ಸಂಕಷ್ಟದಲ್ಲೂ ಅತ್ಯುತ್ತಮ ಬೇಡಿಕೆ ಪಡೆದುಕೊಂಡ ಮಾರುತಿ ವಿಟಾರಾ ಬ್ರೆಝಾ
2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಗೊಂಡಿದ್ದ ಮಾರುತಿ ಸುಜುಕಿ ಹೊಸ ವಿಟಾರಾ ಬ್ರೆಝಾ ಪೆಟ್ರೋಲ್ ಕಾರು ಮಾದರಿಯು ಅತಿ ಕಡಿಮೆ ಅವಧಿಯಲ್ಲಿ 26 ಸಾವಿರ ಬುಕ್ಕಿಂಗ್ ಗುರಿ ತಲುಪಿದ್ದು, ಹೊಸ ಕಾರಿನಲ್ಲಿ ಜೋಡಣೆ ಮಾಡಲಾಗಿರುವ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನವು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದೆ.

ಲಾಕ್‌ಡೌನ್ ಸಡಿಲಿಕೆ ನಂರ ಹೊಸ ವಿಟಾರಾ ಬ್ರೆಝಾ ಕಾರಿನ ವಿತರಣೆಯನ್ನು ಪುನಾರಂಭಿಸಿರುವ ಮಾರುತಿ ಸುಜುಕಿ ಕಂಪನಿಯು ಹೊಸ ಸುರಕ್ಷಾ ಮಾರ್ಗಸೂಚಿ ಅನ್ವಯ ಆನ್‌ಲೈನ್ ಕಾರು ಪ್ರಕ್ರಿಯೆಗೆ ಚಾಲನೆ ನೀಡಿದೆ. ವೈರಸ್ ಭೀತಿ ಹಿನ್ನಲೆಯಲ್ಲಿ ಗರಿಷ್ಠ ಪ್ರಮಾಣದ ಸುರಕ್ಷಾ ಸೌಲಭ್ಯಗಳೊಂದಿಗೆ ಹೊಸ ಕಾರುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಸಂಕಷ್ಟದ ನಡುವೆಯೂ ವಿಟಾರಾ ಬ್ರೆಝಾ ಪೆಟ್ರೋಲ್ ಆವೃತ್ತಿಯು ಉತ್ತಮ ಬೇಡಿಕೆ ಪಡೆದುಕೊಂಡಿದೆ.

ಬಿಎಸ್-6 ಎಮಿಷನ್ ಪ್ರಕಾರ ತನ್ನ ಪ್ರಮುಖ ಕಾರುಗಳ ಮಾರಾಟದಲ್ಲಿ ಹಲವಾರು ಮಹತ್ವದ ಬದಲಾವಣೆಗಳನ್ನು ಪರಿಚಯಿಸಿರುವ ಮಾರುತಿ ಸುಜುಕಿಯು ಮೊದಲ ಬಾರಿಗೆ ಬ್ರೆಝಾ ಕಂಪ್ಯಾಕ್ಟ್ ಎಸ್‌ಯುವಿ ಕಾರಿನಲ್ಲಿ ಪೆಟ್ರೋಲ್ ಮಾದರಿಯನ್ನು ಪರಿಚಯಿಸಿರುವುದು ಪ್ರಮುಖ ಆಕರ್ಷಣೆಯಾಗಲಿದೆ.

ಹೊಸ ಎಮಿಷನ್ ನಿಯಮದಿಂದಾಗಿ ಹಲವು ಕಾರು ಕಂಪನಿಗಳು ವಿವಿಧ ಮಾದರಿಯ ಕಾರುಗಳಲ್ಲಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿದ್ದು, ಮಾರುತಿ ಸುಜುಕಿ ಕೂಡಾ ಬ್ರೆಝಾ ಕಾರಿನಲ್ಲಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ಮಾರಾಟ ಮಾಡುತ್ತಿದೆ.

ಈ ಹಿಂದೆ ನೀಡಲಾಗುತ್ತಿದ್ದ 1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದ ಮಾರುತಿ ಸುಜುಕಿ ನಿರ್ಮಾಣದ ಬಹುತೇಕ ಕಾರುಗಳು ಇದೀಗ ಸ್ಥಗಿತಗೊಂಡಿದ್ದು, ಡೀಸೆಲ್ ಆಯ್ಕೆಯ ಬದಲಾಗಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಆಯ್ಕೆಯನ್ನು ಹೆಚ್ಚಿಸಲಾಗುತ್ತಿದೆ.

ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಬಳಕೆಯಿಂದಾಗಿ ಎಂಜಿನ್ ಸ್ಟಾರ್ಟ್ ಸಂದರ್ಭದಲ್ಲಿ ಎಲೆಕ್ಟ್ರಿಕ್ ಮೋಟಾರ್ ಬಳಕೆಯಾಗಲಿದ್ದು, ಎಂಜಿನ್ ಚಾಲನೆ ನಂತರ ಅದು ಪೆಟ್ರೋಲ್ ಎಂಜಿನ್ ಸಂಪರ್ಕವನ್ನು ಪಡೆದುಕೊಳ್ಳುತ್ತದೆ.
MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಈ ವೇಳೆ ಎಂಜಿನ್ ಸ್ಟಾರ್ಟ್ ಸಂದರ್ಭದಲ್ಲಿನ ಇಂಧನ ವ್ಯಯ ತಪ್ಪಿಸುವ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವು ಈಗಾಗಲೇ ವಿಟಾರಾ ಬ್ರೆಝಾ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಜೋಡಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮ್ಯಾನುವಲ್ ಮಾದರಿಯಲ್ಲೂ ಹೊಸ ತಂತ್ರಜ್ಞಾನ ಜೋಡಣೆ ಮಾಡಲಿದೆ.

ಸದ್ಯ ಮಾರುತಿ ಸುಜುಕಿ ನಿರ್ಮಾಣದ ಬಹುತೇಕ ಕಾರುಗಳಲ್ಲಿ SHVS(ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ಬೈ ಸುಜುಕಿ) ತಂತ್ರಜ್ಞಾನವು ಬಳಕೆ ಮಾಡಲಾಗುತ್ತಿದ್ದು, ಆಟೋಮ್ಯಾಟಿಕ್ ಆವೃತ್ತಿಗಳ ನಂತರ ಇದೀಗ ಮ್ಯಾನುವಲ್ ಆವೃತ್ತಿಗಳಲ್ಲೂ ಜೋಡಣೆ ಮಾಡುತ್ತಿರುವುದು ಮಹತ್ವದ ಬದಲಾವಣೆ ಕಾರಣವಾಗಲಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹೊಸ ವಿಟಾರಾ ಬ್ರೆಝಾ ಕಾರಿನಲ್ಲಿ ಅಳವಡಿಸಲು ಉದ್ದೇಶಿಸಲಾಗಿರುವ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದಿಂದಾಗಿ ಮೈಲೇಜ್ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆಯಾಗಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್‌ಗೆ 17.03 ಕಿ.ಮೀ ಮೈಲೇಜ್ ನೀಡುತ್ತಿದೆ.

ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಜೋಡಣೆಯ ನಂತರ ಪೆಟ್ರೋಲ್ ಮ್ಯಾನುವಲ್ ಆವೃತ್ತಿಯ ಮೈಲೇಜ್ ಪ್ರಮಾಣದಲ್ಲಿ 18.76ಕಿ.ಮೀ ಹೆಚ್ಚಳವಾಗಲಿದ್ದು, SHVS ಹೈಬ್ರಿಡ್ ತಂತ್ರಜ್ಞಾನವು 12ವಿ ಹೈಬ್ರಿಡ್ ಸಿಸ್ಟಂ ಜೊತೆ 1.76 ಕೆವಿ ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಳ್ಳಲಿದೆ. ಇನ್ನು ಹೊಸ ವಿಟಾರಾ ಬ್ರೆಝಾ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.7.34 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 11.40 ಲಕ್ಷ ಬೆಲೆ ಪಡೆದುಕೊಂಡಿದೆ.


Click it and Unblock the Notifications








