ಲಾಕ್‌ಡೌನ್ ಎಫೆಕ್ಟ್- ಬಿಎಸ್-4 ಕಾರುಗಳ ಸ್ಟಾಕ್‌ನಿಂದ ಮಾರುತಿ ಸುಜುಕಿಗೆ 125 ಕೋಟಿ ಲಾಸ್...!

ಮಾಹಾಮಾರಿ ಕರೋನಾ ವೈರಸ್‌ನಿಂದ ಎಲ್ಲಾ ವಲಯದಲ್ಲೂ ಆರ್ಥಿಕ ಸಂಕಷ್ಟ ತಲೆದೋರಿದ್ದು, ಆಟೋ ಉತ್ಪಾದನಾ ವಲಯದಲ್ಲೂ ಕೂಡಾ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. ಇದರ ಜೊತೆಗೆ ಹೊಸ ಬಿಎಸ್-6 ನಿಯಮ ಅಳವಡಿಕೆ ಕೂಡಾ ವಾಹನ ಉತ್ಪಾದನಾ ಕಂಪನಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಬಿಎಸ್-4 ಕಾರುಗಳ ಸ್ಟಾಕ್‌ನಿಂದ ಮಾರುತಿ ಸುಜುಕಿಗೆ 125 ಕೋಟಿ ಲಾಸ್...!

ಭಾರತದಲ್ಲಿ ಸದ್ಯ ಬಿಎಸ್-6 ವಾಹನಗಳ ಮಾದರಿಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಮಾತ್ರವೇ ಅವಕಾಶವಿದ್ದು, ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಏಪ್ರಿಲ್ 1ರಿಂದ ಜಾರಿಗೆ ಬಂದ ಹೊಸ ಬಿಎಸ್-6 ಎಮಿಷನ್‌ಗೂ ಮುನ್ನ ಬಿಎಸ್-4 ವಾಹನಗಳ ಸ್ಟಾಕ್ ಪ್ರಮಾಣವನ್ನು ಆಫರ್‌ಗಳ ಮೇಲೆ ಸಂಪೂರ್ಣ ಮಾರಾಟ ಮಾಡಿ ಭರ್ಜರಿ ಲಾಭಗಳಿಕೆಯ ನೀರಿಕ್ಷೆಯಲ್ಲಿದ್ದ ವಾಹನ ಉತ್ಪಾದನಾ ಕಂಪನಿಗಳಿಗೆ ಕರೋನಾ ವೈರಸ್ ಭಾರೀ ಆಘಾತ ಉಂಟು ಮಾಡಿತು.

ಬಿಎಸ್-4 ಕಾರುಗಳ ಸ್ಟಾಕ್‌ನಿಂದ ಮಾರುತಿ ಸುಜುಕಿಗೆ 125 ಕೋಟಿ ಲಾಸ್...!

2018ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಆದೇಶದಂತೆ ದೇಶಾದ್ಯಂತ 2020ರ ಎಪ್ರಿಲ್ 1ರಿಂದ ಬಿಎಸ್-6 ಎಮಿಷನ್ ಜಾರಿಗೆ ಬಂದಿದ್ದರಿಂದ ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಸಂಪೂರ್ಣವಾಗಿ ನಿಷೇಧಗೊಂಡಿತು.

ಬಿಎಸ್-4 ಕಾರುಗಳ ಸ್ಟಾಕ್‌ನಿಂದ ಮಾರುತಿ ಸುಜುಕಿಗೆ 125 ಕೋಟಿ ಲಾಸ್...!

ಇದಕ್ಕಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಆಟೋ ಕಂಪನಿಗಳು ಪರಿಸ್ಥಿತಿಗೆ ಅನುಗುಣವಾಗಿ ಮೊದಲ ಹಂತದ ಲಾಕ್‌ಡೌನ್ ನಂತರ ಬಿಎಸ್-4 ವಾಹನಗಳ ಮಾರಾಟಕ್ಕೆ ಹೆಚ್ಚುವರಿ ಕಾಲಾವಕಾಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದವು.

ಬಿಎಸ್-4 ಕಾರುಗಳ ಸ್ಟಾಕ್‌ನಿಂದ ಮಾರುತಿ ಸುಜುಕಿಗೆ 125 ಕೋಟಿ ಲಾಸ್...!

ಲಾಕ್‌ಡೌನ್ ಸಂಕಷ್ಟದಿಂದಾಗಿ ನಿಷೇಧಗೊಂಡಿದ್ದ ಬಿಎಸ್-4 ವಾಹನಗಳ ಮಾರಾಟಕ್ಕಾಗಿ ಆಟೋ ಕಂಪನಿಗಳಿಗೆ ಹೆಚ್ಚುವರಿ ಅವಕಾಶ ನೀಡಿದ್ದರೂ ಹಲವಾರು ಷರತ್ತುಗಳನ್ನು ವಿಧಿಸಿದ್ದ ಸುಪ್ರೀಂಕೋರ್ಟ್, ಸ್ಟಾಕ್ ಇರುವ ಬಿಎಸ್-4 ವಾಹನಗಳ ಪ್ರಮಾಣದಲ್ಲಿ ಶೇ.10 ರಷ್ಟು ಮಾತ್ರವೇ ಮಾರಾಟ ಮಾಡಬೇಕೆಂಬ ನಿಯಮ ವಿಧಿಸಿತ್ತು.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಬಿಎಸ್-4 ಕಾರುಗಳ ಸ್ಟಾಕ್‌ನಿಂದ ಮಾರುತಿ ಸುಜುಕಿಗೆ 125 ಕೋಟಿ ಲಾಸ್...!

ಜೊತೆಗೆ ನಿಷೇಧಿಗೊಂಡಿದ್ದ ಬಿಎಸ್-4 ವಾಹನಗಳನ್ನು ಯಾವುದೇ ಕಾರಣಕ್ಕೂ ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಲ್ಲಿ ಮಾರಾಟ ಮಾಡುವಂತಿಲ್ಲ ಎನ್ನುವ ಷರತ್ತು ಹಾಕಿದ್ದ ಸುಪ್ರೀಂಕೋರ್ಟ್ ಇದಕ್ಕಾಗಿ ಕೇವಲ 10 ದಿನಗಳ ಕಾಲಾವಕಾಶ ನೀಡಿತ್ತು.

ಬಿಎಸ್-4 ಕಾರುಗಳ ಸ್ಟಾಕ್‌ನಿಂದ ಮಾರುತಿ ಸುಜುಕಿಗೆ 125 ಕೋಟಿ ಲಾಸ್...!

ಮೇ.4ರಿಂದ ಮೇ.14ರ ಅವಧಿಯಲ್ಲಿ ಎಲ್ಲಾ ಆಟೋ ಉತ್ಪಾದನಾ ಕಂಪನಿಗಳು ಬಿಎಸ್-4 ಸ್ಟಾಕ್ ಪ್ರಮಾಣದಲ್ಲಿ ಶೇ.10ರಷ್ಟು ವಾಹನಗಳನ್ನು ಮಾರಾಟ ಮಾಡಿದ್ದು, ಇನ್ನು ಶೇ.90 ರಷ್ಟು ವಾಹನಗಳು ಇದೀಗ ಗುಜುರಿ ಸೇರುವ ಹಂತದಲ್ಲಿವೆ.

MOST READ: ಲಾಕ್‌ಡೌನ್ ತೆರವುಗೊಂಡ ನಂತರ ಬಿಡುಗಡೆಯಾಗಲಿರುವ ಟಾಪ್ 5 ಕಾರುಗಳು..

ಬಿಎಸ್-4 ಕಾರುಗಳ ಸ್ಟಾಕ್‌ನಿಂದ ಮಾರುತಿ ಸುಜುಕಿಗೆ 125 ಕೋಟಿ ಲಾಸ್...!

ಸದ್ಯ ಮಾರುಕಟ್ಟೆ ಸಂಪೂರ್ಣವಾಗಿ ಬಿಎಸ್-6 ವಾಹನಗಳ ಮಾರಾಟ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದ್ದು, ಬಿಎಸ್-4 ವಾಹನಗಳ ಮಾರಾಟ ಪ್ರಕ್ರಿಯೆ ಮತ್ತು ನೋಂದಣಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

ಬಿಎಸ್-4 ಕಾರುಗಳ ಸ್ಟಾಕ್‌ನಿಂದ ಮಾರುತಿ ಸುಜುಕಿಗೆ 125 ಕೋಟಿ ಲಾಸ್...!

ಇದರಿಂದ ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಆಟೋ ಕಂಪನಿಗಳ ಬಳಿ ಸಾವಿರಾರು ಕೋಟಿ ಮೌಲ್ಯದ ಬಿಎಸ್-4 ವಾಹನ ಸ್ಟಾಕ್ ಹಾಗೆಯೇ ಉಳಿದಿದ್ದು, ಸುಮಾರು ಮೂರರಿಂದ ನಾಲ್ಕು ಲಕ್ಷ ಬಿಎಸ್-4 ವಾಹನಗಳು ಧೂಳು ಹಿಡಿಯುತ್ತಿವೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಬಿಎಸ್-4 ಕಾರುಗಳ ಸ್ಟಾಕ್‌ನಿಂದ ಮಾರುತಿ ಸುಜುಕಿಗೆ 125 ಕೋಟಿ ಲಾಸ್...!

ಇದರಲ್ಲಿ 125 ಕೋಟಿ ಮೌಲ್ಯದ ಮಾರುತಿ ಸುಜುಕಿ ನಿರ್ಮಾಣದ ಸುಮಾರು 2 ಸಾವಿರಕ್ಕೂ ಹೆಚ್ಚು ಬಿಎಸ್-4 ಡೀಸೆಲ್ ಕಾರುಗಳಿದ್ದು, ಪೆಟ್ರೋಲ್ ಕಾರುಗಳ ಮಾರಾಟದಲ್ಲಿ ಕಳೆದ ವರ್ಷವೇ ಬಿಎಸ್-6 ನಿಯಮ ಅಳವಡಿಸಿಕೊಂಡಿದ್ದರಿಂದ ನಷ್ಟ ಪ್ರಮಾಣದಲ್ಲಿ ತಗ್ಗಲು ಪ್ರಮುಖ ಕಾರಣವಾಗಿದೆ.

ಬಿಎಸ್-4 ಕಾರುಗಳ ಸ್ಟಾಕ್‌ನಿಂದ ಮಾರುತಿ ಸುಜುಕಿಗೆ 125 ಕೋಟಿ ಲಾಸ್...!

ಆದರೆ ಬಹುತೇಕ ಆಟೋ ಕಂಪನಿಗಳ ಬಳಿ ಈಗಲೂ ಕೂಡಾ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬಿಎಸ್-4 ಆವೃತ್ತಿಗಳ ದೊಡ್ಡ ಮಟ್ಟದ ಸ್ಟಾಕ್ ಇದ್ದು, ಮಾರಾಟ ಮಾಡಲು ಸಾಧ್ಯವಿಲ್ಲದ ಬಿಎಸ್-4 ವಾಹನಗಳನ್ನು ಯಾವ ರೀತಿ ಮರುಬಳಕೆ ಮಾಡಿಕೊಳ್ಳಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಬಿಎಸ್-4 ಕಾರುಗಳ ಸ್ಟಾಕ್‌ನಿಂದ ಮಾರುತಿ ಸುಜುಕಿಗೆ 125 ಕೋಟಿ ಲಾಸ್...!

ಭಾರತದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲದ ವಾಹನಗಳನ್ನು ಆಫ್ರಿಕಾ ರಾಷ್ಟ್ರಗಳಿಗೆ ರಫ್ತು ಮಾಡುವ ಅವಕಾಶಗಳಿದ್ದರೂ ಡ್ರೈವಿಂಗ್ ಸಿಸ್ಟಂ ಬದಲಿಸಿ ರಫ್ತುಗೊಳಿಸುವುದು ಆರ್ಥಿಕವಾಗಿ ಹೊರೆಯಾಗುವ ಯೋಜನೆಯಾಗಿದೆ. ಹೀಗಾಗಿ ಮರುಬಳಕೆಗೆ ಸಾಧ್ಯವಿರುವ ಬಿಡಿಭಾಗಗಳನ್ನು ತೆಗೆದುಕೊಳ್ಳಲಿರುವ ಆಟೋ ಕಂಪನಿಗಳು ಮರುಬಳಕೆ ಸಾಧ್ಯವಿಲ್ಲದ ಎಂಜಿನ್ ವಿಭಾಗವನ್ನು ಮಾತ್ರ ಗುಜುರಿಗೆ ಹಾಕಲಿವೆ.

Most Read Articles

Kannada
English summary
Maruti Suzuki Registers Rs 125 Crore Worth Of Unsold BS4 Cars As Company Loss. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X