ಮಿಟ್ಸುಬಿಸಿ ಔಟ್‌ಲ್ಯಾಂಡರ್ ಕ್ರಾಸ್ಒವರ್ ಕಾರಿನ ಬಿಡುಗಡೆಯ ಬಗ್ಗೆ ಮಾಹಿತಿ

ಮಿಟ್ಸುಬಿಸಿ ಭಾರತೀಯ ಮಾರುಕಟ್ಟೆಗೆ ತನ್ನ ಔಟ್‌ಲ್ಯಾಂಡರ್ ಕ್ರಾಸ್ಒವರ್ ಹೆಸರಿನ ಮೂರನೇ ಎಸ್‌ಯುವಿ ಕಾರನ್ನು ಮುಂದಿನ ವರ್ಷದ ಮಧ್ಯದ ಆಸುಪಾಸಿನಲ್ಲಿ ಪ್ರಾರಂಭಿಸುವ ಯೋಜನೆ ಹೊಂದಿದೆ.

By Girish

ಮಿಟ್ಸುಬಿಸಿ ಭಾರತೀಯ ಮಾರುಕಟ್ಟೆಗೆ ತನ್ನ ಔಟ್‌ಲ್ಯಾಂಡರ್ ಕ್ರಾಸ್ಒವರ್ ಹೆಸರಿನ ಮೂರನೇ ಎಸ್‌ಯುವಿ ಕಾರನ್ನು ಮುಂದಿನ ವರ್ಷದ ಮಧ್ಯದ ಆಸುಪಾಸಿನಲ್ಲಿ ಪ್ರಾರಂಭಿಸುವ ಯೋಜನೆ ಹೊಂದಿದೆ.

ಮಿಟ್ಸುಬಿಸಿ ಔಟ್‌ಲ್ಯಾಂಡರ್ ಕ್ರಾಸ್ಒವರ್ ಕಾರಿನ ಬಿಡುಗಡೆಯ ಬಗ್ಗೆ ಇಲ್ಲಿದೆ ಮಾಹಿತಿ

2018ರ ಔಟ್‌ಲ್ಯಾಂಡರ್ ಕ್ರಾಸ್ಒವರ್ ಕಾರು ಸಂಪೂರ್ಣವಾಗಿ ಸಿ.ಕೆ.ಡಿ ಮಾರ್ಗದ ಮೂಲಕ ಆಮದು ಮಾಡಿಕೊಳ್ಳುವ ಯೋಜನೆಯನ್ನು ಹೊಂದಿದೆ ಹಾಗು ಈ ಎಸ್‌ಯುವಿ ಕಾರು ಭಾರತದಲ್ಲಿ ರೂ.30 ಲಕ್ಷ ಬೆಲೆಯನ್ನು ಪಡೆದುಕೊಳ್ಳಾಬಹುದು ಎಂದು ಅಂದಾಜಿಸಲಾಗಿದೆ.

ಮಿಟ್ಸುಬಿಸಿ ಔಟ್‌ಲ್ಯಾಂಡರ್ ಕ್ರಾಸ್ಒವರ್ ಕಾರಿನ ಬಿಡುಗಡೆಯ ಬಗ್ಗೆ ಇಲ್ಲಿದೆ ಮಾಹಿತಿ

ಏಳು ಆಸನಗಳ ವಿನ್ಯಾಸವನ್ನು ಹೊಂದಿರುವ ಈ ಕಾರು ಪೆಟ್ರೋಲ್ ಮತ್ತು ಡೀಸಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದ್ದು, ಭಾರತದಲ್ಲಿ 7 ಸ್ಥಾನಗಳನ್ನು ಹೊಂದಿರುವ ಹೊಸ ಹೋಂಡಾ ಸಿಆರ್ ವಿ ಕಾರಿನ ಜೊತೆ ಸ್ಪರ್ಧಿಸಲಿದೆ.

ಮಿಟ್ಸುಬಿಸಿ ಔಟ್‌ಲ್ಯಾಂಡರ್ ಕ್ರಾಸ್ಒವರ್ ಕಾರಿನ ಬಿಡುಗಡೆಯ ಬಗ್ಗೆ ಇಲ್ಲಿದೆ ಮಾಹಿತಿ

ಆದಾಗ್ಯೂ, ಭಾರತದಲ್ಲಿ ಮಾರಾಟವಾಗುವ ಮಾದರಿಯು ಬಿಡುಗಡೆಯ ಸಮಯದಲ್ಲಿ ಕೇವಲ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಅನಾವರಣಗೊಳ್ಳಲಿದೆ ಹಾಗು ನಂತರದ ದಿನಗಳಲ್ಲಿ ಡೀಸಲ್ ಎಂಜಿನ್ ಸೇರಿಕೊಳ್ಳುವ ಸಂಭವವಿದೆ.

ಮಿಟ್ಸುಬಿಸಿ ಔಟ್‌ಲ್ಯಾಂಡರ್ ಕ್ರಾಸ್ಒವರ್ ಕಾರಿನ ಬಿಡುಗಡೆಯ ಬಗ್ಗೆ ಇಲ್ಲಿದೆ ಮಾಹಿತಿ

ಪೆಟ್ರೋಲ್ ಎಂಜಿನ್ ಆಯ್ಕೆಯ ಎಸ್‌ಯುವಿ ಕಾರು 2.4 ಲೀಟರ್ ಎಂಐವಿಸಿ ಎಂಜಿನ್ ಆಯ್ಕೆಯನ್ನು ಪಡೆದುಕೊಳ್ಳಲಿದ್ದು, ಈ ಎಂಜಿನ್ 169 ಬಿಎಚ್‌ಪಿ ಅಶ್ವಶಕ್ತಿ ಮತ್ತು 225 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ ಮತ್ತು 6 ವರ್ಗಾವಣೆಗಳನ್ನು ಹೊಂದಿರುವ ಸಿವಿಟಿ ಸ್ವಯಂಚಾಲಿತ ಗೇರ್‌ಬಾಕ್ಸ್ ನೀಡಲಾಗುತ್ತದೆ.

ಮಿಟ್ಸುಬಿಸಿ ಔಟ್‌ಲ್ಯಾಂಡರ್ ಕ್ರಾಸ್ಒವರ್ ಕಾರಿನ ಬಿಡುಗಡೆಯ ಬಗ್ಗೆ ಇಲ್ಲಿದೆ ಮಾಹಿತಿ

ಸುರಕ್ಷತಾ ಸಲಕರಣೆಗಳ ವಿಚಾರದ ಬಗ್ಗೆ ಹೇಳುವುದಾದರೆ, ಈ ಕಾರು ಎಬಿಎಸ್, ಇಬಿಡಿ, ಎಳೆತ ನಿಯಂತ್ರಣ, ಆರು ಏರ್‌ಬ್ಯಾಗ್‌ಗಳು, ಹಿಲ್ ಸ್ಟಾರ್ಟ್ ಸಹಾಯ ಹಾಗು ಇತರ ಗಮನಾರ್ಹ ವೈಶಿಷ್ಟ್ಯಗಳನ್ನು ಅಳವಡಿಕೆಗೊಳ್ಳುವ ನಿರೀಕ್ಷೆ ಇದೆ.

ಮಿಟ್ಸುಬಿಸಿ ಔಟ್‌ಲ್ಯಾಂಡರ್ ಕ್ರಾಸ್ಒವರ್ ಕಾರಿನ ಬಿಡುಗಡೆಯ ಬಗ್ಗೆ ಇಲ್ಲಿದೆ ಮಾಹಿತಿ

2008ರಲ್ಲಿ ಔಟ್‌ಲ್ಯಾಂಡರ್ ಕಾರಿನ ಎರಡನೇ ಪೀಳಿಗೆಯ ಮಾದರಿಯನ್ನು ಭಾರತದಲ್ಲಿ ಮಾರಾಟ ಮಾಡಲಾಗಿತ್ತು. ಆದರೆ, ಕಳಪೆ ಮಾರಾಟದ ಕಾರಣದಿಂದಾಗಿ 4 ವರ್ಷಗಳ ನಂತರ ಉತ್ಪಾದನೆಯನ್ನು ನಿಲ್ಲಿಸಲಾಗಿತ್ತು.

Most Read Articles

Kannada
English summary
Mitsubishi Outlander SUV’s India launch timeline revealed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X