ಮಹಿಳೆಯರಿಗಾಗಿ ವಿಶೇಷ ಸರ್ವಿಸ್ ಕ್ಯಾಂಪ್ ಆಯೋಜಿಸಲಿದೆ ಮಾರುತಿ ಸುಜುಕಿ
ಭಾರತದ ನಂ 1 ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಅಂತರ್‍ರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ದೇಶಾದ್ಯಂತವಿರುವ ತನ್ನ ಡೀಲರ್‍ಶಿಪ್‍ಗಳಲ್ಲಿ ವಿಶೇಷವಾದ ಸರ್ವಿಸ್ ಕ್ಯಾಂಪ್ ಅನ್ನು ಹಮ್ಮಿಕೊಂಡಿದೆ.

ಈ ವಿಶೇಷ ಸರ್ವಿಸ್ ಕ್ಯಾಂಪ್‍ನಲ್ಲಿ ಮಹಿಳೆಯರಿಗೆ ವಿಶೇಷವಾದ ಡಿಸ್ಕೌಂಟ್ ಹಾಗೂ ಕಾರು ಸರ್ವಿಸ್‍ಗಳ ಮೇಲೆ ಡಿಸ್ಕೌಂಟ್‍ಗಳನ್ನು ನೀಡಲಾಗುವುದು. ಈ ಕ್ಯಾಂಪ್‍ನಲ್ಲಿ ಮಹಿಳಾ ಗ್ರಾಹಕರಿಗಾಗಿ ಲೇಬರ್ ಚಾರ್ಚ್, ಬಿಡಿಭಾಗ, ಆಕ್ಸೆಸರೀಸ್, ಡ್ರೈ ವಾಶ್ ಹಾಗೂ ಟಾಪ್ ವಾಶ್‍ಗಳ ಮೇಲೆ ರಿಯಾಯಿತಿ ನೀಡಲಾಗುವುದು.

ಈ ಸರ್ವಿಸ್ ಕ್ಯಾಂಪ್ ಅನ್ನು ಮಾರ್ಚ್ 8ರಿಂದ ಮಾರ್ಚ್ 30ರವರೆಗೆ ಆಯೋಜಿಸಲಾಗುವುದು. ಮಾರ್ಚ್ 8ರಂದು ಕಾರುಗಳ ಸರ್ವಿಸ್ ಮಾಡಿಸಲು ಬರುವ ಮಹಿಳಾ ಗ್ರಾಹಕರಿಗೆ ಸರ್‍ಪ್ರೈಸ್ ಗಿಫ್ಟ್ ಗಳನ್ನು ನೀಡಲು ಉದ್ದೇಶಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಮಾರುತಿ ಸುಜುಕಿ ಕಂಪನಿಯ ಉನ್ನತ ಮಟ್ಟದ ಅಧಿಕಾರಿಯೊಬ್ಬರು, ಮಾರುತಿ ಸುಜುಕಿ ಕಂಪನಿಯು ತನ್ನ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುತ್ತಾ ಬಂದಿದೆ. ಇದನ್ನು ಮುಂದಿನ ದಿನಗಳಲ್ಲಿಯೂ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಮಾರುತಿ ಸುಜುಕಿಯ ಕಾರುಗಳನ್ನು ಖರೀದಿಸಿರುವ ಮಹಿಳಾ ಗ್ರಾಹಕರಿಗೆ ಧನ್ಯವಾದ ಸಲ್ಲಿಸುವ ಕಾರಣಕ್ಕೆ ಅಂತರ್‍ರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಈ ವಿಶೇಷ ಸರ್ವಿಸ್ ಕ್ಯಾಂಪ್ ಅನ್ನು ಮಾರುತಿ ಸುಜುಕಿ ಕಂಪನಿಯು ಆಯೋಜಿಸಿದೆ.

ಮಾರುತಿ ಸುಜುಕಿ ಕಂಪನಿಯ ಅಧಿಕಾರಿರವರು ಮಾತನಾಡಿ, ಕಂಪನಿಯು ವಿವಿಧ ಸೆಗ್‍ಮೆಂಟ್‍ಗಳ ಗ್ರಾಹಕರನ್ನು ತಲುಪಲು ಸತತ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಕಂಪನಿಯ ಪ್ರಕಾರ ಕಳೆದ ವರ್ಷ 2.4 ಲಕ್ಷ ಮಹಿಳಾ ಗ್ರಾಹಕರು ಈ ವಿಶೇಷ ಸರ್ವಿಸ್ ಕ್ಯಾಂಪ್‍ನಲ್ಲಿ ಭಾಗವಹಿಸಿದ್ದರು.

ಕಳೆದ ವರ್ಷದ ಸರ್ವಿಸ್ ಕ್ಯಾಂಪ್‍ನಲ್ಲಿಯೂ ಸಹ ಹಲವಾರು ರಿಯಾಯಿತಿ ಹಾಗೂ ಕೊಡುಗೆಗಳನ್ನು ಮಾರುತಿ ಸುಜುಕಿ ಕಂಪನಿಯು ನೀಡಿತ್ತು. ಮಾರುತಿ ಸುಜುಕಿ ಕಂಪನಿಯು ಭಾರತದದ್ಯಾಂತ 3800 ಸರ್ವಿಸ್ ಸೆಂಟರ್‍ಗಳನ್ನು ಹೊಂದಿದೆ. ಈ ಸರ್ವಿಸ್ ಸೆಂಟರ್‍ಗಳಲ್ಲಿ ಪ್ರತಿ ದಿನ 54,000 ಕ್ಕೂ ಹೆಚ್ಚು ಕಾರುಗಳನ್ನು ಸರ್ವಿಸ್ ಮಾಡಲಾಗುತ್ತದೆ.


Click it and Unblock the Notifications