ಜನಪ್ರಿಯ ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಸರಣಿಯಲ್ಲಿರುವ ಆಯ್ದ ಜನಪ್ರಿಯ ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿ ಮತ್ತು ವಿಶೇಷ ಆಫರ್‌ಗಳನ್ನು ಘೋಷಿಸಿದೆ. ಮಾರುತಿ ಸುಜುಕಿ ಕಂಪನಿಯು ಆಯ್ದ ಮಾದರಿಗಳಿಗೆ ನಗದು ರಿಯಾಯಿತಿ, ಕಾರ್ಪೊರೇಟ್ ಬೋನಸ್, ಎಕ್ಸ್‌ಚೆಂಜ್ ಬೋನಸ್ ಮತ್ತು ಉಚಿತ ಅಕ್ಸೆಸರೀಸ್‌ಗಳ ಪ್ಯಾಕೇಜ್ ಅನ್ನು ನೀಡಿದೆ.

ಜನಪ್ರಿಯ ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಬೆಂಗಳೂರಿನಲ್ಲಿರುವ ಡೀಲರ್ಸ್‌ಗಳ ಪ್ರಕಾರ, ಈ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯು ತನ್ನ ಆಯ್ದ ಜನಪ್ರಿಯ ಕಾರು ಮಾದರಿಗಳ ಮೇಲೆ ಒಟ್ಟು ರೂ. 48,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಈ ರಿಯಾಯಿತಿಗಳು ಈ ತಿಂಗಳ ಅಂತ್ಯದವರೆಗೆ ಲಭ್ಯವಿರಲಿದ್ದು, ಹೊಸ ಕಾರುಗಳನ್ನು ಖರೀದಿಸಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಜನಪ್ರಿಯ ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಮಾರುತಿ ಆಲ್ಟೋ 800

ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್‌ ಮಾರುತಿ ಆಲ್ಟೋ 800 ಪೆಟ್ರೋಲ್ ಮತ್ತು ಸಿಎನ್‌ಜಿ ಮಾದರಿಗಳಿಗೆ ಒಟ್ಟು ರೂ. 40,000 ಗಳವರೆಗೆ ರಿಯಾಯಿಯನ್ನು ಘೋಷಿಸಿದೆ. ಇದರಲ್ಲಿ ರೂ. 18,000 ರೂ ನಗದು ರಿಯಾಯಿತಿ, ರೂ. 15,000 ಗಳವರೆಗೆ ಎಕ್ಸ್‌ಚೆಂಜ್ ಬೋನಸ್, ರೂ. 2,000 ಗಳವರೆಗೆ ಕಾರ್ಪೊರೇಟ್ ಬೋನಸ್ ಮತ್ತು ರೂ. 5,000 ಮೌಲ್ಯದ ಅಕ್ಸೆಸರೀಸ್ ಗಳನ್ನು ನೀಡಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಜನಪ್ರಿಯ ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಮಾರುತಿ ಇಕೋ

ಈ ಮಾರುತಿ ಇಕೋ ಎಂಪಿವಿಗೆ ಒಟ್ಟು ರೂ. 37,000 ಗಳವರೆಗೆ ರಿಯಾಯಿತಿಯನ್ನು ನೀಡಿದೆ. ಇದರಲ್ಲಿ ರೂ. 10,000ಗಳವರೆಗೆ ನಗದು ರಿಯಾಯಿತಿಯನ್ನು ನೀಡಿದೆ. ಇನ್ನು ರೂ. 20,000 ಗಳವರೆಗೆ ಕಾರ್ಪೊರೇಟ್ ಬೋನಸ್ ಮತ್ತು ರೂ. 2,000 ಗಳೆವರೆಗಿನ ಕಾರ್ಪೊರೇಟ್ ಬೋನಸ್ ಮತ್ತು ಅಕ್ಸೆಸರೀಸ್ ಗಳನ್ನು ಒಳಗೊಂಡಿದೆ.

ಜನಪ್ರಿಯ ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಮಾರುತಿ ಎಸ್-ಪ್ರೆಸ್ಸೊ

ಮೈಕ್ರೋ ಎಸ್‍ಯುವಿಯಾದ ಮಾರುತಿ ಎಸ್-ಪ್ರೆಸ್ಸೊಗೆ ಒಟ್ಟು ರೂ. 43,000 ಗಳವರೆಗೆ ರಿಯಾಯಿತಿಯನ್ನು ನೀಡಿದೆ. ಇದರಲ್ಲಿ ರೂ. 25,000ಗಳವರೆಗೆ ನಗದು ರಿಯಾಯಿತಿಯನ್ನು ನೀಡಿದೆ. ಇನ್ನು ರೂ. 20,000 ಎಕ್ಸ್‌ಚೆಂಜ್ ಬೋನಸ್, ರೂ. 3,000 ಗಳವರೆಗೆ ಕಾರ್ಪೊರೇಟ್ ಬೋನಸ್ ಮತ್ತು ರೂ. 5,000 ಮೌಲ್ಯದ ಅಕ್ಸೆಸರೀಸ್ ಗಳನ್ನು ಒಳಗೊಂಡಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಜನಪ್ರಿಯ ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಮಾರುತಿ ವ್ಯಾಗನ್ಆರ್

ಮಾರುತಿ ಸುಜುಕಿ ವ್ಯಾಗನ್ಆರ್ ಮತ್ತು ಸಿಎನ್‌ಜಿ ಮಾದರಿಗಳಿಗೆ ಒಟ್ಟು ರೂ. 37,000ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ರೂ. 10,000 ನಗದು ರಿಯಾಯಿತಿಯನ್ನು ನೀಡಲಾಗಿದೆ. ಇನ್ನು ರೂ. 20,000 ಎಕ್ಸ್‌ಚೆಂಜ್ ಬೋನಸ್ ಮತ್ತು ರೂ. 2,000 ಗಳವರೆಗೆ ಕಾರ್ಪೊರೇಟ್ ಬೋನಸ್ ಅನ್ನು ನೀಡಿದೆ. ಇದರ ಜೊತೆಯಲ್ಲಿ ರೂ. 5,000ಮೌಲ್ಯದ ಅಕ್ಸೆಸರೀಸ್ ಗಳನ್ನು ಒಳಗೊಂಡಿದೆ.

ಜನಪ್ರಿಯ ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಮಾರುತಿ ಸ್ವಿಫ್ಟ್

ಜನಪ್ರಿಯ ಪ್ರೀಮಿಯಂ ಎಂಟ್ರಿ ಲೆವೆಲ್ ಮಾರುತಿ ಸ್ವಿಫ್ಟ್ ಕಾರಿಗೆ ಒಟ್ಟಿ ರೂ. 37,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ರೂ. 10,000 ನಗದು ರಿಯಾಯಿತಿ, ರೂ. 20,000 ಗಳವರೆಗೆ ಎಕ್ಸ್‌ಚೆಂಜ್ ಬೋನಸ್, ರೂ. 2,000 ಕಾರ್ಪೊರೇಟ್ ಬೋನಸ್ ಅನ್ನು ನೀಡಿದೆ.

MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಜನಪ್ರಿಯ ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಮಾರುತಿ ವಿಟಾರಾ ಬ್ರೆಝಾ

ಜನಪ್ರಿಯ ಮಾರುತಿ ವಿಟಾರಾ ಬ್ರೆಝಾ ಕಾಂಪ್ಯಾಕ್ಟ್ ಎಸ್‍ಯುವಿಗೆ ಯಾವುದೇ ನಗದು ರಿಯಾಯಿತಿ, ಕಾರ್ಪೊರೇಟ್ ಬೋನಸ್ ಮತ್ತು ಅಕ್ಸೆಸರೀಸ್ ಪ್ಯಾಕೇಜ್ ಅನ್ನು ನೀಡಲಾಗಿಲ್ಲ. ಆದರೆ ರೂ. 20,000 ಗಳವರೆಗೆ ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಿದೆ.

ಜನಪ್ರಿಯ ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಮಾರುತಿ ಸುಜುಕಿ ಕಂಪನಿಯು ಮಾರಾಟವನ್ನು ಹೆಚ್ಚಿಸಲು ಆಯ್ದ ಜನಪ್ರಿಯ ಮಾದರಿಗಳಿಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಭರ್ಜರಿ ರಿಯಾಯಿತಿಯನ್ನು ನೀಡಿರುವುದರಿಂದ ಕಾರುಗಳ ಮಾರಾಟವನ್ನು ಹೆಚ್ಚಿಸಲು ಸಹಾಯವಾಗಬಹುದು.

More from DriveSpark

Article Published On: Sunday, July 19, 2020, 13:00 [IST]
English summary
Maruti Suzuki Offers Discounts, Exchange Bonuses & Other Benefits In July 2020. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+