ನೆಕ್ಸಾದಲ್ಲಿ ಕಾರು ಖರೀದಿದಾರರಿಗೆ ಹೊಸ ಆಫರ್ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ತನ್ನ ಪ್ರೀಮಿಯಂ ಕಾರು ಮಾದರಿಗಳ ಖರೀದಿ ಮೇಲೆ ವಿಶೇಷ ಆಫರ್‌ಗಳನ್ನು ಘೋಷಿಸಿದ್ದು, ನೆಕ್ಸಾ ಶೋರೂಂನಲ್ಲಿ ಮಾರಾಟ ಮಾಡಲಾಗುವ ಬಲೆನೊ, ಇಗ್ನಿಸ್, ಸಿಯಾಜ್ ಮತ್ತು ಎಕ್ಸ್‌ಎಲ್6 ಕಾರುಗಳ ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ನೀಡುತ್ತಿದೆ.

ನೆಕ್ಸಾದಲ್ಲಿ ಕಾರು ಖರೀದಿದಾರರಿಗೆ ಹೊಸ ಆಫರ್ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಕಾರು ಮಾರಾಟದಲ್ಲಿ ಎರಡು ಮಾದರಿ ಮಾರಾಟ ವ್ಯವಸ್ಥೆಗಳನ್ನು ಹೊಂದಿದ್ದು, ಅರೆನಾ ಮತ್ತು ನೆಕ್ಸಾ ಶೋರೂಂ ಮೂಲಕ ವಿವಿಧ ಮಾದರಿಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡುವ ಸೌಲಭ್ಯವನ್ನು ಹೊಂದಿದೆ. ಅರೆನಾ ಶೋರೂಂಗಳಲ್ಲಿ ಸಾಮಾನ್ಯ ಕಾರು ಮಾದರಿಗಳನ್ನು ಮಾರಾಟ ಮಾಡಿದ್ದಲ್ಲಿ ನೆಕ್ಸಾ ಶೋರೂಂನಲ್ಲಿ ಖರೀದಿಗೆ ಲಭ್ಯವಿರುವ ಕಾರುಗಳು ಪ್ರೀಮಿಯಂ ಕಾರು ಮಾದರಿಗಳಾಗಿದ್ದು, ಇದೀಗ ನೆಕ್ಸಾ ಶೋರೂಂನಲ್ಲಿರುವ ಕಾರು ಮಾದರಿಗಳ ಮೇಲೆ ಆಫರ್ ಘೋಷಿಸಿದೆ.

ನೆಕ್ಸಾದಲ್ಲಿ ಕಾರು ಖರೀದಿದಾರರಿಗೆ ಹೊಸ ಆಫರ್ ಘೋಷಿಸಿದ ಮಾರುತಿ ಸುಜುಕಿ

ನೆಕ್ಸಾ ಶೋರೂಂನಲ್ಲಿ ಬಲೆನೊ, ಇಗ್ನಿಸ್, ಸಿಯಾಜ್, ಎಕ್ಸ್ಎಲ್6 ಮತ್ತು ಎಸ್-ಕ್ರಾಸ್ ಕಾರುಗಳು ಮಾತ್ರವೇ ಖರೀದಿ ಲಭ್ಯವಿರಲಿದ್ದು, ಸದ್ಯಕ್ಕೆ ಎಸ್-ಕ್ರಾಸ್ ಹೊರತುಪಡಿಸಿ ಇನ್ನುಳಿದ ಕಾರುಗಳ ಖರೀದಿ ಮೇಲೆ ಆಫರ್ ಪಡೆದುಕೊಳ್ಳಬಹುದಾಗಿದೆ.

ನೆಕ್ಸಾದಲ್ಲಿ ಕಾರು ಖರೀದಿದಾರರಿಗೆ ಹೊಸ ಆಫರ್ ಘೋಷಿಸಿದ ಮಾರುತಿ ಸುಜುಕಿ

ಎಸ್-ಕ್ರಾಸ್ ಡೀಸೆಲ್ ಕಾರು ಸದ್ಯ ಮಾರುಕಟ್ಟೆಯಿಂದ ಸ್ಥಗಿತಗೊಂಡಿದ್ದು, ಹೊಸ ಪೆಟ್ರೋಲ್ ಎಂಜಿನ್ ಪ್ರೇರಿತ ಎಸ್-ಕ್ರಾಸ್ ಇದೇ ತಿಂಗಳು ಬಿಡುಗಡೆಯಾಗಲಿದೆ. ಹೀಗಾಗಿ ಎಸ್-ಕ್ರಾಸ್ ಹೊರತುಪಡಿಸಿ ಇನ್ನುಳಿದ ಕಾರು ಖರೀದಿ ಮೇಲೆ ರೂ.10 ಸಾವಿರದಿಂದ ರೂ. 35 ಸಾವಿರ ತನಕ ಆಫರ್ ಲಭ್ಯವಿವೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ನೆಕ್ಸಾದಲ್ಲಿ ಕಾರು ಖರೀದಿದಾರರಿಗೆ ಹೊಸ ಆಫರ್ ಘೋಷಿಸಿದ ಮಾರುತಿ ಸುಜುಕಿ

ಮಾಹಿತಿಗಳ ಪ್ರಕಾರ, ಎಕ್ಸ್ಎಲ್6 ಎಂಪಿವಿ ಕಾರಿನ ಮೇಲೆ ರೂ.10 ಸಾವಿರ ಕ್ಯಾಶ್‌ಬ್ಯಾಕ್ ಆಫರ್ ಲಭ್ಯವಿದ್ದಲ್ಲಿ, ಬಲೆನೊ ಮತ್ತು ಇಗ್ನಿಸ್ ಹ್ಯಾಚ್‌ಬ್ಯಾಕ್ ಕಾರುಗಳ ಖರೀದಿಯ ಮೇಲೆ ರೂ.28 ಸಾವಿರ ಮತ್ತು ಸಿಯಾಜ್ ಸೆಡಾನ್ ಕಾರಿನ ಮೇಲೆ ರೂ.35 ಸಾವಿರ ಆಫರ್ ಲಭ್ಯವಿದೆ.

ನೆಕ್ಸಾದಲ್ಲಿ ಕಾರು ಖರೀದಿದಾರರಿಗೆ ಹೊಸ ಆಫರ್ ಘೋಷಿಸಿದ ಮಾರುತಿ ಸುಜುಕಿ

ಹೊಸ ಆಫರ್‌ಗಳು ಕರ್ನಾಟಕ ರಾಜ್ಯದಲ್ಲಿ ನೆಕ್ಸಾ ಶೋರೂಂಗಳಲ್ಲಿ ಖರೀದಿಸುವ ಕಾರುಗಳ ಮೇಲೆ ಮಾತ್ರವೇ ಅನ್ವಯವಾಗಲಿದ್ದು, ಲಾಕ್‌ಡೌನ್ ನಂತರ ಕರ್ನಾಟಕದಲ್ಲೇ ಅತಿ ಹೆಚ್ಚು ಕಾರು ಮಾರಾಟವಾಗುತ್ತಿರುವುದೇ ಈ ಆಫರ್‌ಗಳಿಗೆ ಪ್ರಮುಖ ಕಾರಣವಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ನೆಕ್ಸಾದಲ್ಲಿ ಕಾರು ಖರೀದಿದಾರರಿಗೆ ಹೊಸ ಆಫರ್ ಘೋಷಿಸಿದ ಮಾರುತಿ ಸುಜುಕಿ

ಕಳೆದ ಮೇ ತಿಂಗಳಿನಲ್ಲಿ ದೇಶದಲ್ಲೇ ಅತಿ ಹೆಚ್ಚು ಕಾರುಗಳು ಕರ್ನಾಟದಲ್ಲೇ ಮಾರಾಟಗೊಂಡಿದ್ದು, ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಕಾರು ಕಂಪನಿಗಳು ಕರ್ನಾಟಕದಲ್ಲಿ ಹೆಚ್ಚಿನ ಮಟ್ಟದ ಕಾರು ಮಾರಾಟ ಮಾಡುವ ಪ್ರಯತ್ನದಲ್ಲಿವೆ.

ನೆಕ್ಸಾದಲ್ಲಿ ಕಾರು ಖರೀದಿದಾರರಿಗೆ ಹೊಸ ಆಫರ್ ಘೋಷಿಸಿದ ಮಾರುತಿ ಸುಜುಕಿ

ಇನ್ನು ಮಾಹಾಮಾರಿ ಕರೋನಾ ವೈರಸ್‌ ಪರಿಣಾಮ ಬಹುತೇಕ ಆಟೋ ಕಂಪನಿಗಳಿಗೆ ಭಾರೀ ನಷ್ಟ ಉಂಟಾಗಿದ್ದು, ಲಾಕ್‌ಡೌನ್ ವಿನಾಯ್ತಿ ನಂತರವೂ ಹೊಸ ವಾಹನಗಳ ಮಾರಾಟ ಪ್ರಮಾಣದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸುತ್ತಿವೆ. ಆದರೂ ಕೂಡಾ ಕರ್ನಾಟಕದಲ್ಲೇ ಅತಿ ಹೆಚ್ಚು ಕಾರು ಮಾರಾಟ ಪ್ರಮಾಣವು ದಾಖಲಾಗಿರುವ ಕಂಡುಬಂದಿದೆ.

MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ನೆಕ್ಸಾದಲ್ಲಿ ಕಾರು ಖರೀದಿದಾರರಿಗೆ ಹೊಸ ಆಫರ್ ಘೋಷಿಸಿದ ಮಾರುತಿ ಸುಜುಕಿ

2019ರ ಮೇ ಅವಧಿಯಲ್ಲಿ 2.60 ಲಕ್ಷ ಕಾರುಗಳನ್ನು ಮಾರಾಟ ಮಾಡಿದ್ದ ವಿವಿಧ ಕಾರು ಕಂಪನಿಗಳು 2020ರ ಮೇ ಅವಧಿಯಲ್ಲಿ ಕೇವಲ 36 ಸಾವಿರ ಕಾರುಗಳನ್ನು ಮಾರಾಟ ಮಾಡಿದ್ದು, ಶೇ.85ರಷ್ಟು ಕಾರು ಮಾರಾಟವು ಇಳಿಕೆಯಾಗಿದೆ.

Most Read Articles

Kannada
English summary
Maruti Suzuki NEXA Discount Offers For June 2020. Read in Kannada.
Story first published: Monday, June 15, 2020, 14:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X