ಆಟೋ ಎಕ್ಸ್‌ಪೋ 2020: ಪವರ್‌ಫುಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರುತಿ ಬ್ರೆಝಾ ಅನಾವರಣ

ಹೊಸ ಎಮಿಷನ್ ಪ್ರಕಾರ ಡೀಸೆಲ್ ಕಾರುಗಳ ಮಾರಾಟದಲ್ಲಿ ಮಹತ್ವದ ತಂದಿರುವ ಮಾರುತಿ ಸುಜುಕಿ ಸಂಸ್ಥೆಯು ಕಡಿಮೆ ಸಾಮರ್ಥ್ಯದ ಡೀಸೆಲ್ ಕಾರುಗಳಿಗೆ ಗುಡ್‌ಬೈ ಹೇಳಿದ್ದು, ಇದೀಗ ತನ್ನ ಜನಪ್ರಿಯ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಯಾಗಿರುವ ವಿಟಾರಾ ಬ್ರೆಝಾ ಮಾದರಿಯನ್ನು ಪೆಟ್ರೋಲ್ ಎಂಜಿನ್‌ನೊಂದಿಗೆ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ.

ಪವರ್‌ಫುಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರುತಿ ಬ್ರೆಝಾ ಅನಾವರಣ

2017ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ವಿಟಾರಾ ಬ್ರೆಝಾ ಕಾರು ಆವೃತ್ತಿಯಲ್ಲಿ ಇದುವರೆಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ಮಾರಾಟ ಮಾಡುತ್ತಿದ್ದ ಮಾರುತಿ ಸುಜುಕಿ ಇದೀಗ ಮೊದಲ ಬಾರಿಗೆ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡಿದೆ. ಫಿಯೆಟ್‌ನಿಂದ ಎರವಲು ಪಡೆಯಲಾಗಿದ್ದ 1.3-ಲೀಟರ್ ಬೂಸ್ಟರ್ ಜೆಟ್ ಡೀಸೆಲ್ ಎಂಜಿನ್‌‌ಗೆ ಗುಡ್‌ಬೈ ಹೇಳಲಾಗಿದ್ದು, ಇದೀಗ ತನ್ನದೇ ನಿರ್ಮಾಣದ 1.5-ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಗಾಗಿ ಸಿದ್ದಗೊಳಿಸಿದೆ.

ಪವರ್‌ಫುಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರುತಿ ಬ್ರೆಝಾ ಅನಾವರಣ

ಸದ್ಯ ಆಟೋ ಎಕ್ಸ್‌ಪೋದಲ್ಲಿ ಹೊಸ ವಿಟಾರಾ ಬ್ರೆಝಾ ಪೆಟ್ರೋಲ್ ಆವೃತ್ತಿಯನ್ನು ಅನಾವರಣಗೊಳಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಮಾರ್ಚ್ 30ರ ಒಳಗಾಗಿ ಮಾರುಕಟ್ಟೆ ಪ್ರವೇಶಿಸಲಿದೆ.

ಪವರ್‌ಫುಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರುತಿ ಬ್ರೆಝಾ ಅನಾವರಣ

ಹೊಸ ವಿಟಾರಾ ಬ್ರೆಝಾದಲ್ಲಿ ಬಳಕೆ ಮಾಡಿರುವ 1.5-ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್‌ ಮಾದರಿಯು ಈಗಾಗಲೇ ಎರ್ಟಿಗಾ ಎಕ್ಸ್ಎಲ್6 ಮತ್ತು ಸಿಯಾಜ್ ಕಾರುಗಳಲ್ಲಿ ಬಳಕೆ ಮಾಡಲಾಗಿದ್ದು, ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ.

ಪವರ್‌ಫುಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರುತಿ ಬ್ರೆಝಾ ಅನಾವರಣ

ಈ ಮೂಲಕ ಹೊಸ ಪೆಟ್ರೋಲ್ ಎಂಜಿನ್ ಮಾದರಿಯು 105-ಬಿಎಚ್‌ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ. ಜೊತೆಗೆ ಹೊಸ ಪೆಟ್ರೋಲ್ ಕಾರಿನಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡೀಸೆಲ್ ಆವೃತ್ತಿಗಿಂತಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಮುಂಭಾಗ ಡಿಸೈನ್‌ನಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ.

ಪವರ್‌ಫುಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರುತಿ ಬ್ರೆಝಾ ಅನಾವರಣ

ಹೊಸ ಕಾರಿನ ಅಂಚುಗಳಲ್ಲಿ ಶಾರ್ಪ್ ಡಿಸೈನ್ ನೀಡಲಾಗಿದ್ದು, ಮರುವಿನ್ಯಾಸಗೊಳಿಸಲಾದ ಕ್ರೋಮ್, ಹೆಡ್‌ಲ್ಯಾಂಪ್ ಕ್ಲಸ್ಟರ್, ದೊಡ್ಡದಾದ ಡಿಆರ್‌ಎಲ್ಎಸ್‌ಗಳು ಮತ್ತು ಹೊಸ ಮಾದರಿಯ ಅಲಾಯ್ ವೀಲ್ಹ್ ಸೌಲಭ್ಯವು ಪೆಟ್ರೋಲ್ ಎಂಜಿನ್ ಬ್ರೆಝಾ ಕಾರಿಗೆ ಮತ್ತಷ್ಟು ಪ್ರೀಮಿಯಂ ಲುಕ್ ನೀಡಿದೆ.

ಪವರ್‌ಫುಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರುತಿ ಬ್ರೆಝಾ ಅನಾವರಣ

ಜೊತೆಗೆ ಬ್ರೆಝಾ ಪೆಟ್ರೋಲ್ ಕಾರಿನಲ್ಲಿ ಈ ಬಾರಿ ಮೂರು ಹೊಸ ಡ್ಯುಯಲ್ ಟೋನ್ ಬಣ್ಣದೊಂದಿಗೆ ಖರೀದಿಗೆ ಲಭ್ಯವಿರಲಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಸಿಜ್ಲಿಂಗ್ ರೆಡ್ ಜೊತೆ ಮಿಡ್‌ನೈಟ್ ಬ್ಲ್ಯಾಕ್ ರೂಫ್, ಟಾರ್ಕ್ ಬ್ಲ್ಯೂ ಜೊತೆ ಮಿಡ್‌ನೈಟ್ ಬ್ಲ್ಯಾಕ್ ರೂಫ್ ಮತ್ತು ಗ್ರಾನೈಟ್ ಗ್ರೇ ಜೊತೆ ಅಟಮ್ ಆರೇಂಜ್ ಡ್ಯುಯಲ್ ಟೋನ್ ಖರೀದಿಸಬಹುದಾಗಿದೆ.

ಪವರ್‌ಫುಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರುತಿ ಬ್ರೆಝಾ ಅನಾವರಣ

ಅಂದಾಜು ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಸದ್ಯ ಮಾರುಕಟ್ಟೆಯಲ್ಲಿ ಡೀಸೆಲ್ ಆವೃತ್ತಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ಬ್ರೆಝಾ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 7.80 ಲಕ್ಷದಿಂದ ಟಾಪ್ ಎಂಡ್ ಮಾದರಿಯು 10.73 ಲಕ್ಷ ಬೆಲೆ ಹೊಂದಿದ್ದು, ಪೆಟ್ರೋಲ್ ಎಂಜಿನ್ ಹೊಂದಿರುವ ಬ್ರೆಝಾ ಮಾದರಿಯು ರೂ. 8 ಲಕ್ಷದಿಂದ ರೂ.11.50 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಪವರ್‌ಫುಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರುತಿ ಬ್ರೆಝಾ ಅನಾವರಣ

ಇನ್ನು ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿರುವುದೇ ಡೀಸೆಲ್ ಎಂಜಿನ್ ಮಾರಾಟದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಕಡಿಮೆ ಸಾಮರ್ಥ್ಯದ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿವೆ.

ಪವರ್‌ಫುಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರುತಿ ಬ್ರೆಝಾ ಅನಾವರಣ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ನಿರ್ಮಾಣದ ಬಿಎಸ್-4 ಡೀಸೆಲ್ ಎಂಜಿನ್‌ಗಳನ್ನು ಬಿಎಸ್-6 ನಿಯಮಕ್ಕೆ ಉನ್ನತೀಕರಣವು ಅಸಾಧ್ಯ ಎನ್ನಲಾಗುತ್ತಿದ್ದು, ಆರ್ಥಿಕವಾಗಿ ಹೊರೆಯಾಗಲಿರುವ ಉನ್ನತೀಕರಣ ಪ್ರಕ್ರಿಯೆಯಿಂದ ಹಿಂದೆ ಸರಿದಿರುವ ಮಾರುತಿ ಸುಜುಕಿಯು ಡೀಸೆಲ್ ಎಂಜಿನ್‌ಗೆ ಪರ್ಯಾಯವಾಗಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಆಯ್ಕೆಯನ್ನು ಹೆಚ್ಚಿಸುತ್ತಿದೆ.

ಪವರ್‌ಫುಲ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರುತಿ ಬ್ರೆಝಾ ಅನಾವರಣ

ಒಂದು ವೇಳೆ ಕಡಿಮೆ ಸಾಮರ್ಥ್ಯದ ಡೀಸೆಲ್ ಎಂಜಿನ್‌ಗಳನ್ನು ಉನ್ನತೀಕರಿಸಿದರೂ ಬೆಲೆ ಹೆಚ್ಚಳದಿಂದ ಗ್ರಾಹಕರನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಲಿದ್ದು, ಇದಕ್ಕಾಗಿಯೇ ಮಾರುತಿ ಸುಜುಕಿಯು ರೂ.10 ಲಕ್ಷದೊಳಗಿನ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯ ಬಗೆಗೆ ಹೆಚ್ಚು ತೆಲೆಕೆಡಿಸಿಕೊಳ್ಳದೇ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳ ಮೇಲೆ ಹೆಚ್ಚು ಗಮನಹರಿಸಲು ನಿರ್ಧರಿಸಿದೆ.

More from DriveSpark

Article Published On: Thursday, February 6, 2020, 13:29 [IST]
English summary
Auto Expo 2020: Maruti Vitara Brezza BS6 Petrol Facelift Unveiled. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+