ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾದ ಮಾರುತಿ ಸುಜುಕಿ ವಿಟಾರಾ ಬ್ರೆಝಾ

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಭರ್ಜರಿ ಯಶಸ್ಸು ಕಂಡಿರುವ ಮಾರುತಿ ಸುಜುಕಿ ಬ್ರೆಝಾ ಆವೃತ್ತಿಯು ಅತಿ ಕಡಿಮೆ ಅವಧಿಯಲ್ಲಿ ದಾಖಲೆ ಪ್ರಮಾಣದ ಮಾರಾಟ ದಾಖಲೆ ಕಂಡಿದ್ದು, ಬಿಡುಗಡೆಯಾದ 55 ತಿಂಗಳ ಅವಧಿಯಲ್ಲಿ 5.50 ಲಕ್ಷ ಯುನಿಟ್ ಮಾರಾಟವಾಗಿವೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾದ ಬ್ರೆಝಾ

ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮಾರುತಿ ಸುಜುಕಿ ಬ್ರೆಝಾ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಕೂಡಾ ಒಂದಾಗಿದ್ದು, ಬಿಡುಗಡೆಯಾದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ದಾಖಲೆ ಪ್ರಮಾಣದಲ್ಲಿ ಮಾರಾಟಗೊಳ್ಳುವ ಮೂಲಕ ಅಗ್ರಸ್ಥಾನಕ್ಕೇರಿದೆ. 2016ರ ಮಾರ್ಚ್ 8ರಂದು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದ ವಿಟಾರಾ ಬ್ರೆಝಾ ಕಾರು ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಯೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಪ್ರತಿ ತಿಂಗಳು ಸರಾಸರಿ 13 ಸಾವಿರದಿಂದ 15 ಸಾವಿರ ಯುನಿಟ್ ಮಾರಾಟಗೊಳ್ಳುವ ಮೂಲಕ ಇದೀಗ 5.50 ಲಕ್ಷ ಯುನಿಟ್ ಮಾರಾಟ ಗುರಿತಲುಪಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾದ ಬ್ರೆಝಾ

ಸದ್ಯ ಬಿಎಸ್-6 ಎಮಿಷನ್ ಪ್ರಕಾರ ತನ್ನ ಪ್ರಮುಖ ಕಾರುಗಳ ಮಾರಾಟದಲ್ಲಿ ಹಲವಾರು ಮಹತ್ವದ ಬದಲಾವಣೆಗಳನ್ನು ಪರಿಚಯಿಸಿರುವ ಮಾರುತಿ ಸುಜುಕಿಯು ಬ್ರೆಝಾ ಕಂಪ್ಯಾಕ್ಟ್ ಎಸ್‌ಯುವಿ ಕಾರಿನಲ್ಲಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಹೊಸ ಪೆಟ್ರೋಲ್ ಮಾದರಿಯನ್ನು ಪರಿಚಯಿಸಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾದ ಬ್ರೆಝಾ

ಹೊಸ ಎಮಿಷನ್ ನಿಯಮದಿಂದಾಗಿ ಹಲವು ಕಾರು ಕಂಪನಿಗಳು ವಿವಿಧ ಮಾದರಿಯ ಕಾರುಗಳಲ್ಲಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿದ್ದು, ಮಾರುತಿ ಸುಜುಕಿ ಕೂಡಾ ಬ್ರೆಝಾ ಕಾರಿನಲ್ಲಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ಮಾರಾಟ ಮಾಡುತ್ತಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾದ ಬ್ರೆಝಾ

ಈ ಹಿಂದೆ ನೀಡಲಾಗುತ್ತಿದ್ದ 1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದ ಮಾರುತಿ ಸುಜುಕಿ ನಿರ್ಮಾಣದ ಬಹುತೇಕ ಕಾರುಗಳು ಇದೀಗ ಸ್ಥಗಿತಗೊಂಡಿದ್ದು, ಡೀಸೆಲ್ ಆಯ್ಕೆಯ ಬದಲಾಗಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಆಯ್ಕೆಯನ್ನು ಹೆಚ್ಚಿಸಲಾಗುತ್ತಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾದ ಬ್ರೆಝಾ

ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಬಳಕೆಯಿಂದಾಗಿ ಎಂಜಿನ್ ಸ್ಟಾರ್ಟ್ ಸಂದರ್ಭದಲ್ಲಿ ಎಲೆಕ್ಟ್ರಿಕ್ ಮೋಟಾರ್ ಬಳಕೆಯಾಗಲಿದ್ದು, ಎಂಜಿನ್ ಚಾಲನೆ ನಂತರ ಅದು ಪೆಟ್ರೋಲ್ ಎಂಜಿನ್ ಸಂಪರ್ಕವನ್ನು ಪಡೆದುಕೊಳ್ಳುತ್ತದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾದ ಬ್ರೆಝಾ

ಈ ವೇಳೆ ಎಂಜಿನ್ ಸ್ಟಾರ್ಟ್ ಸಂದರ್ಭದಲ್ಲಿನ ಇಂಧನ ವ್ಯಯ ತಪ್ಪಿಸುವ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವು ಈಗಾಗಲೇ ವಿಟಾರಾ ಬ್ರೆಝಾ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಜೋಡಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮ್ಯಾನುವಲ್ ಮಾದರಿಯಲ್ಲೂ ಹೊಸ ತಂತ್ರಜ್ಞಾನ ಜೋಡಣೆ ಮಾಡಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾದ ಬ್ರೆಝಾ

ಸದ್ಯ ಮಾರುತಿ ಸುಜುಕಿ ನಿರ್ಮಾಣದ ಬಹುತೇಕ ಕಾರುಗಳಲ್ಲಿ SHVS(ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ಬೈ ಸುಜುಕಿ) ತಂತ್ರಜ್ಞಾನವು ಬಳಕೆ ಮಾಡಲಾಗುತ್ತಿದ್ದು, ಆಟೋಮ್ಯಾಟಿಕ್ ಆವೃತ್ತಿಗಳ ನಂತರ ಇದೀಗ ಮ್ಯಾನುವಲ್ ಆವೃತ್ತಿಗಳಲ್ಲೂ ಜೋಡಣೆ ಮಾಡುತ್ತಿರುವುದು ಮಹತ್ವದ ಬದಲಾವಣೆ ಕಾರಣವಾಗಲಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾದ ಬ್ರೆಝಾ

ಹೊಸ ವಿಟಾರಾ ಬ್ರೆಝಾ ಕಾರಿನಲ್ಲಿ ಅಳವಡಿಸಲು ಉದ್ದೇಶಿಸಲಾಗಿರುವ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದಿಂದಾಗಿ ಮೈಲೇಜ್ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆಯಾಗಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್‌ಗೆ 17.03 ಕಿ.ಮೀ ಮೈಲೇಜ್ ನೀಡುತ್ತಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾದ ಬ್ರೆಝಾ

ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಜೋಡಣೆಯ ನಂತರ ಪೆಟ್ರೋಲ್ ಮ್ಯಾನುವಲ್ ಆವೃತ್ತಿಯ ಮೈಲೇಜ್ ಪ್ರಮಾಣದಲ್ಲಿ 18.76ಕಿ.ಮೀ ಹೆಚ್ಚಳವಾಗಲಿದ್ದು, SHVS ಹೈಬ್ರಿಡ್ ತಂತ್ರಜ್ಞಾನವು 12ವಿ ಹೈಬ್ರಿಡ್ ಸಿಸ್ಟಂ ಜೊತೆ 1.76 ಕೆವಿ ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಳ್ಳಲಿದೆ. ಇನ್ನು ಹೊಸ ವಿಟಾರಾ ಬ್ರೆಝಾ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.7.34 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 11.41 ಲಕ್ಷ ಬೆಲೆ ಪಡೆದುಕೊಂಡಿದೆ.

More from DriveSpark

Article Published On: Tuesday, October 6, 2020, 20:58 [IST]
English summary
Maruti Vitara Brezza Sales Milestone. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+