ಕಾರು ಖರೀದಿದಾರರೇ ಗಮನಿಸಿ... ಈ ಯೋಜನೆ ಮೂಲಕ ಕಾರು ಖರೀದಿಸದೇ ಕಾರು ಮಾಲೀಕರಾಗಿ

ಮಾರುತಿ ಸುಜುಕಿ ಕಂಪನಿಯು ಬೆಂಗಳೂರು, ದೆಹಲಿ, ನೋಯ್ಡಾ, ಗಾಜಿಯಾಬಾದ್, ಫರಿದಾಬಾದ್, ಗುರುಗ್ರಾಮ ನಗರಗಳಲ್ಲಿ ಚಂದಾದಾರಿಕೆ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯ ಮೂಲಕ ಗ್ರಾಹಕರು ಹೊಸ ಕಾರನ್ನು ಖರೀದಿಸದೆ ಮಾರುತಿ ಸುಜುಕಿ ಕಾರಿನ ಮಾಲೀಕರಾಗಬಹುದು.

ಕಾರು ಖರೀದಿದಾರರೇ ಗಮನಿಸಿ... ಈ ಯೋಜನೆ ಮೂಲಕ ಕಾರು ಖರೀದಿಸದೇ ಕಾರು ಮಾಲೀಕರಾಗಿ

ಇದಕ್ಕಾಗಿ ಅವರು ಮಾಸಿಕ ಶುಲ್ಕ, ನಿರ್ವಹಣೆ, ವಿಮೆ ಹಾಗೂ ರೋಡ್ ಸೈಡ್ ಅಸಿಸ್ಟೆನ್ಸ್ ಗಾಗಿ ಪಾವತಿಸಬೇಕಾಗುತ್ತದೆ. ಈ ನಗರಗಳಲ್ಲಿ ಈ ಯೋಜನೆಯನ್ನು ಆರಂಭಿಸಲು ಮಾರುತಿ ಸುಜುಕಿ ಕಂಪನಿಯು ಒರಿಕ್ಸ್ ಆಟೋ ಇನ್ಫ್ರಾಸ್ಟ್ರಕ್ಚರ್ ಸರ್ವಿಸ್ ಇಂಡಿಯಾದೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಗ್ರಾಹಕರು ಈ ಯೋಜನೆಯಡಿಯಲ್ಲಿ ಅರೆನಾ ಮಾರಾಟಗಾರರಿಂದ ಹೊಸ ಸ್ವಿಫ್ಟ್, ಡಿಜೈರ್, ಎರ್ಟಿಗಾ, ವಿಟಾರಾ ಬ್ರೆಝಾ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಕಾರು ಖರೀದಿದಾರರೇ ಗಮನಿಸಿ... ಈ ಯೋಜನೆ ಮೂಲಕ ಕಾರು ಖರೀದಿಸದೇ ಕಾರು ಮಾಲೀಕರಾಗಿ

ಇದರ ಜೊತೆಗೆ ನೆಕ್ಸಾ ಮಾರಾಟಗಾರರಿಂದ ಬಲೆನೊ, ಸಿಯಾಜ್ ಹಾಗೂ ಎಕ್ಸ್‌ಎಲ್ 6 ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಗ್ರಾಹಕರು 12 ತಿಂಗಳಿಂದ 48 ತಿಂಗಳವರೆಗೆ ಕಾರುಗಳನ್ನು ಮಾಸಿಕ ಚಂದಾದಾರಿಕೆಗೆ ತೆಗೆದುಕೊಳ್ಳಬಹುದು. ದೆಹಲಿಯಲ್ಲಿ ಸ್ವಿಫ್ಟ್ ಎಲ್‌ಎಕ್ಸ್‌ಐ ಮಾದರಿಗೆ ಪ್ರತಿ ತಿಂಗಳು ರೂ.14,463 ಪಾವತಿಸಬೇಕಾಗುತ್ತದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕಾರು ಖರೀದಿದಾರರೇ ಗಮನಿಸಿ... ಈ ಯೋಜನೆ ಮೂಲಕ ಕಾರು ಖರೀದಿಸದೇ ಕಾರು ಮಾಲೀಕರಾಗಿ

ಈ ಚಂದಾದಾರಿಕೆಯಲ್ಲಿ ನಿರ್ವಹಣೆ, ಜೀರೋ ಡೆಪ್ ವಿಮೆ ಹಾಗೂ 24x7 ರೋಡ್ ಸೈಡ್ ಅಸಿಸ್ಟೆನ್ಸ್ ಗಳು ಸೇರಿವೆ. ಗ್ರಾಹಕರು ಚಂದಾದಾರಿಕೆ ಸಮಯವನ್ನು ಪೂರ್ಣಗೊಳಿಸಿದ ನಂತರ ವಾಹನವನ್ನು ಅಪ್‌ಗ್ರೇಡ್ ಮಾಡಿಕೊಳ್ಳಬಹುದು ಅಥವಾ ಕಾರನ್ನು ಮಾರುಕಟ್ಟೆ ಬೆಲೆಗೆ ಖರೀದಿಸಬಹುದು.

ಕಾರು ಖರೀದಿದಾರರೇ ಗಮನಿಸಿ... ಈ ಯೋಜನೆ ಮೂಲಕ ಕಾರು ಖರೀದಿಸದೇ ಕಾರು ಮಾಲೀಕರಾಗಿ

ಗ್ರಾಹಕರು ಬಿಳಿ ಬಣ್ಣದ ನಂಬರ್ ಪ್ಲೇಟ್ (ಗ್ರಾಹಕರ ಹೆಸರಿನಲ್ಲಿ ರಿಜಿಸ್ಟರ್) ಅಥವಾ ಕಪ್ಪು ಬಣ್ಣದ ನಂಬರ್ ಪ್ಲೇಟ್ ಗಳನ್ನು (ಓರಿಕ್ಸ್ ಹೆಸರಿನಲ್ಲಿ ರಿಜಿಸ್ಟರ್) ಆಯ್ಕೆ ಮಾಡಿಕೊಳ್ಳಬಹುದು. ಒರಿಕ್ಸ್ ವಾಹನ ನಿರ್ವಹಣೆ, ವಿಮೆ ಹಾಗೂ ರೋಡ್ ಸೈಡ್ ಅಸಿಸ್ಟೆನ್ಸ್ ಗಳನ್ನು ಮಾರುತಿ ಸುಜುಕಿಯ ಡೀಲರ್ ಚಾನೆಲ್ ಮೂಲಕ ಮಾಡಲಾಗುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕಾರು ಖರೀದಿದಾರರೇ ಗಮನಿಸಿ... ಈ ಯೋಜನೆ ಮೂಲಕ ಕಾರು ಖರೀದಿಸದೇ ಕಾರು ಮಾಲೀಕರಾಗಿ

ಗ್ರಾಹಕರ ಅನುಕೂಲಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಭಾರತದಲ್ಲಿ ಚಂದಾದಾರಿಕೆ ಮಾರುಕಟ್ಟೆ ಹೊಸದಾಗಿದ್ದು, ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ ಎಂದು ಮಾರುತಿ ಸುಜುಕಿ ಕಂಪನಿ ಹೇಳಿದೆ.

ಕಾರು ಖರೀದಿದಾರರೇ ಗಮನಿಸಿ... ಈ ಯೋಜನೆ ಮೂಲಕ ಕಾರು ಖರೀದಿಸದೇ ಕಾರು ಮಾಲೀಕರಾಗಿ

ಡೌನ್ ಪೇಮೆಂಟ್ ಹಾಗೂ ರಿಜಿಸ್ಟ್ರೇಷನ್ ಭಾರವನ್ನು ಕಡಿಮೆಗೊಳಿಸಲು ಕಂಪನಿಯು ಈ ಯೋಜನೆಯನ್ನು ಜಾರಿಗೆ ತಂದಿದೆ. ಮುಂಬರುವ ಎರಡು-ಮೂರು ವರ್ಷಗಳಲ್ಲಿ ಈ ಯೋಜನೆಯನ್ನು ದೇಶಾದ್ಯಂತ 40ರಿಂದ 60 ನಗರಗಳಲ್ಲಿ ಜಾರಿಗೆ ತರಲಾಗುವುದೆಂದು ಕಂಪನಿ ತಿಳಿಸಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕಾರು ಖರೀದಿದಾರರೇ ಗಮನಿಸಿ... ಈ ಯೋಜನೆ ಮೂಲಕ ಕಾರು ಖರೀದಿಸದೇ ಕಾರು ಮಾಲೀಕರಾಗಿ

ದೇಶಾದ್ಯಂತ ಕರೋನಾ ವೈರಸ್ ನಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹೊಸ ವಾಹನ ಖರೀದಿದಾರರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಈ ಪರಿಸ್ಥಿತಿಯಲ್ಲಿ ಚಂದಾದಾರಿಕೆಯಂತಹ ಯೋಜನೆಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಕಾರು ಖರೀದಿದಾರರೇ ಗಮನಿಸಿ... ಈ ಯೋಜನೆ ಮೂಲಕ ಕಾರು ಖರೀದಿಸದೇ ಕಾರು ಮಾಲೀಕರಾಗಿ

ಚಂದಾದಾರಿಕೆ ಯೋಜನೆಯನ್ನು ನೀಡಲು ಹಲವು ಕಂಪನಿಗಳು ಮುಂದೆ ಬಂದಿವೆ. ಈಗ ಅವುಗಳ ಸಾಲಿಗೆ ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಸಹ ಸೇರಿದೆ. ಮುಂಬರುವ ದಿನಗಳಲ್ಲಿ ಹೊಸ ನಗರಗಳಲ್ಲಿಯೂ ಚಂದಾದಾರಿಕೆ ಯೋಜನೆಗಳನ್ನು ಆರಂಭಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Maruti Suzuki launches subscriber scheme in Bangalore and other cities. Read in Kannada.
Story first published: Thursday, September 24, 2020, 20:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X