ಭಾರತದಲ್ಲಿ ಮೂರು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ
ದೇಶದ ಅತಿ ದೊಡ್ಡ ಕಾರು ಉತ್ಪಾದನಾ ಮತ್ತು ಮಾರಾಟ ಕಂಪನಿಯಾಗಿರುವ ಮಾರುತಿ ಸುಜುಕಿಯು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಮೂರು ಹೊಸ ಮಾದರಿಯ ಕಾರು ಆವೃತ್ತಿಗಳನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಹೊಸ ಕಾರುಗಳು ಎಂಟ್ರಿ ಲೆವಲ್ ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ.

ಸದ್ಯ ಮಾರುಕಟ್ಟೆಯಲ್ಲಿನ ಟಾಪ್ 10 ಕಾರುಗಳ ಮಾರಾಟದಲ್ಲಿ ಬರೋಬ್ಬರಿ ಏಳು ಕಾರು ಮಾದರಿಗಳು ಮಾರುತಿ ಸುಜುಕಿ ನಿರ್ಮಾಣದ ಕಾರುಗಳಾಗಿದ್ದು, ಬಿಡುಗಡೆಯಾಗಲಿರುವ ಮೂರು ಕಾರುಗಳು ಸಹ ಬಜೆಟ್ ಬೆಲೆಯೊಂದಿಗೆ ಮಾರಾಟದಲ್ಲಿ ಮುಂಚೂಣಿ ಸಾಧಿಸುವ ತವಕದಲ್ಲಿವೆ. ಹೊಸ ಕಾರುಗಳು ರೂ.6 ಲಕ್ಷದಿಂದ ರೂ.12 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದ್ದು, ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಮಾದರಿಯಲ್ಲಿ ಮಾರಾಟಗೊಳ್ಳಲಿವೆ.

ಹೊಸ ಕಾರುಗಳ ಬಿಡುಗಡೆಗೂ ಮುನ್ನ ಕೇಂದ್ರ ಸಾರಿಗೆ ಇಲಾಖೆಯಲ್ಲಿ ದಾಖಲಿಸಲಾಗಿರುವ ಪೇಟೆಂಟ್(ಹಕ್ಕುಸ್ವಾಮ್ಯ) ದಾಖಲೆಯಲ್ಲಿ ಹೊಸ ಕಾರುಗಳ ಅಧಿಕೃತ ಹೆಸರುಗಳ ಬಹಿರಂಗವಾಗಿದ್ದು, ಹೊಸ ಕಾರುಗಳ ಮಾದರಿಯ ಬಗೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಪೇಟೆಂಟ್ ದಾಖಲೆಯಲ್ಲಿನ ಮಾಹಿತಿ ಪ್ರಕಾರ, ಮಾರುತಿ ಸುಜುಕಿಯು ಒಟ್ಟು ಮೂರು ಪ್ರಯಾಣಿಕರ ವಾಹನ ಮಾದರಿಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ಕಾರುಗಳು ಎಸ್‌ಪ್ಯಾಕೊ, ಲಿಬೆರ್ಟಾಸ್ ಮತ್ತು ಸೊಲಿಡೊ ಎನ್ನುವ ಹೆಸರು ಪಡೆದುಕೊಳ್ಳಲಿವೆ.

ದೇಶಾದ್ಯಂತ ಸದ್ಯ ಕರೋನಾ ವೈರಸ್ ಪರಿಣಾಮ ಸಂಪೂರ್ಣವಾಗಿ ನೆಲಕಚ್ಚಿದ್ದ ವಾಹನ ಮಾರಾಟವು ವೈರಸ್ ಭೀತಿಯಿಂದಾಗಿ ಮತ್ತೆ ಹೆಚ್ಚಳವಾಗಿದ್ದು, ಸ್ವಂತ ವಾಹನಗಳ ಹೆಚ್ಚು ಆದ್ಯತೆ ನೀಡುತ್ತಿರುವ ಹೊಸ ವಾಹನ ಬಿಡುಗಡೆಗೆ ಪ್ರಮುಖ ಕಾರಣವಾಗಿದೆ. ಇದೇ ಕಾರಣಕ್ಕೆ ಬಜೆಟ್ ಬೆಲೆಯ ವಿವಿಧ ಕಾರು ಮಾದರಿಗಳನ್ನು ಹೆಚ್ಚಿಸುತ್ತಿರುವ ಮಾರುತಿ ಸುಜುಕಿಯು ಪೆಟ್ರೋಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ವಾಹನಗಳ ಮಾರಾಟದ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

ಇನ್ನು ಬಿಎಸ್-6 ಹೊಸ ಎಮಿಷನ್ ಜಾರಿ ನಂತರ ಡೀಸೆಲ್ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆ ತಂದಿರುವ ಮಾರುತಿ ಸುಜುಕಿ ಕಂಪನಿಯು ಕಡಿಮೆ ಸಾಮರ್ಥ್ಯದ ಡೀಸೆಲ್ ಕಾರುಗಳ ಮಾರಾಟಕ್ಕೆ ಗುಡ್‌ಬೈ ಹೇಳಿದ್ದು, ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಹಲವು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿರುವುದೇ ಡೀಸೆಲ್ ಎಂಜಿನ್ ಮಾರಾಟದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಕಡಿಮೆ ಸಾಮರ್ಥ್ಯದ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿವೆ.

ಇದಕ್ಕೆ ಕಾರಣ, ಬಿಎಸ್-4 ಡೀಸೆಲ್ ಮಾದರಿಗಳನ್ನು ಬಿಎಸ್-6 ನಿಯಮ ಅನುಸಾರ ಉನ್ನತೀಕರಣವು ಕಾರುಗಳ ಬೆಲೆಯಲ್ಲಿ ಸಾಕಷ್ಟು ದುಬಾರಿಯಾಗಲಿದ್ದು, ಈ ಹಿನ್ನಲೆಯಲ್ಲಿ ಬಹುತೇಕ ಕಾರು ಕಂಪನಿಗಳು ಎಂಟ್ರಿ ಲೆವಲ್ ಕಾರುಗಳಲ್ಲಿ ಡೀಸೆಲ್ ಕಾರುಗಳನ್ನು ಸ್ಥಗಿತಗೊಳಿಸಿ ಪೆಟ್ರೋಲ್ ಮತ್ತು ಸಿಎನ್‌ಜಿ ಕಾರುಗಳನ್ನು ಹೆಚ್ಚಿಸುತ್ತಿವೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಮಾರುತಿ ಸುಜುಕಿ ಕೂಡಾ ಈ ನಿಟ್ಟಿಯಲ್ಲಿ ಹಲವು ಕಾರು ಮಾದರಿಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಸ್ಥಗಿತಗೊಳಿಸಿದ್ದು, ಬಿಎಸ್-6 ಮಾದರಿಗಳಲ್ಲಿ ಸದ್ಯ 800 ಸಿಸಿ, 1.0-ಲೀಟರ್, 1.2-ಲೀಟರ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್‌ಗಳನ್ನು ಮಾತ್ರವೇ ಮಾರಾಟ ಮಾಡುತ್ತಿದೆ.


Click it and Unblock the Notifications