ಬಿಡುಗಡೆಗೆ ಸಿದ್ದವಾಗಿದೆ ಎಂಜಿ ಹೆಕ್ಟರ್ ಪ್ಲಸ್ 7 ಸೀಟರ್ ವರ್ಷನ್

ಎಂಜಿ ಮೋಟಾರ್ ಕಂಪನಿಯು ಕಳೆದ ತಿಂಗಳ ಹಿಂದಷ್ಟೇ ಹೆಕ್ಟರ್ ಪ್ಲಸ್ 6 ಸೀಟರ್ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆ ಮಾಡಿದ್ದು, ಇದೀಗ ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ 7ಸೀಟರ್ ಮಾದರಿಯನ್ನು ಸಹ ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದೆ.

ಬಿಡುಗಡೆಗೆ ಸಿದ್ದವಾಗಿದೆ ಎಂಜಿ ಹೆಕ್ಟರ್ ಪ್ಲಸ್ 7 ಸೀಟರ್ ವರ್ಷನ್

6 ಸೀಟರ್ ಮಾದರಿಯಲ್ಲೇ ಬಹುತೇಕ ತಾಂತ್ರಿಕ ಅಂಶಗಳನ್ನು ಹೊಂದಲಿರುವ 7 ಸೀಟರ್ ಹೆಕ್ಟರ್ ಪ್ಲಸ್ ಎಸ್‌ಯುವಿ ಮಾದರಿಯು ಮಧ್ಯದ ಸಾಲಿನಲ್ಲಿ ಒಂದು ಹೆಚ್ಚುವರಿ ಆಸನವನ್ನು ಪಡೆದುಕೊಳ್ಳಲಿದ್ದು, 6 ಸೀಟರ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವಂತೆ ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟ್ ಆಯ್ಕೆಯನ್ನು ಹೊಂದಿರಲಿದೆ. 7 ಸೀಟರ್ ಮಾದರಿಯು ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿರುವ ಟೊಯೊಟಾ ಇನೋವಾ ಕ್ರಿಸ್ಟಾ ಎಂಪಿವಿ ಮಾದರಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಹೊಸ ಕಾರು ಬೆಲೆ ವಿಚಾರವಾಗಿ ಗ್ರಾಹಕರ ಆಕರ್ಷಣೆಗೆ ಕಾರಣವಾಗಲಿದೆ.

ಬಿಡುಗಡೆಗೆ ಸಿದ್ದವಾಗಿದೆ ಎಂಜಿ ಹೆಕ್ಟರ್ ಪ್ಲಸ್ 7 ಸೀಟರ್ ವರ್ಷನ್

ಇನ್ನು 6 ಸೀಟರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ.19.04 ಲಕ್ಷ ಬೆಲೆ ಹೊಂದಿದೆ.

ಬಿಡುಗಡೆಗೆ ಸಿದ್ದವಾಗಿದೆ ಎಂಜಿ ಹೆಕ್ಟರ್ ಪ್ಲಸ್ 7 ಸೀಟರ್ ವರ್ಷನ್

ಹೊಸ ಕಾರು ಗ್ರಾಹಕರ ಬೇಡಿಕೆ ಅನ್ವಯ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾದರಿಗಳಲ್ಲದೆ ಎಂಪಿವಿ ಕಾರು ಮಾದರಿಗಳಿಗೂ ಪೈಪೋಟಿ ನೀಡುತ್ತಿದೆ.

ಬಿಡುಗಡೆಗೆ ಸಿದ್ದವಾಗಿದೆ ಎಂಜಿ ಹೆಕ್ಟರ್ ಪ್ಲಸ್ 7 ಸೀಟರ್ ವರ್ಷನ್

ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಒಟ್ಟು 8 ವೆರಿಯೆಂಟ್‌ಗಳನ್ನು ಪಡೆದುಕೊಂಡಿದ್ದು, ಪೆಟ್ರೋಲ್ ಮಾದರಿಯಲ್ಲಿ ಮೂರು ವೆರಿಯೆಂಟ್, ಪೆಟ್ರೋಲ್ ಹೈಬ್ರಿಡ್ ಮಾದರಿಯಲ್ಲಿ ಒಂದು ವೆರಿಯೆಂಟ್ ಹೊಂದಿದೆ. ಹಾಗೆಯೇ ಡೀಸೆಲ್ ವೆರಿಯೆಂಟ್‌ನಲ್ಲಿ ನಾಲ್ಕು ವೆರಿಯೆಂಟ್‌ಗಳನ್ನು ಪಡೆದುಕೊಂಡಿದ್ದು, ಸಾಮಾನ್ಯ ಹೆಕ್ಟರ್ ಕಾರಿಗೂ ಹೆಕ್ಟರ್ ಪ್ಲಸ್ ಕಾರು ರೂ.1.15 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಬಿಡುಗಡೆಗೆ ಸಿದ್ದವಾಗಿದೆ ಎಂಜಿ ಹೆಕ್ಟರ್ ಪ್ಲಸ್ 7 ಸೀಟರ್ ವರ್ಷನ್

ಹೊಸ ಕಾರಿನ ಮಧ್ಯದ ಸಾಲಿನಲ್ಲಿರುವ ಕ್ಯಾಪ್ಟನ್ ಸೀಟ್ ಕಾರಿನ ಪ್ರಮುಖ ಆಕರ್ಷಣೆಯಾಗಿದ್ದು, ಬ್ರೌನ್ ಲೆದರ್ ಆಸನವು ಹೆಡ್ ರೆಸ್ಟ್ ಮತ್ತು ಸೆಂಟರ್ ಆರ್ಮ್ ರೆಸ್ಟ್ ಫೀಚರ್ಸ್ ಪಡೆದುಕೊಂಡಿದೆ. ಜೊತೆಗೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಬಿಡುಗಡೆಗೆ ಸಿದ್ದವಾಗಿದೆ ಎಂಜಿ ಹೆಕ್ಟರ್ ಪ್ಲಸ್ 7 ಸೀಟರ್ ವರ್ಷನ್

ಎಂಜಿನ್ ಸಾಮಾರ್ಥ್ಯ

ಸಾಮಾನ್ಯ ಮಾದರಿಯ 5 ಆಸನವುಳ್ಳ ಹೆಕ್ಟರ್ ಕಾರಿನಲ್ಲಿ ನೀಡಲಾಗಿರುವ ಎಂಜಿನ್ ಮಾದರಿಯೇ ಇದೀಗ ಹೊಸ ಹೆಕ್ಟರ್ ಪ್ಲಸ್‌ನಲ್ಲೂ ನೀಡಲಾಗಿದ್ದು, 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಜೋಡಣೆ ಮಾಡಲಾಗಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಬಿಡುಗಡೆಗೆ ಸಿದ್ದವಾಗಿದೆ ಎಂಜಿ ಹೆಕ್ಟರ್ ಪ್ಲಸ್ 7 ಸೀಟರ್ ವರ್ಷನ್

2.0-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 170-ಬಿಎಚ್‌ಪಿ ಉತ್ಪಾದನೆ ಮಾಡಲಿದ್ದರೆ 1.5-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 143-ಬಿಎಚ್‌ಪಿ ಮತ್ತು ಹೈಬ್ರಿಡ್ ಮಾದರಿಯು 1.5-ಲೀಟರ್ ಪೆಟ್ರೋಲ್ ಎಂಜಿನ್ 48ವೋಲ್ಟ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಉತ್ತಮ ಇಂಧನ ಕಾರ್ಯಕ್ಷಮತೆ ಹೊಂದಿದೆ.

More from DriveSpark

Article Published On: Friday, August 21, 2020, 19:18 [IST]
English summary
MG Hector Plus 7 Seater Spied Testing. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+