ಹೊಸ ಮಿನಿ ಕ್ಲಬ್‌ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಎಡಿಷನ್ ಬಿಡುಗಡೆ

ಮಿನಿ ಕ್ಲಬ್‍‍ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಮಿನಿ ಕ್ಲಬ್‍‍ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಸೀಮಿತ ಆವೃತ್ತಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.44.90 ಲಕ್ಷಗಳಾಗಿದೆ.

ಹೊಸ ಮಿನಿ ಕ್ಲಬ್‌ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಎಡಿಷನ್ ಬಿಡುಗಡೆ

ಹೊಸ ಮಿನಿ ಕ್ಲಬ್‍‍ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಆವೃತ್ತಿಯ ಬುಕ್ಕಿಂಗ್ ನಾಳೆಯಿಂದ ಪ್ರಾರಂಭವಾಗಲಿದೆ. ಈ ಮಾದರಿಯನ್ನು ಅಮೆಜಾನ್ ಮೂಲಕ ಆನ್‍‍ಲೈನ್‍‍ನಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ಹೊಸ ವಿಶೇಷ ಆವೃತ್ತಿಯ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 15 ಯುನಿಟ್‍‍ಗಳಿಗೆ ಸೀಮಿತವಾಗಿರುತ್ತದೆ. ಇದು ಸಾಮಾನ್ಯ ಕ್ಲಬ್‍‍ಮ್ಯಾನ್ ಮಾದರಿಯಂತೆ ಆಕರ್ಷಕ ಲುಕ್ ಅನ್ನು ಹೊಂದಿದೆ.

ಹೊಸ ಮಿನಿ ಕ್ಲಬ್‌ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಎಡಿಷನ್ ಬಿಡುಗಡೆ

ಈ ಹೊಸ ಕಾರು ಇಂಡಿಯನ್ ಸಮ್ಮರ್ ಮೆಟಾಲಿಕ್ ರೆಡ್ ಬಣ್ಣವನ್ನು ಹೊಂದಿದೆ. ಇದರ ಹೊರಭಾಗದಲ್ಲಿ ಮಿರರ್ ಕ್ಯಾಪ್ಸ್ ಮತ್ತು ಫ್ರಂಟ್ ಗ್ರಿಲ್‍‍ನಂತಹ ಪಿಯಾನೊ ಬ್ಲ್ಯಾಕ್ ಎಕ್ಸಟ್‍‍ಗಳನ್ನು ಹೊಂದಿದೆ. ಈ ವಿಶೇಷ ಆವೃತ್ತಿಯಲ್ಲಿ ಮರುವಿನ್ಯಾಸ ಮಾಡಲಾದ ಎಲ್‍ಇಡಿ ಹೆಡ್‍‍ಲ್ಯಾಂಪ್‍‍ಗಳು, ಫಾಗ್ ಲ್ಯಾಂಪ್ ಮತ್ತು ಎಲ್‍ಇಡಿ ಟೇಲ್‍‍ಲೈಟ್‍‍ಗಳನ್ನು ಹೊಂದಿದೆ. ಸೀಮಿತ ಆವೃತ್ತಿಯ ಕ್ಲಬ್‍‍ಮ್ಯಾನ್‍‍ನಲ್ಲಿ ಹೊಸ ಟೇಲ್ ಲ್ಯಾಪ್‍‍ಗಳು ವಿಶಿಷ್ಟವಾದ ಯೂನಿಯನ್ ಜ್ಯಾಕ್ ವಿನ್ಯಾಸವನ್ನು ಹೊಂದಿದೆ.

ಹೊಸ ಮಿನಿ ಕ್ಲಬ್‌ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಎಡಿಷನ್ ಬಿಡುಗಡೆ

ಕ್ಲಬ್‌ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಎಡಿಷನ್‍ನಲ್ಲಿ ಹಲವಾರು ಫೀಚರ್ಸ್‍‍ಗಳನ್ನು ಹೊಂದಿದೆ. ಇದರಲ್ಲಿ ಎಲ್‍ಇಡಿ ರಿಂಗ್, ಪನೋರಮಿಕ್ ಗ್ಲಾಸ್ ರೂಫ್, ಹೊಸ ಬ್ಲ್ಯಾಕ್ ಚೆಕ್ಕರ್ ವಿನ್ಯಾಸದೊಂದಿಗೆ ಪಿಯಾನೋ ಬ್ಲ್ಯಾಕ್ ಅಂಶಗಳನ್ನು ಒಳಗೊಂಡಿದೆ.

ಹೊಸ ಮಿನಿ ಕ್ಲಬ್‌ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಎಡಿಷನ್ ಬಿಡುಗಡೆ

ಇಂಟಿರಿಯರ್‍‍‍ನಲ್ಲಿ ಆಂಬಿಯೆಂಟ್ ಲೈಟಿಂಗ್, ಪ್ರೊಜೆಕ್ಟ್ ಲ್ಯಾಂಪ್ ಮೆಮೊರಿ ಫಂಕ್ಷನ್ ಮತ್ತು ಚಾಲಕ ಮತ್ತು ಮುಂಭಾಗದಲ್ಲಿನ ಪ್ರಯಾಣಿಕರ ಸೀಟ್ ಅನ್ನು ಎಲೆಕ್ಟ್ರಿಕಲ್ ಆಗಿ ಅಡ್ಜಸ್ಟ್ ಮಾಡಬಹುದಾಗಿದೆ. 6.5 ಇಂಚಿನ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ.

ಹೊಸ ಮಿನಿ ಕ್ಲಬ್‌ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಎಡಿಷನ್ ಬಿಡುಗಡೆ

ಹೊಸ ಕ್ಲಬ್‌ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಆವೃತ್ತಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಸುರಕ್ಷತೆಗಾಗಿ ಬ್ರೇಕ್ ಅಸಿಸ್ಟ್ ಮೂರು ಪಾಯಿಂಟ್ ಸೀಟ್‍‍ಬೆಲ್ಟ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಬಿಎಸ್ ಕಾರ್ನರಿಂಗ್ ಕಂಟ್ರೋಲ್, ಬಿಎಂಡಬ್ಲ್ಯು ರನ್-ಫ್ಲಾಟ್ ಟಯರ್ ಮತ್ತು ಇಂಡಿಕೇಟರ್, ಕ್ರೂಸ್ ಕಂಟ್ರೋಲ್, ರಿವರ್ಸ್ ಕ್ಯಾಮೆರಾ ಮತ್ತು ಮಲ್ಟಿಪಲ್ ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

ಹೊಸ ಮಿನಿ ಕ್ಲಬ್‌ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಎಡಿಷನ್ ಬಿಡುಗಡೆ

ಹೊಸ ಕ್ಲಬ್‌ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಆವೃತ್ತಿಯಲ್ಲಿ 2.0 ಲೀಟರ್ ಟ್ವಿನ್-ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 190 ಬಿ‍‍ಹೆಚ್‍ಪಿ ಪವರ್ ಮತ್ತು 280 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಹೊಸ ಮಿನಿ ಕ್ಲಬ್‌ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಎಡಿಷನ್ ಬಿಡುಗಡೆ

ಹೊಸ ಕ್ಲಬ್‌ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಆವೃತ್ತಿಯು 228 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಕಾರು 7.2 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ಹೊಸ ಮಿನಿ ಕ್ಲಬ್‌ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಎಡಿಷನ್ ಬಿಡುಗಡೆ

ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುದ್ರತೇಜ್ ಸಿಂಗ್ ಅವರು ಮಾತನಾಡಿ, ಪ್ರಗತಿಪರವಾಗಿರುವುದು ಯಾವಾಗಲೂ ಮಿನಿ ಶೈಲಿಯಾಗಿದೆ. ಈಗ ನಾವು ಡಿಜಿಟಲ್ ಯುಗದಲ್ಲಿದ್ದೇವೆ ಮತ್ತು ಮಿನಿ ಕೂಡ ಡಿಜಿಟಲ್ ಆಗಿದೆ. ಗ್ರಾಹಕರು ಹೊಸ ಕ್ಲಬ್‌ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಆವೃತ್ತಿಯನ್ನು ಆನ್‍‍ಲೈನ್ ಮೂಲಕ ಖರೀದಿಸಬಹುದು. ಕೇವಲ 15 ಯುನಿಟ್‍‍ಗಳು ಮಾತ್ರ ಮಾರಾಟಕ್ಕೆ ಲಭ್ಯವಿರುವುದು ಎಂದು ಹೇಳಿದರು.

ಹೊಸ ಮಿನಿ ಕ್ಲಬ್‌ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಎಡಿಷನ್ ಬಿಡುಗಡೆ

ಅವರು ಮಿನಿ ಕ್ಲಬ್‌ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಎಡಿಷನ್ ಒಂದು ಸೀಮಿತ ಆವೃತ್ತಿಯಾಗಿ ಬಿಡುಗಡೆಗೊಳಿಸಿದೆ. ಕೇವಲ 15 ಯುನಿಟ್‍‍ಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ಈ ವಿಶೇಷ ಆವೃತ್ತಿಯು ಆಕರ್ಷಕ ಲುಕ್ ಅನ್ನು ಹೊಂದಿದೆ

More from DriveSpark

Article Published On: Friday, February 14, 2020, 17:50 [IST]
English summary
New Mini Clubman Indian Summer Red Edition Launched In India: Prices Start At Rs 44.90 Lakh. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+