ಬಹುನೀರಿಕ್ಷಿತ ಎಂಜಿ ಮೋಟಾರ್ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಆವೃತ್ತಿಯಾದ ಜೆಡ್ಎಸ್ ಇವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಜನವರಿ 17ರ ಒಳಗಾಗಿ ಹೊಸ ಕಾರು ಖರೀದಿಗಾಗಿ ಬುಕ್ಕಿಂಗ್ ಮಾಡಿದ್ದ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ.

ಬಹುನೀರಿಕ್ಷಿತ ಎಂಜಿ ಮೋಟಾರ್ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಜೆಡ್ಎಸ್ ಎಲೆಕ್ಟ್ರಿಕ್ ಕಾರು ಗ್ರಾಹಕರ ಬೇಡಿಕೆಯೆಂತೆ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಕ್ಸೈಟ್ ಮಾದರಿಯ ಬೆಸ್ ವೆರಿಯೆಂಟ್ ಮಾದರಿಯಾಗಿ ಮತ್ತು ಎಕ್ಸ್‌ಕ್ಲೂಸಿವ್ ವೆರಿಯೆಂಟ್ ಹೈ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದೆ. ಈ ಮೂಲಕ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಆಕರ್ಷಕ ಬೆಲೆಯೊಂದಿಗೆ ಉತ್ತಮ ಮೈಲೇಜ್, ವಿಶ್ವದರ್ಜೆಯ ಫೀಚರ್ಸ್‌ಗಳು, ಬ್ಯಾಟರಿ ಮೇಲೆ ಗರಿಷ್ಠ ಮಟ್ಟದ ವಾರಂಟಿ ಪಡೆದುಕೊಂಡಿದೆ.

ಬಹುನೀರಿಕ್ಷಿತ ಎಂಜಿ ಮೋಟಾರ್ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಜೆಡ್ಎಸ್ ಇವಿ ಕಾರಿನ ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಜನವರಿ 17ರ ಮೊದಲು ಹೊಸ ಕಾರು ಖರೀದಿಗೆ ಬುಕ್ಕಿಂಗ್ ಮಾಡಿದ್ದ 1 ಸಾವಿರ ಗ್ರಾಹಕರಿಗೆ ವಿಶೇಷ ಆಫರ್ ನೀಡಿರುವ ಎಂಜಿ ಸಂಸ್ಥೆಯು ಎಕ್ಸೈಟ್ ಆವೃತ್ತಿಯನ್ನು ರೂ.19.88 ಲಕ್ಷಕ್ಕೆ ಮತ್ತು ಎಕ್ಸ್‌ಕ್ಲೂಸಿವ್ ಆವೃತ್ತಿಯನ್ನು ರೂ.22.58 ಲಕ್ಷಕ್ಕೆ ವಿತರಣೆ ಮಾಡುವುದಾಗಿ ಹೇಳಿದೆ.

ಬಹುನೀರಿಕ್ಷಿತ ಎಂಜಿ ಮೋಟಾರ್ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಇನ್ನುಳಿದಂತೆ ಆಫರ್ ಹೊರತುಪಡಿಸಿ ಹೊಸ ಕಾರಿನ ಬೆಲೆಯು ಎಕ್ಸೈಟ್ ಆವೃತ್ತಿಗೆ ರೂ.20.58 ಲಕ್ಷ ಮತ್ತು ಎಕ್ಸ್‌ಕ್ಲೂಸಿವ್ ಆವೃತ್ತಿಗೆ ರೂ.23.58 ಲಕ್ಷ ನಿಗದಿ ಪಡಿಸಲಾಗಿದ್ದು, ಮೊದಲು ಬುಕ್ ಮಾಡಿದ್ದ 1 ಸಾವಿರ ಗ್ರಾಹಕರಿಗೆ ರೂ.1 ಲಕ್ಷ ಆಫರ್ ಸಿಗಲಿದೆ.

ಬಹುನೀರಿಕ್ಷಿತ ಎಂಜಿ ಮೋಟಾರ್ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಎಂಜಿ ಮೋಟಾರ್ ಸಂಸ್ಥೆಯು ಬುಕ್ಕಿಂಗ್ ಆರಂಭಿಸಿದ 27 ದಿನಗಳ ಅವಧಿಯಲ್ಲಿ ಒಟ್ಟು 2,800 ಗ್ರಾಹಕರು ಬೇಡಿಕೆ ಸಲ್ಲಿಸಿದ್ದು, ಇದು 2019ರ ಅವಧಿಯಲ್ಲಿ ಮಾರಾಟಗೊಂಡ ಎಲೆಕ್ಟ್ರಿಕ್ ಕಾರುಗಳ ಸಂಖ್ಯೆಗಿಂತಲೂ ಹೆಚ್ಚು ಎನ್ನಬಹುದು. 2019ರರಲ್ಲಿ ವಿವಿಧ ಕಾರು ಉತ್ಪಾದನಾ ಸಂಸ್ಥೆಯು ಒಟ್ಟು 2,700 ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಕೇವಲ 27 ದಿನಗಳಲ್ಲಿ ಕಳೆದ ವರ್ಷ ಮಾರಾಟ ಎಲೆಕ್ಟ್ರಿಕ್ ಕಾರುಗಳ ಪ್ರಮಾಣಕ್ಕಿಂತಲೂ ಹೆಚ್ಚು ಬೇಡಿಕೆ ಪಡೆದುಕೊಂಡಿದೆ.

ಬಹುನೀರಿಕ್ಷಿತ ಎಂಜಿ ಮೋಟಾರ್ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಇನ್ನು ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎರಡು ವೆರಿಯೆಂಟ್‌ಗಳಲ್ಲೂ 44.5kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದೆ. ಈ ಮೂಲಕ ಒಂದು ಬಾರಿ ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ ಗರಿಷ್ಠ 340 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಮೂಲಕ ಕೇವಲ 50 ನಿಮಿಷಗಳಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಬಹುನೀರಿಕ್ಷಿತ ಎಂಜಿ ಮೋಟಾರ್ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಜೆಡ್ಎಸ್ ಎಲೆಕ್ಟ್ರಿಕ್ ಕಾರಿನಲ್ಲಿ ಐಷಾರಾಮಿ ಕಾರು ಮಾದರಿಯಲ್ಲಿ ಹಲವಾರು ಗುಣಮಟ್ಟದ ಫೀಚರ್ಸ್‌ಗಳಲ್ಲಿದ್ದು, ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಮಾದರಿಗಳಲ್ಲಿ ತುಸು ವಿಭಿನ್ನವಾದ ತಾಂತ್ರಿಕ ಸೌಲಭ್ಯಗಳಿವೆ.

ಬಹುನೀರಿಕ್ಷಿತ ಎಂಜಿ ಮೋಟಾರ್ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಸಾಮಾನ್ಯ ಕಾರು ಚಾಲನೆಗಾಗಿ ಎಕ್ಸೈಟ್ ಮತ್ತು ಐಷಾರಾಮಿ ಸೌಲಭ್ಯಗಳನ್ನು ಬಯಸುವ ಗ್ರಾಹಕರಿಗೆ ಎಕ್ಸ್‌ಕ್ಲೂಸಿವ್ ಮಾದರಿಯು ಖರೀದಿಗೆ ಉತ್ತಮವಾಗಿದ್ದು, ಎರಡು ವೆರಿಯೆಂಟ್‌ಗಳಲ್ಲೂ ಬಹುತೇಕ ತಾಂತ್ರಿಕ ಅಂಶಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಬಹುನೀರಿಕ್ಷಿತ ಎಂಜಿ ಮೋಟಾರ್ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಎಕ್ಸೈಟ್ ವೆರಿಯೆಂಟ್‌ನಲ್ಲಿರುವ ಪ್ರಮುಖ ತಾಂತ್ರಿಕ ಅಂಶಗಳು

*17 ಇಂಚಿನ ಅಲಾಯ್ ವೀಲ್ಹ್‌ಗಳು *ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ ಜೊತೆ ಎಲ್ಇಡಿ ಡಿಆರ್‌ಎಲ್ಎಸ್ *ಹೊಂದಾಣಿಕೆ ಮಾಡಿಕೊಳ್ಳಬಹುದಾದ ಎಲೆಕ್ಟ್ರಿಕ್ ಅಡ್ಜೆಸ್ಟೆಬಲ್ ಒಆರ್‌ವಿಎಂಎಸ್ *ಲೆದರ್ ವ್ಯಾರ್ಪ್ಡ್ ಸ್ಟಿರಿಂಗ್ ವೀಲ್ಹ್ *ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ *ಅನ್‌ಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ *3.5 ಇಂಚಿನ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ *60:40 ಅನುಪಾತದ ಸ್ಪೀಟ್ ರಿಯರ್ ಸೀಟ್ *6 ಏರ್‌ಬ್ಯಾಗ್‌ಗಳು *ಎಬಿಎಸ್ ಜೊತೆ ಇಬಿಡಿ *ಹಿಲ್ ಸ್ಟಾರ್ಟ್ ಅಸಿಸ್ಟ್ *ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ *ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ * ISOFIX ಚೈಲ್ಡ್ ಸೀಟ್ ಮೌಂಟ್

ಬಹುನೀರಿಕ್ಷಿತ ಎಂಜಿ ಮೋಟಾರ್ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಎಕ್ಸ್‌ಕ್ಲೂಸಿವ್ ವೆರಿಯೆಂಟ್‌ನಲ್ಲಿರುವ ಪ್ರಮುಖ ತಾಂತ್ರಿಕ ಅಂಶಗಳು

ಹೈ ಎಂಡ್ ಆವೃತ್ತಿಯಾಗಿರುವ ಎಕ್ಸ್‌ಕ್ಲೂಸಿವ್ ವೆರಿಯೆಂಟ್‌‌ನಲ್ಲಿ ಕೆಲವು ಸುಧಾರಿತ ತಾಂತ್ರಿಕ ಅಂಶಗಳನ್ನು ನೀಡಲಾಗಿದ್ದು, ಎಕ್ಸೈಟ್ ವೆರಿಯೆಂಟ್‌ನಲ್ಲಿ ನೀಡಲಾಗಿರುವ ಫೀಚರ್ಸ್ ಜೊತೆಗೆ ಹೆಚ್ಚುವರಿಯಾಗಿ 8.0-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಪನೊರಮಿಕ್ ಸನ್‌ರೂಫ್, 6-ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್, ಐ-ಸ್ಮಾರ್ಟ್ 2.0 ಕನೆಟೆಡ್ ಟೆಕ್ನಾಲಜಿ, ಹಿಟೆಡ್ ಒಆರ್‌ವಿಎಂಎಸ್, ಏರ್‌ ಫ್ಲೂರಿಫ್ಲೈರ್ ಜೊತೆ ಪಿಎಂ 2.5 ಫಿಲ್ಟರ್ ಸೌಲಭ್ಯಗಳನ್ನು ಹೊಂದಿದೆ.

ಬಹುನೀರಿಕ್ಷಿತ ಎಂಜಿ ಮೋಟಾರ್ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಈ ಮೂಲಕ ಮಧ್ಯಮ ಗಾತ್ರದ ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲೇ ವಿಶೇಷ ಎನ್ನಿಸಲಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯು ಎಸ್‌ಯುವಿ ಪ್ರಿಯರ ಆಕರ್ಷಣೆ ಕಾರಣವಾಗಿದ್ದು, ಹೊಸ ಕಾರು ಸದ್ಯಕ್ಕೆದೆಹಲಿ, ಬೆಂಗಳೂರು, ಮುಂಬೈ, ಹೈದ್ರಾಬಾದ್ ಮತ್ತು ಪುಣೆಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದೆ. ಚಾರ್ಜಿಂಗ್ ಸ್ಟೆಷನ್ ಸೌಲಭ್ಯ ಹೆಚ್ಚಿದಂತೆ ಎಲೆಕ್ಟ್ರಿಕ್ ಕಾರುಗಳ ಮಾರಾಟವನ್ನು ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ.

More from DriveSpark

Article Published On: Thursday, January 23, 2020, 14:26 [IST]
English summary
MG ZS Electric SUV Launched In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+