ಕರೋನಾ ವೈರಸ್ ಎಫೆಕ್ಟ್: ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಮರ್ಸಿಡಿಸ್ ಬೆಂಝ್

ಕರೋನಾ ವೈರಸ್ ಹಾವಳಿಯು ವಿಪರೀತವಾಗುತ್ತಿದೆ. ದಿನೇ ದಿನೇ ಕರೋನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಕರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಹೆಚ್ಚಿನ ಆಸ್ಪತ್ರೆಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪುಣೆ ಬಳಿ 1,500 ಹಾಸಿಗೆಗಳ ತಾತ್ಕಾಲಿಕ ಕರೋನಾ ಆಸ್ಪತ್ರೆಯನ್ನು ನಿರ್ಮಿಸುವುದಾಗಿ ಮರ್ಸಿಡಿಸ್ ಬೆಂಝ್ ಹೇಳಿದೆ.

ಕರೋನಾ ವೈರಸ್ ಎಫೆಕ್ಟ್: ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಮರ್ಸಿಡಿಸ್ ಬೆಂಝ್

ಜರ್ಮನಿ ಮೂಲದ ಮರ್ಸಿಡಿಸ್ ಬೆಂಝ್ ಕಂಪನಿಯು ಭಾರತದ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ. ಮರ್ಸಿಡಿಸ್ ಬೆಂಝ್‌ನ ಕಾರು ಉತ್ಪಾದನಾ ಘಟಕವು ಮಹಾರಾಷ್ಟ್ರದ ಪುಣೆಯ ಬಳಿಯ ಸಹನ್ ಪ್ರದೇಶದಲ್ಲಿದೆ. ಕರೋನಾ ವೈರಸ್ ಹರಡುವುದನ್ನು ತಡೆಯುವ ಪ್ರಯತ್ನಗಳಿಗೆ ಕಾರು ಕಂಪನಿಗಳು ಹೆಚ್ಚು ಬೆಂಬಲ ನೀಡುತ್ತಿವೆ.

ಕರೋನಾ ವೈರಸ್ ಎಫೆಕ್ಟ್: ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಮರ್ಸಿಡಿಸ್ ಬೆಂಝ್

ಈ ನಿಟ್ಟಿನಲ್ಲಿ, ಮರ್ಸಿಡಿಸ್ ಬೆಂಝ್ ಕಂಪನಿಯು ಇಂದು ಪ್ರಮುಖ ಘೋಷಣೆ ಮಾಡಿದೆ. ವರದಿಗಳ ಪ್ರಕಾರ, ಸಹನ್ ಕೆತ್ ಪ್ರದೇಶದ ಮಲಂಚ್ ಇಂಕಲೆ ಗ್ರಾಮದಲ್ಲಿ ಕರೋನಾ ವೈರಸ್ ಸೋಂಕಿತ ಜನರಿಗೆ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ.

ಕರೋನಾ ವೈರಸ್ ಎಫೆಕ್ಟ್: ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಮರ್ಸಿಡಿಸ್ ಬೆಂಝ್

ಈ ಪ್ರದೇಶದ ಸ್ಥಳೀಯ ಸರ್ಕಾರಿ ಅಧಿಕಾರಿಗಳ ಸಹಕಾರದೊಂದಿಗೆ ಹೊಸ ಕರೋನಾ ಆಸ್ಪತ್ರೆಯನ್ನು ನಿರ್ಮಿಸಲಾಗುವುದು. ಆಸ್ಪತ್ರೆಯು 1,500 ಹಾಸಿಗೆಗಳ ಸೌಲಭ್ಯವನ್ನು ಹೊಂದಿರಲಿದೆ. ಮಹಾರಾಷ್ಟ್ರ ವಸತಿ ಮಂಡಳಿ ಅಭಿವೃದ್ಧಿ ಸಂಕೀರ್ಣದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕಟ್ಟಡದಲ್ಲಿ ಆಸ್ಪತ್ರೆಯನ್ನು ನಿರ್ಮಿಸಲಾಗುವುದು.

ಕರೋನಾ ವೈರಸ್ ಎಫೆಕ್ಟ್: ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಮರ್ಸಿಡಿಸ್ ಬೆಂಝ್

ಈ ಕಟ್ಟಡದಲ್ಲಿ 374 ಕೊಠಡಿಗಳಿವೆ. ಕರೋನಾ ವೈರಸ್ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಬೇಕಾಗುತ್ತದೆ. ಮರ್ಸಿಡಿಸ್ ಬೆಂಝ್ ನಿರ್ಮಿಸುವ ಈ ಆಸ್ಪತ್ರೆಯನ್ನು ಕರೋನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಬಳಸಲಾಗುವುದು.

ಕರೋನಾ ವೈರಸ್ ಎಫೆಕ್ಟ್: ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಮರ್ಸಿಡಿಸ್ ಬೆಂಝ್

ಕರೋನಾ ಆಸ್ಪತ್ರೆಯ ನಿರ್ಮಾಣಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಸಾಗಿಸುವ ವೆಚ್ಚವನ್ನು ಮರ್ಸಿಡಿಸ್ ಬೆಂಝ್ ಪಾವತಿಸಲಿದೆ.

ಕರೋನಾ ವೈರಸ್ ಎಫೆಕ್ಟ್: ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಮರ್ಸಿಡಿಸ್ ಬೆಂಝ್

ಪುಣೆಯ ಗ್ರ್ಯಾಂಡ್ ಮೆಡಿಕಲ್ ಫೌಂಡೇಶನ್ ಅಡಿಯಲ್ಲಿ ಕಾರ್ಯನಿರ್ವಹಿಸುವ ರೂಬಿ ಹಾಲ್ ಕ್ಲಿನಿಕಿಗೆ ಬೇಕಾಗಿರುವ ವೆಂಟಿಲೇಟರ್ ಗಳನ್ನು ನೀಡುವುದಾಗಿ ಮರ್ಸಿಡಿಸ್ ಬೆಂಝ್ ಹೇಳಿದೆ.

ಕರೋನಾ ವೈರಸ್ ಎಫೆಕ್ಟ್: ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಮರ್ಸಿಡಿಸ್ ಬೆಂಝ್

ಕರೋನಾ ವೈರಸ್ ಹಾವಳಿಯು ಸಂಪೂರ್ಣವಾಗಿ ನಿಂತ ನಂತರ ಈ ತಾತ್ಕಾಲಿಕ ಆಸ್ಪತ್ರೆಯಲ್ಲಿರುವ ಎಲ್ಲಾ ವೈದ್ಯಕೀಯ ಉಪಕರಣಗಳನ್ನು ಗೆತ್ ಪ್ರದೇಶದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ನೀಡಲಾಗುವುದು. ಹಾಸಿಗೆ ಹಾಗೂ ಇನ್ನಿತರ ಪೀಠೋಪಕರಣಗಳನ್ನು ವಿದ್ಯಾರ್ಥಿಗಳ ಹಾಸ್ಟೆಲ್ ಗೆ ನೀಡಲಾಗುವುದೆಂದು ವರದಿಯಾಗಿದೆ.

ಕರೋನಾ ವೈರಸ್ ಎಫೆಕ್ಟ್: ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಮರ್ಸಿಡಿಸ್ ಬೆಂಝ್

ಈಗಾಗಲೇ ಮಾರುತಿ ಸುಜುಕಿ ಹಾಗೂ ಮಹೀಂದ್ರಾ ಸೇರಿದಂತೆ ಹಲವು ಕಂಪನಿಗಳು ಕರೋನಾ ರೋಗಿಗಳಿಗೆ ಅಗತ್ಯವಾಗಿರುವ ವೆಂಟಿಲೇಟರ್ ಗಳ ಉತ್ಪಾದನೆಯಲ್ಲಿ ತೊಡಗಿವೆ. ಈಗ ಮರ್ಸಿಡಿಸ್ ಬೆಂಝ್ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲು ಮುಂದಾಗಿದೆ.

More from DriveSpark

Article Published On: Wednesday, April 1, 2020, 18:33 [IST]
English summary
Mercedes Benz India to set up a temporary hospital in Pune. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+