ಖಚಿತವಾಗದ ಬಹುನಿರೀಕ್ಷಿತ ಜಿಮ್ನಿ ಎಸ್‍ಯುವಿಯ ಬಿಡುಗಡೆ
ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಎಸ್‍ಯುವಿಗಳಲ್ಲಿ ಮಾರುತಿ ಸುಜುಕಿ ಜಿಮ್ನಿ ಒಂದಾಗಿದೆ. ಅಂತರರಾಷ್ಟೀಯ ಮಾರುಕಟ್ಟೆಯಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡ ಸುಜುಕಿ ಜಿಮ್ನಿ ಮಿನಿ-ಎಸ್‌ಯುವಿಯು ಭಾರತದಲ್ಲಿಯು ಬಿಡುಗಡೆಯಾಗಲಿದೆ ಎಂದು ವರದಿಗಳು ಪ್ರಕಟವಾಗಿತ್ತು.

ಭಾರತದ ಆಫ್-ರೋಡ್ ಪ್ರಿಯರು ಬಹುಕಾತರದಿಂದ ಸುಜುಕಿ ಜಿಮ್ನಿ ಎಸ್‍ಯುವಿಯನ್ನು ಕಾಯುತ್ತಿದ್ದಾರೆ. ಆದರೆ ಮಾರುತಿ ಸುಜುಕಿ ಕಂಪನಿಯು ಆಫ್-ರೋಡ್ ಪ್ರಿಯರಿಗೆ ಅಘಾತಕಾರಿ ಸುದ್ದಿಯನ್ನು ನೀಡಿದ್ದಾರೆ. ಇತ್ತೀಚೆಗೆ ಮಾಧ್ಯಮ ಒಂದಕ್ಕೆ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಸಂದರ್ಶನ ನೀಡಿ ಸುಜುಕಿ ಜಿಮ್ನಿಯನ್ನು ಭಾರತದಲ್ಲಿ ಬಿಡುಗಡೆಯಾಗುವುದು ಖಚಿತವಾಗಿಲ್ಲ ಎಂದು ಹೇಳಿದ್ದಾರೆ. ಭಾರತದಲ್ಲಿ ಕೆಲವು ಅಧ್ಯಯನಗಳನ್ನು ನಡೆಸುತ್ತಿದ್ದೇವೆ ಮತ್ತು ಇನ್ನು ಕೂಡ ಯಾವುದೇ ಅಂತಿಮ ತೀರ್ಮಾನವನ್ನು ಕೈಗೊಂಡಿಲ್ಲವೆಂದು ಹೇಳಿದ್ದಾರೆ.

ಭಾರತದಲ್ಲಿ ಬಿಡುಗಡೆಗೊಳಿಸುವುದಾದರೆ ಮಾರುತಿ ಸುಜುಕಿ ಕಂಪನಿಯು ಗುರಗಾಂವ್ ಮೂಲದ ಘಟಕದಲ್ಲಿ ಜಿಮ್ನಿ ಎಸ್‍ಯುವಿಯ ಉತ್ಪಾದಿಸಲಾಗಿದೆ. ಹರ್ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ಬ್ರೆಝಾ, ಎಸ್-ಕ್ರಾಸ್, ಇಕೋ ಮತ್ತು ಕ್ಯಾರಿಯಂತಹ ಇತರ ಎಸ್‍ಯುವಿಗಳ ಜೊತೆಗೆ ಜಿಮ್ನಿ ಎಸ್‍ಯುವಿಯನ್ನು ಕೂಡ ತಯಾರಿಸಬಹುದು.
MOST READ: ಅನಾವರಣವಾಯ್ತು ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು

ಇದರ ನಡುವೆ ಜಪಾನ್‌ನಲ್ಲಿ ಈ ಜಿಮ್ನಿ ಎಸ್‍ಯುವಿಯ ಕಾಯುವಿಕೆಯ ಅವಧಿಯನ್ನು 1.5 ವರ್ಷಗಳವರೆಗೆ ವಿಸ್ತರಿಸಿದೆ. ಜಿಮ್ನಿ ತಾಯಿನಾಡು ಜಪಾನ್‌ನಲ್ಲಿ ಸಿಯೆರಾ ಮತ್ತು ಸ್ಟ್ಯಾಂಡರ್ಡ್ ಎಂಬ ಎರಡು ರೂಪಾಂತರಗಳಲ್ಲಿ ಹೊಸ ಜಿಮ್ನಿ ಲಭ್ಯವಿದೆ. ಜಪಾನ್ ನಲ್ಲಿ ಜಿಮ್ನಿ ಎಸ್‍ಯುವಿಯ ಬೇಡಿಕೆಯು ಹೆಚ್ಚಾಗಿದೆ. ಕರೋನಾ ವೈರಸ್ ಪಾರಿಣಾಮದಿಂದ ಸುಜುಕಿ ಜಿಮ್ನಿ ಕಾಯುವಿಕೆಯ ಅವಧಿಯನ್ನು ಹೆಚ್ಚಿಸಿದೆ.

ಈ ಮಿನಿ ಎಸ್‍ಯುವಿಯನ್ನು 2018ರಲ್ಲಿ ಜಾಗತಿಕವಾಗಿ ಅನಾವರಣಗೊಂಡಿತು. ಜಿಮ್ನಿ ಮಿನಿ ಎಸ್‍ಯುವಿಯು ಜಾಗತಿಕವಾಗಿ ಅನಾವರಣಗೊಂಡು 1.5 ವರ್ಷಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರ ಮೆಚ್ಚುಗೆ ಪಡೆಯುವಲ್ಲಿ ಮಾರುತಿ ಸುಜುಕಿ ಜಿಮ್ನಿ ಯಶಸ್ವಿಯಾಗಿದೆ. ಅಲ್ಲದೇ 2020ರ ಆಟೋ ಎಕ್ಸ್ ಪೋದಲ್ಲಿ ಹೆಚ್ಚಿನ ಜನರ ಗಮನಸೆಳೆಯುವಲ್ಲಿ ಮಾರುತಿ ಸುಜುಕಿ ಜಿಮ್ನಿ ಯಶ್ವಸಿಯಾಗಿದೆ.

ಈ ಜಿಮ್ನಿ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಕಂಪನಿ ನಿರ್ಧರಿಸಿರಲಿಲ್ಲ. ಆದರೆ ಆಟೋ ಎಕ್ಸ್ ಪೋದ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆನ್ನು ಲಭಿಸಿರುವುದರಿಂದ ಭಾರತದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಹೊಸ ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ. ಜಿಮ್ಮಿ ಅರೆಕಾಲಿಕ 4ಡಬ್ಲೂಡಿ ಸೆಟಪ್ ಅನ್ನು ಹೊಂದಿದೆ. ಇದನ್ನು 2ಹೆಚ್/4ಡಬ್ಲ್ಯೂ ಹೈ/4ಡಬ್ಲ ಲೋ ಹೀಗೆ ಬದಲಾಯಿಸಬಹುದುದಾಗಿದೆ.
MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಈ ಮಿನಿ ಎಸ್‍ಯುವಿಯಲ್ಲಿ 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ. ಇದು ಕಠಿಣ ಭೂಪ್ರದೇಶಗಳಲ್ಲಿ ಸುಗಮವಾಗಿ ಸಾಗಲು ನೆರವಾಗುತ್ತದೆ. ಈ ಮಿನಿ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಅಥವಾ 4 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಮಿನಿ ಎಸ್‍ಯುವಿಯನ್ನು ಡೀಸೆಲ್ ಅಥವಾ ಹೈಬ್ರಿಡ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸುವುದಿಲ್ಲ. ಭಾರತದಲ್ಲಿ ಬಿಡುಗಡೆಯಾದರೆ ಈ ಜಿಮ್ನಿ ಎಸ್‍ಯುವಿ 33 ವರ್ಷಗಳ ಕಾಲ ದೇಶದಲ್ಲಿ ಮಾರಾಟವಾಗಿದ್ದ ಜನಪ್ರಿಯ ಜಿಪ್ಸಿ ಎಸ್‍ಯುವಿಯ ಉತ್ತರಾಧಿಕಾರಿಯಾಗಲಿದೆ.


Click it and Unblock the Notifications








