ಕರೋನಾ ಭೀತಿ ಹಿನ್ನಲೆಯಲ್ಲಿ ಹೊಸ ಮಾರಾಟ ವ್ಯವಸ್ಥೆಯನ್ನ ಪರಿಚಯಿಸಿದ ಎಂಜಿ ಮೋಟಾರ್

ವಿಶ್ವಾದ್ಯಂತ ಕರೋನಾ ವೈರಸ್ ಅಟ್ಟಹಾಸ ಮುಂದುವರಿದ್ದು, ವೈರಸ್‌ನಿಂದಾಗಿ ಇದುವರೆಗೆ ಸುಮಾರು 14 ಸಾವಿರ ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ಜಗತ್ತಿನ ಎಲ್ಲಾ ಪ್ರಮುಖ ರಾಷ್ಟ್ರಗಳು ಹಲವು ಕಠಿಣ ಕ್ರಮಗಳೊಂದಿಗೆ ವೈರಸ್ ಹರಡುವಿಕೆಯನ್ನು ತಡೆಯಲು ಶ್ರಮಿಸುತ್ತಿದ್ದು, ಆರ್ಥಿಕವಾಗಿ ಸಂಕಷ್ಟಕ್ಕಿಡಾಗಿರುವ ಕಂಪನಿಗಳು ಇದೀಗ ತಮ್ಮ ವಾಣಿಜ್ಯ ಚಟುವಟಿಕೆಗಳನ್ನು ಮುಂದುವರಿಸಲು ಹೊಸ ಉಪಾಯಗಳನ್ನು ಕಂಡುಕೊಳ್ಳುತ್ತಿವೆ.

ಕರೋನಾ ಭೀತಿ ಹಿನ್ನಲೆಯಲ್ಲಿ ಹೊಸ ಮಾರಾಟ ವ್ಯವಸ್ಥೆಯನ್ನ ಪರಿಚಯಿಸಿದ ಎಂಜಿ ಮೋಟಾರ್

ಭಾರತದಲ್ಲಿ ಶೇ.80 ರಷ್ಟು ಸಾಫ್ಟ್‌ವೇರ್ ಕಂಪನಿಗಳು ಈಗಾಗಲೇ ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕಾರ್ಯನಿರ್ವಹಿಸುವ ಆಯ್ಕೆ ನೀಡಿದ್ದು, ಸರಕು ಉತ್ಪಾದನಾ ವಲಯದಲ್ಲಿರುವ ಉದ್ಯೋಗಿಗಳಿಗೆ ಇಂತಹ ಆಯ್ಕೆಯನ್ನು ನೀಡಲು ಸಾಧ್ಯವಿಲ್ಲ. ಹೀಗಾಗಿ ಕೆಲವು ಕಂಪನಿಗಳು ಉತ್ಪಾದನಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದರೆ ಇನ್ನು ಕೆಲವು ಕಂಪನಿಗಳು ಕನಿಷ್ಠ ಪ್ರಮಾಣದ ಉದ್ಯೋಗಿಗಳೊಂದಿಗೆ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ಪಾದನಾ ಪ್ರಕ್ರಿಯೆಯನ್ನು ಮುಂದುವರಿಸಿವೆ.

ಕರೋನಾ ಭೀತಿ ಹಿನ್ನಲೆಯಲ್ಲಿ ಹೊಸ ಮಾರಾಟ ವ್ಯವಸ್ಥೆಯನ್ನ ಪರಿಚಯಿಸಿದ ಎಂಜಿ ಮೋಟಾರ್

ಈ ನಿಟ್ಟಿನಲ್ಲಿ ಹೊಸ ತಂತ್ರ ರೂಪಿಸಿರುವ ಎಂಜಿ ಮೋಟಾರ್ ಸಂಸ್ಥೆಯು ಕಾರು ಉತ್ಪಾದನೆ ಮತ್ತು ಮಾರಾಟವನ್ನು ಸಂಕಷ್ಟದ ಪರಿಸ್ಥಿತಿಯಲ್ಲೂ ಮುಂದುವರಿಸಲು ನಿರ್ಧರಿಸಿದ್ದು, ಸೋಂಕು ನಿರೋಧಕ ಸಾಧನಗಳ ಬಳಕೆಯೊಂದಿಗೆ ಕಾರು ಮಾರಾಟ ಮಾಡುತ್ತಿದೆ.

ಕರೋನಾ ಭೀತಿ ಹಿನ್ನಲೆಯಲ್ಲಿ ಹೊಸ ಮಾರಾಟ ವ್ಯವಸ್ಥೆಯನ್ನ ಪರಿಚಯಿಸಿದ ಎಂಜಿ ಮೋಟಾರ್

ಕಾರು ಮಾರಾಟ ಮಳಿಗೆಗಳಲ್ಲಿ ಕನಿಷ್ಠ ಪ್ರಮಾಣದ ಸಿಬ್ಬಂದಿಯೊಂದಿಗೆ ಸಂಪೂರ್ಣ ಡಿಜಿಟಲ್ ತಂತ್ರಜ್ಞಾನ ಬಳಕೆ ಮಾಡಿ ಕಾರು ಮಾರಾಟ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಸೋಂಕು ಹರಡುವಿಕೆವನ್ನು ತಡೆಗಟ್ಟಲು ಎಲ್ಲಾ ರೀತಿಯ ಅಗತ್ಯ ಎಚ್ಚರಿಕೆ ಕ್ರಮ ಕೈಗೊಳ್ಳವಾಗಿದೆ.

ಕರೋನಾ ಭೀತಿ ಹಿನ್ನಲೆಯಲ್ಲಿ ಹೊಸ ಮಾರಾಟ ವ್ಯವಸ್ಥೆಯನ್ನ ಪರಿಚಯಿಸಿದ ಎಂಜಿ ಮೋಟಾರ್

ಸಂಕಷ್ಟದ ಪರಿಸ್ಥಿತಿಯಲ್ಲಿ ಗ್ರಾಹಕರ ಬೇಡಿಕೆ ಮತ್ತು ಪೂರೈಕೆಯನ್ನು ಸಮರ್ಥ್ಯವಾಗಿ ನಿಭಾಯಿಸುತ್ತಿರುವ ಎಂಜಿ ಮೋಟಾರ್ ಸಂಸ್ಥೆಯು ಅಗತ್ಯವಿದ್ದಲ್ಲಿ ಮಾತ್ರವೇ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಗ್ರಾಹಕರ ಭೇಟಿಗೆ ಅವಕಾಶ ನೀಡಲಾಗುತ್ತಿದ್ದು, ಹೊಸ ಕಾರುಗಳ ಮಾಹಿತಿಗಾಗಿ ಡಿಜಿಟಲ್ ತಂತ್ರಜ್ಞಾನ ಬಳಕೆ ಮತ್ತು ಮನೆ ಬಾಗಿಲಿಗೆ ಗ್ರಾಹಕರ ಸೇವೆಗಳು, ಟೆಸ್ಟ್ ಡ್ರೈವ್ ವಾಹನವನ್ನು ಅಗತ್ಯ ಸ್ಥಳಗಳಿಗೆ ತಲುಪಿಸುವುದು ಮಾಡಲಾಗುತ್ತಿದೆ.

ಕರೋನಾ ಭೀತಿ ಹಿನ್ನಲೆಯಲ್ಲಿ ಹೊಸ ಮಾರಾಟ ವ್ಯವಸ್ಥೆಯನ್ನ ಪರಿಚಯಿಸಿದ ಎಂಜಿ ಮೋಟಾರ್

ಟೆಸ್ಟ್ ಡ್ರೈವ್‌ ಮುನ್ನ ಸೋಂಕು ಹರಡದಂತೆ ರಾಸಾಯನಿಕಗಳಿಂದ ಸ್ವಚ್ಚಗೊಳಿಸಿದ ನಂತರವೇ ಗ್ರಾಹಕರಿಗೆ ಕಾರು ನೀಡಲಾಗುತ್ತಿದ್ದು, ಟೆಸ್ಟ್ ಡ್ರೈವ್ ನಂತರವೂ ಕೂಡಾ ಅಷ್ಟೇ ಎಚ್ಚರಿಕೆ ವಹಿಸಲಾಗುತ್ತಿದೆ.

ಕರೋನಾ ಭೀತಿ ಹಿನ್ನಲೆಯಲ್ಲಿ ಹೊಸ ಮಾರಾಟ ವ್ಯವಸ್ಥೆಯನ್ನ ಪರಿಚಯಿಸಿದ ಎಂಜಿ ಮೋಟಾರ್

ಇದಲ್ಲದೇ ಈಗಾಗಲೇ ಹೊಸ ಕಾರು ಖರೀದಿಗಾಗಿ ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೂ ನಿಗದಿತ ಅವಧಿಯೊಳಗೆ ಕಾರು ವಿತರಣೆ ಮಾಡುವ ಭರವಸೆ ನೀಡಿರುವ ಎಂಜಿ ಸಂಸ್ಥೆಯು ಹೊಸ ಕಾರುಗಳನ್ನು ಸೋಂಕು ನಿರೋಧಕ ರಾಸಾಯನಿಕಗಳಿಂದ ಸ್ವಚ್ಚಗೊಳಿಸಿ ವಿತರಣೆ ಮಾಡಲಾತ್ತಿದೆ.

ಕರೋನಾ ಭೀತಿ ಹಿನ್ನಲೆಯಲ್ಲಿ ಹೊಸ ಮಾರಾಟ ವ್ಯವಸ್ಥೆಯನ್ನ ಪರಿಚಯಿಸಿದ ಎಂಜಿ ಮೋಟಾರ್

ಹಾಗೆಯೇ ಕಾರು ಮಾರಾಟ ಮಳಿಗೆಗಳಲ್ಲಿ ಸಿಮೀತ ಸಂಖ್ಯೆಯ ಸಿಬ್ಬಂದಿಯನ್ನ ಮಾತ್ರವೇ ನಿಯೋಜನೆ ಮಾಡಿರುವ ಎಂಜಿ ಮೋಟಾರ್ ಸಂಸ್ಥೆಯು ನೌಕರರ ಆರೋಗ್ಯದ ಮೇಲೆ ಎಲ್ಲಾ ಅಗತ್ಯ ಕಾಳಜಿ ವಹಿಸಿದ್ದು, ಸಂಕಷ್ಟ ಪರಿಸ್ಥಿತಿಯಲ್ಲೂ ಮುನ್ನೆಚ್ಚರಿಕೆಯೊಂದಿಗೆ ಗ್ರಾಹಕರ ಸೇವೆಗಳಿಗೆ ಆದ್ಯತೆ ನೀಡುತ್ತಿದೆ.

ಕರೋನಾ ಭೀತಿ ಹಿನ್ನಲೆಯಲ್ಲಿ ಹೊಸ ಮಾರಾಟ ವ್ಯವಸ್ಥೆಯನ್ನ ಪರಿಚಯಿಸಿದ ಎಂಜಿ ಮೋಟಾರ್

ಇನ್ನು ಕರೋನಾ ವೈರಸ್ ತಡೆಯಲು ಈಗಾಗಲೇ ಹಲವಾರು ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಕಾರು ಉತ್ಪಾದನಾ ಘಟಕಗಳನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿದ್ದು, ಇನ್ನು ಕೆಲವು ಕಾರು ಕಂಪನಿಗಳು ಸೀಮಿತ ಪ್ರಮಾಣದ ಸಿಬ್ಬಂದಿಯೊಂದಿಗೆ ಕಾರು ಉತ್ಪಾದನಾ ಪ್ರಕ್ರಿಯೆಯನ್ನು ಮುಂದುವರಿಸಿವೆ.

ಕರೋನಾ ಭೀತಿ ಹಿನ್ನಲೆಯಲ್ಲಿ ಹೊಸ ಮಾರಾಟ ವ್ಯವಸ್ಥೆಯನ್ನ ಪರಿಚಯಿಸಿದ ಎಂಜಿ ಮೋಟಾರ್

ಈ ತಿಂಗಳಾಂತ್ಯದ ತನಕ ಬಹುತೇಕ ಕಾರು ಕಂಪನಿಗಳು ಉತ್ಪಾದನೆಯನ್ನು ಬಂದ್ ಮಾಡಿದ್ದು, ಮಾರಾಟ ಪ್ರಕ್ರಿಯೆಯಲ್ಲೂ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ವಾಣಿಜ್ಯ ಚಟುವಟಿಕೆಯನ್ನು ಕೈಗೊಳ್ಳುತ್ತಿವೆ.

Article Published On: Monday, March 23, 2020, 13:00 [IST]
English summary
MG Motor has introduced a new process for car delivery and test drive schemes. Here are the complete details in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+