ವೈರಸ್ ಭೀತಿ: ಕಾರುಗಳ ಬಿಡಿಭಾಗಗಳ ಮಾರಾಟಕ್ಕಾಗಿ ಆರಂಭವಾಗಲಿದೆ ಮಾರುತಿ ಸುಜುಕಿ ಆನ್‌‌ಲೈನ್ ಸ್ಟೋರ್

ಕರೋನಾ ವೈರಸ್ ಪರಿಣಾಮ ಆಟೋ ಉದ್ಯಮವು ಭಾರೀ ಬದಲಾವಣೆಯೊಂದಿಗೆ ಗ್ರಾಹಕ ವ್ಯವಹಾರಗಳನ್ನು ಕೈಗೊಳ್ಳುತ್ತಿದ್ದು, ಸೋಂಕು ಹರಡುವಿಕೆಯ ಭೀತಿಯಿಂದಾಗಿ ಗರಿಷ್ಠ ಪ್ರಮಾಣದ ಸುರಕ್ಷಾ ಕ್ರಮಗಳನ್ನು ಜಾರಿಗೆ ತಂದಿವೆ.

ಬಿಡಿಭಾಗಗಳ ಮಾರಾಟಕ್ಕಾಗಿ ಆರಂಭವಾಗಲಿದೆ ಮಾರುತಿ ಆನ್‌‌ಲೈನ್ ಸ್ಟೋರ್

ಗ್ರಾಹಕರ ಸುರಕ್ಷತೆಯ ದೃಷ್ಠಿಯಿಂದ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಸೋಂಕು ಹರಡುವಿಕೆಯನ್ನು ತಪ್ಪಿಸಲು ಆನ್‌ಲೈನ್ ವಹಿವಾಟು ಕೈಗೊಂಡಿದ್ದು, ಮಾರುತಿ ಸುಜುಕಿಯು ಸಹ ಈಗಾಗಲೇ ಹೊಸ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿಯೇ ಈಗಾಗಲೇ ಸಾವಿರಾರು ಹೊಸ ವಾಹನಗಳನ್ನು ಮಾರಾಟಮಾಡಿದೆ. ಶೀಘ್ರದಲ್ಲೇ ಬಿಡಿಭಾಗಗಳ ಮಾರಾಟಕ್ಕೂ ಪ್ರತ್ಯೇಕವಾದ ಆನ್‌ಲೈನ್ ಸ್ಟೋರ್ ಆರಂಭಿಸುತ್ತಿದ್ದು, ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಸಿದ್ದವಾಗಿದೆ.

ಬಿಡಿಭಾಗಗಳ ಮಾರಾಟಕ್ಕಾಗಿ ಆರಂಭವಾಗಲಿದೆ ಮಾರುತಿ ಆನ್‌‌ಲೈನ್ ಸ್ಟೋರ್

ಹೊಸ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ತೆರೆಯುವುದಕ್ಕೂ ಮುನ್ನ ಗ್ರಾಹಕರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿರುವ ಮಾರುತಿ ಸುಜುಕಿಯು ಅತಿ ಸುಲಭ ಮತ್ತು ಸುರಕ್ಷಿತವಾಗಿ ಬಿಡಿಭಾಗಗಳನ್ನು ತಲುಪಿಸುವುದಾಗಿ ಹೇಳಿಕೊಂಡಿದ್ದು, ಶೀಘ್ರದಲ್ಲೇ ಹೊಸ ಪ್ಲ್ಯಾಟ್‌ಫಾರ್ಮ್‌ಗೆ ಚಾಲನೆ ಸಿಗಲಿದೆ.

ಬಿಡಿಭಾಗಗಳ ಮಾರಾಟಕ್ಕಾಗಿ ಆರಂಭವಾಗಲಿದೆ ಮಾರುತಿ ಆನ್‌‌ಲೈನ್ ಸ್ಟೋರ್

ಲಾಕ್‌ಡೌನ್ ತೆರವುಗೊಂಡ ನಂತರವೂ ವೈರಸ್ ಭೀತಿಯಿಂದಾಗಿ ಗ್ರಾಹಕರ ನೇರವಾಗಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡುವುದನ್ನು ಕಡಿಮೆಗೊಳಿಸಿದ್ದು, ಈ ಹಿನ್ನಲೆಯಲ್ಲಿ ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿರುವ ಆಟೋ ಕಂಪನಿಗಳು ಸುರಕ್ಷಿತ ಮಾರ್ಗವಾದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ನತ್ತ ಮುಖಮಾಡುತ್ತಿದ್ದಾರೆ.

ಬಿಡಿಭಾಗಗಳ ಮಾರಾಟಕ್ಕಾಗಿ ಆರಂಭವಾಗಲಿದೆ ಮಾರುತಿ ಆನ್‌‌ಲೈನ್ ಸ್ಟೋರ್

ಈಗಾಗಲೇ ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಆಟೋ ಕಂಪನಿಗಳು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಶೇ.80 ಕ್ಕೂ ಹೆಚ್ಚು ಗ್ರಾಹಕರು ಕೂಡಾ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ ಮೂಲಕ ವಾಹನ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಬಿಡಿಭಾಗಗಳ ಮಾರಾಟಕ್ಕಾಗಿ ಆರಂಭವಾಗಲಿದೆ ಮಾರುತಿ ಆನ್‌‌ಲೈನ್ ಸ್ಟೋರ್

ಹೊಸ ಸುರಕ್ಷಾ ಕ್ರಮಗಳಿಂದಾಗಿ ಸಂಕಷ್ಟದ ಪರಿಸ್ಥಿತಿಯಲ್ಲೂ ಆಟೋ ಉದ್ಯಮ ಚಟುವಟಿಕೆಗಳಲ್ಲಿ ಚೇತರಿಕೆ ಕಂಡುಬರುತ್ತಿದ್ದು, ಗ್ರಾಹಕರ ಸಂಪರ್ಕವನ್ನು ತಪ್ಪಿಸಲು ಹಲವಾರು ಕಂಪನಿಗಳು ಆನ್‌ಲೈನ್ ವ್ಯವಹಾರ ಆಕರ್ಷಿಸುವಂತೆ ಮಹತ್ವದ ಬದಲಾವಣೆ ತಂದಿವೆ.

ಬಿಡಿಭಾಗಗಳ ಮಾರಾಟಕ್ಕಾಗಿ ಆರಂಭವಾಗಲಿದೆ ಮಾರುತಿ ಆನ್‌‌ಲೈನ್ ಸ್ಟೋರ್

ವಾಹನ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ವಾಹನ ಖರೀದಿ ಮಾಡುವ ಪ್ರಕ್ರಿಯೆಗೆಗಿಂತಲೂ ಅತಿ ಸರಳ ವಿಧಾನಗಳನ್ನು ಪರಿಚಯಿಸಿರುವ ಆಟೋ ಕಂಪನಿಗಳು ಸುಲಭ ಸಾಲ ಸೌಲಭ್ಯಗಳನ್ನು ಆಫರ್ ಮಾಡುತ್ತಿವೆ.

MOST READ: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್‌

ಬಿಡಿಭಾಗಗಳ ಮಾರಾಟಕ್ಕಾಗಿ ಆರಂಭವಾಗಲಿದೆ ಮಾರುತಿ ಆನ್‌‌ಲೈನ್ ಸ್ಟೋರ್

ಜೊತೆಗೆ ಹೊಸ ವಾಹನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಆಟೋ ಕಂಪನಿಗಳು ವಿತರಣೆ ವೇಳೆಯು ಸಂಪೂರ್ಣವಾಗಿ ಸ್ಯಾನಿಟೈಜ್ ಮಾಡಿದ ನಂತರ ವಾಹನಗಳನ್ನು ಹಸ್ತಾಂತರ ಮಾಡಲಿದ್ದು, ಇದು ಸೋಂಕು ಹರಡುವಿಕೆಯನ್ನು ಪರಿಣಾಮಕಾರಿ ತಗ್ಗಿಸುತ್ತದೆ.

Most Read Articles

Kannada
English summary
Maruti Suzuki Could Launch Online Spare Parts Store Soon Details. Read in Kannada.
Story first published: Thursday, July 23, 2020, 21:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X