ಮತ್ತೊಂದು ಪ್ರೀಮಿಯಂ ಫೀಚರ್ ಪಡೆದ ವಿಟಾರಾ ಬ್ರೆಝಾ

ಮಾರುತಿ ಸುಜುಕಿ ಕಂಪನಿಯ ಕಾಂಪ್ಯಾಕ್ಟ್ ಎಸ್‌ಯುವಿಯಾದ ವಿಟಾರಾ ಬ್ರೆಝಾ ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದೆ. ಈ ವರ್ಷದ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಈ ಎಸ್‌ಯುವಿಯ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗಿತ್ತು.

ಮತ್ತೊಂದು ಪ್ರೀಮಿಯಂ ಫೀಚರ್ ಪಡೆದ ವಿಟಾರಾ ಬ್ರೆಝಾ

ಕಂಪನಿಯು ಬಿಡುಗಡೆಗೊಳಿಸಿರುವ ಮಾಹಿತಿಗಳ ಪ್ರಕಾರ, ಬ್ರೆಝಾ ಈ ಸೆಗ್ ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಎಸ್‌ಯುವಿಯಾಗಿದೆ. ಹೊಸ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ, ಮಾರುತಿ ಕಂಪನಿಯು ಬ್ರೆಝಾ ಕಾರಿನ ಜಿನಿಯನ್ ಆಕ್ಸೆಸರೀಸ್ ಗಳನ್ನು ಬಿಡುಗಡೆಗೊಳಿಸಿದೆ. ಇದರ ಜೊತೆಗೆ ಈ ಎಸ್‌ಯುವಿಯಲ್ಲಿ ಹಲವು ವರ್ಚುವಲ್ ಅಪ್‌ಗ್ರೇಡ್‌ಗಳನ್ನು ಮಾಡಲಾಗಿದೆ.

ಮತ್ತೊಂದು ಪ್ರೀಮಿಯಂ ಫೀಚರ್ ಪಡೆದ ವಿಟಾರಾ ಬ್ರೆಝಾ

ಈ ಆಕ್ಸೆಸರೀಸ್ ಗಳಲ್ಲಿ ಹೊಸ ಅಲಾಯ್ ವ್ಹೀಲ್, ಸೀಟ್ ಕವರ್, ಹೆಚ್ಚುವರಿಯಾದ ಕ್ರೋಮ್ ಗಾರ್ನಿಷಿಂಗ್ ಹಾಗೂ ಪಾರ್ಕಿಂಗ್ ಕ್ಯಾಮೆರಾಗಳು ಸೇರಿವೆ. ಇದೇ ಮೊದಲ ಬಾರಿಗೆ ಮಾರುತಿ ಸುಜುಕಿಯ ಕಾರಿನಲ್ಲಿ ವೈರ್‌ಲೆಸ್ ಚಾರ್ಜಿಂಗ್ ಅನ್ನು ಆಕ್ಸೆಸರೀಸ್ ಆಗಿ ನೀಡಲಾಗುತ್ತಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಮತ್ತೊಂದು ಪ್ರೀಮಿಯಂ ಫೀಚರ್ ಪಡೆದ ವಿಟಾರಾ ಬ್ರೆಝಾ

ಈ ವೈರ್‌ಲೆಸ್ ಚಾರ್ಜರ್ ಅನ್ನು ಜಿನಿಯನ್ ಆಕ್ಸೆಸರೀಸ್ ಆಗಿ ಮಾರಾಟ ಮಾಡಲಾಗುವುದು. ಈ ಚಾರ್ಜರ್ 15 ವ್ಯಾಟ್‌ಗಳವರೆಗೆ ವೇಗವಾಗಿ ಚಾರ್ಜ್ ಮಾಡುತ್ತದೆ. ಟ್ರೈ-ಕಾಯಿಲ್ ವಿನ್ಯಾಸವನ್ನು ಬಳಸುವ ಈ ಚಾರ್ಜರ್, ಚಾರ್ಜಿಂಗ್ ಬೆಲೆಯನ್ನು ಕಡಿಮೆಗೊಳಿಸುತ್ತದೆ.

ಮತ್ತೊಂದು ಪ್ರೀಮಿಯಂ ಫೀಚರ್ ಪಡೆದ ವಿಟಾರಾ ಬ್ರೆಝಾ

ಈ ವೈರ್‌ಲೆಸ್ ಚಾರ್ಜರ್ ನ ಬೆಲೆ ರೂ.3,590ಗಳಾಗಿದ್ದು, ಇನ್ಸ್ಟಾಲೇಷನ್ ಗಾಗಿ ರೂ.410 ಪಾವತಿಸಬೇಕಾಗುತ್ತದೆ. ಒಟ್ಟಾರೆಯಾಗಿ ರೂ.4,000 ವೆಚ್ಚ ಮಾಡಿ ವೈರ್‌ಲೆಸ್ ಚಾರ್ಜರ್ ಅನ್ನು ಬ್ರೆಝಾ ಎಸ್‌ಯುವಿಯಲ್ಲಿ ಅಳವಡಿಸಿಕೊಳ್ಳಬಹುದು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮತ್ತೊಂದು ಪ್ರೀಮಿಯಂ ಫೀಚರ್ ಪಡೆದ ವಿಟಾರಾ ಬ್ರೆಝಾ

ವೈರ್‌ಲೆಸ್ ಚಾರ್ಜಿಂಗ್ ಗಳನ್ನು ಕಾರುಗಳಲ್ಲಿ ಪ್ರೀಮಿಯಂ ಫೀಚರ್ ಆಗಿ ನೀಡಲಾಗುತ್ತದೆ. ಬ್ರೆಝಾದಂತಹ ಕಾರುಗಳಲ್ಲಿ ಈ ಫೀಚರ್ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದಿಲ್ಲ. ಹ್ಯುಂಡೈ ವೆನ್ಯೂವಿನ ಎಸ್‌ಎಕ್ಸ್ ಮಾದರಿಯಲ್ಲಿ ಈ ಫೀಚರ್ ಅನ್ನು ನೀಡಲಾಗುತ್ತದೆ.

ಮತ್ತೊಂದು ಪ್ರೀಮಿಯಂ ಫೀಚರ್ ಪಡೆದ ವಿಟಾರಾ ಬ್ರೆಝಾ

ಈ ವೈರ್‌ಲೆಸ್ ಚಾರ್ಜರ್ ನೀಡುವ ಮೂಲಕ ಮಾರುತಿ ಸುಜುಕಿ ಕಂಪನಿಯು ವಿಟಾರಾ ಬ್ರೆಝಾ ಎಸ್‌ಯುವಿಯನ್ನು ಮತ್ತಷ್ಟು ಅಪ್ ಡೇಟ್ ಗೊಳಿಸಿದೆ. ಬಹುತೇಕ ಜನರು ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತಿರುವುದರಿಂದ ಈ ಫೀಚರ್ ಬಳಸುವುದು ಸುಲಭವಾಗಲಿದೆ.

Most Read Articles

Kannada
English summary
Maruti Suzuki launches wireless charging accessories for Vitara Brezza. Read in Kannada.
Story first published: Friday, July 3, 2020, 17:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X