ಲಾಕ್‌ಡೌನ್ ನಡುವೆಯೂ ಕಾರು ಉತ್ಪಾದನೆಯನ್ನು ಶುರು ಮಾಡುತ್ತಿದೆ ಮಾರುತಿ ಸುಜುಕಿ
ಕರೋನಾ ವೈರಸ್ ತಡೆಯಲು ಲಾಕ್‌ಡೌನ್ ಅನ್ನು ಮೇ 3ರ ತನಕ ವಿಸ್ತರಣೆ ಮಾಡಿದ್ದ ಕೇಂದ್ರ ಸರ್ಕಾರವು ಇದೀಗ ಕೆಲವು ವಿನಾಯ್ತಿಗಳನ್ನು ಘೋಷಣೆ ಮಾಡಿದ್ದು, ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಹೊರತುಪಡಿಸಿ ಹಸಿರು ವಲಯದಲ್ಲಿರುವ ಕೈಗಾರಿಕೆಗಳ ಉತ್ಪಾದನಾ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದೆ.

2ನೇ ಹಂತದ ಲಾಕ್‌ಡೌನ್ ಮುಗಿಯಲು ಇನ್ನು ಹತ್ತು ದಿನ ಬಾಕಿ ಇರುವಾಗಲೇ ಹಸಿರು ವಲಯಗಳಲ್ಲಿನ ಕೈಗಾರಿಕಾ ಚಟುವಟಿಕೆಗಳಿಗೆ ಷರತ್ತುಬದ್ಧ ಅವಕಾಶ ನೀಡಲಾಗಿದ್ದು, ದೇಶದ ಅತಿದೊಡ್ಡ ಕಾರು ಉತ್ಪಾದನೆ ಕಂಪನಿಯಾಗಿರುವ ಮಾರುತಿ ಸುಜುಕಿಯು ಕೂಡಾ ಕಾರುಗಳ ಉತ್ಪಾದನೆಗೆ ಚಾಲನೆ ನೀಡಲು ಮುಂದಾಗಿದೆ. ಹರಿಯಾಣದಲ್ಲಿರುವ ಮನೆಸಾರ್ ಕಾರು ಉತ್ಪಾದನಾ ಘಟಕದಲ್ಲಿ ಉತ್ಪಾದನಾ ಪ್ರಕ್ರಿಯೆಯನ್ನು ಪುನಾರಂಭಿಸಲು ಸಿದ್ದತೆ ನಡೆಸಿರುವ ಮಾರುತಿ ಸುಜುಕಿ ಗುರುಗ್ರಾಮ್ ಜಿಲ್ಲಾಡಳಿತದಿಂದ ಷರತ್ತುಬದ್ದ ಅವಕಾಶವನ್ನು ಪಡೆದುಕೊಂಡಿದೆ.

ಆದರೆ ಕಾರು ಉತ್ಪಾದನೆಗೆ ಕೇವಲ ಒಂದು ಶಿಫ್ಟ್‌ನಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದ್ದು, ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಮತ್ತು ಹ್ಯಾಂಡ್ ಗ್ಲೌಸ್ ಬಳಕೆ ಮಾಡುವುದು ಕಡ್ಡಾಯವಾಗಿದೆ.

ಆದರೆ ಮಾರುತಿ ಸುಜುಕಿ ಕಂಪನಿಗೆ ಮನೆಸಾರ್ ಘಟಕಕ್ಕಿಂತಲೂ ಗುರುಗ್ರಾಮ್ ಕಾರು ಉತ್ಪಾದನಾ ಘಟಕದಲ್ಲಿನ ಕಾರು ಉತ್ಪಾದನಾ ಅವಕಾಶಕ್ಕೆ ಎದುರುನೋಡುತ್ತಿದ್ದು, ಗುರುಗ್ರಾಮ್ ಕಾಪೋರೇಷನ್ ವ್ಯಾಪ್ತಿಯಲ್ಲಿರುವುದರಿಂದ ಈ ಘಟಕದಲ್ಲಿ ಸದ್ಯಕ್ಕೆ ಕಾರು ಉತ್ಪಾದನೆಗೆ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ.
MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಕೇಂದ್ರ ಸರ್ಕಾರ ನೀಡಿರುವ ಗೈಡ್‌ಲೆನ್ಸ್ ಪ್ರಕಾರ, ಮುನ್ಸಿಪಲ್ ಕಾರ್ಪೊರೇಶನ್ ಮಿತಿ ಹೊರಗಿನ ಕೈಗಾರಿಕಾ ಸಂಸ್ಥೆಗಳಿಗೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿ ನೀಡಲಾಗುತ್ತಿದ್ದು, ಮನೆಸಾರ್‌ನಲ್ಲಿ ಮಾತ್ರವೇ ಕಾರು ಉತ್ಪಾದನೆಯನ್ನು ಮಾಡಲು ಸಾಧ್ಯವಿದೆ.

ಆದರೆ ಮನೆಸಾರ್ ಘಟಕದಲ್ಲಿನ ಕಾರು ಉತ್ಪಾದನೆಯು ಎಲ್ಲಾ ನಿಯಮಗಳನ್ನು ಪಾಲನೆ ಮಾಡಿಕೊಂಡು ಕಾರು ಉತ್ಪಾದನೆ ಮಾಡುವುದು ಆರ್ಥಿಕವಾಗಿ ಮತ್ತಷ್ಟು ಹೊರೆಯಾಗುವ ಸಾಧ್ಯತೆಗಳಿದ್ದು, ಈ ಹಿನ್ನಲೆಯಲ್ಲಿ ಸದ್ಯಕ್ಕೆ ಕಾರು ಉತ್ಪಾದನೆಗೂ ಅವಕಾಶ ಸಿಕ್ಕರೂ ಉತ್ಪಾದನೆಗೆ ಮರುಚಾಲನೆ ನೀಡುವ ಬಗ್ಗೆ ಮಾರುತಿ ಸುಜುಕಿ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ.
MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಇನ್ನು ಕಳೆದ ತಿಂಗಳು 23ರಿಂದಲೇ ಕಾರು ಉತ್ಪಾದನೆಯನ್ನು ಸಂಪೂರ್ಣವಾಗಿ ಬಂದ್ ಮಾಡಿರುವ ಮಾರುತಿ ಸುಜುಕಿಯು ದಿನಂಪ್ರತಿ ನೂರಾರು ಕೋಟಿ ನಷ್ಟ ಅನುಭವಿಸುತ್ತಿದ್ದು, ಸಂಕಷ್ಟದಲ್ಲೂ ಸರ್ಕಾರದ ಕರೆಗೆ ಓಗೊಟ್ಟು ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿದೆ.

ಮಾರುತಿ ಸುಜುಕಿ ಮಾತ್ರವಲ್ಲದೇ ತನ್ನ ಸಹಭಾಗಿತ್ವದ ಸಂಸ್ಥೆಗಳ ಜೊತೆಗೂಡಿ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್, ವೈದ್ಯರ ಬಳಸುವ ಪ್ರೊಟೆಕ್ವಿವ್ ಕ್ಲಾಥ್ ಸೇರಿ ಪ್ರತಿ ತಿಂಗಳು 10 ಸಾವಿರ ವೆಂಟಿಲೆಟರ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದೆ.
MOST READ: ಲಾಕ್‌ಡೌನ್‌ನಿಂದ ಸಂಕಷ್ಟ: ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5,000..!

ಹಾಗೆಯೇ ಲಾಕ್‌ಡೌನ್ ಯಾವುದೇ ಆದಾಯವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವರರ ನೆರವಿಗೂ ಬಂದಿರುವ ಮಾರುತಿ ಸುಜುಕಿ ದಿನಂಪ್ರತಿ ದೇಶದ ವಿವಿಧಡೆ 7 ಸಾವಿರ ಜನರಿಗೆ ಊಟದ ಪೊಟ್ಟಣಗಳ ವಿತರಣೆ ಜೊತೆಗೆ ದಿನಬಳಕೆಯ ಆಹಾರ ಪದಾರ್ಥಗಳ ಪೊಟ್ಟಣಗಳನ್ನು ವಿತರಿಸುತ್ತಿದೆ.


Click it and Unblock the Notifications