕ್ಸ್‌ಐ ಎಂಬ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಆಲ್ಟೊ

ಪೆಟ್ರೋಲ್ ಮಾದರಿಯು ಪ್ರತಿ ಲೀಟರ್‌ ಪೆಟ್ರೋಲಿಗೆ 22.05 ಕಿ.ಮೀ ಮೈಲೇಜ್ ನೀಡಿದರೆ, ಸಿಎನ್‌ಜಿ ಮಾದರಿಯು ಪ್ರತಿ ಲೀಟರಿಗೆ 31.56 ಕಿ.ಮೀ ಮೈಲೇಜ್ ನೀಡುತ್ತದೆ. ಆಲ್ಟೊ ಕಾರಿನಲ್ಲಿ 799 ಸಿಸಿಯ ಪೆಟ್ರೋಲ್ ಎಂಜಿನ್‌ ಅಳವಡಿಸಲಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಆಲ್ಟೊ

ಈ ಎಂಜಿನ್ 47 ಬಿಹೆಚ್‌ಪಿ ಪವರ್ ಹಾಗೂ 69 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಆಲ್ಟೊ 5 ಸ್ಪೀಡಿನ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ. ಸಿಎನ್‌ಜಿ ಮಾದರಿಯಲ್ಲಿರುವ ಎಂಜಿನ್ 40 ಬಿಹೆಚ್‌ಪಿ ಪವರ್ ಹಾಗೂ 60 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಆಲ್ಟೊ

ಮಾರುತಿ ಆಲ್ಟೊ ಕಾರಿನಲ್ಲಿ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಹೈಸ್ಪೀಡ್ ಅಲರ್ಟ್ ಹಾಗೂ ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್ ಗಳನ್ನು ಅಳವಡಿಸಲಾಗಿದೆ. ಭಾರತದ ಬಹು ಸಂಖ್ಯೆಯ ಜನರು ತಮ್ಮ ಮೊದಲ ಕಾರ್ ಆಗಿ ಆಲ್ಟೊ ಕಾರನ್ನು ಖರೀದಿಸುತ್ತಾರೆ.

Article Published On: Thursday, August 13, 2020, 17:37 [IST]
English summary
Maruti Suzuki alto creates new milestone in sales. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+