ಇನೋವಾ ಕ್ರಿಸ್ಟಾ ಮತ್ತು ಕಾರ್ನಿವಾಲ್ ಕಾರಿಗೆ ಪೈಪೋಟಿಯಾಗಿ ಎಂಜಿ ಮ್ಯಾಕ್ಸಸ್ ಜಿ10..

ಕಾರು ಮಾರಾಟದಲ್ಲಿ ಸದ್ಯ ಭಾರೀ ಬದಲಾವಣೆಗೆ ಕಾರಣವಾಗಿರುವ ಹೊಸ ಕಾರು ಉತ್ಪಾದನಾ ಸಂಸ್ಥೆಗಳಾದ ಕಿಯಾ ಮೋಟಾರ್ಸ್ ಮತ್ತು ಎಂಜಿ ಮೋಟಾರ್ ಸಂಸ್ಥೆಯು ಅತಿ ಕಡಿಮೆ ಅವಧಿಯಲ್ಲಿ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಇದೀಗ ಮತ್ತಷ್ಟು ಹೊಸ ಕಾರುಗಳ ಮೂಲಕ ಸದ್ದು ಮಾಡುವ ನೀರಿಕ್ಷೆಯಲ್ಲಿವೆ.

ಇನೋವಾ ಕ್ರಿಸ್ಟಾ ಮತ್ತು ಕಾರ್ನಿವಾಲ್ ಕಾರಿಗೆ ಪೈಪೋಟಿಯಾಗಿ ಎಂಜಿ ಮ್ಯಾಕ್ಸಸ್ ಜಿ10..

ಎಂಪಿವಿ(ಮಲ್ಟಿ ಪ್ಯಾಸೆಂಜರ್ ವೆಹಿಕಲ್) ಕಾರುಗಳ ವಿಭಾಗದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿಯಾಗಿ ಕಿಯಾ ಮೋಟಾರ್ಸ್ ಸಂಸ್ಥೆಯು ಕಾರ್ನಿವಾಲ್ ಎಂಪಿವಿ ಬಿಡುಗಡೆಗೊಳಿಸುತ್ತಿದ್ದು, ಕಾರ್ನಿವಾಲ್ ಬಿಡುಗಡೆಗೂ ಮುನ್ನ ಎಂಜಿ ಮೋಟಾರ್ ಕೂಡಾ ತನ್ನ ಬಹುನೀರಿಕ್ಷಿತ ಎಂಪಿವಿ ಕಾರು ಮಾದರಿಯೊಂದನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

ಇನೋವಾ ಕ್ರಿಸ್ಟಾ ಮತ್ತು ಕಾರ್ನಿವಾಲ್ ಕಾರಿಗೆ ಪೈಪೋಟಿಯಾಗಿ ಎಂಜಿ ಮ್ಯಾಕ್ಸಸ್ ಜಿ10..

ಸದ್ಯ ಚೀನಿ ಮತ್ತು ಆಸ್ಟ್ರೇಲಿಯಾ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮ್ಯಾಕ್ಸಸ್ ಜಿ10 ಕಾರು ಮಾದರಿಯನ್ನು ಭಾರತದಲ್ಲೂ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಹೊಸ ಕಾರಿನ ಕಾರ್ಯಕ್ಷಮತೆ ಕುರಿತಾಗಿ ರೋಡ್ ಟೆಸ್ಟಿಂಗ್ ಮಾಡುವಾಗ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಂಡುಬಂದಿದೆ.

ಇನೋವಾ ಕ್ರಿಸ್ಟಾ ಮತ್ತು ಕಾರ್ನಿವಾಲ್ ಕಾರಿಗೆ ಪೈಪೋಟಿಯಾಗಿ ಎಂಜಿ ಮ್ಯಾಕ್ಸಸ್ ಜಿ10..

ಚೀನಿ ಮತ್ತು ಆಸ್ಟ್ರೇಲಿಯಾದಲ್ಲಿ 7 ಸೀಟರ್, 9 ಸೀಟರ್ ಮತ್ತು 10 ಸೀಟರ್ ಮಾದರಿಯಲ್ಲಿ ಮಾರಾಟವಾಗುತ್ತಿರುವ ಮ್ಯಾಕ್ಸಸ್ ಜಿ10 ಕಾರು ಕಾರ್ನಿವಾಲ್ ಕಾರಿಗೆ ಪೈಪೋಟಿ ನೀಡುತ್ತಿದ್ದು, ಇದೀಗ ಭಾರತದಲ್ಲೂ ಎಂಜಿ ಹೊಸ ಕಾರು ಸದ್ದು ಮಾಡುವ ನೀರಿಕ್ಷೆಯಲ್ಲಿದೆ.

ಇನೋವಾ ಕ್ರಿಸ್ಟಾ ಮತ್ತು ಕಾರ್ನಿವಾಲ್ ಕಾರಿಗೆ ಪೈಪೋಟಿಯಾಗಿ ಎಂಜಿ ಮ್ಯಾಕ್ಸಸ್ ಜಿ10..

ಹೊಸ ಕಾರಿನ ಬಿಡುಗಡೆಯ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ಮ್ಯಾಕ್ಸಸ್ ಜಿ10 ಕಾರು ಮುಂದಿನ ತಿಂಗಳು ಫೆಬ್ರುವರಿ 7ರಿಂದ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳ್ಳುವ ಸಾಧ್ಯತೆಗಳಿದ್ದು, ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಸಾರ ಹೊಸ ಕಾರು ಮಹತ್ವದ ಬದಲಾವಣೆಯೊಂದಿಗೆ ಬಿಡುಗಡೆಯಾಗಬಹುದೆಂದು ನೀರಕ್ಷಿಸಲಾಗಿದೆ. ಮ್ಯಾಕ್ಸಸ್ ಜಿ10 ಕಾರು ಇನೋವಾ ಕ್ರಿಸ್ಟಾ ಕಾರಿಗಿಂತಲೂ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಕಾರ್ನಿವಾಲ್ ಮಾದರಿಯಲ್ಲೇ ಉದ್ದಳತೆ ಹೊಂದಿದೆ.

ಇನೋವಾ ಕ್ರಿಸ್ಟಾ ಮತ್ತು ಕಾರ್ನಿವಾಲ್ ಕಾರಿಗೆ ಪೈಪೋಟಿಯಾಗಿ ಎಂಜಿ ಮ್ಯಾಕ್ಸಸ್ ಜಿ10..

ಇನ್ನು ಕೆಲವು ಸುದ್ದಿ ಮೂಲಗಳ ಪ್ರಕಾರ, ಹೊಸ ಮ್ಯಾಕ್ಸಸ್ ಜಿ10 ಎಂಪಿವಿ ಕಾರು ಹ್ಯುಂಡೈ ಸಂಸ್ಥೆಯ ಸ್ಟಾರೆಕ್ಸ್ ಮತ್ತು ಟೊಯೊಟಾ ಹಯೆಸ್ ಮಾದರಿಯಲ್ಲಿ ಮಾರಾಟಗೊಳ್ಳಲಿದ್ದು, ಇನೋವಾ ಮತ್ತು ಕಾರ್ನಿವಾಲ್ ಕಾರುಗಳಿಂತಲೂ ಹೆಚ್ಚು ದುಬಾರಿಯಾಗಿರಲಿದೆ ಎನ್ನಲಾಗಿದೆ.

ಇನೋವಾ ಕ್ರಿಸ್ಟಾ ಮತ್ತು ಕಾರ್ನಿವಾಲ್ ಕಾರಿಗೆ ಪೈಪೋಟಿಯಾಗಿ ಎಂಜಿ ಮ್ಯಾಕ್ಸಸ್ ಜಿ10..

ಆದರೆ ಎಂಜಿ ಸಂಸ್ಥೆಯು ಸದ್ಯ ಭಾರತದಲ್ಲಿ ಮಧ್ಯಮ ಗಾತ್ರದ ಕಾರು ಮಾದರಿಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗಾಗಿ ಬೃಹತ್ ಯೋಜನೆಗಳನ್ನು ರೂಪಿಸುತ್ತಿದ್ದು, ವಿದೇಶಿ ಮಾರುಕಟ್ಟೆಯಲ್ಲಿರುವ ಐಷಾರಾಮಿ ಮ್ಯಾಕ್ಸಸ್ ಜಿ10 ಬದಲಾಗಿ ಹೊಸ ಹೆಸರಿನೊಂದಿಗೆ ಮಧ್ಯಮ ಗಾತ್ರದ ಎಂಪಿವಿ ಮಾದರಿಯಾಗಿ ಬಿಡುಗಡೆಗೊಳಿಸಬಹುದಾದ ಸಾಧ್ಯತೆಗಳಿವೆ.

ಇನೋವಾ ಕ್ರಿಸ್ಟಾ ಮತ್ತು ಕಾರ್ನಿವಾಲ್ ಕಾರಿಗೆ ಪೈಪೋಟಿಯಾಗಿ ಎಂಜಿ ಮ್ಯಾಕ್ಸಸ್ ಜಿ10..

ಸದ್ಯ ಮಾರುಕಟ್ಟೆಯಲ್ಲಿ ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿಯಾಗಬಲ್ಲ ಹಲವು ಎಂಪಿವಿ ಕಾರು ಮಾದರಿಗಳಿದ್ದರೂ ದೂರದ ಪ್ರಯಾಣಕ್ಕೆ ಅನುಕೂಲಕರವಾದ ಸ್ಥಳಾವಾಕಾಶವನ್ನು ಹೊಂದಿಲ್ಲ. ಈ ನಡುವೆ ಎಂಪಿವಿ ಕಾರುಗಳ ಮಾರುಕಟ್ಟೆ ಹೊಸ ಸಂಚಲನಕ್ಕೆ ಕಾರಣವಾಗಿರುವ ಕಾರ್ನಿವಾಲ್ ಕೂಡಾ ದುಬಾರಿ ಬೆಲೆಯಲ್ಲಿ ಬಿಡುಗಡೆಯಾಗುತ್ತಿದೆ.

ಇನೋವಾ ಕ್ರಿಸ್ಟಾ ಮತ್ತು ಕಾರ್ನಿವಾಲ್ ಕಾರಿಗೆ ಪೈಪೋಟಿಯಾಗಿ ಎಂಜಿ ಮ್ಯಾಕ್ಸಸ್ ಜಿ10..

ಇದರಿಂದ ರೂ. 15 ಲಕ್ಷದಿಂದ ರೂ.20 ಲಕ್ಷ ಬೆಲೆ ಅಂತರದಲ್ಲಿ ಒಂದು ಉತ್ತಮವಾದ ಎಂಪಿವಿ ಆವೃತ್ತಿಯನ್ನು ಬಿಡುಗಡೆಗಡೆಗೊಳಿಸುವ ಯೋಜನೆಯಲ್ಲಿರುವ ಎಂಜಿ ಮೋಟಾರ್ ಸಂಸ್ಥೆಯು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಉತ್ತರಿಸಲಿದೆ.

ಇನೋವಾ ಕ್ರಿಸ್ಟಾ ಮತ್ತು ಕಾರ್ನಿವಾಲ್ ಕಾರಿಗೆ ಪೈಪೋಟಿಯಾಗಿ ಎಂಜಿ ಮ್ಯಾಕ್ಸಸ್ ಜಿ10..

ಇನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಒಟ್ಟು 14 ಹೊಸ ಕಾರು ಮಾದರಿಯನ್ನು ಅನಾವರಣಗೊಳಿಸಲಿರುವ ಎಂಜಿ ಸಂಸ್ಥೆಯು ಮಾತೃಸಂಸ್ಥೆಯಾದ ಚೀನಿ ಆಟೋ ದೈತ್ಯ ಸೈಕ್ ಸಂಸ್ಥೆಯ ಜೊತೆಗೂಡಿ ವಿವಿಧ ಕಾರು ಮಾದರಿಯನ್ನು ಮರುಹೆಸರಿನೊಂದಿಗೆ ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

More from DriveSpark

Article Published On: Thursday, January 30, 2020, 18:59 [IST]
English summary
MG Motor's all new MPV Car has spotted first time in India ahead of Auto Expo unveil. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+