ಬಹುನೀರಿಕ್ಷಿತ ಹೆಕ್ಟರ್ ಪ್ಲಸ್ ಕಾರು ಉತ್ಪಾದನೆಯನ್ನು ಆರಂಭಿಸಿದ ಎಂಜಿ ಮೋಟಾರ್
ಎಂಜಿ ಮೋಟಾರ್ ಕಂಪನಿಯು ಮುಂದಿನ ತಿಂಗಳು 7 ಸೀಟರ್ ಎಸ್‌ಯುವಿ ಮಾದರಿಯಾದ ಹೆಕ್ಟರ್ ಪ್ಲಸ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಉತ್ಪಾದನಾ ಆವೃತ್ತಿಯನ್ನು ಬಹಿರಂಗಪಡಿಸಿದೆ.

ಗುಜರಾತ್‌ನಲ್ಲಿರುವ ಹೊಲಾಲ್ ಕಾರು ಉತ್ಪಾದನಾ ಘಟಕದಲ್ಲಿ ಹೆಕ್ಟರ್ ಪ್ಲಸ್ ಕಾರು ಉತ್ಪಾದನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಉತ್ಪಾದನಾ ಆವೃತ್ತಿಯು ಬಹುತೇಕ ಪ್ರದರ್ಶನ ಮಾದರಿಯಲ್ಲಿರುವಂತೆಯೇ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ. ಹೆಕ್ಟರ್ ಪ್ಲಸ್ ಕಾರು ಹೆಕ್ಟರ್ ಮತ್ತು ಜೆಡ್ಎಸ್ ಎಲೆಕ್ಟ್ರಿಕ್ ನಂತರ ಮೂರನೇ ಕಾರು ಮಾದರಿಯಾಗಿದ್ದು, ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ಕಾರು ಮಾರಾಟ ಆರಂಭಿಸಿದ ಒಂದನೇ ವರ್ಷಾಚರಣೆಯ ಸಂಭ್ರಮಕ್ಕಾಗಿ ಹೆಕ್ಟರ್ ಪ್ಲಸ್ ಬಿಡುಗಡೆ ಮಾಡುತ್ತಿದೆ.

ಸಾಮಾನ್ಯ ಹೆಕ್ಟರ್ ಕಾರು ಮಾದರಿಗಿಂತಲೂ ವಿಭಿನ್ನ ತಂತ್ರಜ್ಞಾನ ಸೌಲಭ್ಯಗಳನ್ನು ಪಡೆದುಕೊಂಡಿರುವ ಹೆಕ್ಟರ್ ಪ್ಲಸ್ ಎಸ್‌ಯುವಿ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಅಥವಾ 7 ಸೀಟರ್ ಆವೃತ್ತಿಯಲ್ಲಿ ಖರೀದಿಗೆ ಲಭ್ಯವಿರಲಿದೆ.

5 ಸೀಟರ್ ಹೆಕ್ಟರ್ ಕಾರಿನ ಉತ್ಪಾದನಾ ಪ್ಲಾಟ್‌ಫಾರ್ಮ್ ಅಡಿಯಲ್ಲೇ ಹೊಸ ಆವೃತ್ತಿಯನ್ನು ಪರಿಚಯಿಸುತ್ತಿರುವ ಎಂಜಿ ಕಂಪನಿಯು ಹೆಕ್ಟರ್ ಪ್ಲಸ್ ಮೂಲಕ 7 ಸೀಟರ್ ಎಸ್‌ಯುವಿ ಖರೀದಿದಾರರನ್ನು ಸೆಳೆಯಲು ಮುಂದಾಗಿದ್ದು, ಪ್ರತಿಸ್ಪರ್ಧಿ ಕಾರುಗಳಿಂತಲೂ ಇದು ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ.

ಎಂಜಿನ್ ಸಾಮರ್ಥ್ಯ
ಸದ್ಯ ಮಾರುಕಟ್ಟೆಯಲ್ಲಿರುವ 5 ಸೀಟರ್ ಹೆಕ್ಟರ್ ಕಾರು 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 7 ಸೀಟರ್ ಹೆಕ್ಟರ್ ಪ್ಲಸ್ ಕಾರು ಕೂಡಾ ಸಾಮಾನ್ಯ ಕಾರಿನಂತೆಯೇ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ.
MOST READ: ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ದೊರೆಯಲಿದೆ 5 ಲಕ್ಷ ಸಬ್ಸಿಡಿ

ಈ ಮೂಲಕ ಮತ್ತಷ್ಟು ಎಸ್‌ಯುವಿ ಕಾರು ಖರೀದಿದಾರರನ್ನು ಸೆಳೆಯಲಿರುವ ಎಂಜಿ ಮೋಟಾರ್ ಕಂಪನಿಯು ಟಾಟಾ ಬಹುನೀರಿಕ್ಷಿತ ಗ್ರಾವಿಟಾಸ್ ಎಸ್‌ಯುವಿ ಜೊತೆಗೆ ಟೊಯೊಟಾ ಇನೋವಾ ಕ್ರಿಸ್ಟಾ ಆವೃತ್ತಿಗೂ ಪೈಪೋಟಿ ನೀಡಲಿದ್ದು, ಸಾಮಾನ್ಯ ಹೆಕ್ಟರ್ ಕಾರಿಗಿಂತಲೂ ತುಸು ದುಬಾರಿಯಾಗಲಿದೆ.

ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಸೌಲಭ್ಯಗಳಿದ್ದು, ಹೊಸ ಮಾದರಿಯ ಹೆಡ್‌ಲ್ಯಾಂಪ್, ಹೊಲೊಜೆನ್ ಫ್ರಂಟ್ ಗ್ರಿಲ್, ಫ್ರಂಟ್ ಮತ್ತು ರಿಯರ್ ಬಂಪರ್, ಹೊಸ ವಿನ್ಯಾಸದ ರಿಯರ್ ಟೈಲ್ ಲೈಟ್, ಸ್ಕೀಡ್ ಪ್ಲೇಟ್ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ವಿವಿಧ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದೆ.
MOST READ: ಲಾಕ್‌ಡೌನ್ ವಿನಾಯ್ತಿ ನಂತರ ಕರ್ನಾಟಕದಲ್ಲೇ ಅತಿ ಹೆಚ್ಚು ಕಾರು ಮಾರಾಟ ದಾಖಲು

ಸದ್ಯ ಸಾಮಾನ್ಯ ಹೆಕ್ಟರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.74 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.44 ಲಕ್ಷ ಬೆಲೆ ಹೊಂದಿದ್ದು, ಹೆಕ್ಟರ್ ಪ್ಲಸ್ ಮಾದರಿಯು ಸಾಮಾನ್ಯ ಕಾರಿಗಿಂತಲೂ ರೂ. 1.50 ಲಕ್ಷದಿಂದ ರೂ.2 ಲಕ್ಷ ಹೆಚ್ಚುವರಿ ಬೆಲೆ ಹೊಂದಿರಲಿದೆ.


Click it and Unblock the Notifications