ಎಸ್ ಕ್ರಾಸ್ ಡೀಸೆಲ್ ಮಾದರಿಯನ್ನು ಸ್ಥಗಿತಗೊಳಿಸಲಿದೆ ಮಾರುತಿ ಸುಜುಕಿ
ಮಾರುತಿ ಸುಜುಕಿ ಕಂಪನಿಯು ಬಿಎಸ್ 4 ಎಂಜಿನ್‍ನಿಂದ ಬಿಎಸ್ 6 ಎಂಜಿನ್‍ಗೆ ಅಪ್‍ಗ್ರೇಡ್ ಮಾಡುವುದು ದುಬಾರಿಯಾದ ಕಾರಣಕ್ಕೆ ಎಸ್ - ಕ್ರಾಸ್ ಡೀಸೆಲ್ ಮಾದರಿಯ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲಿದೆ.

ಇದರ ಬದಲಿಗೆ ಬಿಎಸ್ 6 ಪೆಟ್ರೋಲ್ ಎಂಜಿನ್ ಹೊಂದಿರುವ ಎಸ್ - ಕ್ರಾಸ್ ಕಾರ್ ಅನ್ನು ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ 2020ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಲಿದೆ. ಎಸ್ - ಕ್ರಾಸ್ ಡೀಸೆಲ್ ಮಾದರಿಯ ಕಾರ್ ಅನ್ನು 1.3 ಲೀಟರ್ ಹಾಗೂ 1.6 ಲೀಟರಿನ ಎರಡು ವಿಧದ ಡೀಸೆಲ್ ಎಂಜಿನ್‍ನಲ್ಲಿ ಮಾರಾಟ ಮಾಡಲಾಗುತ್ತಿದೆ.

ಎಸ್ - ಕ್ರಾಸ್ ಕಾರ್ ಅನ್ನು ಫೇಸ್‍ಲಿಫ್ಟ್ ಮಾಡಿದ ನಂತರ 1.6 ಲೀಟರಿನ ಎಂಜಿನ್ ಕಾರ್ ಅನ್ನು ಸ್ಥಗಿತಗೊಳಿಸಲಾಯಿತು. 1.3 ಲೀಟರ್ ಎಂಜಿನ್ ಕಾರಿನಲ್ಲಿ ಎಸ್‍ಹೆಚ್‍ವಿಎಸ್ ಮೈಲ್ಡ್ ಹೈಬ್ರಿಡ್ ಸಿಸ್ಟಂ ಅಳವಡಿಸಲಾಯಿತು.

ಮಾರುಕಟ್ಟೆಯಲ್ಲಿರುವ 1.3 ಲೀಟರಿನ ಡೀಸೆಲ್ ಎಂಜಿನ್ 89 ಬಿಹೆಚ್‍ಪಿ ಪವರ್ ಹಾಗೂ 200 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಫಿಯೆಟ್ ಕಂಪನಿಯಿಂದ ಪಡೆಯಲಾಗಿತ್ತು.

2020ರ ಹೊಸ ಮಾರುತಿ ಎಸ್ ಕ್ರಾಸ್ ಕಾರಿನಲ್ಲಿ ಮಾರುತಿ ಸಿಯಾಜ್ ಹಾಗೂ ಎರ್ಟಿಗಾ ಕಾರುಗಳಲ್ಲಿರುವಂತಹ ಮಾರುತಿ ಸುಜುಕಿ ಕಂಪನಿಯ 1.5 ಲೀಟರಿನ ಕೆ 15 ಬಿ ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು. ಮಾರುತಿ ಸುಜುಕಿ ಕಂಪನಿಯು ಈ ಎಂಜಿನ್‍ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಆದರೆ ಸಿಯಾಜ್ ಹಾಗೂ ಎರ್ಟಿಗಾ ಕಾರುಗಳಲ್ಲಿರುವಂತಹ ಈ ಎಂಜಿನ್ 103 ಬಿಹೆಚ್‍ಪಿ ಪವರ್ ಹಾಗೂ 138 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 1.5 ಲೀಟರಿನ ಕೆ15ಬಿ ಎಂಜಿನ್ ಹೆಚ್ಚು ಫ್ಯೂಯಲ್ ಎಫಿಶಿಯನ್ಸಿಗಾಗಿ ಎಸ್‍ಹೆಚ್‍ವಿಎಸ್ ಮೈಲ್ಡ್ ಹೈಬ್ರಿಡ್ ಸಿಸ್ಟಂನೊಂದಿಗೆ ಕಾರ್ಯನಿರ್ವಹಿಸಲಿದೆ.

ಈ ಎಂಜಿನ್ ಅನ್ನು ಹೊಸ ತಲೆಮಾರಿನ ವಿಟಾರ ಬ್ರಿಝಾದಲ್ಲಿಯೂ ಅಳವಡಿಸುವ ಸಾಧ್ಯತೆಗಳಿವೆ. ಮಾರುಕಟ್ಟೆಯಲ್ಲಿರುವ ವಿಟಾರ ಬ್ರಿಝಾ ಹಾಗೂ ಎಸ್ ಕ್ರಾಸ್ ಕಾರುಗಳು ಸದ್ಯಕ್ಕೆ ಸ್ಥಗಿತಗೊಂಡಿರುವ ವಿಜಿಟಿ ಮಲ್ಟಿ ಜೆಟ್ ಎಂಜಿನ್ ಅನ್ನು ಹೊಂದಿವೆ.

2020ರ ಹೊಸ ಇಗ್ನಿಸ್ ಫೇಸ್‍ಲಿಫ್ಟ್ ಕಾರು 1.2 ಲೀಟರಿನ ಕೆ-ಸೀರಿಸ್ ಬಿಎಸ್ 6 ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಮಾರುತಿ ಸುಜುಕಿ ಕಂಪನಿಯು ಹೊಸ ಇಗ್ನಿಸ್ ಕಾರಿನಲ್ಲಿ ಕೆಲವು ಸಣ್ಣಪುಟ್ಟ ಕಾಸ್ಮೆಟಿಕ್ ಅಪ್‍ಡೇಟ್‍ಗಳನ್ನು ಮಾಡಲಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಡೀಸೆಲ್ ಎಂಜಿನ್ ಕಾರುಗಳ ಮಾರಾಟವು ಕುಸಿತವನ್ನು ಕಂಡಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿಲ್ಲದ ಎಸ್ ಕ್ರಾಸ್ ಡೀಸೆಲ್ ಕಾರ್ ಅನ್ನು ಸ್ಥಗಿತಗೊಳಿಸಲು ಮಾರುತಿ ಸುಜುಕಿ ಕಂಪನಿಯು ಮುಂದಾಗಿದೆ. ಕಂಪನಿಯು ಮುಂಬರುವ ಆಟೋ ಎಕ್ಸ್ ಪೋದಲ್ಲಿ ಹಲವಾರು ಕಾರುಗಳನ್ನು ಪ್ರದರ್ಶಿಸಿ, ಅನಾವರಣಗೊಳಿಸಲಿದೆ.


Click it and Unblock the Notifications