ಮೂರನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಅರೆನಾ

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಕಾರುಗಳನ್ನು ನೆಕ್ಸಾ ಹಾಗೂ ಅರೆನಾ ರಿಟೇಲ್ ಮಳಿಗೆಗಳ ಮೂಲಕ ಮಾರಾಟ ಮಾಡುತ್ತದೆ. ಕೆಲ ದಿನಗಳ ಹಿಂದಷ್ಟೇ ನೆಕ್ಸಾ ಮಳಿಗೆಯು ತನ್ನ ಐದನೇ ವಾರ್ಷಿಕೋತ್ಸವವನ್ನು ಆಚರಿಸಿತ್ತು.

ಮೂರನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಅರೆನಾ

ಈಗ ಮಾರುತಿ ಸುಜುಕಿ ಕಂಪನಿಯ ಎರಡನೇ ರಿಟೇಲ್ ಮಳಿಗೆಯಾದ ಅರೆನಾ ಮೂರನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಕಳೆದ ಮೂರು ವರ್ಷಗಳಲ್ಲಿ ಅರೆನಾ ರಿಟೇಲ್ ಮಳಿಗೆಯು ದೇಶಾದ್ಯಂತ ಹರಡಿ ಕೊಂಡಿದೆ. ಈಗ ದೇಶಾದ್ಯಂತ ಅರೆನಾದ 2,300 ಮಾರಾಟ ಮಳಿಗೆಗಳು ತಲೆ ಎತ್ತಿವೆ. ಇದರ ಜೊತೆಗೆ ಮಾರುತಿ ಸುಜುಕಿ ಅರೆನಾದ ಒಟ್ಟು 745 ಶೋರೂಂಗಳು ದೇಶದಲ್ಲಿವೆ. ಸುಜುಕಿ ಅರೆನಾ ರಿಟೇಲ್ ಮಳಿಗೆಯನ್ನು 2017ರಲ್ಲಿ ಆರಂಭಿಸಲಾಯಿತು.

ಮೂರನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಅರೆನಾ

ಮಾರುತಿ ಸುಜುಕಿ ಕಂಪನಿಯು ಅರೆನಾ ಮಳಿಗೆಗಳ ಮೂಲಕ ಡಿಜಿಟಲ್, ತಡೆರಹಿತ ಹಾಗೂ ಕನೆಕ್ಟೆಡ್ ಕಾರು ಖರೀದಿ ಅನುಭವವನ್ನು ನೀಡುತ್ತದೆ. ಮಾರುತಿ ಸುಜುಕಿ ಕಂಪನಿಯ ಅರೆನಾ ಮಳಿಗೆಯು ಯುವ ಜನತೆಯ, ಡೈನಾಮಿಕ್ ಹಾಗೂ ಟೆಕ್ನಾಲಜಿ ಬಯಸುವ ಗ್ರಾಹಕರ ನೆಚ್ಚಿನ ಆಯ್ಕೆಯಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮೂರನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಅರೆನಾ

ಇದರ ಜೊತೆಗೆ ಮಾರುತಿ ಸುಜುಕಿ ಕಂಪನಿಯು ಅರೆನಾ ಮಳಿಗೆಯಲ್ಲಿ ಕ್ರಿಯೆಟಿವಿಟಿಯ ಬಗ್ಗೆಯೂ ಗಮನ ಹರಿಸುತ್ತದೆ. ಕಂಪನಿಯು ಅರೆನಾ ಮೂಲಕ ತನ್ನ ಗ್ರಾಹಕರಿಗೆ ನಿರಂತರವಾಗಿ ಹೊಸ ಹೊಸ ಸೌಲಭ್ಯಗಳನ್ನು ಒದಗಿಸುತ್ತಿದೆ. ಅರೆನಾ ಮಳಿಗೆಗಳಲ್ಲಿ ಅತ್ಯಾಧುನಿಕ ಗ್ಯಾಜೆಟ್‌ಗಳನ್ನು ಬಳಸಲಾಗುತ್ತದೆ.

ಮೂರನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಅರೆನಾ

ಇದರಿಂದಾಗಿ ಗ್ರಾಹಕರಿಗೆ ಮಾರುತಿ ಸುಜುಕಿ ಉತ್ಪನ್ನಗಳ ಸ್ಪೆಸಿಫಿಕೇಶನ್, ಫೀಚರ್, ಕಸ್ಟಮೈಸ್ ಹಾಗೂ ಡಿಜಿಟಲ್ ರೂಪದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ಅರೆನಾದ ಮೂರನೇ ವಾರ್ಷಿಕೋತ್ಸವದ ಬಗ್ಗೆ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಹಾಗೂ ಸೇಲ್ಸ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಾದ ಶಶಾಂಕ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮೂರನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಅರೆನಾ

ಅರೆನಾ ಮಳಿಗೆಯನ್ನು ಆಧುನಿಕ, ಡೈನಾಮಿಕ್ ಯುವ ಗ್ರಾಹಕರ ಪ್ರೇಕ್ಷಕರ ನಿರೀಕ್ಷೆಗಳನ್ನು ಆಲಿಸಿದ ನಂತರ ಆರಂಭಿಸಲಾಯಿತು. ಈಗ ಅರೆನಾ ಮಳಿಗೆಯ ಮೂರನೇ ವಾರ್ಷಿಕೋತ್ಸವವನ್ನು ಆಚರಿಸಲು ಖುಷಿಯಾಗುತ್ತಿದೆ ಎಂದು ಅವರು ಹೇಳಿದರು.

ಮೂರನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಅರೆನಾ

ಮಾರುತಿ ಸುಜುಕಿ ಎಕ್ಸ್‌ಎಲ್ 6 ಕಾರಿನ ಮೊದಲ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಆಚರಿಸಲಾಯಿತು. ಕಂಪನಿಯು ತನ್ನ ನೆಕ್ಸಾ ರಿಟೇಲ್ ಮಳಿಗೆಗಳ ಮೂಲಕ ಈ ಕಾರನ್ನು ಮಾರಾಟ ಮಾಡುತ್ತದೆ. ಕಂಪನಿಯು ಒಂದು ವರ್ಷದಲ್ಲಿ ಎಕ್ಸ್‌ಎಲ್ 6ನ 25,000ಕ್ಕೂ ಹೆಚ್ಚು ಯುನಿಟ್ ಗಳನ್ನು ಮಾರಾಟ ಮಾಡಿದೆ.

Most Read Articles

Kannada
English summary
Maruti Suzuki Arena outlet celebrates 3rd anniversary. Read in Kannada.
Story first published: Monday, August 31, 2020, 16:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X