ಫಾರ್ಚೂನರ್‌ಗಿಂತ ಪ್ರೀಮಿಯಂ ಮತ್ತು ದುಬಾರಿ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಎಂಜಿ ಗ್ಲೊಸ್ಟರ್

ಎಂಜಿ ಮೋಟಾರ್ ಕಂಪನಿಯು ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೂ ಮುನ್ನ ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾಗಿ ಒಂದೊಂದೆ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದು, ಹೊಸ ಕಾರಿನಲ್ಲಿರುವ ಫೀಚರ್ಸ್‌ಗಳು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಉನ್ನತ ಮಟ್ಟದಲ್ಲಿವೆ.

 ಪ್ರೀಮಿಯಂ ಮತ್ತು ದುಬಾರಿ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಗ್ಲೊಸ್ಟರ್

ಗ್ಲೊಸ್ಟರ್ ಎಸ್‌ಯುವಿ ಕಾರು ಮಾದರಿಯನ್ನು ಹೊಸ ತಲೆಮಾರಿನ ಆಟೋ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಅಭಿವೃದ್ದಿಗೊಳಿಸುತ್ತಿರುವ ಎಂಜಿ ಮೋಟಾರ್ ಕಂಪನಿಯು ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, ಶೀಘ್ರದಲ್ಲೇ ಉತ್ಪಾದನಾ ಆವೃತ್ತಿ ಅನಾವರಣಗೊಳಿಸುವ ನೀರಿಕ್ಷೆಯಿದೆ. ರೋಡ್ ಟೆಸ್ಟಿಂಗ್ ವೇಳೆ ಹೊಸ ಕಾರಿನ ಪ್ರಮುಖ ತಾಂತ್ರಿಕ ಅಂಶಗಳು ಬಹಿರಂಗವಾಗಿದ್ದು, ಆಟೋ ಪಾರ್ಕ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಫ್ಯಾಟಿಗ್ಯೂ ರಿಮೆಂಡರ್ ಸಿಸ್ಟಂ ನಂತಹ ಸೌಲಭ್ಯಗಳನ್ನು ಹೊಂದಿದೆ.

 ಪ್ರೀಮಿಯಂ ಮತ್ತು ದುಬಾರಿ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಗ್ಲೊಸ್ಟರ್

ಎಂಜಿ ನಿರ್ಮಾಣದ ಫ್ಯಾಟಿಗ್ಯೂ ರಿಮೆಂಡರ್ ಸಿಸ್ಟಂ ಸೌಲಭ್ಯವು ಚಾಲಕನಿಗೆ ಸಮಯಕ್ಕೆ ಸರಿಯಾಗಿ ವಿಶ್ರಾಂತಿ ಸೂಚನೆ ನೀಡಲಿದ್ದು, ಕಾರು ಚಾಲನೆಯ ಆಧಾರದ ಮೇಲೆ ಚಾಲಕನಿಗೆ ಮಹತ್ವದ ಸೂಚನೆ ನೀಡುವಂತಹ ತಂತ್ರಜ್ಞಾನ ಇದಾಗಿದೆ.

 ಪ್ರೀಮಿಯಂ ಮತ್ತು ದುಬಾರಿ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಗ್ಲೊಸ್ಟರ್

ಜೊತೆಗೆ ಆಟೋ ಪಾರ್ಕ್ ಅಸಿಸ್ಟ್ ಸೌಲಭ್ಯದ ನಂತರ ಹೊಸ ಕಾರಿನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೌಲಭ್ಯವನ್ನು ಸಹ ನೀಡುತ್ತಿರುವುದಾಗಿ ಖಚಿತಪಡಿಸಿರುವ ಎಂಜಿ ಮೋಟಾರ್ ಕಂಪನಿಯು ಕಾರು ಚಾಲನೆಯನ್ನು ಮತ್ತಷ್ಟು ಸುರಕ್ಷಿತವಾಗಿರಿಸಲಿದೆ.

 ಪ್ರೀಮಿಯಂ ಮತ್ತು ದುಬಾರಿ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಗ್ಲೊಸ್ಟರ್

ಈ ಮೂಲಕ ಅಪಾಯದ ಮುನ್ಸೂಚನೆಯನ್ನು ನೀಡುವ ಹೊಸ ಸುರಕ್ಷಾ ಸೌಲಭ್ಯಗಳು ಚಾಲನೆ ವೇಳೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಸಾಕಷ್ಟು ಸಹಕಾರಿಯಾಗಿದ್ದು, ಹೊಸ ಗ್ಲೊಸ್ಟರ್ ಕಾರು ಮುಂಬರುವ ಅಕ್ಟೋಬರ್‌ ಕೊನೆಯಲ್ಲಿ ಅಥವಾ ನವೆಂಬರ್ ಆರಂಭದಲ್ಲಿ ಗ್ಲೊಸ್ಟರ್ ಕಾರು ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

 ಪ್ರೀಮಿಯಂ ಮತ್ತು ದುಬಾರಿ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಗ್ಲೊಸ್ಟರ್

ಹೆಕ್ಟರ್, ಜೆಡ್ಎಸ್ ಎಲೆಕ್ಟ್ರಿಕ್ ಮತ್ತು ಹೆಕ್ಟರ್ ಪ್ಲಸ್ ನಂತರ ಬಿಡುಗಡೆಯಾಗುತ್ತಿರುವ ಗ್ಲೊಸ್ಟರ್ ಕಾರು ಮೊದಲ ಮೂರು ಕಾರುಗಳಿಂತಲೂ ಐಷಾರಾಮಿ ಫೀಚರ್ಸ್‌ನೊಂದಿಗೆ ದುಬಾರಿ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಅಡ್ವಾನ್ಸ್ 4x4 ಡ್ರೈವ್ ಸಿಸ್ಟಂ, ಬೂಟ್ ಲಿಡ್ ತೆರೆಯಲು ಲೆಗ್ ಸ್ವೈಪ್ ಸೌಲಭ್ಯಗಳ ಜೋಡಣೆ ಹೊಂದಿರಲಿದೆ.

 ಪ್ರೀಮಿಯಂ ಮತ್ತು ದುಬಾರಿ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಗ್ಲೊಸ್ಟರ್

ಜೊತೆಗೆ ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಲ್ಯಾಡರ್ ಫ್ರೇಮ್ ಚಾರ್ಸಿ ಮೇಲೆ ನಿರ್ಮಾಣವಾಗಿರುವ ಹೊಸ ಕಾರಿನಲ್ಲಿ ಸಂಜ್ಞೆ ಮೂಲಕ ನಿಯಂತ್ರಣ ಮಾಡಬಹುದಾದ ಡ್ಯಾಶ್‌ಬೋರ್ಡ್ ಮತ್ತು ಟೈಲ್‌ಗೆಟ್, ಆ್ಯಂಬಿಯೆಂಟ್ ಲೈಟಿಂಗ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೊಲ್, 8-ಇಂಚಿನ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, 12.3-ಇಂಚಿನ ಟಚ್ ‌ಸ್ಕ್ರೀನ್ ಇನ್ಪೊಟೈನ್‌ಮೆಂಟ್ ಸಿಸ್ಟಂ ನೀಡಲಾಗಿದೆ.

 ಪ್ರೀಮಿಯಂ ಮತ್ತು ದುಬಾರಿ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಗ್ಲೊಸ್ಟರ್

ಹಾಗೆಯೇ ವೆಂಟಿಲೆಟೆಡ್ ಲೆದರ್ ಸೀಟುಗಳು, ಹಿಟೆಡ್ ವಿಂಗ್ ಮಿರರ್, ಪನೊರಮಿಕ್ ಸನ್‌ರೂಫ್, 64 ಬಣ್ಣಗಳ ಆ್ಯಂಬಿಯೆಂಟ್ ಲೈಟಿಂಗ್ಸ್, 12-ಸ್ಪೀಕರ್ಸ್, ಕ್ವಾಡ್ ಎಕ್ಸಾಸ್ಟ್ ಸಿಸ್ಟಂ ಮತ್ತು 19-ಇಂಚಿನ ಅಲಾಯ್ ವೀಲ್ಹ್ ಪಡೆದುಕೊಂಡಿದ್ದು, ಸ್ನೋ, ಸ್ಯಾಂಡ್, ಇಕೋ, ರಾಕ್ ಮತ್ತು ಸ್ಪೋರ್ಟ್ ಡ್ರೈವಿಂಗ್ ಮೋಡ್ ಹೊಂದಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

 ಪ್ರೀಮಿಯಂ ಮತ್ತು ದುಬಾರಿ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಗ್ಲೊಸ್ಟರ್

6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿರುವ ಹೊಸ ಗ್ಲೊಸ್ಟರ್ ಕಾರಿನಲ್ಲಿ 2+2+2 ಮತ್ತು 2+2+3 ಮಾದರಿಯಲ್ಲಿ ಆಸನ ಸೌಲಭ್ಯವನ್ನು ಜೋಡಿಸಲಾಗಿದ್ದು, 5,100-ಎಂಎಂ ಉದ್ದ, 1,932-ಎಂಎಂ ಅಗಲ, 1,875-ಎಂಎಂ ಎತ್ತರ, 2,950-ಎಂಎಂ ವೀಲ್ಹ್ ಬೆಸ್ ಹೊಂದಿರುವ ಹೊಸ ಕಾರು ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟ್ ಪಡೆದುಕೊಂಡಿದೆ.

 ಪ್ರೀಮಿಯಂ ಮತ್ತು ದುಬಾರಿ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಗ್ಲೊಸ್ಟರ್

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಗ್ಲೊಸ್ಟರ್ ಎಸ್‌ಯುವಿ ಮಾದರಿಯು ಜೆಡ್ಎಫ್ ನಿರ್ಮಾಣದ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 2.0-ಲೀಟರ್ ಟ್ವಿನ್ ಟರ್ಬೋ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಹೊಸ ಎಂಜಿನ್ ಮಾದರಿಯು 215-ಬಿಎಚ್‌ಪಿ, 480-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾದರಿಯಲ್ಲೇ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿದ್ದು, ಹೊಸ ಕಾರಿನಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆ ನೀಡುತ್ತಿಲ್ಲ ಎನ್ನಲಾಗಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

 ಪ್ರೀಮಿಯಂ ಮತ್ತು ದುಬಾರಿ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಗ್ಲೊಸ್ಟರ್

ಈ ಮೂಲಕ ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡಿವರ್ ಕಾರು ಮಾದರಿಗಳಿಗೆ ಅತ್ಯುತ್ತಮ ಪೈಪೋಟಿ ನೀಡಲಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.35 ಲಕ್ಷದಿಂದ ರೂ.40 ಲಕ್ಷ ಬೆಲೆ ಅಂತರದೊಂದಿಗೆ ಬಿಡುಗಡೆಯಾಗುವ ನೀರಿಕ್ಷೆಯಿದೆ.

More from DriveSpark

Article Published On: Thursday, September 17, 2020, 8:45 [IST]
English summary
MG Gloster Price Expectations & New Features Revealed. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+