ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಪಂಜಾಬ್ ನ ಆರ್‌ಟಿಒ ಇನ್ಸ್‌ಪೆಕ್ಟರ್ ಒಬ್ಬರ ಕ್ರಮವನ್ನು ತಿರಸ್ಕರಿಸಿ ಹಲವು ಬಣ್ಣದ (ಮಲ್ಟಿ-ಕಲರ್) ಕಾರುಗಳನ್ನು ರಿಜಿಸ್ಟರ್ ಮಾಡುವುದು ಕಾನೂನುಬಾಹಿರವಲ್ಲವೆಂದು ಹೇಳಿದೆ.

ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಪಂಜಾಬ್ ನ ಆರ್‌ಟಿಒ ಇನ್ಸ್‌ಪೆಕ್ಟರ್ ಮಲ್ಟಿ ಕಲರ್ ಅಂಬಾಸಿಡರ್ ಕಾರ್ ಅನ್ನು ರಿಜಿಸ್ಟರ್ ಮಾಡಲು ನಿರಾಕರಸಿದ್ದರು. ಈ ಮಲ್ಟಿ ಕಲರ್ ಅಂಬಾಸಿಡರ್ ಕಾರಿನ ಮೂಲ ಬಣ್ಣ ಬಿಳಿ. ಈ ಕಾರಿನಲ್ಲಿ ಮೂಲ ಬಣ್ಣವೂ ಇರುವುದರಿಂದ ಈ ಮಲ್ಟಿ ಕಲರ್ ಕಾರಿನ ರಿಜಿಸ್ಟ್ರೇಷನ್ ಕಾನೂನುಬದ್ಧವಾಗಿದೆ ಎಂದು ಹೈಕೋರ್ಟ್ ಆದೇಶಿಸಿದೆ. ಈ ಮಲ್ಟಿ-ಕಲರ್ ಹಿಂದೂಸ್ತಾನ್ ಅಂಬಾಸಿಡರ್ ಕಾರಿನ ಮೇಲೆ ಕಲಾಕೃತಿಗಳನ್ನು ಬಿಡಿಸಲಾಗಿದೆ.

ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಈ ಕಲಾಕೃತಿಯನ್ನು ಮೆಕ್ಸಿಕನ್ ಕಲಾವಿದರಾದ ಸೆನ್ಕೊ ರಚಿಸಿದ್ದಾರೆ. ಕಾರಿನ ಮೂಲ ಬಣ್ಣವು ಬಿಳಿಯಾಗಿದೆ. ಕಾರಿನ ಬಿಳಿ ಬಣ್ಣದ ಮೇಲೆ ಇತರ ಬಣ್ಣಗಳನ್ನು ಹೊಂದಿರುವ ಕಲಾಕೃತಿಯನ್ನು ಕಲಾವಿದರು ಚಿತ್ರಿಸಿರುವುದನ್ನು ಸ್ಪಷ್ಟವಾಗಿ ಕಾಣಬಹುದು.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಈ ಮಲ್ಟಿ ಕಲರ್ ಅಂಬಾಸಿಡರ್ ಕಾರ್ ಅನ್ನು ರಿಜಿಸ್ಟರ್ ಮಾಡುವಂತೆ ಹೈಕೋರ್ಟ್ ನ್ಯಾಯಾಧೀಶರು ಆರ್‌ಟಿಒಗೆ ಆದೇಶಿಸಿದ್ದಾರೆ. ಈ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿದ ವಕೀಲ ರಂಜಿತ್ ಮಲ್ಹೋತ್ರಾರವರ ಕ್ರಮ ಸರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕಾರಿನ ಮೇಲೆ ಕಲಾಕೃತಿಯನ್ನು ಚಿತ್ರಿಸಲಾಗಿದೆ ಎಂಬ ಕಾರಣಕ್ಕೆ ಕಾರ್ ಅನ್ನು ರಿಜಿಸ್ಟರ್ ಮಾಡದೇ ಇರುವುದು ಸರಿಯಲ್ಲ. ಬಿಳಿ ಬಣ್ಣದ ಕಾರಿನ ಮೇಲೆ ಕಲಾಕೃತಿಯನ್ನು ಬಿಡಿಸಲಾಗಿದೆ ಎಂಬುದನ್ನು ಯಾರಾದರೂ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಆರ್‌ಟಿಒ ಇನ್ಸ್‌ಪೆಕ್ಟರ್ ಕ್ರಮದ ಬಗೆ ಆಕ್ಷೇಪ ವ್ಯಕ್ತಪಡಿಸಿರುವ ನ್ಯಾಯಾಲಯವು ಆರ್‌ಟಿಒ ಇನ್ಸ್‌ಪೆಕ್ಟರ್ ಕ್ರಮ ಹುಚ್ಚಾಟಗಳಿಂದ ಕೂಡಿದ್ದು, ಅರ್ಜಿದಾರರಿಗೆ ಅನಗತ್ಯ ಕಿರುಕುಳವನ್ನುಂಟುಮಾಡಿದೆ ಎಂದು ಹೇಳಿದೆ. ಯಾರಾದರೂ ತಮ್ಮ ಕಾರುಗಳ ಮೇಲೆ ಕಲಾಕೃತಿಗಳನ್ನು ಬಿಡಿಸಿದರೆ ಅದು ಕಾನೂನುಬಾಹಿರವಲ್ಲವೆಂದು ಅಭಿಪ್ರಾಯಪಟ್ಟಿದೆ.

ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮಲ್ಟಿ ಕಲರ್ ಕಾರುಗಳ ಬಗ್ಗೆ ಹೈಕೋರ್ಟ್‌ ತೀರ್ಪು ನೀಡಿರುವುದರಿಂದ, ಮತ್ತೊಂದು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ ಈ ಆದೇಶವನ್ನು ಬದಲಿಸದ ಹೊರತು ಈ ಆದೇಶವು ದೇಶಾದ್ಯಂತ ಅನ್ವಯಿಸಲಿದೆ.

Most Read Articles

Kannada
English summary
Multi colored cars registration not illegal says Punjab High Court. Read in Kannada.
Story first published: Thursday, July 16, 2020, 18:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X