ಎರ್ಟಿಗಾ ಮತ್ತು ಇನೋವಾ ಕ್ರಿಸ್ಟಾಗೆ ಪೈಪೋಟಿ ನೀಡುತ್ತಾ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್?
ಡೀಸೆಲ್ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಜಪಾನ್ ವಾಹನ ಉತ್ಪಾದನಾ ಸಂಸ್ಥೆಯಾದ ಮಿಟ್ಸುಬಿಸಿ ತನ್ನ ಜನಪ್ರಿಯ ಎಂಪಿವಿ ಆವೃತ್ತಿಯಾದ ಎಕ್ಸ್‌ಪ್ಯಾಂಡರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದು, ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ.

ಭಾರತದಲ್ಲಿ ಕಳೆದ ಎರಡು ವರ್ಷಗಳಿಂದ ಮಲ್ಟಿ ಪ್ಯಾಸೆಂಜರ್ ವೆಹಿಕಲ್(ಎಂಪಿವಿ) ಆವೃತ್ತಿಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗುತ್ತಿದ್ದು, ಎಂಪಿವಿ ಕಾರುಗಳ ವಿಭಾಗದಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಮಾರುತಿ ಸುಜುಕಿ ಎರ್ಟಿಗಾ ಮತ್ತು ಮಹೀಂದ್ರಾ ಮರಾಜೋ ಕಾರುಗಳು ಅಗ್ರಸ್ಥಾನದಲ್ಲಿವೆ. ಈ ನಿಟ್ಟಿನಲ್ಲಿ ಮಿಟ್ಸುಬಿಸಿ ಕೂಡಾ ಹೊಸ ಪ್ರಯತ್ನಕ್ಕೆ ಕೈಹಾಕಿದ್ದು, ಇಂಡೋನೇಷ್ಯಾದಲ್ಲಿ ಮಾರಾಟವಾಗುತ್ತಿರುವ ಎಕ್ಸ್‌ಪ್ಯಾಂಡರ್ ಮಾದರಿಯನ್ನು ಬಿಡುಗಡೆಗೆ ಯೋಜನೆ ರೂಪಿಸಿದೆ.

2018ರಲ್ಲಿ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ಭಾರೀ ಪ್ರಮಾಣದಲ್ಲಿ ಮಾರಾಟಗೊಳ್ಳುತ್ತಿರುವ ನ್ಯೂ ಜನರೇಷನ್ ಮಿಟ್ಸುಬಿಸಿ ಎಂಪಿವಿ ಕಾರುಗಳು ಸದ್ಯ ಫಿಲಿಫೈನ್ಸ್‌ನಲ್ಲೂ ಬಿಡುಗಡೆಯಾಗುತ್ತಿದ್ದು. ಇದೇ ಕಾರನ್ನು ಭಾರತದಲ್ಲೂ ಬಿಡುಗಡೆ ಮಾಡಬಹುದಾದ ಸಾಧ್ಯತೆಗಳಿವೆ.

ಮಿಟ್ಸುಬಿಸಿ ನಿರ್ಮಾಣದ ಎಕ್ಸ್‌ಪ್ಯಾಂಡರ್ ಎಂಪಿವಿ ಆವೃತ್ತಿಯು 7 ಸೀಟರ್ ಮಾದರಿಯಾಗಿದ್ದು, ಇದು ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಮಹೀಂದ್ರಾ ಮರಾಜೋ ಮಾದರಿಯಲ್ಲೇ ನಿರ್ಮಾಣಗೊಂಡಿದೆ. ಹೀಗಾಗಿಯೇ ಈ ಹೊಸ ಕಾರು ಭಾರತದಲ್ಲಿ ಬಿಡುಗಡೆಗೊಂಡಿದ್ದೆ ಆದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದ್ದು, ಕಾರಿನ ಬೆಲೆಗಳು ಸಹ ಆಕರ್ಷಕವಾಗಿವೆ.

ವಿಶೇಷ ಹೊರವಿನ್ಯಾಸಗಳನ್ನು ಹೊಂದಿರುವ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಆವೃತ್ತಿಗಳು ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಹೊರ ಮತ್ತು ಒಳ ವಿನ್ಯಾಸಗಳು ಅಂತಾರಾಷ್ಟ್ರೀಯ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿವೆ. ಪೂರ್ಣಪ್ರಮಾಣದಲ್ಲಿ ಎಲ್‌ಇಡಿ ಲೈಟ್‌ಗಳ ವ್ಯವಸ್ಥೆಯನ್ನು ಇರಿಸಲಾಗಿದ್ದು, ಡೇ ರನ್ನಿಂಗ್ ಲೈಟ್, ಮಲ್ಟಿಪಲ್ ಸ್ಲಾಟ್ ಗ್ರೀಲ್ ಮತ್ತು ಹೊಚ್ಚ ಹೊಸ ವಿನ್ಯಾಸದ ಎಂಪಿವಿ ಚಿಹ್ನೆಯನ್ನು ಇರಿಸಲಾಗಿದೆ.

ಮಾಹಿತಿಗಳ ಪ್ರಕಾರ, ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಎಂಪಿವಿ ಮಾದರಿಯೂ ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಯಲ್ಲೂ ಲಭ್ಯವಿರಲಿದ್ದು, 1.5-ಲೀಟರ್ ಪೆಟ್ರೋಲ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಸಾಮರ್ಥ್ಯದೊಂದಿದೆ ಅಭಿವೃದ್ಧಿ ಹೊಂದಿದೆ.

ಮಧ್ಯಮ ಗಾತ್ರದ ಎಂಪಿವಿ ಮಾದರಿಗಳಲ್ಲೇ ಅತಿ ಹೆಚ್ಚ ಒಳ ವಿನ್ಯಾಸವನ್ನು ಪಡೆದುಕೊಂಡಿರುವ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಎಂಪಿವಿ ಆವೃತ್ತಿಯು, 7 ರಿಂದ 8 ಜನ ಆರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದೆ.

ಭಾರತದಲ್ಲಿ ಬಿಡುಗಡೆ ಆಗುತ್ತಾ?
ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ ಮಿಟ್ಸುಬಿಸಿ ಇಂಡಿಯಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಹೊಸ ಕಾರುಗಳ ಬಿಡುಗಡೆಯ ಯೋಜನೆಯಲ್ಲಿದ್ದು, ಎಕ್ಸ್‌ಪ್ಯಾಂಡರ್ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ನಡೆಸುತ್ತಿರುವ ರೋಡ್ ಟೆಸ್ಟಿಂಗ್‌ನಿಂದಾಗಿ ಬಿಡುಗಡೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಇನ್ನೊಂದು ವಿಶೇಷ ಅಂದ್ರೆ ಈ ಕಾರು ಬೆಲೆಯಲ್ಲೂ ಗ್ರಾಹಕರನ್ನು ಆಕರ್ಷಣೆ ಮಾಡುವ ಸಾಧ್ಯತೆಗಳಿದ್ದು, ಭಾರತದಲ್ಲಿ ಈ ಕಾರಿನ ಬೆಲೆಯು ರೂ.12 ಲಕ್ಷದಿಂದ ರೂ.16 ಲಕ್ಷದೊಳಗೆ ಇರಬಹುದೆಂದು ಅಂದಾಜಿಸಲಾಗಿದೆ.

ಹೀಗಾಗಿ ಎಕ್ಸ್‌ಪ್ಯಾಂಡರ್ ಕಾರುಗಳು ಭಾರತದಲ್ಲಿ ಬಿಡುಗಡೆಗೊಂಡಿದ್ದೆ ಆದಲ್ಲಿ ಮಾರುತಿ ಸುಜುಕಿ ಎರ್ಟಿಗಾ, ಮಹೀಂದ್ರಾ ಮರಾಜೋ ಮತ್ತು ಟೊಯೊಟಾ ಇನೋವಾ ಕ್ರಿಸ್ಟಾ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದ್ದು, ಪರ್ಸಲ್ ಮತ್ತು ಟೂರಿಸ್ಟ್ ವಿಭಾಗದಲ್ಲೂ ಈ ಕಾರುಗಳಿಗೆ ಉತ್ತಮ ಬೇಡಿಕೆ ಉಂಟಾಗಬಹುದು.


Click it and Unblock the Notifications








