ಮತ್ತೆರಡು ಹೊಸ ಎಂಟ್ರಿ ಲೆವಲ್ ಕಾರುಗಳನ್ನು ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ
ಭಾರತದ ಅತಿ ದೊಡ್ಡ ಕಾರು ಉತ್ಪಾದನಾ ಮತ್ತು ಮಾರಾಟ ಕಂಪನಿಯಾಗಿರುವ ಮಾರುತಿ ಸುಜುಕಿಯು ಶೀಘ್ರದಲ್ಲೇ ಮತ್ತೆರಡು ಹೊಸ ಬಜೆಟ್ ಬೆಲೆಯ ಎಂಟ್ರಿ ಲೆವಲ್ ಕಾರುಗಳನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ರೂ.5 ಲಕ್ಷ ಬೆಲೆ ಅಂತರದಲ್ಲಿ ಎರಡು ಹೊಸ ವಿನ್ಯಾಸದ ಹ್ಯಾಚ್‌ಬ್ಯಾಕ್ ಮಾದರಿಗಳನ್ನು ರಸ್ತೆಗಿಳಿಸಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಟಾಪ್ 10 ಕಾರುಗಳ ಮಾರಾಟದಲ್ಲಿ ಬರೋಬ್ಬರಿ ಏಳು ಕಾರು ಮಾದರಿಗಳು ಮಾರುತಿ ಸುಜುಕಿ ನಿರ್ಮಾಣದ ಕಾರುಗಳಾಗಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಎರಡು ಕಾರುಗಳು ಸಹ ಬಜೆಟ್ ಬೆಲೆಯೊಂದಿಗೆ ಮಾರಾಟದಲ್ಲಿ ಮುಂಚೂಣಿ ಸಾಧಿಸುವ ತವಕದಲ್ಲಿವೆ. ಹೊಸ ಕಾರುಗಳು ರೂ.5 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದ್ದು, ಪೆಟ್ರೋಲ್ ಮಾದರಿಯಲ್ಲಿ ಮಾತ್ರವೇ ಮಾರಾಟಗೊಳ್ಳಲಿವೆ.

ಆದರೆ ಹೊಸ ಕಾರುಗಳ ತಾಂತ್ರಿಕ ಮಾಹಿತಿ ಕುರಿತಂತೆ ಯಾವುದೇ ಮಾಹಿತಿ ನೀಡದ ಮಾರುತಿ ಸುಜುಕಿಯು ಹೊಸ ಕಾರುಗಳನ್ನು ಸದ್ಯದಲ್ಲೇ ಬಿಎಸ್-6 ಎಂಜಿನ್‌ನೊಂದಿಗೆ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳಲಿದೆ.

ಬಿಎಸ್-6 ಹೊಸ ಎಮಿಷನ್ ಪ್ರಕಾರ ಡೀಸೆಲ್ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆ ತಂದಿರುವ ಮಾರುತಿ ಸುಜುಕಿ ಕಂಪನಿಯು ಕಡಿಮೆ ಸಾಮರ್ಥ್ಯದ ಡೀಸೆಲ್ ಕಾರುಗಳ ಮಾರಾಟಕ್ಕೆ ಗುಡ್‌ಬೈ ಹೇಳಿದ್ದು, ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಮೇಲೆ ಹೆಚ್ಚು ಒತ್ತು ನೀಡುತ್ತಿದೆ.

ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಹಲವು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿರುವುದೇ ಡೀಸೆಲ್ ಎಂಜಿನ್ ಮಾರಾಟದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಕಡಿಮೆ ಸಾಮರ್ಥ್ಯದ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿವೆ.

ಇದಕ್ಕೆ ಕಾರಣ ಬಿಎಸ್-4 ಡೀಸೆಲ್ ಮಾದರಿಗಳನ್ನು ಬಿಎಸ್-6 ನಿಯಮ ಅನುಸಾರ ಉನ್ನತೀಕರಣವು ಕಾರುಗಳ ಬೆಲೆಯಲ್ಲಿ ಸಾಕಷ್ಟು ದುಬಾರಿಯಾಗಲಿದ್ದು, ಈ ಹಿನ್ನಲೆಯಲ್ಲಿ ಬಹುತೇಕ ಕಾರು ಕಂಪನಿಗಳು ಎಂಟ್ರಿ ಲೆವಲ್ ಕಾರುಗಳಲ್ಲಿ ಡೀಸೆಲ್ ಕಾರುಗಳನ್ನು ಸ್ಥಗಿತಗೊಳಿಸಿ ಪೆಟ್ರೋಲ್ ಮತ್ತು ಸಿಎನ್‌ಜಿ ಕಾರುಗಳನ್ನು ಹೆಚ್ಚಿಸುತ್ತಿವೆ.
MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಮಾರುತಿ ಸುಜುಕಿ ಕೂಡಾ ಈ ನಿಟ್ಟಿಯಲ್ಲಿ ಹಲವು ಕಾರು ಮಾದರಿಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಸ್ಥಗಿತಗೊಳಿಸಿದ್ದು, 800 ಸಿಸಿ, 1.0-ಲೀಟರ್, 1.2-ಲೀಟರ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್‌ಗಳನ್ನು ಮಾತ್ರವೇ ಮಾರಾಟ ಮಾಡುತ್ತಿದೆ.

ಸದ್ಯ ಮಾರುತಿ ಸುಜುಕಿ ಕಾರುಗಳಲ್ಲಿ ಡೀಸೆಲ್ ಎಂಜಿನ್ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಹೈ ಎಂಡ್ ಮಾದರಿಗಳಾದ ಎರ್ಟಿಗಾ, ಎರ್ಟಿಗಾ ಎಕ್ಸ್6, ವಿಟಾರಾ ಬ್ರೆಝಾ, ಎಸ್-ಕ್ರಾಸ್ ಮತ್ತು ಸಿಯಾಜ್ ಕಾರುಗಳಿಗೆ ಮಾತ್ರವೇ ಮುಂಬರುವ ದಿನಗಳಲ್ಲಿ ಹೊಸದಾಗಿ ಅಭಿವೃದ್ದಿಗೊಳಿಸಲಾಗಿ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ನೀಡಬಹುದಾದ ಸಾಧ್ಯತೆಗಳಿವೆ.
MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಹೊಸ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಕಾರುಗಳು ಮುಂಬರುವ ಉತ್ಸವ ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, 800 ಸಿಸಿ ಮತ್ತು 1.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಅಭಿವೃದ್ದಿ ಹೊಂದಲಿವೆ.


Click it and Unblock the Notifications