ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಕುಸಿತ

ಮಾರುತಿ ಸುಜುಕಿ ಕಂಪನಿಯು ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದೆ. ಮಾರುತಿ ಸುಜುಕಿ ಕಂಪನಿಯು ಫೆಬ್ರವರಿ ತಿಂಗಳಿನಲ್ಲಿ 1,47,110 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ಯಾಸೆಂಜರ್ ವಾಹನಗಳ ಮಾರಾಟದಲ್ಲಿ 2.3%ನಷ್ಟು ಕುಸಿತ ಉಂಟಾಗಿದೆ.

ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಕುಸಿತ

ಇದೇ ವೇಳೆ ಮಾರುತಿ ಸುಜುಕಿ ಕಂಪನಿಯ ಯುಟಿಲಿಟಿ ವಾಹನಗಳ ಮಾರಾಟದಲ್ಲಿ 3.5%ನಷ್ಟು ಏರಿಕೆಯಾಗಿದೆ. ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು ಆಲ್ಟೋ ಹಾಗೂ ಎಸ್ -ಪ್ರೆಸ್ಸೊ ಕಾರುಗಳ 27,499 ಯುನಿ‍ಟ್‍‍ಗಳನ್ನು ಮಾರಾಟ ಮಾಡಿದೆ.

ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಕುಸಿತ

2019ರ ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಈ ಪ್ರಮಾಣವು 11.1%ನಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಕಾರುಗಳ 24,751 ಯುನಿಟ್‍‍ಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ ವರ್ಷ ಆಲ್ಟೋ ಕೆ10 ಮಾರಾಟ ಮಾಡಲಾಗಿದ್ದರೆ, ಈ ವರ್ಷ ಎಸ್-ಪ್ರೆಸ್ಸೊ ಮಾರಾಟ ಮಾಡಲಾಗಿದೆ.

ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಕುಸಿತ

ಇದೇ ಅವಧಿಯಲ್ಲಿ ಮಾರುತಿ ಸುಜುಕಿ ಕಂಪನಿಯ ಕಾಂಪ್ಯಾಕ್ಟ್ ಕಾರುಗಳಾದ ವ್ಯಾಗನ್‍ಆರ್, ಸ್ವಿಫ್ಟ್, ಸೆಲೆರಿಯೊ, ಇಗ್ನಿಸ್, ಬಲೆನೊ, ಡಿಜೈರ್ ಹಾಗೂ ಟೂರ್ -ಎಸ್ ಕಾರುಗಳ ಮಾರಾಟದಲ್ಲಿ 3.9%ನಷ್ಟು ಕುಸಿತ ಉಂಟಾಗಿದೆ.

ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಕುಸಿತ

2019ರ ಫೆಬ್ರವರಿ ತಿಂಗಳಿನಲ್ಲಿ ಈ ಕಾರುಗಳ 72,678 ಯುನಿಟ್‍‍ಗಳನ್ನು ಮಾರಾಟ ಮಾಡಲಾಗಿದ್ದರೆ, ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ 69,838 ಯುನಿಟ್‍‍ಗಳನ್ನು ಮಾರಾಟ ಮಾಡಲಾಗಿದೆ. ಮಾರುತಿ ಸುಜುಕಿ ಕಂಪನಿಯ ಮಿಡ್ ಗಾತ್ರದ ಸೆಗ್‍‍ಮೆಂಟ್‍ ಕಾರುಗಳ ಮಾರಾಟದಲ್ಲಿಯೂ ಕುಸಿತ ಉಂಟಾಗಿದೆ.

ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಕುಸಿತ

ಮಾರುತಿ ಸುಜುಕಿ ಕಂಪನಿಯ ಮಿಡ್ ಗಾತ್ರದ ಕಾರುಗಳ ಸೆಗ್‍‍ಮೆಂಟಿನಲ್ಲಿರುವ ಸಿಯಾಜ್ ಸೆಡಾನ್ ಕಾರಿನ 2,544 ಯುನಿಟ್‍‍ಗಳನ್ನು ಫೆಬ್ರವರಿ ತಿಂಗಳಿನಲ್ಲಿ ಮಾರಾಟ ಮಾಡಲಾಗಿದೆ. 2019ರ ಫೆಬ್ರವರಿ ತಿಂಗಳಿನಲ್ಲಿ ಈ ಕಾರಿನ 3,084 ಯುನಿಟ್‍ಗಳನ್ನು ಮಾರಾಟ ಮಾಡಲಾಗಿತ್ತು.

ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಕುಸಿತ

ಈ ಕಾರಿನ ಮಾರಾಟದಲ್ಲಿ 17.5%ನಷ್ಟು ಕುಸಿತ ಉಂಟಾಗಿದೆ. ಫೆಬ್ರವರಿ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು ಮಿನಿ, ಕಾಂಪ್ಯಾಕ್ಟ್ ಹಾಗೂ ಮಿಡ್ ಗಾತ್ರದ 99,871 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.

ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಕುಸಿತ

2019ರ ಫೆಬ್ರವರಿ ತಿಂಗಳಿನಲ್ಲಿ ಈ ಪ್ರಮಾಣವು 1,00,513 ಯುನಿಟ್‍‍ಗಳಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಕಾರುಗಳ ಮಾರಾಟದಲ್ಲಿ 0.6%ನಷ್ಟು ಕುಸಿತ ಉಂಟಾಗಿದೆ. ಈ ಕಾರುಗಳಿಗೆ ಹೋಲಿಸಿದರೆ ಯುವಿ ಸೆಗ್‍‍ಮೆಂಟಿನ ಮಾರಾಟದಲ್ಲಿ 3.5%ನಷ್ಟು ಏರಿಕೆಯಾಗಿದೆ.

ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಕುಸಿತ

ಯುಟಿಲಿಟಿ ಸೆಗ್‍‍ಮೆಂಟಿನಲ್ಲಿ 2019ರ ಫೆಬ್ರವರಿ ತಿಂಗಳಿನಲ್ಲಿ 21,834 ಯುನಿಟ್‍‍ಗಳು ಮಾರಾಟವಾಗಿದ್ದರೆ, ಈ ವರ್ಷದ ಫೆಬ್ರವರಿಯಲ್ಲಿ 22,604 ಯುನಿಟ್‍‍ಗಳು ಮಾರಾಟವಾಗಿವೆ.

More from DriveSpark

Article Published On: Monday, March 2, 2020, 17:42 [IST]
English summary
Maruti Suzuki sales declines in February. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+