ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೂ ಮುನ್ನ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ ಮಾಡಿದ ಎಂಜಿ

ಎಂಜಿ ಗ್ಲೊಸ್ಟರ್ ಎಸ್‌ಯುವಿ ಕಾರು ಮಾದರಿಯು ದೀಪಾವಳಿ ಹೊತ್ತಿಗೆ ಮಾರುಕಟ್ಟೆಗೆ ಅಧಿಕೃತವಾಗಿ ಪ್ರವೇಶಿಸುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಹೊಸ ಕಾರಿನ ಮಾಲೀಕತ್ವಕ್ಕೆ ಹೊಸ ಆಯಾಮ ನೀಡಲು ಎಂಜಿ ಮೋಟಾರ್ ಕಂಪನಿಯು ವೈಯಕ್ತಿಕಗೊಳಿಸಿದ ಕಾರು ಮಾಲೀಕತ್ವದ ಕಾರ್ಯಕ್ರಮ ಹಮ್ಮಿಕೊಂಡಿದೆ.

ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೂ ಮುನ್ನ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ

ಎಂಜಿ ಮೋಟಾರ್ ಕಂಪನಿಯು ಪರಿಚಯಿಸುತ್ತಿರುವ 'ಮೈ ಎಂಜಿ ಶೀಲ್ಡ್' ವೈಯಕ್ತಿಕಗೊಳಿಸಿದ ಕಾರು ಮಾಲೀಕತ್ವದ ಕಾರ್ಯಕ್ರಮವು ಗ್ಲೊಸ್ಟರ್ ಎಸ್‌ಯುವಿ ಖರೀದಿದಾರರಿಗೆ ಗರಿಷ್ಠ ವಾರಂಟಿ, ರೋಡ್ ಸೈಡ್ ಅಸಿಸ್ಟ್, ಬಿಡಿಭಾಗಗಳ ಮೇಲೆ ದೀರ್ಘಾವಧಿಯ ಖಾತರಿ ನೀಡುತ್ತದೆ. ಸ್ಟ್ಯಾಂಡರ್ಡ್ ಆಗಿ ನೀಡುವ ವಾರಂಟಿ ಅಂಶಗಳ ಹೊರತಾಗಿ ಮೈ ಎಂಜಿ ಶೀಲ್ಡ್ ವಾರಂಟಿ ಅಡಿ 200 ತಾಂತ್ರಿಕ ಅಂಶಗಳ ಮೇಲೆ ವಿಸ್ತರಿತ ವಾರಂಟಿ ನೀಡಲಿದ್ದು, ಸ್ಟ್ಯಾಂಡರ್ಡ್ ವಾರಂಟಿ ಅಡಿ 3+3+3 ಮಾದರಿಯ ಖಾತರಿಯನ್ನು ಪ್ರಮಾಣೀಕರಿಸುತ್ತದೆ.

ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೂ ಮುನ್ನ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ

3+3+3 ಮಾದರಿಯ ವಾರಂಟಿ ಪ್ಯಾಕೇಜ್ ಅಡಿ ಮೂರು ವರ್ಷ ಅಥವಾ 1 ಲಕ್ಷ ಕಿ.ಮೀ ಮೇಲೆ ವಾರಂಟಿ, 3 ವರ್ಷಗಳ ರಸ್ತೆ ಬದಿಯ ನೆರವು(ರೋಡ್ ಸೈಡ್ ಅಸಿಸ್ಟ್) ಮತ್ತು ಮೂರು ವರ್ಷಗಳ ಉಚಿತ ಸರ್ವೀಸ್ ಸೇವೆಗಳು ಲಭ್ಯವಿರಲಿವೆ. ಇದಲ್ಲದೆ ಮೈ ಎಂಜಿ ಶೀಲ್ಡ್ ಪ್ಯಾಕೇಜ್ ಅಡಿಯಲ್ಲಿ ಗ್ರಾಹಕರು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ತಮ್ಮ ಮಾಲೀಕತ್ವದ ಪ್ಯಾಕೇಜ್ ಅನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು.

ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೂ ಮುನ್ನ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ

ಇನ್ನು ಸೂಪರ್, ಸ್ಮಾರ್ಟ್, ಶಾರ್ಪ್ ಮತ್ತು ಸ್ಯಾವಿ ಎನ್ನುವ ನಾಲ್ಕು ವೆರಿಯೆಂಟ್‌ಗಳನ್ನು ಹೊಂದಿರುವ ಎಂಜಿ ಗ್ಲೊಸ್ಟರ್ ಕಾರು 4x2 ಮತ್ತು 4x4 ಮಾದರಿಗಳನ್ನು ಹೊಂದಿದ್ದು, ಗ್ರಾಹಕರ ತಮ್ಮ ಬೇಡಿಕೆಗೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಮಾದರಿಗಳನ್ನು ಆಯ್ಕೆ ಮಾಡಬಹುದಾಗಿದೆ. ಹೊಸ ಕಾರು ಲೆವಲ್ 1 ಅಟೊನೊಮಸ್ ಸಿಸ್ಟಂ ಸೇರಿದಂತೆ ಹತ್ತಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿಯುತ್ತಿದೆ.

ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೂ ಮುನ್ನ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ

ಗ್ಲೊಸ್ಟರ್ ಕಾರಿನಲ್ಲಿ ಅಡ್ವಾನ್ಸ್ ಡ್ರೈವರ್ ಸಿಸ್ಟಂ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಪಾರ್ಕ್ ಅಸಿಸ್ಟ್, ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ್, ಲೈನ್ ಡಿಪಾರ್ಚರ್ ವಾರ್ನಿಂಗ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಫಾರ್ವಡ್ ಕುಲಿಷನ್ ವಾರ್ನಿಂಗ್ ಸೌಲಭ್ಯಗಳಿವೆ. ಐಷಾರಾಮಿ ಫೀಚರ್ಸ್‌ಗಳ ಜೊತೆಗೆ ಆಫ್ ರೋಡ್ ಕೌಶಲ್ಯದಲ್ಲೂ ಗಮನಸೆಳೆಯುವ ಹೊಸ ಗ್ಲೊಸ್ಟರ್ ಕಾರು ಆಲ್ ಟೆರೆನ್ ಸಿಸ್ಟಂ, ಫೋರ್ ವೀಲ್ಹ್ ಡ್ರೈವ್ ಸಿಸ್ಟಂ ಹೊಂದಿದ್ದು, ಆಫ್ ರೋಡ್ ಕೌಶಲ್ಯಕ್ಕೆ ಪೂರಕವಾಗಿ ಸ್ಯಾಂಡ್, ಮಡ್, ರಾಕ್, ಸ್ನೋ, ಇಕೋ, ಸ್ಪೋರ್ಟ್ ಮತ್ತು ನಾರ್ಮಲ್ ಡ್ರೈವಿಂಗ್ ಮೋಡ್‌ಗಳನ್ನು ಪಡೆದಿದೆ.

ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೂ ಮುನ್ನ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ

ಗ್ಲೊಸ್ಟರ್ ಕಾರಿನಲ್ಲಿ ಎಂಜಿ ಮೋಟಾರ್ಸ್ ಕಂಪನಿಯೇ ಅಭಿವೃದ್ದಿಗೊಳಿಸಲಾದ ಐ-ಸ್ಮಾರ್ಟ್ 2.0 ಕಾರ್ ಕನೆಕ್ಟೆಡ್ ಟೆಕ್ನಾಲಜಿ ಜೋಡಿಸಲಾಗಿದ್ದು, ಆ್ಯಂಟಿ-ಥೆಫ್ಟ್ ಇಮೊಬಿಲೈಸೇಶನ್, ಕ್ರಿಟಿಕಲ್ ಟ್ರೈರ್ ಪ್ರೆಷರ್ ವಾಯ್ಸ್ ಅಲರ್ಟ್, ಮ್ಯಾಪ್‌ಮೈಇಂಡಿಯಾದ 3ಡಿ ಮ್ಯಾಪ್, ಪಾಟ್‌ಹೊಲ್ ಅಲರ್ಟ್, ಸ್ಪೀಡ್ ಅಲರ್ಟ್ ಸೌಲಭ್ಯಗಳಿವೆ.

ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೂ ಮುನ್ನ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ

ಜೊತೆಗೆ ಹೊಸ ಕಾರಿನಲ್ಲಿ ಎಲ್‌ಇಡಿ ಲೈಟಿಂಗ್ಸ್, ಪನೊರಮಿಕ್ ಸನ್‌ರೂಫ್, 19-ಇಂಚಿನ ಅಲಾಯ್ ವೀಲ್ಹ್, 12.3-ಇಂಚಿನ ಟಚ್ ಸ್ಕ್ರೀನ್ ಇನ್ಟೋಟೈನ್‌ಮೆಂಟ್, ಮುಂಭಾಗದಲ್ಲಿ ಮತ್ತು ಮಧ್ಯದ ಸಾಲಿನ ಆಸನಗಳಲ್ಲಿ ವೆಂಟಿಲೆಟರ್ ಆಸನೊಂದಿಗೆ ಹಿಟಿಂಗ್ ಸಿಸ್ಟಂ, ವೈರ್‌ಲೆಸ್ ಚಾರ್ಜಿಂಗ್, ಆ್ಯಂಬಿಯೆಂಟ್ ಲೈಟಿಂಗ್, ಪ್ರೀಮಿಯಂ ಲೆದರ್ ಸೀಟುಗಳು, 8-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ಟೀರಿಂಗ್ ಮೌಟೆಂಡ್ ಕಂಟ್ರೋಲ್ಸ್ ಸೇರಿ ಹಲವಾರು ಫೀಚರ್ಸ್‌ಗಳಿವೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೂ ಮುನ್ನ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ

ಎಂಜಿನ್ ಮತ್ತು ಪರ್ಫಾಮೆನ್ಸ್ ಎಂಜಿ ಮೋಟಾರ್ ಕಂಪನಿಯು ಗ್ಲೊಸ್ಟರ್ ಎಸ್‌ಯುವಿಯಲ್ಲಿ 2.0-ಲೀಟರ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಜೋಡಣೆ ಮಾಡಿದ್ದು, 4x4 ಮಾದರಿಯಲ್ಲಿ ಟ್ವಿನ್ ಟರ್ಬೋ ಮತ್ತು 4x2 ಮಾದರಿಯಲ್ಲಿ ಸಿಂಗಲ್ ಟರ್ಬೋ ಎಂಜಿನ್ ನೀಡಲಾಗಿದೆ.

ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೂ ಮುನ್ನ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ

ಎರಡು ಮಾದರಿಗಳಲ್ಲೂ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ನೀಡಲಾಗಿದ್ದು, ಟ್ವಿನ್ ಟರ್ಬೋ ಮಾದರಿಯು 218-ಬಿಹೆಚ್‌ಪಿ, 480-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಸಿಂಗಲ್ ಟರ್ಬೋ ಮಾದರಿಯು 160-ಬಿಎಚ್‌ಪಿ, 375-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆಗೂ ಮುನ್ನ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ

ಹೊಸ ಕಾರು ಖರೀದಿಗೆ ಈಗಾಗಲೇ ರೂ.1 ಲಕ್ಷ ಮುಂಗಡದೊಂದಿಗೆ ಬುಕ್ಕಿಂಗ್ ಸಲ್ಲಿಸಬಹುದಾಗಿದ್ದು, ಹೊಸ ಕಾರು ಪ್ರೀಮಿಯಂ ಫೀಚರ್ಸ್ ಮತ್ತು ಎಂಜಿನ್ ಸೌಲಭ್ಯಕ್ಕೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 35 ಲಕ್ಷದಿಂದ ರೂ.40 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

Article Published On: Tuesday, October 6, 2020, 8:45 [IST]
English summary
MG Motor Introduces My MG Shield: Personalized Ownership Program For The Gloster SUV. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+