ವಿಟಾರಾ ಬ್ರೆಝಾ ಅಬ್ಬರದ ನಡುವೆಯೂ ಭರ್ಜರಿ ಬೇಡಿಕೆ ಪಡೆದುಕೊಂಡ ಅರ್ಬನ್ ಕ್ರೂಸರ್

ಮಾರುತಿ ಸುಜುಕಿ ನಿರ್ಮಾಣದ ಜನಪ್ರಿಯ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ವಿಟಾರಾ ಬ್ರೆಝಾ ಕಾರು ಮಾದರಿಯು ಕಳೆದ ತಿಂಗಳು ಅತ್ಯಧಿಕ ಬೇಡಿಕೆ ಪಡೆದುಕೊಂಡಿದ್ದು, ವಿಟಾರಾ ಬ್ರೆಝಾ ರೀಬ್ಯಾಡ್ಜ್ ಮಾದರಿಯಾಗಿರುವ ಟೊಯೊಟಾ ಅರ್ಬನ್ ಕ್ರೂಸರ್ ಕೂಡಾ ಅತ್ಯುತ್ತಮ ಬೇಡಿಕೆ ಪಡೆದುಕೊಂಡಿದೆ.

ವಿಟಾರಾ ಬ್ರೆಝಾ ಅಬ್ಬರದ ನಡುವೆಯೂ ಅರ್ಬನ್ ಕ್ರೂಸರ್‌ಗೆ ಭರ್ಜರಿ ಬೇಡಿಕೆ

ಅಕ್ಟೋಬರ್ ಅವಧಿಯಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಮಾದರಿಗಳು ಒಟ್ಟಾರೆಯಾಗಿ 15 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿದ್ದು, ವಿಟಾರಾ ಬ್ರೆಝಾ ಮಾದರಿಯು ಕಾರು ಮಾರಾಟದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಅಕ್ಟೋಬರ್ ಅವಧಿಯಲ್ಲಿ ವಿಟಾರಾ ಬ್ರೆಝಾ ಮಾದರಿಯು ಒಟ್ಟು 12,087 ಯನಿಟ್ ಮಾರಾಟಗೊಂಡಲ್ಲಿ ರೀಬ್ಯಾಡ್ಜ್ ಮಾದರಿಯಾದ 3,006 ಯನಿಟ್ ಮಾರಾಟಗೊಂಡಿದೆ.

ವಿಟಾರಾ ಬ್ರೆಝಾ ಅಬ್ಬರದ ನಡುವೆಯೂ ಅರ್ಬನ್ ಕ್ರೂಸರ್‌ಗೆ ಭರ್ಜರಿ ಬೇಡಿಕೆ

ಬ್ರಾಂಡ್ ಬ್ಯಾಡ್ಜ್ ಹೆಸರು ಹೊರತುಪಡಿಸಿ ಎರಡು ಕಾರು ಮಾದರಿಗಳು ಒಂದೇ ರೀತಿಯ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ವಿಟಾರಾ ಬ್ರೆಝಾ ತನ್ನ ಜನಪ್ರಿಯತೆಯೊಂದಿಗೆ ಮಾರಾಟದಲ್ಲಿ ಮುಂಚೂಣಿ ಸಾಧಿಸಿದ್ದರೆ ಹೊಸದಾಗಿ ಬಿಡುಗಡೆಯಾದ ಅರ್ಬನ್ ಕ್ರೂಸರ್ ಕಾರು ಕೂಡಾ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ವಿಟಾರಾ ಬ್ರೆಝಾ ಅಬ್ಬರದ ನಡುವೆಯೂ ಅರ್ಬನ್ ಕ್ರೂಸರ್‌ಗೆ ಭರ್ಜರಿ ಬೇಡಿಕೆ

ಮಿಡ್, ಹೈ ಮತ್ತು ಪ್ರೀಮಿಯಂ ಎಂಬ ಮೂರು ರೂಪಾಂತರ ಹೊಂದಿರುವ ಅರ್ಬನ್ ಕ್ರೂಸರ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.40 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.11.30 ಲಕ್ಷ ಬೆಲೆ ಹೊಂದಿದ್ದರೆ ವಿಟಾರಾ ಬ್ರೆಝಾ ಮಾದರಿಯು ಆರಂಭಿಕವಾಗಿ ರೂ. 7.34 ಲಕ್ಷದಿಂದ ರೂ. 11.41 ಲಕ್ಷ ಬೆಲೆ ಹೊಂದಿದೆ.

ವಿಟಾರಾ ಬ್ರೆಝಾ ಅಬ್ಬರದ ನಡುವೆಯೂ ಅರ್ಬನ್ ಕ್ರೂಸರ್‌ಗೆ ಭರ್ಜರಿ ಬೇಡಿಕೆ

ಇನ್ನು ವಿನೂತನ ವಿನ್ಯಾಸ ಮತ್ತು ವೈಶಿಷ್ಟ್ಯತೆ ಹೊಂದಿರುವ ಹೊಸ ಅರ್ಬನ್ ಕ್ರೂಸರ್ ಕಾರು ಮಾದರಿಯು ಎರಡು ಸ್ಲಾಟ್ ಹೊಂದಿರುವ ಫ್ರಂಟ್ ಗ್ರಿಲ್, ಎರಡು ತುದಿಗಳಲ್ಲೂ ದಪ್ಪದಾದ ಕ್ರೊಮ್ ಮೂಲಕ ಆವೃತ್ತವಾಗಿದೆ. ಹೆಡ್‌ಲ್ಯಾಂಪ್‌ಗಳು ಗ್ರಿಲ್‌ನ ಎರಡೂ ಬದಿಯಲ್ಲಿವೆ ಮತ್ತು ಎಲ್‌ಇಡಿ ಪ್ರೊಜೆಕ್ಟರ್ ಘಟಕಗಳನ್ನು ಹೊಂದಿದ್ದು, ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿದೆ.

ವಿಟಾರಾ ಬ್ರೆಝಾ ಅಬ್ಬರದ ನಡುವೆಯೂ ಅರ್ಬನ್ ಕ್ರೂಸರ್‌ಗೆ ಭರ್ಜರಿ ಬೇಡಿಕೆ

ಅರ್ಬನ್ ಕ್ರೂಸರ್ ಕಾರಿನ ಸೈಡ್ ಪ್ರೊಫೈಲ್ ಮತ್ತು ಹಿಂಭಾಗದ ವಿನ್ಯಾಸವು ಕೂಡಾ ಆಕರ್ಷಕವಾಗಿದ್ದು, ಕನಿಷ್ಠ ಮಟ್ಟದ ವಿನ್ಯಾಸ ಗುಣಲಕ್ಷಣಗಳಿದ್ದರೂ ಅಚ್ಚುಕಟ್ಟಾದ ವಿನ್ಯಾಸ ಹೊಂದಿದೆ. ಹಾಗೆಯೇ ಇಂಟಿಗ್ರೇಟೆಡ್ ಟರ್ನ್ ಸಿಗ್ನಲ್‌ಗಳೊಂದಿಗೆ ಸ್ಟೈಲಿಶ್ ಆಗಿರುವ 16-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಹ್ ಮತ್ತು ಬಾಡಿ ಕಲರ್ ಒಳಗೊಂಡಿರುವ ಒಆರ್‌ವಿಎಂಗಳು ಪ್ರಮುಖ ತಾಂತ್ರಿಕ ಅಂಶಗಳಾಗಿವೆ.

ವಿಟಾರಾ ಬ್ರೆಝಾ ಅಬ್ಬರದ ನಡುವೆಯೂ ಅರ್ಬನ್ ಕ್ರೂಸರ್‌ಗೆ ಭರ್ಜರಿ ಬೇಡಿಕೆ

ಕಾರಿನ ಹಿಂಭಾಗದಲ್ಲಿ ಎಲ್‌ಇಡಿ ಟೈಲ್ ಲೈಟ್‌ಗಳು, ಅದರ ಮೇಲೆ ಆಕರ್ಷಕವಾಗಿರುವ ‘ಅರ್ಬನ್ ಕ್ರೂಸರ್' ಹೆಸರಿನ ಬೋಲ್ಡ್ ಕ್ರೋಮ್ ಸ್ಟ್ರಿಪ್, ಸ್ಟಾಪ್ ಲ್ಯಾಂಪ್ ಹೊಂದಿರುವ ರೂಫ್ ಮೌಟೆಂಡ್ ಸ್ಪಾಯ್ಲರ್ ಮತ್ತು ಹಿಂಭಾಗದ ಬಂಪರ್‌ನಲ್ಲಿ ಪ್ರತಿಫಲಕಗಳೊಂದಿಗೆ ಬರುತ್ತದೆ. ಕೆಳಭಾಗದಲ್ಲಿ ಸಿಲ್ವರ್ ಸ್ಕಿಡ್ ಪ್ಲೇಟ್ ಸಹ ಇದ್ದು, ಇದು ಎಸ್‌ಯುವಿ ಹೊರ ನೋಟದ ಬಲಿಷ್ಠತೆಯನ್ನು ಹೆಚ್ಚಿಸುತ್ತದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ವಿಟಾರಾ ಬ್ರೆಝಾ ಅಬ್ಬರದ ನಡುವೆಯೂ ಅರ್ಬನ್ ಕ್ರೂಸರ್‌ಗೆ ಭರ್ಜರಿ ಬೇಡಿಕೆ

ಟೊಯೊಟಾ ಅರ್ಬನ್ ಕ್ರೂಸರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯಂತೆ ಎಂಜಿನ್ ಆಯ್ಕೆ ಹೊಂದಿದೆ. ಬಿಎಸ್-6 ಪ್ರೇರಿತ ಕೆ-ಸೀರಿಸ್ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 104-ಬಿಎಚ್‌ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಪೆಟ್ರೋಲ್ ಎಂಜಿನ್ ಮಾದರಿಯು ಆರಂಭಿಕ ಆವೃತ್ತಿಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಹೈ ಎಂಡ್ ಮಾದರಿಗಳಲ್ಲಿ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ವಿಟಾರಾ ಬ್ರೆಝಾ ಅಬ್ಬರದ ನಡುವೆಯೂ ಅರ್ಬನ್ ಕ್ರೂಸರ್‌ಗೆ ಭರ್ಜರಿ ಬೇಡಿಕೆ

ಅರ್ಬನ್ ಕ್ರೂಸರ್ 1.5-ಲೀಟರ್ ಪೆಟ್ರೋಲ್ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 17.3ಕಿ.ಮೀ ಮತ್ತು ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್‌ಗೆ 18.76 ಕಿ.ಮೀ ಮೈಲೇಜ್ ನೀಡಲಿದ್ದು, ಮೈಲೇಜ್ ಅಂಕಿ-ಅಂಶಗಳು ಆಟೋಮೋಟಿವ್ ರಿಸರ್ಚ್ ಅಸೋಸಿಯೇಶನ್ ಆಫ್ ಇಂಡಿಯಾ ಸಂಸ್ಥೆಯಿಂದ ಪ್ರಮಾಣೀಕರಿಸಲಾಗಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ವಿಟಾರಾ ಬ್ರೆಝಾ ಅಬ್ಬರದ ನಡುವೆಯೂ ಅರ್ಬನ್ ಕ್ರೂಸರ್‌ಗೆ ಭರ್ಜರಿ ಬೇಡಿಕೆ

ಇದರೊಂದಿಗೆ ಅರ್ಬನ್ ಕ್ರೂಸರ್ ಕಾರು ಮಾದರಿಯಲ್ಲಿ ಟೊಯೊಟಾ ಕಂಪನಿಯು ಹಲವಾರು ಬೆಸ್ಟ್ ಇನ್ ಸೆಗ್ಮೆಂಟ್ ಫೀಚರ್ಸ್ ನೀಡಿದ್ದು, ಹೊಸ ಕಾರಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಫಾಗ್ ಲ್ಯಾಂಪ್ಸ್, 16-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಹ್, ಎಲ್ಇಡಿ ಟೈಲ್ ಲೈಟ್ಸ್, 7-ಇಂಚಿನ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡ್ಯುಯಲ್-ಟೋನ್ ಇಂಟಿರಿಯರ್ಸ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಸ್ಟ್ರೀರಿಂಗ್ ಮೌಂಟೆಡ್ ಕಂಟ್ರೋಲ್, ಕೀ ಲೆಸ್ ಇಗ್ನಿಷನ್, ಹಿಂಬದಿಯ ಆಸನದಲ್ಲಿ 60:40 ಅನುಪಾತದ ಸ್ಪ್ಲಿಟ್ ಸೀಟ್, ಆಟೋ ರೈನ್ ಸೆನ್ಸಿಂಗ್ ವೈಪರ್, ವಿದ್ಯುಮಾನ ಪ್ರೇರಿತ ರಿಯಲ್ ವ್ಯೂ ಮಿರರ್ ಮತ್ತು ಇಂಟ್ರಾಗ್ರೆಟೆಡ್ ಟರ್ನ್ ಸಿಗ್ನಲ್ಸ್ ಸೌಲಭ್ಯವಿದೆ.

Most Read Articles

Kannada
English summary
Maruti Suzuki Vitara Brezza And Toyota Urban Cruiser October 2020 Sales Details. Read in Kannada.
Story first published: Thursday, November 12, 2020, 23:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X