ಕಾರುಗಳಲ್ಲಿ ಸುರಕ್ಷಿತ ಚಾಲನೆಗಾಗಿ ಮಾರುತಿ ಸುಜುಕಿಯಿಂದ ವಿವಿಧ ಮಾದರಿಯ ಸೇಫ್ಟಿ ಆಕ್ಸೆಸರಿಸ್ ಬಿಡುಗಡೆ

ಇಡೀ ವಿಶ್ವವೇ ಕರೋನಾ ವೈರಸ್ ಅಟ್ಟಹಾಸದಿಂದ ನಲುಗಿ ಹೋಗಿದ್ದು, ವೈರಸ್ ತಡೆಗಾಗಿ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವೈರಸ್‌ಗೆ ಸೂಕ್ತ ಔಷಧಿಗಳಿಲ್ಲದಿರುವುದು ಸಾಕಷ್ಟು ಸಾವು-ನೋವಿಗೆ ಕಾರಣವಾಗಿದ್ದು, ವೈರಸ್ ಹರಡುವಿಕೆಯನ್ನು ತಡೆಯಲು ಸಾಮಾಜಿಕ ಅಂತರವೇ ಇದೀಗ ಪ್ರಮುಖ ಮುಂಜಾಗ್ರತಾ ಕ್ರಮವಾಗಿದೆ.

ಮಾರುತಿ ಸುಜುಕಿಯಿಂದ ವಿವಿಧ ಮಾದರಿಯ ಸೇಫ್ಟಿ ಆಕ್ಸೆಸರಿಸ್ ಬಿಡುಗಡೆ

ಕರೋನಾ ವೈರಸ್ ಹರಡುವಿಕೆಯನ್ನ ತಡೆಯಲು ಸಾಮಾಜಿಕ ಅಂತರವು ಪ್ರಮುಖ ಮುನ್ನೆಚ್ಚರಿಕೆ ಕ್ರಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಜನದಟ್ಟಣೆಯಾಗುವ ಪ್ರತಿ ಸ್ಥಳದಲ್ಲೂ ಇದೀಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಪ್ರಮುಖ ಸವಾಲಾಗಿದೆ. ಹೀಗಾಗಿ ತರಕಾರಿ ಖರೀದಿಯಿಂದ ಹಿಡಿದು ಸಾರಿಗೆ ವ್ಯವಸ್ಥೆಯ ಬಳಕೆಯ ತನಕವು ಇದೀಗ ಸಾಮಾಜಿಕ ಅಂತರ ಕಾಯ್ದಕೊಳ್ಳುವುದರ ಬಗೆಗೆ ಹೆಚ್ಚು ಗಮನಹರಿಸಲಾಗುತ್ತಿದೆ.

ಮಾರುತಿ ಸುಜುಕಿಯಿಂದ ವಿವಿಧ ಮಾದರಿಯ ಸೇಫ್ಟಿ ಆಕ್ಸೆಸರಿಸ್ ಬಿಡುಗಡೆ

ವೈರಸ್ ಹರಡಲು ಸಾಧ್ಯವಿರುವಂತಹ ಎಲ್ಲಾ ಕಡೆಗಳಲ್ಲೂ ಹಲವು ಕಟ್ಟುನಿಟ್ಟಿನ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸುರಕ್ಷಾ ಕ್ರಮಗಳಾದ ಹ್ಯಾಂಡ್ ಸ್ಯಾನಿಟೈಜರ್, ಫೇಸ್ ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸ್ ಹೆಚ್ಚು ಬಳಕೆ ಮಾಡಲಾಗುತ್ತಿದೆ.

ಮಾರುತಿ ಸುಜುಕಿಯಿಂದ ವಿವಿಧ ಮಾದರಿಯ ಸೇಫ್ಟಿ ಆಕ್ಸೆಸರಿಸ್ ಬಿಡುಗಡೆ

ಹಾಗೆಯೇ ಪ್ರಯಾಣದ ಸಂದರ್ಭದಲ್ಲಿ ವ್ಯಯಕ್ತಿಕ ವಾಹನಗಳ ಜೊತೆಗೆ ಕ್ಯಾಬ್ ಸೇವೆಗಳನ್ನು ಬಳಕೆ ಮಾಡುವಾಗ ಹೆಚ್ಚು ಸುರಕ್ಷತೆ ವಹಿಸಬೇಕಾದ ಅನಿವಾರ್ಯತೆಗಳಿದ್ದು, ಇದಕ್ಕಾಗಿ ವಿವಿಧ ಕಂಪನಿಗಳು ಕ್ಯಾಬ್ ಸೇವೆಗಳನ್ನು ಮತ್ತಷ್ಟು ಸುರಕ್ಷಿತವಾಗಿಸಲು ಕೆಲವು ಪ್ರಮುಖ ಸೇಫ್ಟಿ ಆಕ್ಸೆಸರಿಸ್ ತಯಾರಿಸಿವೆ.

ಮಾರುತಿ ಸುಜುಕಿಯಿಂದ ವಿವಿಧ ಮಾದರಿಯ ಸೇಫ್ಟಿ ಆಕ್ಸೆಸರಿಸ್ ಬಿಡುಗಡೆ

ಮಾರುತಿ ಸುಜುಕಿ ಕೂಡಾ ವಾಹನ ಉತ್ಪಾದನೆಯೊಂದಿಗೆ ಕರೋನಾ ವೈರಸ್ ತಡೆಗೆ ಬೇಕಾದ ಸುರಕ್ಷಾ ಸಾಧನಗಳನ್ನು ಸಹ ತನ್ನ ಸಹಭಾಗೀತ್ವ ಸಂಸ್ಥೆಗಳೊಂದಿಗೆ ಸೇರಿ ಉತ್ಪಾದನೆಗೆ ಚಾಲನೆ ನೀಡಿದ್ದು, ವೈರಸ್ ಹರಡುವಿಕೆಯನ್ನು ತಡೆಯಲು ಹೊಸ ಸೇಫ್ಟಿ ಆಕ್ಸೆಸರಿಸ್‌ಗಳು ಪ್ರಮುಖ ಪಾತ್ರವಹಿಸಲಿವೆ.

ಮಾರುತಿ ಸುಜುಕಿಯಿಂದ ವಿವಿಧ ಮಾದರಿಯ ಸೇಫ್ಟಿ ಆಕ್ಸೆಸರಿಸ್ ಬಿಡುಗಡೆ

ಕರೋನಾ ವೈರಸ್ ತಡೆಗಾಗಿ ವಿವಿಧ ಕಾರು ಮಾದರಿಗಳಿಗೆ ಅನುಗುಣವಾಗಿ ಸೇಫ್ಟಿ ಆಕ್ಸೆಸರಿಸ್ ಅಭಿವೃದ್ದಿಪಡಿಸಿರುವ ಮಾರುತಿ ಸುಜುಕಿಯು ಕಾರ್ ಕ್ಯಾಬಿನ್ ಪ್ರೋಟೆಕ್ವಿವ್ ಕವರ್, ಫೇಸ್ ವೀಸರ್, ಡಿಸ್ಪೋಸಲ್ ಸ್ಪೇಕ್ಟ್ಸ್, ಶೂ ಕವರ್ ಮತ್ತು ಪರಿಚಯಿಸಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಮಾರುತಿ ಸುಜುಕಿಯಿಂದ ವಿವಿಧ ಮಾದರಿಯ ಸೇಫ್ಟಿ ಆಕ್ಸೆಸರಿಸ್ ಬಿಡುಗಡೆ

ಕಾರ್ ಕ್ಯಾಬಿನ್ ಪ್ರೋಟೆಕ್ವಿವ್ ಕವರ್‌ನಿಂದ ಕಾರು ಚಾಲಕ ಮತ್ತು ಹಿಂಬದಿಯ ಸವಾರರ ನಡುವಿನ ನೇರ ಸಂಪರ್ಕ ತಡೆಯುವ ಮೂಲಕ ವೈರಸ್ ಹರಡುವಿಕೆಯ ಸಾಧ್ಯತೆಯನ್ನು ತಡೆಯಬಹುದಾಗಿದೆ. ಹಾಗೆಯೇ ಫೇಸ್ ವೀಸರ್‌ ಮತ್ತು ಡಿಸ್ಪೋಸಲ್ ಸ್ಪೋಕ್ಟ್ಸ್‌ ಕೂಡಾ ವೈರಸ್ ಹರಡುವಿಕೆ ಸಾಧ್ಯತೆಯನ್ನು ಕಡಿಮೆಗೊಳಿಸಲಿವೆ.

ಮಾರುತಿ ಸುಜುಕಿಯಿಂದ ವಿವಿಧ ಮಾದರಿಯ ಸೇಫ್ಟಿ ಆಕ್ಸೆಸರಿಸ್ ಬಿಡುಗಡೆ

ಮಾರುತಿ ಸುಜುಕಿ ಕಂಪನಿಯು ಬಿಡುಗಡೆ ಮಾಡಿರುವ ಹೊಸ ಸೇಫ್ಟಿ ಆಕ್ಸೆಸರಿಸ್‌ಗಳು ರೂ.10ರಿಂದ ರೂ. 649 ಬೆಲೆ ಅಂತರವನ್ನು ಹೊಂದಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಹೊಸ ಸುರಕ್ಷಾ ಸಾಧನಗಳು ಪ್ರಮುಖ ಪಾತ್ರವಹಿಸಲಿವೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಮಾರುತಿ ಸುಜುಕಿಯಿಂದ ವಿವಿಧ ಮಾದರಿಯ ಸೇಫ್ಟಿ ಆಕ್ಸೆಸರಿಸ್ ಬಿಡುಗಡೆ

ಇನ್ನು ಕೆಲವು ಕಡೆಗಳಲ್ಲಿ ಕ್ಯಾಬ್ ಕಂಪನಿಗಳು ಕಾರಿನ ಒಳಭಾಗದಲ್ಲಿ ಪ್ರಯಾಣಿಕರು ಮತ್ತು ಚಾಲಕರ ನಡುವಿನ ನೇರ ಸಂಪರ್ಕವನ್ನು ತಪ್ಪಿಸುವುದಕ್ಕೆ ಮಾತ್ರವಲ್ಲದೇ ಪ್ರಯಾಣಿಕರ ಮಧ್ಯಭಾಗದಲ್ಲೂ ಪ್ರೋಟೆಕ್ವಿಟ್ ಕವರ್ ಜೋಡಣೆ ಮಾಡುತ್ತಿದೆ. ಈ ಮೂಲಕ ವೈರಸ್ ಹರಡುವಿಕೆಯನ್ನು ತಪ್ಪಿಸಲು ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಹೊಸ ಸುರಕ್ಷಾ ಸಾಧನಗಳು ಸಾಕಷ್ಟು ಸಹಕಾರಿಯಾಗುತ್ತಿವೆ.

Most Read Articles

Kannada
English summary
Maruti Suzuki Introduces Safety Accessories In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X