ಆನ್‌ಲೈನ್ ಮೂಲಕ 2 ಲಕ್ಷ ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

ದೇಶದ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಆನ್‌ಲೈನ್ ಮಾರಾಟ ಪ್ಲಾಟ್‌ಫಾರ್ಮ್ ಮೂಲಕ 2 ಲಕ್ಷ ಯೂನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ತಮ್ಮ ಡಿಜಿಟಲ್ ಚಾನೆಲ್‌ಗಳು ಈಗ ದೇಶಾದ್ಯಂತ 1000ಕ್ಕೂ ಹೆಚ್ಚು ಡೀಲರ್‌ಶಿಪ್‌ ಗಳನ್ನು ಒಳಗೊಂಡಿವೆ ಎಂದು ಕಂಪನಿ ಹೇಳಿದೆ.

ಆನ್‌ಲೈನ್ ಮೂಲಕ 2 ಲಕ್ಷ ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

2019ರ ಏಪ್ರಿಲ್ ತಿಂಗಳಿನಿಂದ ಮಾರುತಿ ಸುಜುಕಿ ಆನ್‌ಲೈನ್ ಮೂಲಕ 2 ಲಕ್ಷ ಕಾರುಗಳನ್ನು ಮಾರಾಟ ಮಾಡಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಮಾರುತಿ ಸುಜುಕಿ 2017ರಿಂದ ಆನ್‌ಲೈನ್ ಬುಕ್ಕಿಂಗ್ ಪ್ರಾರಂಭಿಸಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಆನ್‌ಲೈನ್ ನಲ್ಲಿ ಮಾರುತಿ ಸುಜುಕಿ ಕಾರುಗಳ ಮಾರಾಟ ಐದು ಪಟ್ಟು ಹೆಚ್ಚಳವಾಗಿದೆ. 2019ರ ಏಪ್ರಿಲ್ ತಿಂಗಳಿನಿಂದ ಕಂಪನಿಯು 2 ಲಕ್ಷ ಯುನಿಟ್ ಮಾರಾಟ ಮತ್ತು 21 ಲಕ್ಷ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಆನ್‌ಲೈನ್ ಮೂಲಕ 2 ಲಕ್ಷ ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

ಇದು ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಒಟ್ಟು ಮಾರಾಟದ 20% ನಷ್ಟಿದೆ. ಭಾರತದಲ್ಲಿ ಕರೋನಾ ಸೋಂಕಿನಿಂದ ಲಾಕ್‌ಡೌನ್‌ ಅವಧಿಯಲ್ಲಿ ಅವರ ಡಿಜಿಟಲ್ ಪ್ಲಾಟ್‌ಫಾರ್ಮ್ ಈಗ ಒಟ್ಟು ವಿಚಾರಣೆಗಳಲ್ಲಿ ಅಥವಾ ಗ್ರಾಹಕರ ಜೊತೆ ಮಾತುಕತೆ ನಡೆಸುವುದು ಹೆಚ್ಚಾಗಿದ್ದು, ಇದು ಮಾರಾಟವನ್ನು ಹೆಚ್ಚಿಸಲು ನೆರವಾಗುತ್ತದೆ.

MOST READ: ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಆನ್‌ಲೈನ್ ಮೂಲಕ 2 ಲಕ್ಷ ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಅವರು ಮಾತನಾಡಿ, ಗೂಗಲ್ ಆಟೋ ಗೇರ್ ಶಿಫ್ಟ್ ಇಂಡಿಯಾ 2020ರ ವರದಿಯ ಪ್ರಕಾರ ಭಾರತದಲ್ಲಿ ಸುಮಾರು ಶೇ.95 ರಷ್ಟು ಹೊಸ ಕಾರು ಮಾರಾಟವು ಡಿಜಿಟಲ್ ಪ್ರಭಾವಿತವಾಗಿದೆ.

ಆನ್‌ಲೈನ್ ಮೂಲಕ 2 ಲಕ್ಷ ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

ಗ್ರಾಹಕರು ಮೊದಲು ಆನ್‌ಲೈನ್‌ನಲ್ಲಿ ಪರಿಶೀಲಿಸಿದ ಬಳಿಕ ಖರೀದಿಸಲು ಮುಂದಾಗುತ್ತಾರೆ. ಆನ್‌ಲೈನ್ ನಲ್ಲಿ ಗ್ರಾಹಕರಿಗೆ ಮಾಹಿತಿಯ ಸಂಪೂರ್ಣವಾಗಿ ಕಲರ್ ಫುಲ್ ಆಗಿ ಒದಗಿಸುತ್ತದೆಯಾದರೂ, ಕೊನೆಗೆ ತಮ್ಮ ಹತ್ತಿರ ಡೀಲರುಗಳ ಬಳಿ ಹೆಚ್ಚಿನವರು ತೆರಳುತ್ತಾರೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಆನ್‌ಲೈನ್ ಮೂಲಕ 2 ಲಕ್ಷ ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

ಕುತೂಹಲಕಾರಿ ಅಂಶವೆಂದರೆ, ನಮ್ಮ ಡಿಜಿಟಲ್ ಚಾನೆಲ್ ಮೂಲಕ ವಿಚಾರಿಸುವ ಗ್ರಾಹಕರು ಹೆಚ್ಚಾಗಿ 10 ದಿನಗಳಲ್ಲಿ ಕಾರು ಖರೀದಿಸುತ್ತಾರೆ. ಡಿಜಿಟಲ್ ವಿಚಾರಣೆಯು ಮಾರಾಟವನ್ನು ಹೆಚ್ಚಿಸಲಿ ನೆರವಾಗಿದೆ.

ಆನ್‌ಲೈನ್ ಮೂಲಕ 2 ಲಕ್ಷ ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

2018ರಲ್ಲಿ ಈ ಹೊಸ ಡಿಜಿಟಲ್ ಚಾನೆಲ್ ಅನ್ನು ಪರಿಚಯಿಸಿದಾಗಿನಿಂದ, ನಾವು ಡಿಜಿಟಲ್ ವಿಚಾರಣೆಗಳಲ್ಲಿ ಮೂರು ಪಟ್ಟು ಹೆಚ್ಚಳ ಕಂಡಿದ್ದೇವೆ. 2019ರ ಏಪ್ರಿಲ್ ತಿಂಗಳಿನಿಂದ ಲಕ್ಷ ಯೂನಿಟ್‌ಗಳ ಮಾರಾಟವನ್ನು ದಾಖಲಿಸಿದ್ದೇವೆ ಎಂದರು.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಆನ್‌ಲೈನ್ ಮೂಲಕ 2 ಲಕ್ಷ ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

ಅವರು ಮಾತನ್ನು ಮುಂದುವರೆಸಿ, ಮಾರುತಿ ಸುಜುಕಿ ಕಂಪನಿಯ ಆನ್‌ಲೈನ್ ನಲ್ಲಿ ವಿಚಾರಣೆ ಬಳಿಕ ಹತ್ತಿರದ ಡೀಲರುಗಳ ಬಗ್ಗೆ ವಿಚಾರಿಸುವುದು ಕೂಡ ಹೆಚ್ಚಾಗಿದೆ. ಕಳೆದ 2 ವರ್ಷಗಳಲ್ಲಿ ಈ ಡಿಜಿಟಲ್ ಪ್ಲಾಟ್‌ಫಾರ್ಮ್ ಪ್ರಯಾಣದಲ್ಲಿ ನಾವು 3000 ಆನ್‌ಲೈನ್ ಟಚ್‌ಪಾಯಿಂಟ್‌ಗಳಲ್ಲಿ 1000 ಕ್ಕೂ ಹೆಚ್ಚು ಡೀಲರುಗಳನ್ನು ಸಂಯೋಜಿಸಿದ್ದೇವೆ ಎಂದು ಹೇಳಿದರು.

ಆನ್‌ಲೈನ್ ಮೂಲಕ 2 ಲಕ್ಷ ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ತಮ್ಮ ಆನ್‌ಲೈನ್ ಮಾರಾಟ ಪ್ಲಾಟ್‌ಫಾರ್ಮ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ವಿಸ್ತರಿಸಿದೆ. ಕಂಪನಿಯು ಈಗ ಆನ್‌ಲೈನ್‌ನಲ್ಲಿ ಹಲವಾರು ಆಯ್ಕೆಗಳನ್ನು ನೀಡಿದೆ. ಗ್ರಾಹಕರು ಅಧಿಕೃತವಾಗಿ ಮಾರುತಿ ಸುಜುಕಿ ಕಾರುಗಳ ಮಾಹಿತಿಯನ್ನು ಆನ್‌ಲೈನ್ ನಲ್ಲಿ ಸುಲಭವಾಗಿ ಪಡೆಯಬಹುದು.

Most Read Articles

Kannada
English summary
Maruti Suzuki Registers 2 Lakh Units Via Online Sales Platform. Read In Kannada.
Story first published: Monday, November 16, 2020, 18:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X