ಫೆಬ್ರುವರಿ ತಿಂಗಳ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹ್ಯುಂಡೈ ಕೊನಾ ಹಿಂದಿಕ್ಕಿದ ಎಂಜಿ ಜೆಡ್ಎಸ್ ಇವಿ

ಎಂಜಿ ಮೋಟಾರ್ಸ್ ಕಂಪನಿಯು ತನ್ನ ಎಲೆಕ್ಟ್ರಿಕ್ ಎಸ್‌ಯುವಿ ಆವೃತ್ತಿಯಾಗಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ವಿತರಣೆಯನ್ನು ಅಧಿಕೃತ ಆರಂಭಿಸಿದ್ದು, ಬಿಡುಗಡೆಯ ನಂತರ ಇದುವರೆಗೆ ಬರೋಬ್ಬರಿ 3 ಸಾವಿರಕ್ಕೂ ಹೆಚ್ಚು ಯುನಿಟ್ ಬುಕ್ಕಿಂಗ್ ಪಡೆದುಕೊಂಡಿದೆ.

ಫೆಬ್ರುವರಿ ತಿಂಗಳ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹ್ಯುಂಡೈ ಕೊನಾ ಹಿಂದಿಕ್ಕಿದ ಎಂಜಿ ಜೆಡ್ಎಸ್ ಇವಿ

ಜನವರಿ ಮಧ್ಯಂತರದಲ್ಲಿ ಬಿಡುಗಡೆಗೊಂಡಿದ್ದರೂ ಸಹ ಫೆಬ್ರುವರಿ ಕೊನೆಯಲ್ಲಿ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ವಿತರಣೆಯನ್ನು ಆರಂಭಿಸಿದ್ದ ಎಂಜಿ ಮೋಟಾರ್ ಕಂಪನಿಯು ಕಳೆದ ತಿಂಗಳು 158 ಯುನಿಟ್ ಮಾರಾಟಗೊಳಿಸಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಯಾದ ಹ್ಯುಂಡೈ ಕೊನಾ ಕಾರಿಗಿಂತಲೂ ಹೆಚ್ಚು ಮಾರಾಟಗೊಂಡಿದೆ. ಕೊನಾ ಎಲೆಕ್ಟ್ರಿಕ್ ಕಾರು ಫೆಬ್ರುವರಿ ಅವಧಿಯಲ್ಲಿ ಕೇವಲ 32 ಯುನಿಟ್ ಮಾರಾಟಗೊಂಡಿದ್ದು, ಜೆಡ್ಎಸ್ ಎಲೆಕ್ಟ್ರಿಕ್ ಕಾರು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಫೆಬ್ರುವರಿ ತಿಂಗಳ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹ್ಯುಂಡೈ ಕೊನಾ ಹಿಂದಿಕ್ಕಿದ ಎಂಜಿ ಜೆಡ್ಎಸ್ ಇವಿ

ಭಾರೀ ಬೇಡಿಕೆಯ ನಡುವೆಯೂ ಜೆಡ್ಎಸ್ ಎಲೆಕ್ಟ್ರಿಕ್ ವಿತರಣೆಯಲ್ಲಿ ತೀವ್ರ ಪೈಪೋಟಿ ಎದುರಿಸುತ್ತಿರುವ ಎಂಜಿ ಕಂಪನಿಯು ಚೀನಾದಲ್ಲಿ ತಲೆದೊರಿರುವ ಕೊರೊನಾ ವೈರಸ್ ಪರಿಣಾಮ ಬೀಡಿಭಾಗಗಳ ಕೊರತೆಯ ಮಧ್ಯದಲ್ಲೂ ಉತ್ತಮ ಮಾರಾಟ ಸಂಖ್ಯೆಯನ್ನು ದಾಖಲಿಸಿದೆ.

ಫೆಬ್ರುವರಿ ತಿಂಗಳ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹ್ಯುಂಡೈ ಕೊನಾ ಹಿಂದಿಕ್ಕಿದ ಎಂಜಿ ಜೆಡ್ಎಸ್ ಇವಿ

ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಕಾರಿನ ವಿತರಣೆಯನ್ನು ಮತ್ತಷ್ಟು ಹೆಚ್ಚಳ ಮಾಡುವ ವಿಶ್ವಾಸದಲ್ಲಿರುವ ಎಂಜಿ ಮೋಟಾರ್ ಕಂಪನಿಯು ಹೊಸ ಕಾರುಗಳನ್ನು ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಾಣ ಮಾಡುವ ಇರಾದೆಯಲ್ಲಿದ್ದು, ಹೊಸ ಯೋಜನೆಯ ಅಡಿಯಲ್ಲಿ ಕಾರು ಉತ್ಪಾದನಾ ಘಟಕ ವಿಸ್ತರಣೆಯೊಂದಿಗೆ ಹಲವು ಹೊಸ ಕಾರುಗಳನ್ನು ಪರಿಚಯಿಸಲು ಸಿದ್ದತೆ ನಡೆಸಿದೆ.

ಫೆಬ್ರುವರಿ ತಿಂಗಳ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹ್ಯುಂಡೈ ಕೊನಾ ಹಿಂದಿಕ್ಕಿದ ಎಂಜಿ ಜೆಡ್ಎಸ್ ಇವಿ

ಇನ್ನು ಜೆಡ್ಎಸ್ ಎಲೆಕ್ಟ್ರಿಕ್ ಕಾರು ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಕ್ಸೈಟ್ ಮಾದರಿಯ ಬೆಸ್ ವೆರಿಯೆಂಟ್ ಮಾದರಿಯಾಗಿ ಮತ್ತು ಎಕ್ಸ್‌ಕ್ಲೂಸಿವ್ ವೆರಿಯೆಂಟ್ ಹೈ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದೆ. ಈ ಮೂಲಕ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಆಕರ್ಷಕ ಬೆಲೆಯೊಂದಿಗೆ ಉತ್ತಮ ಮೈಲೇಜ್, ವಿಶ್ವದರ್ಜೆಯ ಫೀಚರ್ಸ್‌ಗಳು, ಬ್ಯಾಟರಿ ಮೇಲೆ ಗರಿಷ್ಠ ಮಟ್ಟದ ವಾರಂಟಿ ಪಡೆದುಕೊಂಡಿದೆ.

ಫೆಬ್ರುವರಿ ತಿಂಗಳ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹ್ಯುಂಡೈ ಕೊನಾ ಹಿಂದಿಕ್ಕಿದ ಎಂಜಿ ಜೆಡ್ಎಸ್ ಇವಿ

ಜೆಡ್ಎಸ್ ಇವಿ ಕಾರಿನ ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಜನವರಿ 17ರ ಮುನ್ನ ಹೊಸ ಕಾರು ಖರೀದಿಗೆ ಬುಕ್ಕಿಂಗ್ ಮಾಡಿದ್ದ 1 ಸಾವಿರ ಗ್ರಾಹಕರಿಗೆ ವಿಶೇಷ ಆಫರ್ ನೀಡಿರುವ ಎಂಜಿ ಸಂಸ್ಥೆಯು ಎಕ್ಸೈಟ್ ಆವೃತ್ತಿಯನ್ನು ರೂ.19.88 ಲಕ್ಷಕ್ಕೆ ಮತ್ತು ಎಕ್ಸ್‌ಕ್ಲೂಸಿವ್ ಆವೃತ್ತಿಯನ್ನು ರೂ.22.58 ಲಕ್ಷಕ್ಕೆ ವಿತರಣೆ ಮಾಡುತ್ತಿದೆ. 1 ಸಾವಿರ ಯುನಿಟ್ ನಂತರ ಹೊಸ ಕಾರಿನ ಬೆಲೆಯು ಎಕ್ಸೈಟ್ ಆವೃತ್ತಿಗೆ ರೂ.20.58 ಲಕ್ಷ ಮತ್ತು ಎಕ್ಸ್‌ಕ್ಲೂಸಿವ್ ಆವೃತ್ತಿಗೆ ರೂ.23.58 ಲಕ್ಷ ನಿಗದಿ ಪಡಿಸಲಾಗಿದ್ದು, ಮೊದಲು ಬುಕ್ ಮಾಡಿದ್ದ 1 ಸಾವಿರ ಗ್ರಾಹಕರಿಗೆ ರೂ.1 ಲಕ್ಷ ಆಫರ್ ನೀಡಲಾಗಿದೆ.

ಫೆಬ್ರುವರಿ ತಿಂಗಳ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹ್ಯುಂಡೈ ಕೊನಾ ಹಿಂದಿಕ್ಕಿದ ಎಂಜಿ ಜೆಡ್ಎಸ್ ಇವಿ

ಬ್ಯಾಟರಿ ಸಾಮರ್ಥ್ಯ

ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎರಡು ವೆರಿಯೆಂಟ್‌ಗಳಲ್ಲೂ 44.5kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದೆ. ಈ ಮೂಲಕ ಒಂದು ಬಾರಿ ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ ಗರಿಷ್ಠ 340 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಮೂಲಕ ಕೇವಲ 50 ನಿಮಿಷಗಳಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಫೆಬ್ರುವರಿ ತಿಂಗಳ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹ್ಯುಂಡೈ ಕೊನಾ ಹಿಂದಿಕ್ಕಿದ ಎಂಜಿ ಜೆಡ್ಎಸ್ ಇವಿ

ಜೆಡ್ಎಸ್ ಎಲೆಕ್ಟ್ರಿಕ್ ಕಾರಿನಲ್ಲಿ ಐಷಾರಾಮಿ ಕಾರು ಮಾದರಿಯಲ್ಲಿ ಹಲವಾರು ಗುಣಮಟ್ಟದ ಫೀಚರ್ಸ್‌ಗಳಲ್ಲಿದ್ದು, ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಮಾದರಿಗಳಲ್ಲಿ ತುಸು ವಿಭಿನ್ನವಾದ ತಾಂತ್ರಿಕ ಸೌಲಭ್ಯಗಳಿವೆ.

ಫೆಬ್ರುವರಿ ತಿಂಗಳ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹ್ಯುಂಡೈ ಕೊನಾ ಹಿಂದಿಕ್ಕಿದ ಎಂಜಿ ಜೆಡ್ಎಸ್ ಇವಿ

ಎಕ್ಸೈಟ್ ವೆರಿಯೆಂಟ್‌ನಲ್ಲಿರುವ ಪ್ರಮುಖ ತಾಂತ್ರಿಕ ಅಂಶಗಳು

*17 ಇಂಚಿನ ಅಲಾಯ್ ವೀಲ್ಹ್‌ಗಳು *ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ ಜೊತೆ ಎಲ್ಇಡಿ ಡಿಆರ್‌ಎಲ್ಎಸ್ *ಹೊಂದಾಣಿಕೆ ಮಾಡಿಕೊಳ್ಳಬಹುದಾದ ಎಲೆಕ್ಟ್ರಿಕ್ ಅಡ್ಜೆಸ್ಟೆಬಲ್ ಒಆರ್‌ವಿಎಂಎಸ್ *ಲೆದರ್ ವ್ಯಾರ್ಪ್ಡ್ ಸ್ಟಿರಿಂಗ್ ವೀಲ್ಹ್ *ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ *ಅನ್‌ಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ *3.5 ಇಂಚಿನ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ *60:40 ಅನುಪಾತದ ಸ್ಪೀಟ್ ರಿಯರ್ ಸೀಟ್ *6 ಏರ್‌ಬ್ಯಾಗ್‌ಗಳು *ಎಬಿಎಸ್ ಜೊತೆ ಇಬಿಡಿ *ಹಿಲ್ ಸ್ಟಾರ್ಟ್ ಅಸಿಸ್ಟ್ *ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ *ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ * ISOFIX ಚೈಲ್ಡ್ ಸೀಟ್ ಮೌಂಟ್

ಫೆಬ್ರುವರಿ ತಿಂಗಳ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹ್ಯುಂಡೈ ಕೊನಾ ಹಿಂದಿಕ್ಕಿದ ಎಂಜಿ ಜೆಡ್ಎಸ್ ಇವಿ

ಎಕ್ಸ್‌ಕ್ಲೂಸಿವ್ ವೆರಿಯೆಂಟ್‌ನಲ್ಲಿರುವ ಪ್ರಮುಖ ತಾಂತ್ರಿಕ ಅಂಶಗಳು

ಹೈ ಎಂಡ್ ಆವೃತ್ತಿಯಾಗಿರುವ ಎಕ್ಸ್‌ಕ್ಲೂಸಿವ್ ವೆರಿಯೆಂಟ್‌‌ನಲ್ಲಿ ಕೆಲವು ಸುಧಾರಿತ ತಾಂತ್ರಿಕ ಅಂಶಗಳನ್ನು ನೀಡಲಾಗಿದ್ದು, ಎಕ್ಸೈಟ್ ವೆರಿಯೆಂಟ್‌ನಲ್ಲಿ ನೀಡಲಾಗಿರುವ ಫೀಚರ್ಸ್ ಜೊತೆಗೆ ಹೆಚ್ಚುವರಿಯಾಗಿ 8.0-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಪನೊರಮಿಕ್ ಸನ್‌ರೂಫ್, 6-ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್, ಐ-ಸ್ಮಾರ್ಟ್ 2.0 ಕನೆಟೆಡ್ ಟೆಕ್ನಾಲಜಿ, ಹಿಟೆಡ್ ಒಆರ್‌ವಿಎಂಎಸ್, ಏರ್‌ ಫ್ಲೂರಿಫ್ಲೈರ್ ಜೊತೆ ಪಿಎಂ 2.5 ಫಿಲ್ಟರ್ ಸೌಲಭ್ಯಗಳನ್ನು ಹೊಂದಿದೆ.

ಫೆಬ್ರುವರಿ ತಿಂಗಳ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹ್ಯುಂಡೈ ಕೊನಾ ಹಿಂದಿಕ್ಕಿದ ಎಂಜಿ ಜೆಡ್ಎಸ್ ಇವಿ

ಈ ಮೂಲಕ ಮಧ್ಯಮ ಗಾತ್ರದ ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲೇ ವಿಶೇಷ ಎನ್ನಿಸಲಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯು ಎಸ್‌ಯುವಿ ಪ್ರಿಯರ ಆಕರ್ಷಣೆ ಕಾರಣವಾಗಿದ್ದು, ಹೊಸ ಕಾರು ಸದ್ಯಕ್ಕೆ ದೆಹಲಿ, ಬೆಂಗಳೂರು, ಮುಂಬೈ, ಹೈದ್ರಾಬಾದ್ ಮತ್ತು ಪುಣೆಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದೆ. ಚಾರ್ಜಿಂಗ್ ಸ್ಟೆಷನ್ ಸೌಲಭ್ಯ ಹೆಚ್ಚಿದಂತೆ ಎಲೆಕ್ಟ್ರಿಕ್ ಕಾರುಗಳ ಮಾರಾಟವನ್ನು ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ.

More from DriveSpark

Article Published On: Monday, March 9, 2020, 13:24 [IST]
English summary
British car maker, MG has dispatched 158 units of ZS EV in Feb, 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+