ಅಕ್ಟೋಬರ್‌ನಲ್ಲಿ ಎಂಜಿ ಹೊಸ ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

ಭಾರತದಲ್ಲಿ ಬಿಡುಗಡೆಗಾಗಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿರುವ ಎಂಜಿ ಮೋಟಾರ್ ನಿರ್ಮಾಣದ ಹೊಚ್ಚ ಹೊಸ ಗ್ಲೊಸ್ಟರ್ ಎಸ್‌ಯುವಿ ಕಾರು ಇದೇ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಅಕ್ಟೋಬರ್‌ನಲ್ಲಿ ಎಂಜಿ ಹೊಸ ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

ಕಾರು ಮಾರಾಟದಲ್ಲಿ ಹೊಸ ಬದಲಾವಣೆಗೆ ಕಾರಣವಾಗಿರುವ ಎಂಜಿ ಮೋಟಾರ್ ಸಂಸ್ಥೆಯು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಸುಮಾರು 14 ಹೊಸ ಕಾರು ಮಾದರಿಗಳನ್ನು ಪ್ರದರ್ಶನಗೊಳಿಸುವ ಮೂಲಕ ಹೊಸ ಸಂಚಲನ ಸೃಷ್ಠಿಸಿತ್ತು. ಇದರಲ್ಲಿ ಹೊಸ ವಿನ್ಯಾಸದ ಗ್ಲೊಸ್ಟರ್ ಎಸ್‌ಯುವಿ ಕೂಡಾ ಒಂದಾಗಿದ್ದು, ಫುಲ್ ಸೈಜ್ ಎಸ್‌ಯುವಿ ಮಾದರಿಗಳಿಂತಲೂ ಬಲಿಷ್ಠ ವಿನ್ಯಾಸ ಹೊಂದಿರುವ ಹೊಸ ಕಾರು ಫಾರ್ಚೂನರ್ ಮತ್ತು ಎಂಡೀವರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಅಕ್ಟೋಬರ್‌ನಲ್ಲಿ ಎಂಜಿ ಹೊಸ ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

ಹೊಸ ಗ್ಲೊಸ್ಟರ್ ಕಾರಿನ ಗಾತ್ರವು ಟೊಯೊಟಾ ಐಷಾರಾಮಿ ಕಾರು ಆವೃತ್ತಿಯಾಗಿರುವ ಲ್ಯಾಂಡ್ ಕ್ರೂಸರ್ 200 ಆವೃತ್ತಿಗಿಂತಲೂ ಹೆಚ್ಚಿದ್ದು, ಬರೋಬ್ಬರಿ 5,100 ಎಂಎಂ ಉದ್ದಳತೆ ಹೊಂದಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಅಕ್ಟೋಬರ್‌ನಲ್ಲಿ ಎಂಜಿ ಹೊಸ ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

ಸದ್ಯ ಅನಾವರಣಗೊಂಡಿರುವ ಗ್ಲೊಸ್ಟರ್ ಕಾರು ಚೀನಿ ಮಾರುಕಟ್ಟೆಯಲ್ಲಿ ಮ್ಯಾಕ್ಸಸ್ ಡಿ90 ಹೆಸರಿನೊಂದಿಗೆ ಮಾರಾಟವಾಗುತ್ತಿದ್ದು, ಎಂಜಿ ಮಾತೃಸಂಸ್ಥೆಯಾಗಿರುವ ಸೈಕ್ ಇದೀಗ ಮ್ಯಾಕ್ಸಸ್ ಡಿ90 ಕಾರು ಮಾದರಿಯನ್ನು ಹೊಸ ಹೆಸರಿನೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಅಕ್ಟೋಬರ್‌ನಲ್ಲಿ ಎಂಜಿ ಹೊಸ ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

ಚೀನಿ ಮಾರುಕಟ್ಟೆಯಲ್ಲಿ ಮ್ಯಾಕ್ಸಸ್ ಸಂಸ್ಥೆಯು ಕೂಡಾ ಸೈಕ್ ಸಂಸ್ಥೆಯ ಅಡಿಯಲ್ಲೇ ಕಾರ್ಯನಿರ್ವಹಣೆ ಮಾಡುತ್ತಿದ್ದು, ಭಾರತೀಯ ಗ್ರಾಹಕರ ಬೇಡಿಕೆಗಳನ್ನು ಅರಿತಿರುವ ಸೈಕ್ ಕಂಪನಿಯು ಎಂಜಿ ಬ್ಯಾಡ್ಜ್‌ನೊಂದಿಗೆ ಕೆಲವು ಬದಲಾವಣೆಗಳನ್ನು ಮಾಡಿ ಗ್ಲೊಸ್ಟರ್ ಕಾರನ್ನು ಬಿಡುಗಡೆ ಮಾಡುತ್ತಿದೆ. ಫುಲ್ ಸೈಜ್ ಎಸ್‌ಯುವಿ ಆವೃತ್ತಿಯಾಗಿರುವ ಗ್ಲೊಸ್ಟರ್ ಕಾರು ಇದೇ ವರ್ಷ ಅಕ್ಟೊಬರ್‌ನಲ್ಲಿ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದ್ದು, ಕಾರಿನ ಗಾತ್ರಕ್ಕೆ ತಕ್ಕಂತೆ ಬಲಿಷ್ಠ ಎಂಜಿನ್ ಆಯ್ಕೆಯನ್ನು ಪಡೆದುಕೊಳ್ಳಲಿದೆ.

ಅಕ್ಟೋಬರ್‌ನಲ್ಲಿ ಎಂಜಿ ಹೊಸ ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

ಸದ್ಯ ಮಾರುಕಟ್ಟೆಯಲ್ಲಿರುವ ಮಾಕ್ಸಸ್ ಡಿ90 ಕಾರು 2.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಗ್ಲೊಸ್ಟರ್ ಕಾರು ಕೆಲವು ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಅಕ್ಟೋಬರ್‌ನಲ್ಲಿ ಎಂಜಿ ಹೊಸ ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

ಇದಲ್ಲದೇ ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಲ್ಯಾಡರ್ ಫ್ರೇಮ್ ಚಾರ್ಸಿ ಮೇಲೆ ನಿರ್ಮಾಣವಾಗಿರುವ ಹೊಸ ಕಾರಿನಲ್ಲಿಹಾಗೆಯೇ ಹೊಸ ಕಾರಿನ ಒಳಭಾಗದಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿದ್ದು, ಸಂಜ್ಞೆ ಮೂಲಕ ನಿಯಂತ್ರಣ ಮಾಡಬಹುದಾದ ಡ್ಯಾಶ್‌ಬೋರ್ಡ್ ಮತ್ತು ಟೈಲ್‌ಗೆಟ್, ಆ್ಯಂಬಿಯೆಂಟ್ ಲೈಟಿಂಗ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೊಲ್, 8-ಇಂಚಿನ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, 12.3-ಇಂಚಿನ ಟಚ್ ‌ಸ್ಕ್ರೀನ್ ಇನ್ಪೊಟೈನ್‌ಮೆಂಟ್ ಸಿಸ್ಟಂ, ವೆಂಟಿಲೆಟೆಡ್ ಲೆದರ್ ಸೀಟುಗಳು, ಹಿಟೆಡ್ ವಿಂಗ್ ಮಿರರ್, ಪನೊರಮಿಕ್ ಸನ್‌ರೂಫ್ ಮತ್ತು ಕ್ವಾಡ್ ಎಕ್ಸಾಸ್ಟ್ ಸಿಸ್ಟಂ ಪಡೆದುಕೊಂಡಿದೆ.

ಅಕ್ಟೋಬರ್‌ನಲ್ಲಿ ಎಂಜಿ ಹೊಸ ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

7 ಸೀಟರ್ ಸೌಲಭ್ಯ ಹೊಂದಿರುವ ಹೊಸ ಗ್ಲೊಸ್ಟರ್ ಕಾರಿನಲ್ಲಿ 2+2+3 ಮಾದರಿಯಲ್ಲಿ ಸೌಲಭ್ಯವನ್ನು ಜೋಡಿಸಲಾಗಿದ್ದು, ಮಧ್ಯದಲ್ಲಿರುವ ಕ್ಯಾಪ್ಟನ್ ಆಸನದಲ್ಲಿ ಹಲವಾರು ಕಾರ್ ಕನೆಕ್ಟೆಡ್ ಸೌಲಭ್ಯಗಳೊಂದಿಗೆ ಅರಾಮಾದಾಯಕ ಪ್ರಯಾಣಕ್ಕಾಗಿ ಮಸಾಜ್ ಫೀಚರ್ಸ್ ನೀಡಲಾಗಿದೆ.

MOST READ: ಲಾಕ್‌ಡೌನ್‌ನಿಂದ ಸಂಕಷ್ಟ: ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5,000..!

ಅಕ್ಟೋಬರ್‌ನಲ್ಲಿ ಎಂಜಿ ಹೊಸ ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆ ಪಕ್ಕಾ..!

ಅಂದಾಜು ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಮಾಹಿತಿಗಳ ಪ್ರಕಾರ, ಗ್ಲೊಸ್ಟರ್ ಎಸ್‌ಯುವಿ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.30 ಲಕ್ಷದಿಂದ ರೂ.35 ಲಕ್ಷ ಬೆಲೆ ಅಂತರದೊಂದಿಗೆ ಬಿಡುಗಡೆಯಾಗುವ ನೀರಿಕ್ಷೆಯಿದ್ದು, ಫಾರ್ಚೂನರ್ ಮತ್ತು ಎಂಡೀವರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Article Published On: Wednesday, April 22, 2020, 20:57 [IST]
English summary
MG Gloster India Launch To Take Place As Scheduled In October. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+