ಮ್ಯಾಕ್ಸ್ ಜೊತೆಗೂಡಿ ವೆಂಟಿಲೆಟರ್ ಉತ್ಪಾದನೆಗೆ ಚಾಲನೆ ನೀಡಿದ ಎಂಜಿ ಮೋಟಾರ್

ಚೀನಾದಿಂದ ಶುರುವಾದ ಮಾಹಾಮಾರಿ ಕರೋನಾ ವೈರಸ್ ಇದೀಗ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ವ್ಯಾಪ್ತಿಸಿದ್ದಲ್ಲದೇ ದಿನಂಪ್ರತಿ ಸಾವಿರಾರು ಜನರನ್ನು ಬಲಿ ಪಡೆಯುತ್ತಿದೆ. ಆದರೆ ವೈರಸ್ ವಿರುದ್ಧದ ಹೋರಾಟಕ್ಕಾಗಿ ವೈದ್ಯಕೀಯ ಉಪಕರಣಗಳ ಕೊರತೆ ಎದುರಾಗಿದ್ದು, ಆಟೋ ಉತ್ಪಾದನಾ ಕಂಪನಿಗಳು ಸರ್ಕಾರದ ಕರೆಗೆ ಸ್ಪಂದಿಸಿ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಚಾಲನೆ ನೀಡಿವೆ.

ಮ್ಯಾಕ್ಸ್ ಜೊತೆಗೂಡಿ ವೆಂಟಿಲೆಟರ್ ಉತ್ಪಾದನೆಗೆ ಚಾಲನೆ ನೀಡಿದ ಎಂಜಿ ಮೋಟಾರ್

ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಈಗಾಗಲೇ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಹಣಕಾಸಿನ ನೆರವು ಘೋಷಣೆ ಮಾಡಿರುವುದಲ್ಲದೇ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಅಭಿವೃದ್ದಿಪಡಿಸುತ್ತಿದ್ದು, ಎಂಜಿ ಮೋಟಾರ್ ಕೂಡಾ ರೂ.2 ಕೋಟಿ ದೇಣಿಯ ಜೊತೆಗೆ ಅಗ್ಗದ ದರದಲ್ಲಿ ಅತ್ಯುತ್ತಮ ವೆಂಟಿಲೆಟರ್‌ಗಳ ಉತ್ಪಾದನೆಗೆ ಚಾಲನೆ ನೀಡಿದೆ.

ಮ್ಯಾಕ್ಸ್ ಜೊತೆಗೂಡಿ ವೆಂಟಿಲೆಟರ್ ಉತ್ಪಾದನೆಗೆ ಚಾಲನೆ ನೀಡಿದ ಎಂಜಿ ಮೋಟಾರ್

ವೈದ್ಯಕೀಯ ಉಪಕರಣಗಳ ಸಂಸ್ಥೆಯಾಗಿರುವ ಮ್ಯಾಕ್ಸ್ ಜೊತೆಗೂಡಿ ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿರುವ ಎಂಜಿ ಮೋಟಾರ್ ಕಂಪನಿಯು ಪ್ರತಿ ತಿಂಗಳು 1 ಸಾವಿರ ವೆಂಟಿಲೆಟರ್ ಉತ್ಪಾದನೆ ಮಾಡುವುದಾಗಿ ಹೇಳಿಕೊಂಡಿದೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಮ್ಯಾಕ್ಸ್ ಜೊತೆಗೂಡಿ ವೆಂಟಿಲೆಟರ್ ಉತ್ಪಾದನೆಗೆ ಚಾಲನೆ ನೀಡಿದ ಎಂಜಿ ಮೋಟಾರ್

ವಡೋದರಾ ಮೂಲದ ಮ್ಯಾಕ್ಸ್ ವೆಂಟಿಲೆಟರ್ ಉತ್ಪಾದನಾ ಸಂಸ್ಥೆಯು ದೇಶದ ಜನಪ್ರಿಯ ವೈದ್ಯಕೀಯ ಉಪಕರಣಗಳ ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿದ್ದು, ಎಂಜಿ ಮೋಟಾರ್ ಜೊತೆಗೂಡಿ ವೆಂಟಿಲೆಟರ್ ಉತ್ಪಾದನೆ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಿದೆ.

ಮ್ಯಾಕ್ಸ್ ಜೊತೆಗೂಡಿ ವೆಂಟಿಲೆಟರ್ ಉತ್ಪಾದನೆಗೆ ಚಾಲನೆ ನೀಡಿದ ಎಂಜಿ ಮೋಟಾರ್

ಇನ್ನು ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಬಹುತೇಕ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಈ ಹಿನ್ನಲೆಯಲ್ಲಿ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದ್ದು, ಕರೋನಾ ವಿರುದ್ಧ ಹೋರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಣಿಗೆ ಸಂಗ್ರಹ ಅಭಿಯಾನವನ್ನು ಕೈಗೊಂಡಿವೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಮ್ಯಾಕ್ಸ್ ಜೊತೆಗೂಡಿ ವೆಂಟಿಲೆಟರ್ ಉತ್ಪಾದನೆಗೆ ಚಾಲನೆ ನೀಡಿದ ಎಂಜಿ ಮೋಟಾರ್

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದ್ದು, ಉದ್ಯಮಿಗಳು, ಚಿತ್ರ ನಟರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕರೋನಾ ವಿರುದ್ಧ ಸರ್ಕಾರದ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ.

ಮ್ಯಾಕ್ಸ್ ಜೊತೆಗೂಡಿ ವೆಂಟಿಲೆಟರ್ ಉತ್ಪಾದನೆಗೆ ಚಾಲನೆ ನೀಡಿದ ಎಂಜಿ ಮೋಟಾರ್

ಅದರಲ್ಲೂ ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಚಾಲನೆ ನೀಡಿದ್ದು, ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಮತ್ತು ಐಸಿಯು ಯುನಿಟ್‌ಗೆ ಅಗತ್ಯವಿರುವ ತಾಂತ್ರಿಕ ಅಂಶಗಳ ಸಹಕಾರ ನೀಡುತ್ತಿವೆ.

MOST READ: ಲಾಕ್‌ಡೌನ್ ವೇಳೆ ಕಾರು ಚಾಲನೆ ಮಾಡಿ ಸಿಕ್ಕಿಬಿದ್ದ ಮಹಿಳೆಯಿಂದ ಹೈಡ್ರಾಮಾ..

ಮ್ಯಾಕ್ಸ್ ಜೊತೆಗೂಡಿ ವೆಂಟಿಲೆಟರ್ ಉತ್ಪಾದನೆಗೆ ಚಾಲನೆ ನೀಡಿದ ಎಂಜಿ ಮೋಟಾರ್

ವೈರಸ್ ತಡೆಗಾಗಿ ಈಗಾಗಲೇ ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದು, ವೈದ್ಯಕೀಯ ಉಪಕರಣಗಳ ಕೊರತೆಯು ಎದ್ದುಕಾಣುತ್ತಿದೆ. ಈ ಹಿನ್ನಲೆಯಲ್ಲಿ ಸದ್ಯ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಆಟೋ ಉತ್ಪಾದನಾ ಘಟಕಗಳಲ್ಲೇ ಅಗತ್ಯ ವೈದಕೀಯ ಉಪಕರಣಗಳ ಉತ್ಪಾದನೆ ಶುರುಮಾಡಿದ್ದು, ವೆಂಟಿಲೆಟರ್, ಮಾಸ್ಕ್‌, ಟೆಸ್ಟಿಂಗ್ ಕಿಟ್ ಉತ್ಪಾದನೆ ಮಾಡಿ ಪೂರೈಕೆ ಮಾಡುತ್ತಿವೆ.

Article Published On: Wednesday, April 29, 2020, 14:25 [IST]
English summary
MG Motor partners with MAX Ventilator to increase ventilator production details, Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+