ವರ್ಷಾಂತ್ಯದೊಳಗೆ ಮೂರು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ವಿವಿಧ ಮಾದರಿಯ 14 ಹೊಸ ಕಾರುಗಳ ಪ್ರದರ್ಶನಗೊಳಿಸುವ ಮೂಲಕ ಭಾರೀ ಸಂಚಲನಕ್ಕೆ ಕಾರಣವಾಗಿರುವ ಎಂಜಿ ಮೋಟಾರ್ ಸಂಸ್ಥೆಯು ಶೀಘ್ರದಲ್ಲೇ ಕೆಲವು ಕಾರು ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ.

ವರ್ಷಾಂತ್ಯದೊಳಗೆ ಮೂರು ಹೊಸ ಕಾರು ಮಾದರಿಗಳನ್ನ ಬಿಡುಗಡೆ ಮಾಡಲಿದೆ ಎಂಜಿ

ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನವಾಗಿರುವ 14 ಹೊಸ ಕಾರುಗಳಲ್ಲಿ ಮೂರು ಪ್ರಮುಖ ಕಾರು ಮಾದರಿಗಳನ್ನು ಇದೇ ವರ್ಷ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿರುವ ಎಂಜಿ ಮೋಟಾರ್ ಸಂಸ್ಥೆಯು ಎಸ್‌ಯುವಿ ಮತ್ತು ಎಂಪಿವಿ ವಿಭಾಗದಲ್ಲಿ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿದೆ. ಹಾಗಾದ್ರೆ ಈ ವರ್ಷ ಎಂಜಿ ಮೋಟಾರ್ ಬಿಡುಗಡೆ ಮಾಡಲಿರುವ ಆ ಮೂರು ಕಾರುಗಳು ಯಾವವು? ಬಿಡುಗಡೆ ಅವಧಿ ಮತ್ತು ಬೆಲೆಯ ಬಗೆಗಿನ ಮಾಹಿತಿ ಇಲ್ಲಿದೆ.

ವರ್ಷಾಂತ್ಯದೊಳಗೆ ಮೂರು ಹೊಸ ಕಾರು ಮಾದರಿಗಳನ್ನ ಬಿಡುಗಡೆ ಮಾಡಲಿದೆ ಎಂಜಿ

ಹೆಕ್ಟರ್ ಪ್ಲಸ್

ಸಾಮಾನ್ಯ ಹೆಕ್ಟರ್ ಮಾದರಿಗಿಂತಲೂ ವಿಭಿನ್ನ ತಂತ್ರಜ್ಞಾನ ಸೌಲಭ್ಯ ಪಡೆದುಕೊಂಡಿರುವ ಹೆಕ್ಟರ್ ಪ್ಲಸ್ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಅಥವಾ 7 ಸೀಟರ್ ಆವೃತ್ತಿಯಲ್ಲಿ ಖರೀದಿಗೆ ಲಭ್ಯವಿರಲಿದ್ದು, ಫುಲ್ ಸೈಜ್ 7 ಸೀಟರ್ ಎಸ್‌ಯುವಿ ಆವೃತ್ತಿಯಾಗಿರುವ ಫೋರ್ಡ್ ಎಂಡೀವರ್, ಮಹೀಂದ್ರಾ ಅಲ್ಟುರಾಸ್ ಮತ್ತು ಟೊಯೊಟಾ ಫಾರ್ಚೂನರ್ ಕಾರುಗಳಿಂತಲೂ ಇದು ಸಾಕಷ್ಟು ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುತ್ತಿದೆ.

ವರ್ಷಾಂತ್ಯದೊಳಗೆ ಮೂರು ಹೊಸ ಕಾರು ಮಾದರಿಗಳನ್ನ ಬಿಡುಗಡೆ ಮಾಡಲಿದೆ ಎಂಜಿ

ಎಂಜಿ ಸಂಸ್ಥೆಯು ಹೆಕ್ಟರ್ ಪ್ಲಸ್ ಮೂಲಕ 7 ಸೀಟರ್ ಎಸ್‌ಯುವಿ ಖರೀದಿದಾರರನ್ನು ಸೆಳೆಯಲು ಮುಂದಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಇನ್ಮುಂದೆ ಸಾಮಾನ್ಯ ಹೆಕ್ಟರ್ ಮಾದರಿಯಲ್ಲಿ 5 ಸೀಟರ್ ಮತ್ತು ಹೆಕ್ಟರ್ ಪ್ಲಸ್‌ನಲ್ಲಿ 6 ಅಥವಾ 7 ಸೀಟರ್ ಆವೃತ್ತಿಯನ್ನು ಕೂಡಾ ಖರೀದಿ ಮಾಡಬಹುದಾಗಿದೆ.

ವರ್ಷಾಂತ್ಯದೊಳಗೆ ಮೂರು ಹೊಸ ಕಾರು ಮಾದರಿಗಳನ್ನ ಬಿಡುಗಡೆ ಮಾಡಲಿದೆ ಎಂಜಿ

ಸದ್ಯ ಸಾಮಾನ್ಯ ಹೆಕ್ಟರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.12.74 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.44 ಲಕ್ಷ ಬೆಲೆ ಹೊಂದಿದ್ದು, ಹೆಕ್ಟರ್ ಪ್ಲಸ್ ಮಾದರಿಯು ಸಾಮಾನ್ಯ ಕಾರಿಗಿಂತಲೂ ರೂ. 1.50 ಲಕ್ಷದಿಂದ ರೂ.2 ಲಕ್ಷ ಹೆಚ್ಚುವರಿ ಬೆಲೆ ಹೊಂದಿರಲಿದೆ. ಹೊಸ ಕಾರು ಮುಂಬರುವ ಜುಲೈನಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತ ಎನ್ನಲಾಗಿದ್ದು, ಒಂದನೇ ವರ್ಷದ ಸಂಭ್ರಮಾಚರಣೆಗಾಗಿ ಈ ಕಾರು ಬಿಡುಗಡೆಯಾಗುತ್ತಿದೆ.

ವರ್ಷಾಂತ್ಯದೊಳಗೆ ಮೂರು ಹೊಸ ಕಾರು ಮಾದರಿಗಳನ್ನ ಬಿಡುಗಡೆ ಮಾಡಲಿದೆ ಎಂಜಿ

ಗ್ಲೊಸ್ಟರ್ ಎಸ್‌ಯುವಿ

ಸದ್ಯ ಅನಾವರಣಗೊಂಡಿರುವ ಗ್ಲೊಸ್ಟರ್ ಕಾರು ಚೀನಿ ಮಾರುಕಟ್ಟೆಯಲ್ಲಿ ಮ್ಯಾಕ್ಸಸ್ ಡಿ90 ಹೆಸರಿನೊಂದಿಗೆ ಮಾರಾಟವಾಗುತ್ತಿದ್ದು, ಭಾರತದಲ್ಲಿ ಗ್ಲೊಸ್ಟರ್ ಹೆಸರಿನೊಂದಿಗೆ ಬಿಡುಗಡೆಯಾಗಲಿರುವ ಹೊಸ ಕಾರು ಬರೋಬ್ಬರಿ 5,100 ಎಂಎಂ ಉದ್ದಳತೆ ಹೊಂದಿರುವುದು ಪ್ರಮುಖ ಆಕರ್ಷಣೆಯಾಗಿದೆ.

ವರ್ಷಾಂತ್ಯದೊಳಗೆ ಮೂರು ಹೊಸ ಕಾರು ಮಾದರಿಗಳನ್ನ ಬಿಡುಗಡೆ ಮಾಡಲಿದೆ ಎಂಜಿ

ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಲ್ಯಾಡರ್ ಫ್ರೇಮ್ ಚಾರ್ಸಿ ಮೇಲೆ ನಿರ್ಮಾಣವಾಗಿರುವ ಹೊಸ ಕಾರಿನಲ್ಲಿಹಾಗೆಯೇ ಹೊಸ ಕಾರಿನ ಒಳಭಾಗದಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿದ್ದು, ಸಂಜ್ಞೆ ಮೂಲಕ ನಿಯಂತ್ರಣ ಮಾಡಬಹುದಾದ ಡ್ಯಾಶ್‌ಬೋರ್ಡ್ ಮತ್ತು ಟೈಲ್‌ಗೆಟ್, ಆ್ಯಂಬಿಯೆಂಟ್ ಲೈಟಿಂಗ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೊಲ್, 8-ಇಂಚಿನ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, 12.3-ಇಂಚಿನ ಟಚ್ ‌ಸ್ಕ್ರೀನ್ ಇನ್ಪೊಟೈನ್‌ಮೆಂಟ್ ಸಿಸ್ಟಂ, ವೆಂಟಿಲೆಟೆಡ್ ಲೆದರ್ ಸೀಟುಗಳು, ಹಿಟೆಡ್ ವಿಂಗ್ ಮಿರರ್, ಪನೊರಮಿಕ್ ಸನ್‌ರೂಫ್ ಸೌಲಭ್ಯವಿದೆ.

ವರ್ಷಾಂತ್ಯದೊಳಗೆ ಮೂರು ಹೊಸ ಕಾರು ಮಾದರಿಗಳನ್ನ ಬಿಡುಗಡೆ ಮಾಡಲಿದೆ ಎಂಜಿ

7 ಸೀಟರ್ ಸೌಲಭ್ಯ ಹೊಂದಿರುವ ಹೊಸ ಗ್ಲೊಸ್ಟರ್ ಕಾರಿನಲ್ಲಿ 2+2+3 ಮಾದರಿಯಲ್ಲಿ ಸೌಲಭ್ಯವನ್ನು ಜೋಡಿಸಲಾಗಿದ್ದು, ಮಧ್ಯದಲ್ಲಿರುವ ಕ್ಯಾಪ್ಟನ್ ಆಸನದಲ್ಲಿ ಹಲವಾರು ಕಾರ್ ಕನೆಕ್ಟೆಡ್ ಸೌಲಭ್ಯಗಳೊಂದಿಗೆ ಅರಾಮಾದಾಯಕ ಪ್ರಯಾಣಕ್ಕಾಗಿ ಮಸಾಜ್ ಫೀಚರ್ಸ್ ನೀಡಲಾಗಿದೆ.

ವರ್ಷಾಂತ್ಯದೊಳಗೆ ಮೂರು ಹೊಸ ಕಾರು ಮಾದರಿಗಳನ್ನ ಬಿಡುಗಡೆ ಮಾಡಲಿದೆ ಎಂಜಿ

ಮಾಹಿತಿಗಳ ಪ್ರಕಾರ, ಗ್ಲೊಸ್ಟರ್ ಎಸ್‌ಯುವಿ ಆವೃತ್ತಿಯು ಇದೇ ವರ್ಷ ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 30 ಲಕ್ಷದಿಂದ ರೂ.35 ಲಕ್ಷ ಬೆಲೆ ಅಂತರದೊಂದಿಗೆ ಫಾರ್ಚೂನರ್ ಮತ್ತು ಎಂಡೀವರ್ ಕಾರುಗಳಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ವರ್ಷಾಂತ್ಯದೊಳಗೆ ಮೂರು ಹೊಸ ಕಾರು ಮಾದರಿಗಳನ್ನ ಬಿಡುಗಡೆ ಮಾಡಲಿದೆ ಎಂಜಿ

ಜಿ10 ಎಂಪಿವಿ

ಎಂಪಿವಿ ವಿಭಾಗದಲ್ಲೂ ಭಾರೀ ಬದಲಾವಣೆಯ ನೀರಿಕ್ಷೆಯಲ್ಲಿರುವ ಎಂಜಿ ಮೋಟಾರ್ ಸಂಸ್ಥೆಯು 7 ಸೀಟರ್ ಮಾದರಿಗಳಾದ 360ಎಂ ಮತ್ತು ಹೆಕ್ಟರ್ ಪ್ಲಸ್ ಅನಾವರಣಗೊಳಿಸಿರುವುದಲ್ಲದೇ ಇದೀಗ 9 ಸೀಟರ್ ಮಾದರಿಯಾದ ಜಿ10 ಆವೃತ್ತಿಯನ್ನು ಸಹ ಅನಾವರಣಗೊಳಿಸಿ ಬಿಡುಗಡೆಯ ಸುಳಿವು ನೀಡಿದೆ. ಸದ್ಯ ಚೀನಿ ಮತ್ತು ಆಸ್ಟ್ರೇಲಿಯಾ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮ್ಯಾಕ್ಸಸ್ ಜಿ10 ಕಾರು ಮಾದರಿಯೇ ಇದೀಗ ಭಾರತದಲ್ಲಿ ಎಂಜಿ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ.

ವರ್ಷಾಂತ್ಯದೊಳಗೆ ಮೂರು ಹೊಸ ಕಾರು ಮಾದರಿಗಳನ್ನ ಬಿಡುಗಡೆ ಮಾಡಲಿದೆ ಎಂಜಿ

ಚೀನಿ ಮತ್ತು ಆಸ್ಟ್ರೇಲಿಯಾದಲ್ಲಿ ಜಿ10 ಕಾರು ಸದ್ಯ 7 ಸೀಟರ್, 8 ಸೀಟರ್ ಮತ್ತು 9 ಸೀಟರ್ ಮಾದರಿಯಲ್ಲಿ ಮಾರಾಟವಾಗುತ್ತಿದ್ದು, ಭಾರತದಲ್ಲೂ ಹೊಸ ಕಾರು 7 ಸೀಟರ್ ಮತ್ತು 9 ಸೀಟರ್ ಮಾದರಿಯೊಂದಿಗೆ ಮಾರಾಟವಾಗುವ ನೀರಿಕ್ಷೆಯಲ್ಲಿದೆ.

ವರ್ಷಾಂತ್ಯದೊಳಗೆ ಮೂರು ಹೊಸ ಕಾರು ಮಾದರಿಗಳನ್ನ ಬಿಡುಗಡೆ ಮಾಡಲಿದೆ ಎಂಜಿ

ಹೈ ಎಂಡ್ ಆವೃತ್ತಿಯು 2+2+3 ಮಾದರಿಯಲ್ಲಿ 7 ಸೀಟರ್ ಸೌಲಭ್ಯವನ್ನು ಹೊಂದಿದ್ದು, ಮಧ್ಯದಲ್ಲಿರುವ ಕ್ಯಾಪ್ಟನ್ ಸೀಟು ಹಲವು ವಿಶೇಷತೆಗಳೊಂದಿಗೆ ಬರಲಿದೆ. ಅರಾಮದಾಯಕವಾಗಿ ಕುಳಿತುಕೊಳ್ಳಬಹುದಲ್ಲದೇ ಕಾಲುಗಳನ್ನು ಚಾಚಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದ್ದು, ಕ್ಯಾಪ್ಟನ್ ಸೀಟ್ ಮುಂಭಾಗದಲ್ಲಿ ಎಂಟರ್‌ಟೈನ್‌ಮೆಂಟ್ ಡಿಸ್‌ಪ್ಲೇ, ವೆಂಟಿಲೆಟೆಡ್ ಲೆದರ್ ಹೊದಿಕೆ, ಹಿಂಭಾಗದ ಪ್ರಯಾಣಿಕರಿಗೂ ಸಾಕಷ್ಟು ಸ್ಥಳಾವಕಾಶ ನೀಡಲಾಗಿದೆ.

ವರ್ಷಾಂತ್ಯದೊಳಗೆ ಮೂರು ಹೊಸ ಕಾರು ಮಾದರಿಗಳನ್ನ ಬಿಡುಗಡೆ ಮಾಡಲಿದೆ ಎಂಜಿ

ಇನ್ನು 9 ಸೀಟರ್ ಆವೃತ್ತಿಯು 2+2+2+3 ಮಾದರಿಯಲ್ಲಿ ಆಸನ ಸೌಲಭ್ಯ ಹೊಂದಿದ್ದು, ಮಧ್ಯದಲ್ಲಿರುವ ಆಸನಗಳು ಪ್ರತ್ಯೇಕ ನಿಯಂತ್ರಣ ಹೊಂದಿವೆ. ಮುಂಭಾದಲ್ಲಿರುವ ಆಸನ ಮಾದರಿಯಲ್ಲೇ ಹಿಂಭಾಗದ ಪ್ರಯಾಣಿಕರಿಗೂ ಸಾಕಷ್ಟು ಸ್ಥಳಾವಕಾಶ ನೀಡಲಾಗಿದ್ದು, 9 ಜನ ಪ್ರಯಾಣಿಕರು ಯಾವುದೇ ಕಿರಿಕಿರಿಯಲ್ಲದೇ ಅರಾಮವಾಗಿ ಪ್ರಯಾಣಿಸಬಹುದಾಗಿದೆ.

ವರ್ಷಾಂತ್ಯದೊಳಗೆ ಮೂರು ಹೊಸ ಕಾರು ಮಾದರಿಗಳನ್ನ ಬಿಡುಗಡೆ ಮಾಡಲಿದೆ ಎಂಜಿ

ಹೊಸ ಜಿ10 ಕಾರು ಸದ್ಯ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಕಿಯಾ ಕಾರ್ನಿವಾಲ್ ಕಾರಿಗಿಂತಲೂ ಹೆಚ್ಚು ಉದ್ದಳತೆ ಹೊಂದಿದ್ದು, 5,168-ಎಂಎಂ ಉದ್ದ, 1,980-ಎಂಎಂ ಅಗಲ ಮತ್ತು 1,928-ಎಂಎಂ ಎತ್ತರದೊಂದಿಗೆ ಎಂಪಿವಿ ಕಾರಗಳಲ್ಲೇ ವಿಶೇಷ ಎನ್ನಿಸಲಿದೆ.

Article Published On: Tuesday, February 25, 2020, 14:37 [IST]
English summary
MG Will Launch 3 New Models In This Year. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+